ಬೀದರ್ ಪ್ರಕರಣ ; ರಾಜ್ಯ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ ; ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟನೆ

ಸಿಎಎ , ಎನ್ ಆರ್ ಸಿ ವಿಚಾರ ಮೊದಲು ಪ್ರಸ್ತಾಪ ಮಾಡಿದ್ದೆ ಕಾಂಗ್ರೆಸ್​​. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂತು ಎಲ್ಲವನ್ನು ವಿರೋಧ ಮಾಡುವುದಲ್ಲ. ಸಮಾಜದಲ್ಲಿ ವಿಷ ಬೀಜ ಬಿತ್ತುವುದನ್ನ ಮೊದಲು ಬಿಡಬೇಕು

ಡಿಸಿಎಂ ಅಶ್ವತ್ಥ್ ನಾರಾಯಣ.

ಡಿಸಿಎಂ ಅಶ್ವತ್ಥ್ ನಾರಾಯಣ.

  • Share this:
ಬೆಂಗಳೂರು(ಫೆ.15) : ಬೀದರ್​ನ ಶಾಹೀನ್​​ ಶಾಲೆಯಲ್ಲಿ ನಡೆದ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ದೂರನ್ನುಕೊಟ್ಟಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿತ್ತು. ಈಗ ಅವರನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಮೇಲೆ ಸುಮ್ಮನೆ ಆರೋಪ ಮಾಡಬಾರದು ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ಸಿಎಎ , ಎನ್ ಆರ್ ಸಿ ವಿಚಾರ ಮೊದಲು ಪ್ರಸ್ತಾಪ ಮಾಡಿದ್ದೆ ಕಾಂಗ್ರೆಸ್​​. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕೂತು ಎಲ್ಲವನ್ನು ವಿರೋಧ ಮಾಡುವುದಲ್ಲ. ಸಮಾಜದಲ್ಲಿ ವಿಷ ಬೀಜ ಬಿತ್ತುವುದನ್ನ ಮೊದಲು ಬಿಡಬೇಕು. ಜನ್ಮದಿನಾಂಕ ಇಲ್ಲ ಅಂತ ಯಾರನ್ನು ಹೊರಗೆ ಹಾಕುವುದಕ್ಕೆ ಬರುವುದಿಲ್ಲ. ಎಲ್ಲಾ ಸಮುದಾಯಕ್ಕೂ ಅನುಕೂಲ ಆಗುವ ರೀತಿಯಲ್ಲಿ ಇದೆ. ಸುಮ್ಮನೆ ಬಾಯಿಗೆ ಬಂದಂತ್ತೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಸಿದ್ದರಾಮಯ್ಯ ವಿರುದ್ದ ಡಿಸಿಎಂ ಅಶ್ವಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

ದಿನೇಶ್ ಗುಂಡೂರಾವ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವತ್ ನಾರಾಯಣ,  ಅವರು ಕೋರ್ಟ್ ಮೇಲೆ ಅನುಮಾನ ಪಡುತ್ತಿದ್ದಾರೆ. ಸಮಾಜವನ್ನ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಜಾಗದಲ್ಲಿ ದೇಶದ್ರೋಹದ ಕೆಲಸ ಮಾಡಿದರೇ ಅಲ್ಲಿ ಪ್ರಕರಣ ದಾಖಲಾಗುತ್ತೆ. ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ದೇಶದ್ರೋಹದ ಹೇಳಿಕೆ ನೀಡಿದ್ದಳು. ಅಲ್ಲಿ  ದಾಖಲಾಗಿತ್ತು ಅವರಿಗೆ ಕನ್ನಡಿ ಹಿಡಿಯುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ನಾವು ದೇಶಕ್ಕಾಗಿ ದೇಶದ ಹಿತಕ್ಕಾಗಿ ನಾವು ಕೆಲಸ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್​ ಅವರಿಗೆ ಅಶ್ವಥ್ ನಾರಾಯಣ ತಿರುಗೇಟು ನೀಡಿದರು.

ಇದನ್ನೂ ಓದಿ : ಬೀದರ್ ಪ್ರಕರಣ - ಅವಾಚ್ಯ ಶಬ್ದ ಬಳಸಿದ್ದು ಮೋದಿಗಲ್ಲ - ಡ್ರಾಮಾದಲ್ಲಿ ಅವಾಚ್ಯ ಶಬ್ದ ಬಳಸಿದ್ರೆ ದೇಶದ್ರೋಹವಾಗಲ್ಲ; ಸಿದ್ಧರಾಮಯ್ಯ

ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್  ಯಡಿಯೂರಪ್ಪ ನವರು ಹಾಗೂ ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. .ಯಾವಾಗ ಆಗುತ್ತದೆ ಅಂತ ನನಗೆ ಗೊತ್ತಿಲ್ಲ. ಒಂದು ತಿಂಗಳ ಕಾಲ ಅಧಿವೇಶನ ಇದೆ ಎಲ್ಲರಿಗೂ ಅವಕಾಶಗಳಿವೆ ಎಂದರು.

ಸಚಿವ  ಆರ್ ಅಶೋಕ ಪುತ್ರನ ಅಪಘಾತ ಪ್ರಕರಣದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಎರಡು ಪೊಲೀಸ್ ತಂಡಗಳಿಂದ ತನಿಖೆ  ನಡಿಯುತ್ತಿದೆ. ಪಾರದರ್ಶಕವಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಸತ್ಯ ಅಸತ್ಯ ಏನು ಅಂತ ಹೊರಬರುತ್ತೆ, ವ್ಯವಸ್ಥೆ ಮೇಲೆ ಖಂಡಿತ ನಂಬಿಕೆ ಇದೆ. ಯಾರಿಗೆ ಯಾರು ರಕ್ಷಣೆ ಮಾಡುತ್ತಿಲ್ಲ ಎಂದರು ತಿಳಿಸಿದರು.
First published: