JDS MLA: ಗೌರಿಶಂಕರ್ ಶಾಸಕ‌ ಸ್ಥಾನವನ್ನು ಅನರ್ಹಗೊಳಿಸಿದ ಹೈಕೋರ್ಟ್

ಗೌರಿಶಂಕರ್

ಗೌರಿಶಂಕರ್

32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ. 2018 ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು.

  • News18 Kannada
  • 3-MIN READ
  • Last Updated :
  • Tumkur, India
  • Share this:

ಬೆಂಗಳೂರು: ಗೌರಿಶಂಕರ್ (MLA Gourishankar) ಅವರನ್ನು ಶಾಸಕ ಸ್ಥಳದಿಂದ ಅನರ್ಹಗೊಳಿಸಿ ಕಲಬುರಗಿ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ (Tumakuru Rural Constituency) ಮತದಾರರಿಗೆ ನಕಲಿ ಬಾಂಡ್ ಹಂಚಿಕೆ‌ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸುನಿಲ್‌ದತ್ ಯಾದವ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ (Former MLA Suresh Gowda) ಅರ್ಜಿ ಸಲ್ಲಿಸಿದ್ದರು. ಚುನಾವಣೆ ವೇಳೆ ಮತದಾರರಿಗೆ ಆಮಿಷ ನೀಡಿ ಜಯಗಳಿಸಿದ್ದ ಆರೋಪ ಗೌರಿಶಂಕರ್ ಮೇಲಿತ್ತು ಶಾಸಕ ಗೌರಿಶಂಕರ್ ಅವರನ್ನ ಶಾಸಕ‌ ಸ್ಥಾನದಿಂದ ಅಸಿಂಧುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.


32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ. 2018 ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು.


ಇದನ್ನೂ ಓದಿ:  Karnataka Politics: ಜೆಡಿಎಸ್ ತೊರೆದ ಬಳಿಕ ಬಿಜೆಪಿಗೆ ಹೋಗದೇ ಕಾಂಗ್ರೆಸ್ ಸೇರಿದ್ಯಾಕೆ ಎಸ್ಆರ್ ಶ್ರೀನಿವಾಸ್?


30 ದಿನಗಳ ಕಾಲ ಆದೇಶಕ್ಕೆ ತಡೆ


ಬಿ.ಸುರೇಶ್ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು. ಇನ್ನು ತೀರ್ಪು ಹೊರಬೀಳುತ್ತಲೇ ಗೌರಿಶಂಕರ್ ಪರ ವಕೀಲ ಆರ್.ಹೇಮಂತ್ ರಾಜ್, ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ತೀರ್ಪಿಗೆ ತಡೆ ನೀಡಬೇಕು ಎಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.




ಅನರ್ಹತೆಯ ಭೀತಿ

top videos


    ನ್ಯಾಯಾಲಯ ಶಾಸಕ ಆಯ್ಕೆಯನ್ನು ಅಸಿಂಧುಗೊಳಿಸಿರುವ ಕಾರಣ ಪ್ರಜಾಪ್ರತಿನಿಧಿ ಕಾಯ್ಕೆ ಅನ್ವಯ ಗೌರಿಶಂಕರ್ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು. ಈಗ ತೀರ್ಪು ಪ್ರಶ್ನಿಸಿ 30 ದಿನಗಳಲ್ಲಿ ಸುಪ್ರೀಂಕೋರ್ಟ್​​ಗೆ ಮನವಿ ಸಲ್ಲಿಸಿ ತಡೆ ತಂದ್ರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ಆಗಲಿದೆ.

    First published: