ಆನೇಕಲ್​​ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಂದ ಕೋಟ್ಯಾಂತರ ರೂ. ಮೌಲ್ಯದ ಕೆರೆ ಜಾಗ ವಶ

ಒಟ್ನಲ್ಲಿ ಕೆರೆಯ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದ ಒತ್ತುವರಿದಾರನಿಗೆ ತಾಲ್ಲೂಕು ಆಡಳಿತ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಶಾಕ್ ನೀಡಿದ್ದು, ಮೂರು ಕೋಟಿ ಮೌಲ್ಯದ ಕೆರೆ ಜಾಗವನ್ನು ಮರಳಿ ಸರ್ಕಾರಿ ವಶಕ್ಕೆ ಪಡೆದಿದ್ದು, ಸ್ಥಳೀಯರು ತಾಲ್ಲೂಕು ಆಡಳಿತದ ಕ್ರಮವನ್ನು ಶ್ಲಾಘಿಸಿದ್ದಾರೆ.

ಆನೇಕಲ್​​ನಲ್ಲಿ ತೆರವು ಕಾರ್ಯಾಚರಣೆ

ಆನೇಕಲ್​​ನಲ್ಲಿ ತೆರವು ಕಾರ್ಯಾಚರಣೆ

 • Share this:
  ಆನೇಕಲ್(ಫೆ.29): ಜಿಲ್ಲಾಡಳಿತದಿಂದ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಪ್ರಭಾವಗಳಿಂದ ಒತ್ತುವರಿಯಾಗಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಕೆರೆ ಜಮೀನನನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಆನೇಕಲ್ ತಹಶಿಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

  ಹೌದು, ತೆರವು ಕಾರ್ಯಕ್ಕೆ ಅಡ್ಡಿಪಡಿಸಲು ಮುಂದಾದ ಒತ್ತುವರಿದಾರರನ್ನು ತಹಶಿಲ್ದಾರ್​ ತರಾಟೆಗೆ ತೆಗೆದುಕೊಳ್ಳುತ್ತಿರುವ ತಹಶಿಲ್ದಾರ್, ತೆರವು ನಿಲ್ಲಿಸುವಂತೆ ಒತ್ತಾಯಿಸುತ್ತಿರುವ ಒತ್ತುವರಿದಾರರು. ಅಕ್ರಮ ಶೆಡ್​​ಗಳನ್ನು ಧ್ವಂಸಗೊಳಿಸುತ್ತಿರುವ ಜಿಸಿಬಿ ಯಂತ್ರಗಳು.. ಹೀಗೊಂದು ಘಟನೆ ನಡೆದಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಿಲಲಿಗೆ ಗ್ರಾಮದ ಕೆರೆ ಬಳಿ.

  ಇಲ್ಲಿನ ಹಿಲಲಿಗೆ ಗ್ರಾಮದ ಸರ್ವೆ ನಂ 197 ರಲ್ಲಿ 28 ಎಕರೆ 30 ಗುಂಟೆ ಕೆರೆ ಜಾಗವಿದ್ದು, ಅಮರೇಶ್ ರೆಡ್ಡಿ ಎಂಬುವವರು ಸುಮಾರು 1 ಎಕರೆಗು ಅಧಿಕ ವಿಸ್ತೀರ್ಣದ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ. ಸುಮಾರು 10ಕ್ಕೂ ಹೆಚ್ಚು ಮನೆಗಳು ಮತ್ತು ಶೆಡ್​ಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ. ಜೊತೆಗೆ ಕೆರೆಯ ಜಾಗವನ್ನು ನಿರಂತರವಾಗಿ ಕಬಳಿಕೆ ಮಾಡಿ ತಂತಿ ಬೇಲಿ ನಿರ್ಮಿಸಿಕೊಂಡಿದ್ದ.

  ಈ ಬಗ್ಗೆ ಹಲವು ಬಾರಿ ತಾಲ್ಲೂಕು ಆಡಳಿತ ನೋಟೀಸ್ ನೀಡಿ ತೆರವು ಮಾಡುವಂತೆ ಸೂಚಿಸಿದ್ದರು ತೆರವುಗೊಳಿಸಿರಲಿಲ್ಲ. ಆದರೆ ಇಂದು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದು, ಕೆರೆ ಜಾಗದಲ್ಲಿ ನಿರ್ಮಿಸಿದ್ದ ಶೆಡ್ ಮತ್ತು ಶೌಚಾಲಯಗಳನ್ನು ಎರಡು ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿದ್ದಾರೆ. ಆದರೆ, ಮಾನವೀಯತೆ ದೃಷ್ಟಿಯಿಂದ ಬಾಡಿಗೆದಾರರು ಮನೆ ಖಾಲಿ ಮಾಡಲು ಒಂದು ದಿನ ಗಡುವು ನೀಡಿದ್ದು, ಅದರೊಳಗೆ ಖಾಲಿ ಮಾಡದಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ತಿಳಿಸಿದ್ದಾರೆ.

  ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧ ಮೊಹಮ್ಮದ್ ಅನೀಸ್​ಗೆ ಮನೆ ಕಟ್ಟಿಕೊಡಲಿರುವ ಭಾರತೀಯ ಸೇನೆ

  ನಮ್ಮ ಪೂರ್ವಿಕರ ಕಾಲದಿಂದಲು ಇಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಕೆರೆಗೆ ಹೊಂದಿಕೊಂಡಂತೆ ನಮ್ಮ ಹಿಡುವಳಿ ಜಮೀನು ಇದೆ. ಮೋಜಿಣಿದಾರರು ಸರಿಯಾಗಿ ಸರ್ವೆ ಕಾರ್ಯ ನಡೆಸಿಲ್ಲ. ಇದೀಗ ಕಂದಾಯ ಅಧಿಕಾರಿಗಳು ಏಕಾಏಕಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೇಳಿದ್ದೆವೆ. ಸೂಕ್ತ ದಾಖಲೆಗಳನ್ನು ಕಂದಾಯ ಅಧಿಕಾರಿಗಳಿಗೆ ನೀಡಲಾಗುವುದು. ಕೆರೆಯ ಸ್ವಲ್ಲ ಜಾಗ ಮಾತ್ರ ಒತ್ತುವರಿಯಾಗಿದೆ ಎಂದು ಒತ್ತುವರಿದಾರ ಮುನಿಸ್ವಾಮಿ ರೆಡ್ಡಿ ತೆರವು ಕಾರ್ಯಾಚರಣೆ ಬಗ್ಗೆ ಅಸಮದಾನ ವ್ಯಕ್ತಪಡಿಸಿದ್ದಾರೆ.

  ಒಟ್ನಲ್ಲಿ ಕೆರೆಯ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದ ಒತ್ತುವರಿದಾರನಿಗೆ ತಾಲ್ಲೂಕು ಆಡಳಿತ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಶಾಕ್ ನೀಡಿದ್ದು, ಮೂರು ಕೋಟಿ ಮೌಲ್ಯದ ಕೆರೆ ಜಾಗವನ್ನು ಮರಳಿ ಸರ್ಕಾರಿ ವಶಕ್ಕೆ ಪಡೆದಿದ್ದು, ಸ್ಥಳೀಯರು ತಾಲ್ಲೂಕು ಆಡಳಿತದ ಕ್ರಮವನ್ನು ಶ್ಲಾಘಿಸಿದ್ದಾರೆ.

  (ವರದಿ: ಆದೂರು ಚಂದ್ರು)
  First published: