‘ಎಸ್​ಎಸ್​ಎಲ್​​ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲು ಬರಲು ವಿದ್ಯಾರ್ಥಿಗಳೇ ಕಾರಣ‘ - ಡಿಸಿ ಆರ್​​. ಲತಾ

ಕೋವಿಡ್ ಸಂದರ್ಭದಲ್ಲಿ ಎಸ್​ಎಸ್ಎಲ್​ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಪ್ರೋತ್ಸಾಹ ನೀಡಿದ ಕೆಎಸ್​ಆರ್​ಟಿಸಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಆರ್​​. ಲತಾ ಅಭಿನಂದನೆಗಳು ಸಲ್ಲಿಸಿದರು.

news18-kannada
Updated:August 11, 2020, 8:30 AM IST
‘ಎಸ್​ಎಸ್​ಎಲ್​​ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲು ಬರಲು ವಿದ್ಯಾರ್ಥಿಗಳೇ ಕಾರಣ‘ - ಡಿಸಿ ಆರ್​​. ಲತಾ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್​. ಲತಾ
  • Share this:
ಚಿಕ್ಕಬಳ್ಳಾಪುರ(ಆ.11): ಕೊರೋನಾ ಸಮಯದಲ್ಲೂ ಪ್ರಾಣದ ಹಂಗನ್ನು ತೊರೆದು  ಶಿಕ್ಷಕರು ವಿದ್ಯಾರ್ಥಿಗಳ  ಮನೆಮನೆಗಳಿಗೆ ತೆರಳಿ ಪಾಠವನ್ನು ಬೋಧನೆ ಮಾಡಿದ ಶಿಕ್ಷಕರಿಗೆ, ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರಲು ಶ್ರಮ ವಹಿಸಿದ ಎಲ್ಲಾ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಆರ್‌ ಲತಾ ಅಭಿನಂದನೆ ಸಲ್ಲಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬರಲು ನಿವೃತ್ತ ಪ್ರೋಪೆಸರ್ ಒಳಗೊಂಡಂತೆ ಒಂದು ಕೋರ್ ಕಮಿಟಿ ರಚನೆ ಮಾಡಿ ಪ್ರತಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಗಮನ ಹರಿಸಲಾಗುತ್ತಿತ್ತು. ಇದರ ಪರಿಣಾಮ ಇಂದು ನಮ್ಮ ಜಿಲ್ಲೆ ಫಸ್ಟ್​​ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು ಆರ್​ ಲತಾ. 

ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಿಕ್ಕನರಸಿಂಹಯ್ಯ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಡಾ. ಕೆ ಸುಧಾಕರ್​ ಅಧಿಕಾರವನ್ನು ಸ್ವೀಕಾರ ಮಾಡಿದಾಗ ಅವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಎಂದು ಹೇಳಿದ್ದರು. ಅದೇ ರೀತಿ ನಮ್ಮ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠವನ್ನು ಬೋಧನೆ ಹಾಗೂ ಆನ್​​ಲೈನ್ ತರಗತಿಗಳನ್ನು ನಡೆಸಿ ಜಿಲ್ಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯಾದ್ಯಂತ ಸುಮಾರು 350ರಿಂದ 360 ಶಿಕ್ಷಕರನ್ನು ಕರೆಸಿ ಸಭೆಯನ್ನು ನಡೆಸಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅವರಲ್ಲಿ ಉತ್ತೇಜನವನ್ನು ನೀಡಿ ಮಕ್ಕಳಿಗೆ ಸಂಜೆಯ ವೇಳೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈಗಾಗಲೇ ಹೇಳಿದಂತೆ ಜಿಲ್ಲೆಯಲ್ಲಿ ಅತೀಹೆಚ್ಚು ಅಂಕಗಳನ್ನು ಪಡೆದ ಮೂರು ಶಾಲೆಗಳಿಗೆ ತಲಾ ಒಂದೊಂದು ಲ್ಯಾಪ್‍ಟಾಪ್‍ಗನ್ನು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್ ಲತಾ  ಮಾತನಾಡಿ, ಎಸ್​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ  ಮೊದಲ ಸ್ಥಾನ ಬರಲು ಶ್ರಮ ವಹಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಜಿಲ್ಲೆಯಲ್ಲಿ 287 ಶಾಲೆಗಳಿದ್ದು, ಇದರಲ್ಲಿ 111 ಸರ್ಕಾರಿ ಶಾಲೆಗಳು, 45 ಅನುದಾನ ಸಹಿತ, 118 ಅನುದಾನ ರಹಿತ ಶಾಲೆಗಳು, 13 ವಸತಿ ಶಾಲೆಗಳಲ್ಲಿ ಒಟ್ಟು 15676 ಮಕ್ಕಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, 15513 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. 7527 ವಿದ್ಯಾರ್ಥಿನಿಯರು 7949 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಿದ್ದರು. 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಕಳೆದ ವರ್ಷ 19ನೇ ಸ್ಥಾನ ಬಂದಿತ್ತು ಆದರೆ ಈ ವರ್ಷ ಕಳೆದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರಲು 2700 ಶಿಕ್ಷಕರ ಶ್ರಮವಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಎಸ್​ಎಸ್ಎಲ್​ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಪ್ರೋತ್ಸಾಹ ನೀಡಿದ ಕೆಎಸ್​ಆರ್​ಟಿಸಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆಗಳು ಸಲ್ಲಿಸಿದರು.

ಇದನ್ನೂ ಓದಿ: Delhi Post | ಸಿಎಂ ಕುರ್ಚಿಗಾಗಿ ದೇವರ ಮೊರೆ ಹೋಗುತ್ತಿರುವ ನಾಯಕರು, ಖರ್ಗೆಗೆ ಈಗ ದಿಗ್ವಿಜಯ್ ಸಿಂಗ್ ಕಾಟ!ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬರಲು ವಿದ್ಯಾರ್ಥಿಗಳೇ ಪ್ರಮುಖ ಕಾರಣರಾಗಿದ್ದು, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಯಪಡದೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿದ್ದಾರೆ. ಅದರ ಪ್ರತಿಫಲವೇ ಈ ಫಲಿತಾಂಶವಾಗಿದೆ. ಪ್ರತಿಯೊಬ್ಬ ಶಿಕ್ಷಕರು ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಅವರಿಗೆ ಪಾಠವನ್ನು ಮಾಡುತ್ತಿದ್ದರು. ವಿಶೇಷವಾಗಿ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪರಿಗಣಿಸಲಾಗಿತ್ತು. ಅವರಿಗೆ ಆನ್‍ಲೈನ್ ಮೂಲಕ ಬೋಧನೆಮಾಡಲಾಗುತ್ತಿತ್ತು. ಆದ್ದರಿಂದ ರಾಜ್ಯದಲ್ಲಿ ಜಿಲ್ಲೆಯು ಎಸ್​ಎಸ್​ಎಲ್​ಸಿ ಫಲಿತಾಂಶ ಮೊದಲ ಸ್ಥಾನಕ್ಕೆ ಬರಲು ಕಾರಣವಾಗಿದೆ. ಈ ಒಂದು ಪ್ರತಿಫಲ ಪ್ರತಿಯೊಬ್ಬ ಶಿಕ್ಷಕರಿಗೆ ಸಲ್ಲಬೇಕಿದೆ. ಅದೇ ರೀತಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಬೇಸರಗೊಳ್ಳದೆ ಮತ್ತೆ ಪರೀಕ್ಷೆಗೆ ಬರೆಯಲು ಸಿದ್ಧರಾಗಿ ಎಂದು ಧೈರ್ಯವನ್ನು ತುಂಬಿದರು.
Published by: Ganesh Nachikethu
First published: August 11, 2020, 8:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading