ಸಿಎಂ ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಮಾಡಿದ ಆರೋಪದಿಂದ ಕಂಗಾಲಾದ ಕಮೀಷನರ್​​ ಭಾಸ್ಕರ್​​ ರಾವ್

ಇನ್ನು, ಉಪಮುಖ್ಯಮಂತ್ರಿಯವರ ಆರೋಪದಿಂದ ಕಂಗಾಲಾದ ಆಯುಕ್ತ ಭಾಸ್ಕರ ರಾವ್ ಸಭೆಯಿಂದ ಹೊರನಡೆದಿದ್ದಾರೆ. ಈ ಮುನ್ನ ನನ್ನನ್ನು ಕಮೀಷನರ್​​ ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ನಂತರ ಆರೋಪದಿಂದ ಕಂಗಾಲಾಗದಂತೆ ಸಿಎಂ ಮನವೊಲಿಸಿದ್ದಾರೆ.

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

 • Share this:
  ಬೆಂಗಳೂರು(ಮಾ.26): ಕೊರೋನಾ ವೈರಸ್​​​ ಸಂಬಂಧ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಅಶ್ವಥ್​​ ನಾರಾಯಣ್​​ ಗಂಭೀರ ಆರೋಪ ಮಾಡಿದ್ದಾರೆ. ಶಾಪ್ ಓಪನ್ ಮಾಡಲು ಮಾಲೀಕರಿಂದ ಹಣ ಪಡೆದು ಅವಕಾಶ ನೀಡಿದ್ದೀರಿ. ಬಂದ್ ಎಂದ್ರೆ ಎಲ್ಲರೂ ಬಂದ್ ಮಾಡಬೇಕು. ಕೆಲವು ದೊಡ್ಡ ಶಾಪ್ ಓಪನ್ ಆಗಿರುವುದರ ಹಿಂದೆ ನಿಮ್ಮ ಕೈವಾಡವಿದೆ ಎಂದು ಅಶ್ವತ್ ನಾರಾಯಣ್ ಭಾಸ್ಕರ್​​ ರಾವ್​​ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಬೇಸರಗೊಂಡ ಭಾಸ್ಕರ್​​ ರಾವ್​​ ಸಭೆಯಿಂದ ಅರ್ಧದಲ್ಲೇ ಹೊರಹೋಗಲು ಯತ್ನಿಸಿದ್ದಾರೆ ಎನ್ನಲಾಗಿದೆ.

  ಇಂದು ಸಿಎಂ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಿಎಂ ಮುಂದೆಯೇ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಭಾಸ್ಕರ್ ರಾವ್ ನಡುವೆ ಮಾತಿನ ಜಟಾಪಟಿ ನಡೆದಿದೆ. ಇಬ್ಬರ ನಡುವೆ ನಡೆದ ಮಾತಿನ ಚಕಮಿಕಿ ವೇಳೆ ಆನ್ ಲೈನ್ ಫುಡ್ ಡೆಲಿವಿರಿ ಕಂಪನಿಯ ಸಿಬ್ಬಂದಿಗೆ ಹೆಚ್ಚು ಪಾಸ್ ನೀಡುವಂತೆ ಭಾಸ್ಕರ್ ರಾವ್​​ಗೆ ಅಶ್ವಥ್ ನಾರಾಯಣ ತಾಕೀತು ಮಾಡಿದ್ದಾರೆ.  ಆಗ ಇದಕ್ಕೆ ಒಪ್ಪದ ಭಾಸ್ಕರ್​​ ನೀಡಲು ಆಗುವುದಿಲ್ಲ ಎಂದಿದ್ದಾರೆ. ಇದರಿಂದ ಭಾವುಕರಾದ ಭಾಸ್ಕರ್ ರಾವ್ ಬೇಸರ ಮಾಡಿಕೊಂಡಿದ್ದಾರೆ. ಈ ವೇಳೆ ಸಿಎಂ ಅವರೇ ಸಮಾಧಾನ ಪಡಿಸಲು ಯತ್ನಿಸಿದರು ಎಂದು ತಿಳಿದು ಬಂದಿದೆ.

  ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮುಗಿದ ಬಳಿಕ ವಿಧಾನಸೌಧದಲ್ಲಿ ಸಚಿವರು, ಅಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಫುಡ್ ಡೆಲಿವರಿ ಸಿಬ್ಬಂದಿಗೆ ಪಾಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ನಡೆದಿದೆ.

  ಇದನ್ನೂ ಓದಿ: ಕೋವಿಡ್-19: ದೇಶದಲ್ಲಿ ಸೋಂಕಿತರ ಸಂಖ್ಯೆ 649, 13 ಮಂದಿ ಸಾವು

  ಇನ್ನು, ಉಪಮುಖ್ಯಮಂತ್ರಿಯವರ ಆರೋಪದಿಂದ ಕಂಗಾಲಾದ ಆಯುಕ್ತ ಭಾಸ್ಕರ ರಾವ್ ಸಭೆಯಿಂದ ಹೊರನಡೆದಿದ್ದಾರೆ. ಈ ಮುನ್ನ ನನ್ನನ್ನು ಕಮೀಷನರ್​​ ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ನಂತರ ಆರೋಪದಿಂದ ಕಂಗಾಲಾಗದಂತೆ ಸಿಎಂ ಮನವೊಲಿಸಿದ್ದಾರೆ.
  First published: