HOME » NEWS » State » DC ROHINI SINDHURI EXPRESS GROWING ANXIETY OF THE CORONA INFECTION IN MYSORE CITY SESR PMTV

ಮೈಸೂರಿನಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕು ಹೆಚ್ಚಾಗುವ ಆತಂಕ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ದಸರಾಗೆ ಪ್ರವಾಸಿತಾಣಗಳಲ್ಲಿ ಮುಕ್ತ ಅವಕಾಶ ನೀಡಿದ ಪರಿಣಾಮ ಸೋಂಕು ಹೆಚ್ಚಾಗಲಿದೆ. ಬಹುತೇಕ ಸ್ಥಳದಲ್ಲಿ ಕೊರೋನಾ ಸೋಂಕಿತರು ಸೂಪರ್‌ ಸ್ಪೇಡ್ಡರ್ಸ್‌ ಆಗಿದ್ದಾರೆ

news18-kannada
Updated:November 2, 2020, 3:48 PM IST
ಮೈಸೂರಿನಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕು ಹೆಚ್ಚಾಗುವ ಆತಂಕ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
  • Share this:
ಮೈಸೂರು (ನ.2): ದಸರಾಗೆ ಮುನ್ನ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ರೋಹಿಣಿ ಸಿಂಧೂರಿ, ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗಿಸಲು ನಿರಂತರ ಹೋರಾಡಿದರು. ಪರಿಣಾಮ ಎರಡು ವಾರದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ, ಮತ್ತೆ ಈ ಸೋಂಕು ಹೆಚ್ಚಾಗುವ ಸಾಧ್ಯತೆ ಜಿಲ್ಲಾಧಿಕಾರಿಯವರನ್ನು ಕಾದಿದೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಇನ್ನ ಹದಿನೈದು ದಿನ ಜಿಲ್ಲೆಯಲ್ಲಿ ಕೋರಾನ ಸೋಂಕು ಹೆಚ್ಚಾಗಲಿದ್ದು, ಸಾಂಸ್ಕೃತಿಕ ನಗರಿ ಜನರಿಗೆ ಇದು ಕಂಟಕವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಇದಕ್ಕಾಗಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆವಹಿಸಿದ್ದು, ಸಕಲ ಸಿದ್ಧತೆಯನ್ನು ನಡೆಸಲಾಗಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂಬ ಭರವಸೆಯನ್ನು ಅವರು ನೀಡಿದ್ದಾರೆ. 

ದಸರಾಗೆ ಬಂದಿದ್ದ ಪ್ರವಾಸಿಗರಿಂದ ಕೊರೊನಾ ಹೆಚ್ಚಾಗಿ ಹರಡಿರುವ ಸಾಧ್ಯತೆ ಇದೆ.  ಇದಕ್ಕಾಗಿ ಜಿಲ್ಲಾಡಳಿತ ಕೂಡ ಸಜ್ಜಾಗಿದೆ. ಪರಿಸ್ಥಿತಿ ಎದುರಿಸಲು ಹೆಚ್ಚು ಹೆಚ್ಚು ಆಸ್ಪತ್ರೆಯಲ್ಲಿ ಹೆಚ್ಚು ಬೆಡ್​ ಕಾದಿರಿಸಲಾಗಿದೆ. ಜೊತೆಗೆ  ಆಕ್ಸಿಜನ್ ಶೇಖರಿಸಿಟ್ಟಿದ್ದೇವೆ. ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ಪ್ರವಾಸಿತಾಣಗಲ್ಲಿ ಓಡಾಡಿದ್ದ ಪ್ರವಾಸಿಗರಲ್ಲಿ ಕೊರೊನಾ ಸೋಂಕಿತರು ಇದ್ದರಿಬಹುದು, ಅವರಿಂದ ಸೋಂಕು ಹರಡಿರುವ ಸಾಧ್ಯತೆಯನ್ನ ನಾವು ತಳ್ಳಿ ಹಾಕುವಂತಿಲ್ಲ ಎಂದರು.

ದಸರಾಗೆ ಪ್ರವಾಸಿತಾಣಗಳಲ್ಲಿ ಮುಕ್ತ ಅವಕಾಶ ನೀಡಿದ ಪರಿಣಾಮ ಸೋಂಕು ಹೆಚ್ಚಾಗಲಿದೆ. ಬಹುತೇಕ ಸ್ಥಳದಲ್ಲಿ ಕೊರೋನಾ ಸೋಂಕಿತರು ಸೂಪರ್‌ ಸ್ಪೇಡ್ಡರ್ಸ್‌ ಆಗಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ, ಮೈಸೂರು ಅರಮನೆಯಲ್ಲಿ ಜಿಲ್ಲಾಡಳಿತ ಪ್ರವಾಸಿಗರಿಗೆ ನಡೆಸಿದ್ದ ಕೊರೊನಾ ಆಂಟಿಜನ್‌ ಟೆಸ್ಟ್‌ನಲ್ಲಿ 10 ಪಾಸಿಟಿವ್‌ ಪತ್ತೆಯಾಗಿತ್ತು. ಅದರಲ್ಲಿ 6 ಮಂದಿಗೆ ಯಾವುದೇ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಇದರಿಂದಲೇ ನಾವು ಹೆಚ್ಚು ಆತಂಕ ಮೂಡಿದೆ.

ಇದನ್ನು ಓದಿ: ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ ಸೋಂಕು: ಹೇಳಿದಂತೆ ಮಾಡಿಬಿಟ್ಟರಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಈವರೆಗೆ ಸದ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದ್ದು, ತ್ವರಿತ ಚಿಕಿತ್ಸೆ ಸಿಗದ ಪರಿಣಾಮ ಸಾವಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನಲೆ ತಾಲೂಕು ಕೇಂದ್ರದಲ್ಲಿಯೂ ಹೆಚ್ಚಿನ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಜನರು ಕೂಡ ಈ ಬಗ್ಗೆ ಹೆಚ್ಚಿನ ಜಾಗೃತಿವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಹಾಕಿಕೊಳ್ಳುವ ಮೂಲಕ ಸೋಂಕಿನಿಂದ ರಕ್ಷಣೆ ಪಡೆಯಬೇಕು.

ಕೊರೊನಾ ನಿಯಂತ್ರಣ ಮಾಡಲು. ಪ್ರವಾಸಿತಾಣಗಳನ್ನ ಬಂದ್ ಮಾಡುವುದಾಗಲಿ.?  ಜಿಲ್ಲಾ ಗಡಿಗಳನ್ನ ಬಂದ್ ಮಾಡುವುದಾಗಲಿ ಈ ಹಂತದಲ್ಲಿ ಸಾಧ್ಯವಿಲ್ಲ.  ಅದಕ್ಕಾಗಿ ಅರಮನೆಯಲ್ಲಿ ಕೊರೋನಾ ಟೆಸ್ಟ್ ಮಾಡುತ್ತಿದ್ದೇವೆ. ಪ್ರವಾಸಿತಾಣಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ಮೂಲಕ ಪ್ರವಾಸಿಗರಲ್ಲಿ ಸೋಂಕು ಕಂಡುಬಂದರೆ ಅದನ್ನು ನಿಯಂತ್ರಣ ಮಾಡುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ಜನರು ಸಹಕರಿಸಬೇಕು. ಕೆಲವರಿಗೆ ಇದು ಸಮಸ್ಯೆ ಅನ್ನಿಸಬಹುದು ಆದರೆ ಇದು ಅನಿವಾರ್ಯ ಎಂದು ಮನವಿ ಮಾಡಿದರು.
Published by: Seema R
First published: November 2, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories