ಡಿಕೆ ಶಿವಕುಮಾರ್ ಬಂಡೆ ಏನಲ್ಲ, ಅವ್ರು ಬಂಡೆ ಒಡೆದು ಬದುಕಿರೋದು; ಡಿಸಿಎಂ ಅಶ್ವಥ್ ನಾರಾಯಣ್ ಲೇವಡಿ

ಮತದಾರರು ಇಂತಹವರನ್ನೆಲ್ಲಾ ಎಷ್ಟು ಜನರನ್ನು ನೋಡಿದ್ದಾರೋ.  ಇಂತಹ ನೂರಾರು ಜನರನ್ನು ಪ್ಯಾಕ್ ಮಾಡಿ ಮಾಡಿ ಎಲ್ಲೆಲ್ಲೋ ಕಳುಹಿಸಿದ್ದಾರೆ‌ ಎಂದು ಲೇವಡಿ ಮಾಡಿದರು. ಬೆಂಗಳೂರಿನ ಇತಿಹಾಸದಲ್ಲಿ ಎಂತ ಎಂತವರೋ ಇದ್ರು. ಅವರೆಲ್ಲಾ ಎಲ್ಲೆಲ್ಲೋ ಹೋಗಿದ್ದಾರೆ. ಇವರೆಲ್ಲಾ ಯಾವ ಲೆಕ್ಕ?

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ

 • Share this:
  ಬೆಂಗಳೂರು(ಅ.22): ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಹತಾಶರಾಗಿದ್ದಾರೆ. ಅದಕ್ಕಾಗಿ ಅವರು ಪೊಲೀಸರಿಗೆ ವಾರ್ನ್ ಮಾಡ್ತಾರೆ. ಮೈ ಎಲ್ಲಾ ಪರಚಿಕೊಳ್ತಿದ್ದಾರೆ. ಚುನಾವಣೆಯನ್ನು ಚುನಾವಣೆ ರೀತಿ ನಡೆಸಬೇಕೇ ಹೊರತು, ಜನರ ವಿಶ್ವಾಸ ಗಳಿಸಬೇಕೇ ಹೊರತು, ಅವರ ಮೇಲೆ ದಬ್ಬಾಳಿಕೆ ಮಾಡೋದು ಸರಿಯಲ್ಲ. ಬಾಯಿಗೆ ಬಂದಂತೆ ಮಾತಾಡೋದು, ಇಷ್ಟ ಬಂದಂಗೆ ಮಾಡೋದು ಇವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಮತದಾರರು ಇಂತಹವರನ್ನೆಲ್ಲಾ ಎಷ್ಟು ಜನರನ್ನು ನೋಡಿದ್ದಾರೋ.  ಇಂತಹ ನೂರಾರು ಜನರನ್ನು ಪ್ಯಾಕ್ ಮಾಡಿ ಮಾಡಿ ಎಲ್ಲೆಲ್ಲೋ ಕಳುಹಿಸಿದ್ದಾರೆ‌ ಎಂದು ಲೇವಡಿ ಮಾಡಿದರು. ಬೆಂಗಳೂರಿನ ಇತಿಹಾಸದಲ್ಲಿ ಎಂತ ಎಂತವರೋ ಇದ್ರು. ಅವರೆಲ್ಲಾ ಎಲ್ಲೆಲ್ಲೋ ಹೋಗಿದ್ದಾರೆ. ಇವರೆಲ್ಲಾ ಯಾವ ಲೆಕ್ಕ? ಇಲ್ಲಿ ಸೆಲ್ಪ್ ಲೈಫ್ ಇಲ್ಲ. ಸಮಾಜವನ್ನು ಅರಿತುಕೊಂಡು ಕೆಲಸ ಮಾಡುವವರಿಗೆ ಮಾತ್ರ ಇಲ್ಲಿ ಸ್ಥಳ ಇದೆ. ಆದರೆ ಇಲ್ಲಿ ಯಾರಿಗೂ ಸೆಲ್ಫ್ ಲೈಫ್ ಇಲ್ಲ. ಇಲ್ಲಿ ಇವರ ಆಟ ನಡೆಯೋಲ್ಲ. ಕನಕಪುರದಲ್ಲೂ ಇವರ ಆಟ ನಡೆಯೋಲ್ಲ. ಕನಕಪುರದಲ್ಲೂ ನಮ್ಮ ಜನರೇ ಇರೋದು. ಬಂಡೆ ಅಂತಾ ಏನು ಅಲ್ಲ ಅವರೇ ಸುಮ್ಮನೆ ಬಂಡೆ ಎಂದು ಸ್ಟೋರಿ ಕಟ್ಟಿಕೊಂಡಿದ್ದಾರೆ. ಬಂಡೆಯನ್ನು ಇವರು ಉಳಿಸಿಲ್ಲ. ಅದನ್ನು ಒಡೆದು ಹಾಕಿದ್ದಾರೆ. ಬಂಡೆ ಒಡೆದು ಬದುಕಿದ್ದಾರೆ ಎಂದು ಡಿಕೆ ಸಹೋದರರನ್ನು ವ್ಯಂಗ್ಯ ಮಾಡಿದರು.

  ಆನ್​ಲೈನ್​ ತರಗತಿಗಳಿಗೆ ಸರ್ಕಾರದ ಹೊಸ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ಸಂಪೂರ್ಣ ಮಾಹಿತಿ

  ಯಾವಾಗಲೂ ಸತ್ಯ ಕಹಿಯಾಗಿಯೇ ಇರುತ್ತೆ.  ಸತ್ಯವನ್ನು ಎದುರಿಸಲು ಶಕ್ತಿ ಬೆಳೆಸಿಕೊಳ್ಳಬೇಕು. ರಾಜಕೀಯ ಕುತಂತ್ರದಲ್ಲಿ ಬೆಳೆದು ನಿಂತಿದೆ. ಸ್ವಾರ್ಥದಿಂದ ಕೂಡಿದೆ, ಜನರಿಗೆ ಇದು ಕೀಳು ಅನ್ನೋ ಮನೋಭಾವ ಬಂದಿದೆ. ವ್ಯಕ್ತಿ ಆಧಾರಿತವಾಗಿ ಬಿಟ್ಟು, ಒಂದು ಪಕ್ಷ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದರೆ ಅರ್ಥ ಇರುತ್ತದೆ.  ಕೆಲವರು ನಾನು ಆಡಿದ್ದೇ ಆಟ ಅನ್ನೋ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಹೀಗಾಗಿ ಇವರಿಗೆ ಲೆಕ್ಕ ಕೇಳೋರು ಇಲ್ಲ, ಒಂದು ಅಕೌಂಟೇಬಲಿಟಿ ಇಲ್ಲ. ಸರಿಯಾಗಿ ಉತ್ತರ ಹೇಳದೆ ಹೇಗೋ ಜಯಿಸಿಕೊಂಡು ಬಂದು ಬಿಟ್ಟಿದ್ದಾರೆ. ಅವರು ಎಲ್ಲಿಂದ ಎಲ್ಲಿಗೆ ಬಂದಿದ್ದಾರೆ ಎಂದು ಲೆಕ್ಕ ಬೇಕು.  ಏನಾದರೂ ಸರ್ವೀಸ್ ಬೇಕು ಅಂದರೆ ಕಾಲ್ ಮಾಡ್ತಾರೆ. ಸರ್ವೀಸ್ ಪ್ರೊವೈಡರ್ ಮಿಸ್ಟರ್ ಮೀರ್ ಸಾಧಿಕ್ ಅಂತಾ.  ಸರ್ವೀಸ್ ಪ್ರೊವೈಡರ್ ಕರೆದು ಸರ್ವೀಸ್ ಪಡೀತ್ತಿರ್ತಾರೆ.  ಅವರ ಮನಸ್ಥಿತಿ ಪ್ರಕಾರವೇ ಅವರು ಮಾತಾಡ್ತಾರೆ ಇವರ ಆಟ ನಡೆಯೋಲ್ಲ, ಇವರು ಬೇರೆ ಪಕ್ಷಕ್ಕೆ ಅಲ್ಲ, ಅವರದ್ದೇ ಪಕ್ಷಕ್ಕೆ ದ್ರೋಹ ಬಗೆದಂತವರು ತಾಯಿಗೆ ದ್ರೋಹ ಬಗೆದಂತೆ ಎಂದು ವಾಗ್ದಾಳಿ ನಡೆಸಿದರು.

  ಇನ್ನು, ಮೈತ್ರಿ ಸರ್ಕಾರ ಬಿದ್ದಿದ್ದರ ಹಿಂದೆ ಯಾರ ಕೈವಾಡವಿದೆ ಎಂಬ ವಿಚಾರವಾಗಿ, ಯಾವ ಆಡಿಯೋ ಕೂಡ ಇಲ್ಲ. ಇವರು ಹೊಸ ಕಥೆ ಕಟ್ಟಲು ಹೊರಟಿದ್ರು. ಅದಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಅವರವರೇ ಎತ್ತಿಕಟ್ಟಿ, ಅವರೇ ಚಿವುಟಿ ಕಳುಹಿಸಿದ್ದಾರೆ. ಅವರ ಬಗ್ಗೆ ನಾವು ಹೇಳಿದ್ದೇವೆ ಅಷ್ಟೇ. ಇವಾಗ ಇದಕ್ಕೆ ಹೊಸ ಕಥೆ ಹೋಗ್ತಿದ್ರು, ನಾವು ಇವಾಗ ಆ ಕಥೆಗೆ ಅವಕಾಶ ಮಾಡಿಕೊಡದೇ ಕಥೆಗೆ ಮುಂಚೆಯೇ ಕ್ಲೈಮ್ಯಾಕ್ಸ್ ಮೊದಲೇ ಹೇಳಿದ್ದೇವೆ ಅಷ್ಟೇ. ಇದರಲ್ಲಿ ನಾವು ಸರ್ಜಿಕಲ್ ಸ್ರೈಕ್ ಮಾಡಿದ್ದೇವೆ ಅಷ್ಟೇ ಎಂದರು.
  Published by:Latha CG
  First published: