ಸಮ್ಮಿಶ್ರ ಸರ್ಕಾರ ಬೀಳಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ; ಡಿಸಿಎಂ ಅಶ್ವಥ್ ನಾರಾಯಣ್

2018 ರಲ್ಲಿ ಯಾರು ಯಾರನ್ನ ಎಲ್ಲಿಗೆ ಕಳಿಸಿದ್ರು ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಲಿ. ಯಾರ್ ಯಾರ್ ಪಾತ್ರ ಹೇಗೆ ಮಾಡಿದ್ರು ಅಂತ ಮುಂದೆ ಎಲ್ಲರೂ ಹೇಳ್ತಾರೆ. ಸಮ್ಮಿಶ್ರ ಸರ್ಕಾರಕ್ಕೆ ಗುಂಡಿ ಹೇಗೆ ತೋಡಿದ್ರು. ಜೊತೆಯಲ್ಲಿ ಇದ್ದು ಮೋಸ ಮಾಡಿ ಸರ್ಕಾರ ಬೀಳಿಸಿದ್ರು. ಇಂತಹ ಕೆಲಸ‌ ಮಾಡೋರು ಮೀಸ್ ಸಾದಿಕ್ ಗಳು. ನನ್ನ ಮಾತಿಗೆ ನಾನು ಈಗಲೂ ಬದ್ದ ಎಂದರು.

ಉಪ ಮುಖ್ಯಮಂತ್ರಿ ಡಾ. ಡಾ.ಸಿ.ಎನ್.ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಡಾ. ಡಾ.ಸಿ.ಎನ್.ಅಶ್ವತ್ಥನಾರಾಯಣ

 • Share this:
  ಬೆಂಗಳೂರು(ಅ.21): ಸಮ್ಮಿಶ್ರ ಸರ್ಕಾರ ಬೀಳಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ. ಯಾವ ಶಾಸಕರನ್ನು ಎಲ್ಲೆಲ್ಲಿ ಕಳಿಸಿದ್ದರು, ಯಾರ ಜತೆ ಮಾತನಾಡಿದ್ದರು ಎಂಬುದು ಮುಂದೆ ಗೊತ್ತಾಗಲಿದೆ. ಮುನಿರತ್ನ ಒಬ್ಬರೇ ಅಲ್ಲ, ಎಲ್ಲಾ ಶಾಸಕರು ಮುಂದೆ ಮಾತನಾಡುತ್ತಾರೆ. ಇನ್ನೂ ಮುಂದೆ ಇದೇಸಿರೀಸ್ ಓಪನ್ ಆಗುತ್ತೆ. ಮಾಜಿ ಸಿಎಂ  ಎಚ್ ಡಿ ಕುಮಾರಸ್ವಾಮಿ ಅವರು ಮುಕ್ತವಾಗಿ ಎಲ್ಲವನ್ನೂ ಮಾತನಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಲ್ಲದಂತೆ ಅವರ ಪಕ್ಷದ ನಾಯಕರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದ್ರೋಹ ಮಾಡಿದ್ದಾರೆ. ನನಗೆ ಇಲ್ಲ ಅಂದ್ರೆ ಯಾರಿಗೂ ಬೇಡ ಅಂತ ಕೆಲಸ ಮಾಡಿದ್ದಾರೆ.  2018 ರಲ್ಲಿ ಯಾರು ಕಳಿಸಿ ಕೊಟ್ರು ಅಂತ ಎಲ್ಲರಿಗೂ ಗೊತ್ತಿದೆ. ಡಿಕೆಶಿ ಸಮ್ಮಿಶ್ರ ಸರ್ಕಾರದ ಜೊತೆ ಇದ್ದೇನೆ ಅಂದ್ರು. ಆದ್ರೆ ಮಾಡಿದ್ದೇನು. ಕುಮಾರಸ್ವಾಮಿ ಸರ್ಕಾರ ಪತನ ಮಾಡಿದ್ದು ಕಾಂಗ್ರೆಸ್​​​ನವರೇ. ಸಿದ್ದರಾಮಯ್ಯ, ಡಿಕೆಶಿಯವರೇ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ್ದು. ಕುತಂತ್ರ, ತಂತ್ರ ಹೇಗೆ ಮಾಡ್ತೀರಾ ಅಂತ ಜನರಿಗೆ ಗೊತ್ತಾಗಲಿ ಅಂತ ನಾನು ಹೇಳಿದ್ದು. ಕುಮಾರಸ್ವಾಮಿ ಅವರಿಗೆ ಹೇಳಲು ಆಗದೇ, ಉಗುಳಲು ಆಗದೆ ಆಗಾಗ ಕೋಪ ವ್ಯಕ್ತಪಡಿಸುತ್ತಿರುತ್ತಾರೆ. ಎಲ್ಲವನ್ನು ಮುಕ್ತವಾಗಿ ಹೇಳುವ ಕೆಲಸವನ್ನು ಕುಮಾರಸ್ವಾಮಿ ಮಾಡಬೇಕು ಎಂದು ಹೇಳಿದರು.

  2018 ರಲ್ಲಿ ಯಾರು ಯಾರನ್ನ ಎಲ್ಲಿಗೆ ಕಳಿಸಿದ್ರು ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಲಿ. ಯಾರ್ ಯಾರ್ ಪಾತ್ರ ಹೇಗೆ ಮಾಡಿದ್ರು ಅಂತ ಮುಂದೆ ಎಲ್ಲರೂ ಹೇಳ್ತಾರೆ. ಸಮ್ಮಿಶ್ರ ಸರ್ಕಾರಕ್ಕೆ ಗುಂಡಿ ಹೇಗೆ ತೋಡಿದ್ರು. ಜೊತೆಯಲ್ಲಿ ಇದ್ದು ಮೋಸ ಮಾಡಿ ಸರ್ಕಾರ ಬೀಳಿಸಿದ್ರು. ಇಂತಹ ಕೆಲಸ‌ ಮಾಡೋರು ಮೀಸ್ ಸಾದಿಕ್ ಗಳು. ನನ್ನ ಮಾತಿಗೆ ನಾನು ಈಗಲೂ ಬದ್ದ. ಡಿಕೆ ಸುರೇಶ್ ಡಿಕೆಶಿಗೆ ವಕ್ತಾರರಾ? ಅವ್ರ ಪರ ಮಾತಾಡೋಕೆ. ಜನರೇ ಅದನ್ನ ಗಮನಿಸುತ್ತಾರೆ. ಅದು ಅವ್ರ ಸಂಸ್ಕೃತಿ‌ ಎಂದು ವಾಗ್ದಾಳಿ ನಡೆಸಿದರು.

  ತಲೆ ಹಿಡಿದು ಮಂತ್ರಿ ಆಗಿದ್ದಾರೆ ಎನ್ನುವ ಯತ್ನಾಳ್ ಟ್ವೀಟ್ ವಿಚಾರವಾಗಿ, ಯತ್ನಾಳ್ ಹೇಳಿಕೆ ಬಗ್ಗೆ ನಾನು ಮಾತಾಡೋಲ್ಲ. ಯಾರು ಹಾಗೆ ಸಚಿವರಾಗಿದ್ದಾರೆ ಅವ್ರೇ ಹೇಳಲಿ. ಪಕ್ಷದ ನಾಯಕರು ಅದಕ್ಕೆ ಉತ್ತರ ಕೊಡ್ತಾರೆ. ಪಕ್ಷದ ಅಧ್ಯಕ್ಷರು ಅವ್ರಿಗೆ ವಿವರಣೆ ಕೇಳೋ ಕೆಲಸ ಮಾಡ್ತಾರೆ. ನಾನು ಸರ್ಕಾರದಲ್ಲಿ ಕೆಲಸ ಮಾಡ್ತಿದ್ದೇನೆ. ಪಕ್ಷದ ಪರವಾಗಿ ಅಧ್ಯಕ್ಷರು ಇದನ್ನ ನೋಡಿಕೊಳ್ತಾರೆ ಎಂದರು.

  ಗಡಿ ತಪ್ಪಿ ಸೆರೆಸಿಕ್ಕ ಚೀನಾ ಸೈನಿಕನನ್ನು ಇಂದು ಬಿಡುಗಡೆಗೊಳಿಸಿದ ಭಾರತೀಯ ಸೇನೆ!

  ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಜಾತಿ ಕಾರ್ಡ್ ಪ್ಲೇ ವಿಚಾರವಾಗಿ,  ನಾವು ಜಾತಿ ರಾಜಕಾರಣ ಮಾಡಲ್ಲ. ಅಭಿವೃದ್ಧಿ ಆಧಾರಿತ ಕೆಲಸವನ್ನು ನಾವು ಮಾಡ್ತೀವಿ. ನಮ್ಮ ಕೆಲಸದ ಮೇಲೆ ನಾವು ಚುನಾವಣೆ ಮಾಡ್ತೀವಿ. ನಾವು ಜಾತಿ ಆಧಾರಿತ ರಾಜಕೀಯ ಮಾಡಲ್ಲ. ಯೋಗ್ಯತೆ ಯಾರಿಗೆ ಯಾರು ಕೊಡೊಲ್ಲ. ಸಂವಿಧಾನದಲ್ಲೆ ನಮಗೆ ಯೋಗ್ಯತೆ ಕೊಟ್ಟಿದೆ ಎಂದು ಡಿಕೆಶಿ ವಿರುದ್ದ ಅಶ್ವಥ್ ನಾರಾಯಣ ಕಿಡಿಕಾರಿದರು.

  ಇನ್ನು, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ವಿಚಾರವಾಗಿ, ಮಳೆ ಬಂದಿರೋ ಕಡೆ ನಾನೇ ಭೇಟಿ ಕೊಟ್ಟು ಪರಿಶೀಲನೆ ಮಾಡ್ತೀನಿ. ಈಗಾಗಲೇ ಅಧಿಕಾರಿಗಳು, ನಮ್ಮ ಪ್ರತಿನಿಧಿಗಳು ಸ್ಥಳದಲ್ಲಿ ಕೆಲಸ ಮಾಡ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಮಾಡುವ ಕೊಡುವ ಕೆಲಸ ಮಾಡ್ತೀವಿ ಎಂದರು.

  ಕಾಲೇಜು ಪ್ರಾರಂಭ ವಿಚಾರವಾಗಿ, ಸಿಎಂ ಜೊತೆ ಸಭೆ ಮಾಡಬೇಕು‌. ಶೀಘ್ರವೇ ಸಿಎಂ ಜೊತೆ ಸಭೆ ಮಾಡ್ತೀವಿ. ಕಾಲೇಜು ಪ್ರಾರಂಭಕ್ಕೆ ಅನೇಕ ಸಿದ್ದತೆ ಮಾಡಿಕೊಳ್ಳಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜು ಪ್ರಾರಂಭದ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಹೇಳಿದರು.

  ಬೆಂಗಳೂರು ಕಾಂಕ್ರೀಟ್ ಜಂಗಲ್ ಆಗಿರೋದ್ರೀಂದ ಮಳೆ ನೀರು ಹೊರಗೆ ಹೋಗ್ತಿಲ್ಲ.  ಮತ್ತಷ್ಟು ಇಂಗು ಗುಂಡಿಗಳನ್ನ ಮಾಡಿ ಮಳೆ ನೀರಿ ಹೋಗುವಂತೆ ಕೆಲಸ ಜನರು ಮಾಡಲೇಬೇಕು. ಬೆಂಗಳೂರಿನಲ್ಲಿ ನಮ್ಮ ಶಾಸಕರು, ಮಾಜಿ ಬಿಬಿಎಂಪಿ ಸದಸ್ಯರು ಅಗತ್ಯ ಕ್ರಮವಹಿಸಿದ್ದಾರೆ. ಹೆಲ್ಪ್​​ ಲೈನ್ ಕೂಡಾ ಇದೆ. ಜನರು ಅದಕ್ಕೆ ಕರೆ ಮಾಡಿ ಸಮಸ್ಯೆ ಹೇಳಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಕೂಡ ಹೆಚ್ಚಾಗಿದೆ. ಸರ್ಕಾರ ಎಲ್ಲಾ ಕ್ರಮವಹಿಸಿದೆ. ಅಗತ್ಯ ಪರಿಹಾರ ಕೆಲಸ ಸರ್ಕಾರ ಮಾಡ್ತಿದೆ.
  Published by:Latha CG
  First published: