HOME » NEWS » State » DC ROHINI SINDHURI CLARIFIES HER ORDER ON COVID RULE IN DISTRICT PMTV SESR

ನನ್ನ ಆದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ

ಜಿಲ್ಲಾಡಳಿತದ ಆದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ. ನಾವು ಯಾವುದನ್ನು ಕಡ್ಡಾಯ ಮಾಡಿಲ್ಲ. ನಾವು ಸಲಹೆ ಕೊಟ್ಟಿದ್ದೇವು ಅಷ್ಟೇ, 

news18-kannada
Updated:April 10, 2021, 6:52 PM IST
ನನ್ನ ಆದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ.
  • Share this:
ಮೈಸೂರು (ಏ. 10): ಜಿಲ್ಲಾಡಳಿತದ ಸಲಹಾ ಸೂಚನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಅದೇ ಕಾರಣಕ್ಕೆ ನಮ್ಮ ಪ್ರತ್ಯೇಕ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂವಾದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರತಿ ಜಿಲ್ಲೆಗಳಲ್ಲೂ ಈ ರೀತಿ ಆದೇಶ ಮಾಡಿದರೆ ರಾಜ್ಯದ ಸ್ಥಿತಿ ಹೇಗೆ ನಿಭಾಯಿಸೋದು ಎಂದು  ಎನ್ನಿಸಿರಬಹುದು. ಅದೇ ಕಾರಣಕ್ಕೆ ನನ್ನ ಆದೇಶವನ್ನು ವಾಪಸ್ ಪಡೆದಿರಬಹುದು. ಅಲ್ಲದೇ, ನಮ್ಮ ಜಿಲ್ಲಾಡಳಿತದ ಆದೇಶವನ್ನ ತಪ್ಪಾಗಿ ಅರ್ಥೈಸಲಾಗಿದೆ. ನಾವು ಯಾವುದನ್ನು ಕಡ್ಡಾಯ ಮಾಡಿಲ್ಲ. ನಾವು ಸಲಹೆ ಕೊಟ್ಟಿದ್ದೇವು ಅಷ್ಟೇ,  ಕೆಲವು ಗೊಂದಲದಿಂದ ಈ ರೀತಿ ಆಗಿದೆ ಅಷ್ಟೇ ಎಂದು ಸಮಾಜಾಯಿಷಿ ನೀಡಿದರು

ಜನರಿಗೆ ನಮ್ಮ ಆದೇಶದ ತಪ್ಪಾಗಿ ಅರ್ಥೈಸಿದೆ.‌ ನಾನು ತೆಗೆದುಕೊಂಡ ಕ್ರಮಗಳನ್ನ ಸರ್ಕಾರ ವಾಪಸ್ ಪಡೆದಿದೆ. ನಾವು ಬೆಂಗಳೂರಿನಿಂದ ಬರುವ ಜನರಿಗೆ ಕೊವಿಡ್ ಟೆಸ್ಟ್‌ ಮಾಡಿಸಿಕೊಂಡು ಬಂದರೆ ಒಳ್ಳೆಯದು ಎಂದು ಸಲಹೆ ಕೊಟ್ಟೆವು. ಆದರೆ, ಅವರು ಅದನ್ನು ಆದೇಶ ಎಂದುಕೊಂಡರು. ನಾನು ಸರ್ಕಾರಕ್ಕೆ ಸಲಹೆ ಕೊಡಬಹುದು ಅಷ್ಟೆ. ಅದನ್ನು ಕಡ್ಡಾಯವಾಗಿ ಜಾರಿಗೆ ತನ್ನಿ ಎಂದು ಹೇಳಲು ಸಾಧ್ಯವೇ|. ಚೆನ್ನಾಗಿ ಊಟ‌ ಮಾಡಿ ಅಂತ ಸಲಹೆ ಕೊಡಬಹುದು. ಆದರೆ, ಗನ್‌ ಹಿಡ್ಕೊಂಡು ಊಟ ಮಾಡಲೇಬೇಕು ಅಂತ ಒತ್ತಾಯ ಮಾಡುವುದಕ್ಕೆ ಆಗುತ್ತಾ? ಎಂದು ಉದಾಹರಿಸುವ ಮೂಲಕ ತಮ್ಮ ಆದೇಶ ಹಿಂಪಡೆದಿದ್ದಕ್ಕೆ ಕಾರಣ  ತಿಳಿಸಿದರು.

ಪ್ರವಾಹದಲ್ಲಿ‌ ಸಿಲುಕಿದವನನ್ನ ರಕ್ಷಿಸಲು ಹೋದಾಗ ದೇವರು ಕಾಪಡುತ್ತಾನೆ ಅಂತ ವ್ಯಕ್ತಿ ಹೇಳ್ತಾನೆ, ದೋಣಿಯಲ್ಲೂ ಹೋಗಿ ಕರೆದರು ಬರೋಲ್ಲ, ಹೆಲಿಕ್ಯಾಪ್ಟರ್‌ನಲ್ಲಿ‌ ಹೋಗಿ ಕರೆದರು ಬರಲಿಲ್ಲ. ಕೊನೆಗೆ ಪ್ರವಾಹದಲ್ಲಿ ಆ ವ್ಯಕ್ತಿ ಕೊಚ್ಚಿಕೊಂಡು ಹೋಗಿಯೇ ಬಿಟ್ಟ. ಮೇಲೆ ದೇವರನ್ನ ಪ್ರಶ್ನಿಸಿದಾಗ ನಾನು ದೋಣಿ ಹಾಗೂ ಹೆಲಿಕ್ಯಾಪ್ಟರ್ ರೂಪದಲ್ಲಿ ಬಂದಿದ್ದೆ. ನೀನೆ ನನ್ನ ಸಹಾಯ ಪಡೆದುಕೊಳ್ಳಲಿಲ್ಲ ಅಂತ ಹೇಳುತ್ತಾನೆ. ಹಾಗಾಗಿ ನಮ್ಮ‌ ಜನರಿಗೆ ಈ ಮನಸ್ಥಿತಿ ಹೋಗಬೇಕಿದೆ ದೇವರ ಪೂಜೆ ಮಾಡಿದರೆ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಎನ್ನುವ ಮನಸ್ಥಿತಿ ಇದೆ. ನಂಜನಗೂಡು ಜಾತ್ರೆ ಮಾಡಿದರೆ ಶಿವನೇ ಕೊರೊನಾ ಕಂಟ್ರೋಲ್ ಮಾಡುತ್ತಾನೆ ಅಂತಾರೆ, ಆದರೆ ಆ ಪರಿಸ್ಥಿತಿ ಈಗ ಇಲ್ಲ. ಜನರು ಕೊರೋನಾ ಬಗೆಗಿನ ಭಯ ಹಾಗೂ ಪರಿಣಾಮವನ್ನ ಮರೆತಿದ್ದಾರೆ ಈ ಬಗ್ಗೆ‌ ಜನರು ಎಚ್ಚತ್ತುಕೊಳ್ಳಬೇಕು ಮನವಿ ಮಾಡಿದರು.

ಇನ್ನು ಮೈಸೂರಿಗೆ ಒಂದೂವರೆ ಲಕ್ಷ ವಾಕ್ಸಿನ್ ಡೋಸ್ ಬಂದಿದೆ. ಅಷ್ಟು ಡೋಸ್ ಖಾಲಿ ಆಗಿದೆ, ಉಸ್ತುವಾರಿ ಸಚಿವರು ಮನವಿ ಮಾಡಿದ ದಿನ ಡೋಸ್ ಇರಲಿಲ್ಲ. ಈಗ ಬಂದಿದೆ ಅದು ಸಹ ಖಾಲಿ ಆಗಿದೆ. ಮತ್ತೆ 2 ಲಕ್ಷ ಡೋಸ್ ಕೇಳಿದ್ದೇವೆ ಎಂದು ಮಾಹಿತಿ ನೀಡಿದರು.

ಕೆಲವೆಡೆ ವಾಕ್ಸಿನ್ ಪಡೆದುಕೊಳ್ಳುತ್ತಿಲ್ಲ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರಿಗೆ ವ್ಯಾಕ್ಸಿನ್‌ ಬಗ್ಗೆ ಹಲವು ಅನುಮಾನಗಳು ಇದ್ದವು. ಅವುಗಳನ್ನ‌ ಬಗೆಹರಿಸಿದ್ದೇವೆ. ಮುಸ್ಲಿಂಮರಿಗೆ ಅವರ ಧರ್ಮಗುರುಗಳ ಕೈಯಲ್ಲಿ ಹೇಳಿಸಿದ್ದೇವೆ. ಕುಡುಕರಿಗೆ ಕುಡುಕರಿಂದಲೇ ಹೇಳಿಸಿದ್ದೇವೆ. ಅನುಮಾನ ಇರೋದು ಸಹಜ ಆದರೆ, ಅದನ್ನ ಬಗೆಹರಿಸಿ ವಾಕ್ಸಿನ್ ಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು..

ಇದೇ ವೇಳೆ  ನಾನು ವಿವಾದಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದ ರೋಹಿಣಿ ಸಿಂಧೂರಿಯವರು, ಜಿಲ್ಲೆಯ ಹಲವು ಪತ್ರಕರ್ತರು ನನಗೆ ಕರೆ ಹಾಗೂ ಮೆಸೆಜ್ ಮಾಡ್ತಾರೆ, ಆದ್ರೆ ನಾನು ಎಲ್ಲ ವಿಚಾರಕ್ಕೂ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಎಲ್ಲದಕ್ಕು ಪ್ರತಿಕ್ರಿಯೆ ನೀಡದರೆ ಕೆಲಸ ಮಾಡಲು ಆಗೋಲ್ಲ. ವಿವಾದ ಹಾಗೂ ರಾಜಕಾರಣಿಗಳ ಮಾತಿಗೂ ನಾನು ಪ್ರತಿಕ್ರಿಯೆ ನೀಡಲ್ಲ, ನಾನು ಪ್ರತಿಕ್ರಿಯೆ ನೀಡದಿದ್ದರೆ ಅದು ನೋ ಕಾಮೆಂಟ್ ಎಂದು ಅರ್ಥಮಾಡಿಕೊಳ್ಳಿ ಎಂದು ಪತ್ರಕರ್ತರಿಗೆ ಮನವಿ ಮಾಡಿದರು.
Published by: Seema R
First published: April 10, 2021, 6:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories