• Home
  • »
  • News
  • »
  • state
  • »
  • ಚಾಮರಾಜನಗರ ಜನನ ಮಂಟಪ ಸುತ್ತಲಿನ ಜಾಗ ಸರ್ಕಾರದ ಆಸ್ತಿ - ತೆರವು ಮಾಡಲು ಡಿಸಿ ಆದೇಶ

ಚಾಮರಾಜನಗರ ಜನನ ಮಂಟಪ ಸುತ್ತಲಿನ ಜಾಗ ಸರ್ಕಾರದ ಆಸ್ತಿ - ತೆರವು ಮಾಡಲು ಡಿಸಿ ಆದೇಶ

ಜನನ ಮಂಟಪ

ಜನನ ಮಂಟಪ

ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಚಾಮರಾಜನಗರದಲ್ಲಿ 1774 ರಲ್ಲಿ ಜನಿಸಿದ್ದರು. ಇವರ ಜನ್ಮಸ್ಥಳದಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಜನನ ಮಂಟಪ ನಿರ್ಮಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜನನ ಮಂಟಪದ ಸುತ್ತಲಿನ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಸುವರ್ಣಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು.

ಮುಂದೆ ಓದಿ ...
  • Share this:

ಚಾಮರಾಜನಗರ(ಜೂ.12): ಚಾಮರಾಜನಗರದ ಐತಿಹಾಸಿಕ ಜನನ ಮಂಟಪ ಸುತ್ತ ಇರುವ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ  ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಅಕ್ರಮ ಖಾತೆ ಮಾಡಿಕೊಟ್ಟಿರುವ ಪುರಸಭಾ ಮುಖ್ಯಾಧಿಕಾರಿ ಹಾಗು ಪೌರಾಯುಕ್ತರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಕ್ರಮ ಖಾತೆಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.


ಈ ಆದೇಶ ನೀಡಿ ಆರು ತಿಂಗಳಾದರೂ ತಹಶೀಲ್ದಾರರಾಗಲೀ, ನಗರಸಭಾ ಅಯುಕ್ತರಾಗಲೀ ಯಾವುದೇ ಕ್ರಮವಹಿಸದೆ ಇರುವುದು ಕಂಡುಬಂದಿದೆ. ಹಾಗಾಗಿ ಜಿಲ್ಲಾಧಿಕಾರಿಗಳ ಆದೇಶವನ್ನು ಕೂಡಲೇ ಅನುಷ್ಟಾನಗೊಳಿಸಿ ಅಕ್ರಮ ಖಾತೆಗಳನ್ನು ರದ್ದುಪಡಿಸಬೇಕು. ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಇಲ್ಲಿ ಚಾಮರಾಜನಗರದ ಇತಿಹಾಸ ಸಾರುವ ಸ್ಮಾರಕ ನಿರ್ಮಿಸಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.


ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಚಾಮರಾಜನಗರದಲ್ಲಿ 1774 ರಲ್ಲಿ ಜನಿಸಿದ್ದರು. ಇವರ ಜನ್ಮಸ್ಥಳದಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಜನನ ಮಂಟಪ ನಿರ್ಮಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜನನ ಮಂಟಪದ ಸುತ್ತಲಿನ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಸುವರ್ಣಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು.


ಇದನ್ನೂ ಓದಿ: ESIC Scheme: 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಕೇಂದ್ರದಿಂದ ಸಿಹಿಸುದ್ದಿ


ಈ ಬಗ್ಗೆ  ಉಪವಿಭಾಗಾಧಿಕಾರಿಗಳಿಂದ ವರದಿ ತರಿಸಿಕೊಂಡ ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ 2019ರ ಡಿಸೆಂಬರ್ 30 ರಂದು ಆದೇಶ ಹೊರಡಿಸಿ ಜನನ ಮಂಟಪ ಹಾಗು ಅದರ ಸುತ್ತಲಿನ ಜಾಗ ಸರ್ಕಾರದ ಆಸ್ತಿಯಾಗಿದೆ. ಇಲ್ಲಿ ಹಲವಾರು ಮಂದಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟು ಕಟ್ಟಡ ನಿರ್ಮಿಸಲು ನಿಯಮಬಾಹಿರವಾಗಿ ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ  ಹಿಂದಿನ ಪುರಸಭಾ ಮುಖ್ಯಾಧಿಕಾರಿ ಹಾಗು ಪೌರಾಯುಕ್ತರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗು ಸರ್ಕಾರಿ ಜಾಗವನ್ನು ತೆರವುಗೊಳಿಸುವಂತೆ ಚಾಮರಾಜನಗರ ತಹಸೀಲ್ದಾರರು ಹಾಗು ನಗರಸಭಾ ಆಯುಕ್ತರಿಗೆ ಆದೇಶ ನೀಡಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಆರು ತಿಂಗಳಾದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ವಾಜಪೇಯಿ ಆರೋಪಿಸಿದ್ದಾರೆ.


ಜನನ ಮಂಟಪದ ಸುತ್ತಲಿನ ಸರ್ಕಾರಿ ಜಾಗವನ್ನು ಅಕ್ರಮ ಖಾತೆ ಮಾಡಿಸಿಕೊಂಡು ಇಲ್ಲಿ ನಿಯಮಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಈ ಪ್ರದೇಶದಲ್ಲಿ ಚಾಮರಾಜನಗರ ಇತಿಹಾಸ ಸಾರುವ ಮ್ಯೂಸಿಯಂ ನಿರ್ಮಿಸಿಬೇಕು. ದಸರಾ ಸಂದರ್ಭದಲ್ಲಿ ಜನನ ಮಂಟಪದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಅಲ್ಲದೆ ಚಾಮರಾಜೇಶ್ವರ ರಥೋತ್ಸವದ ವೇಳೆ ಇಲ್ಲಿ ಪ್ರಥಮ ಪೂಜೆ  ನಡೆಯುತ್ತಿತ್ತು. ಈಗ ಅದೆಲ್ಲಾ ನಿಂತು ಹೋಗಿದೆ ಚಾಮರಾಜೇಂದ್ರ ಒಡೆಯರ್ ಇಲ್ಲಿ ಹುಟ್ಟಿದ ಕಾರಣದಿಂದಲೇ ಇಲ್ಲಿಗೆ ಚಾಮರಾಜನಗರ ಎಂಬ ಹೆಸರು ಬಂದಿದೆ. ಹಾಗಾಗಿ ಈ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸಬೇಕು ಎಂದು ಜನಾಂದೋಲ ಹೋರಾಟ ಸಮಿತಿಯ ಸಂಚಾಲಕ ಸಿದ್ದರಾಜು ಆಗ್ರಹಿಸಿದ್ದಾರೆ.

Published by:Ganesh Nachikethu
First published: