ಆರ್​ಆರ್​ ನಗರದಲ್ಲಿ ತಾರಾ ಮೆರುಗು; ಮುನಿರತ್ನ ಪರ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪ್ರಚಾರ

ಆರ್​ಆರ್​ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಿತ್ರನಟಿ ಶ್ರುತಿ ಬಳಿಕ ನಿನ್ನೆ  ದಕ್ಷಿಣ ಭಾರತದ ಖ್ಯಾತ ಸಿನಿ ತಾರೆ ಖುಷ್ಬೂ ಪ್ರಚಾರ ನಡೆಸಿದ್ದರು. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್​ಶೋ ನಡೆಸಿ, ಪ್ರಚಾರ ಮಾಡಲಿದ್ದಾರೆ.

ದರ್ಶನ್

ದರ್ಶನ್

  • Share this:
ಬೆಂಗಳೂರು (ಅ. 29): ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡ ರಂಗೇರುತ್ತಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಮತಯಾಚನೆ ಆರಂಭಿಸಿದ್ದಾರೆ. ನಿನ್ನೆ ಆರ್​ಆರ್​ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಹಿರಿಯ ನಟಿ ಖುಷ್ಬೂ ಸುಂದರ್ ಪ್ರಚಾರ ನಡೆಸಿದರು. ರೋಡ್​ಶೋ ಮೂಲಕ ಅನೇಕ ಕಡೆ ಸಾಗಿ, ಮತಯಾಚನೆ ಮಾಡಿದರು. ಇಂದು ಮುನಿರತ್ನ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್​ಶೋ ನಡೆಸಿ, ಪ್ರಚಾರ ಮಾಡಲಿದ್ದಾರೆ.

ಕೇವಲ ರಾಜಕಾರಣಿಯಲ್ಲದೆ ನಿರ್ಮಾಪಕರೂ ಆಗಿರುವ ಮುನಿರತ್ನ ಪರ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇಂದು ಪ್ರಚಾರ ನಡೆಸಲಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ದರ್ಶನ್​ ಅವರು ಮುನಿರತ್ನ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಇಂದು ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ದರ್ಶನ್​ ಪ್ರಚಾರದಿಂದ ಆರ್​ಆರ್​ ನಗರ ಇಂದು ಮತ್ತಷ್ಟು ರಂಗೇರಲಿದೆ.

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ  ಉಪ ಚುನಾವಣಾ ಕಣಕ್ಕೆ ತಾರಾ ಮೆರುಗು ಬಂದಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸಿನಿ ತಾರೆಯರು ‌ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರನಟಿ ಶ್ರುತಿ ಬಳಿಕ ನಿನ್ನೆ  ದಕ್ಷಿಣ ಭಾರತದ ಖ್ಯಾತ ಸಿನಿ ತಾರೆ ಖುಷ್ಬೂ ಪ್ರಚಾರ ನಡೆಸಿದ್ದರು. ರಾಜರಾಜೇಶ್ವರಿ ನಗರ  ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಖುಷ್ಬೂ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದ್ದರು. ಲಗ್ಗೆರೆ ವ್ಯಾಪ್ತಿಯ ಕೆಂಪೇಗೌಡ ನಗರ ಆರ್ಚ್​​​ನಿಂದ ಲಗ್ಗೆರೆ ಕ್ವಾರ್ಟರ್ಸ್ ಮೂಲಕ ತೆರಳಿ, ತೆರೆದ ವಾಹನದಲ್ಲಿ ಅಭ್ಯರ್ಥಿ ಮುನಿರತ್ನ ಜೊತೆಯಲ್ಲಿ ಪ್ರಚಾರ ನಡೆಸಿದರು.

ಇದನ್ನೂ ಓದಿ: ಕೊನೆಗೂ ಉಪಚುನಾವಣಾ ಅಖಾಡಕ್ಕಿಳಿದ ಯಡಿಯೂರಪ್ಪ; ಅ. 30, 31ರಂದು ಶಿರಾ, ಆರ್​ಆರ್​ ನಗರದಲ್ಲಿ ಸಿಎಂ ಪ್ರಚಾರ

ಖುಷ್ಬೂ ಪ್ರಚಾರದ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿತ್ತು. ನೂರಾರು ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆ ನಡೆಸಿ, ಮತ ಯಾಚಿಸಿದರು. ಇಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಮತಯಾಚನೆ ಮಾಡಲಿದ್ದಾರೆ. ಆರ್​ಆರ್​ ನಗರ ಕ್ಷೇತ್ರದಲ್ಲಿ  ಅ. 31ರಂದು  ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸಿಎಂ ಬಿಎಸ್​ ಯಡಿಯೂರಪ್ಪ ಪ್ರಚಾರ ಕೈಗೊಳ್ಳಲಿದ್ದಾರೆ.

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ನ. 3ರಂದು ಉಪಚುನಾವಣೆ ಘೋಷಿಸಲಾಗಿದೆ. ಆರ್​.ಆರ್ ನಗರದ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದ ಐಎಎಸ್​ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧಿಸಲಿದ್ದಾರೆ. ಆರ್​ಆರ್​ ನಗರ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕಿಳಿಯಲಿದ್ದಾರೆ. ಆರ್​ಆರ್​ ನಗರ ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಸ್ಪರ್ಧಿಸಲಿದ್ದಾರೆ.
Published by:Sushma Chakre
First published: