• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Suspend: ಕಳಂಕಿತ ಅಧಿಕಾರಿಗಳಿಗೆ ಅಮಾನತು ಶಿಕ್ಷೆ; ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್

Suspend: ಕಳಂಕಿತ ಅಧಿಕಾರಿಗಳಿಗೆ ಅಮಾನತು ಶಿಕ್ಷೆ; ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್

ADGP ಅಮೃತ್ ಪೌಲ್ ಹಾಗೂ DC ಮಂಜುನಾಥ್

ADGP ಅಮೃತ್ ಪೌಲ್ ಹಾಗೂ DC ಮಂಜುನಾಥ್

ಡಿಸಿ ಮಂಜುನಾಥ್ (DC Manjunath) ಹಾಗೂ ಎಡಿಜಿಪಿ ಅಮೃತ್ ಪೌಲ್ (ADGP Amrit Paul) ಅವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇನ್ನು ಒಂದೇ ದಿನ ಭ್ರಷ್ಟಾಚಾರದ (Corruption) ಆರೋಪ ಮೇಲೆ  IAS, IPS ಅಧಿಕಾರಿಗಳನ್ನು ಬಂಧಿಸಲಾಗಿತ್ತು.

  • Share this:

ಬೆಂಗಳೂರು: ಒಂದೇ ದಿನ ರಾಜ್ಯದ ಇಬ್ಬರು ಅಧಿಕಾರಿಗಳನ್ನು (Officer) ಅಮಾನತು (Suspend) ಮಾಡಿ ರಾಜ್ಯ ಸರ್ಕಾರ (State Government) ಆದೇಶಿಸಿದೆ. ಡಿಸಿ ಮಂಜುನಾಥ್ (DC Manjunath) ಹಾಗೂ ಎಡಿಜಿಪಿ ಅಮೃತ್ ಪೌಲ್ (ADGP Amrit Paul) ಅವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇನ್ನು ಒಂದೇ ದಿನ ಭ್ರಷ್ಟಾಚಾರದ (Corruption) ಆರೋಪ ಮೇಲೆ  IAS, IPS ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅರಗ ಜ್ಞಾನೇಂದ್ರ, IPS ಅಧಿಕಾರಿ ಅಮೃತ್ ಪೌಲ್ (Amrit Paul) ಅವರನ್ನು ಬಂಧಿಸಲಾಗಿದೆ. ಅಕ್ರಮದ ಆರೋಪ ಹಿನ್ನೆಲೆ ತನಿಖೆ ನಡೆಸಿದ್ದೇವೆ. ಸಿಐಡಿ ತಂಡ 2 ಗಂಟೆಯಲ್ಲಿ ಒಬ್ಬರನ್ನು ಅರೆಸ್ಟ್ (Arrest) ಮಾಡಿತ್ತು. ಕಲಬುರಗಿಗೆ ತೆರಳಿ ಬಂಧಿಸಿತ್ತು ಬ್ರೋಕರ್ ಹಾಗೂ ಹಣ ಕೊಟ್ಟವರನ್ನ ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆದಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ ಎಂದು ಅರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.


 ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಅಮೃತ್ ಪೌಲ್


ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (PSI Scam) ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ (Amrit Paul) ಅವರನ್ನು ಸಿಐಡಿ‌ ಪೊಲೀಸರು (CID Police) ಬಂಧಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ಕೆಳ ಹಂತದ ಅಧಿಕಾರಿ- ಸಿಬ್ಬಂದಿಯನ್ನ ಬಂಧನ ಮಾಡುತ್ತಿದ್ದ ಪೊಲೀಸರು‌ ಇದೀಗ ಹಿರಿಯ ಐಪಿಎಸ್ ಅಧಿಕಾರಿಯನ್ನು (Senior IPS Officer) ಬಂಧಿಸಿದ್ದು, ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು.


 ಕೋರ್ಟ್ಗೆ ಹಾಜರಾಗಿದ್ದ ಎಡಿಜಿಪಿ ಅಮೃತ್ ಪೌಲ್


ಇನ್ನು ಇಂದು ಡಿವೈಎಸ್ಪಿ ಶೇಖರ್ ಅಂಡ್ ಟೀಂ, ಎಡಿಜಿಪಿ ಅಮೃತ್ ಪೌಲ್ ಅವರನ್ನು ಕೋರ್ಟ್​ಗೆ ಕರೆತರಲಾಗಿದೆ. ಸಿಐಡಿ ತಂಡ ಎಡಿಜಿಪಿ ಜೊತೆ ಮತ್ತೆ ನಾಲ್ವರು ಆರೋಪಿಗಳನ್ನು ಕೋರ್ಟ್ ಗೆ ಹಾಜರು ಪಡಿಸಿದೆ. ಈಗಾಗಲೇ ಬಂಧಿತರಾಗಿ ಜೈಲಿನಲ್ಲಿರೋ ನಾಲ್ವರನ್ನು ಬಾಡಿ ವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆದಿತ್ತು.


ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣ; IPS ಅಧಿಕಾರಿ ಅಮೃತ್ ಪೌಲ್ ಬಂಧನ


ಲಂಚ ಪಡೆದ ಪ್ರಕರಣದಲ್ಲಿ ಡಿಸಿ ಮಂಜುನಾಥ್ ಅರೆಸ್ಟ್


5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ನಗರದ ಹಿಂದಿನ ಡಿಸಿ ಮಂಜುನಾಥ್​ರನ್ನು (DC Manjunath) ಬಂಧಿಸಲಾಗಿದೆ. ಹೈಕೋರ್ಟ್ (High Court)​ ಚಾಟಿ ಬೀಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಡಿಸಿ ಮಂಜುನಾಥ್ ಅವರನ್ನು ಯಶವಂತಪುರ (Yashwanthpura) ಫ್ಲಾಟ್​ನಲ್ಲಿ ಬಂಧಿಸಲಾಗಿದೆ.


ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ


ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿರುವ ಜೆ ಮಂಜುನಾಥ್ ಅವರನ್ನು ಮಕ್ಕಳ ಹಕ್ಕುಗಳ ಸಂರಕ್ಷಣೆ ಯೋಜನೆಯ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಅವರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.


ಇದನ್ನೂ ಓದಿ: Breaking News: ಲಂಚ ಸ್ವೀಕರಿಸಿದ ಆರೋಪ; ಡಿಸಿ ಜೆ. ಮಂಜುನಾಥ್​ ಅರೆಸ್ಟ್​


ಗೃಹಸಚಿವರ ಸ್ಪಷ್ಟನೆ


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅರಗ ಜ್ಞಾನೇಂದ್ರ, IPS ಅಧಿಕಾರಿ ಅಮೃತ್ ಪೌಲ್ (Amrit Paul) ಅವರನ್ನು ಬಂಧಿಸಲಾಗಿದೆ. ಅಕ್ರಮದ ಆರೋಪ ಹಿನ್ನೆಲೆ ತನಿಖೆ ನಡೆಸಿದ್ದೇವೆ. ಸಿಐಡಿ ತಂಡ 2 ಗಂಟೆಯಲ್ಲಿ ಒಬ್ಬರನ್ನು ಅರೆಸ್ಟ್ (Arrest) ಮಾಡಿತ್ತು. ಕಲಬುರಗಿಗೆ ತೆರಳಿ ಬಂಧಿಸಿತ್ತು ಬ್ರೋಕರ್ ಹಾಗೂ ಹಣ ಕೊಟ್ಟವರನ್ನ ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆದಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ ಎಂದು ಅರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

Published by:Annappa Achari
First published: