ಸುಮಲತಾರಿಗಾಗಿ ಒಂದಾದ ಗಜ ಕೇಸರಿ: ಎಲ್ಲ ಮರೆತು ವೇದಿಕೆ ಹಂಚಿಕೊಂಡ ದರ್ಶನ್​-ಯಶ್​..!

Anitha E | news18
Updated:March 18, 2019, 5:48 PM IST
ಸುಮಲತಾರಿಗಾಗಿ ಒಂದಾದ ಗಜ ಕೇಸರಿ: ಎಲ್ಲ ಮರೆತು ವೇದಿಕೆ ಹಂಚಿಕೊಂಡ ದರ್ಶನ್​-ಯಶ್​..!
ಸುಮಲತಾರ ಬೆಂಬಲಕ್ಕೆ ನಿಂತ ನಟ ಯಶ್​-ದರ್ಶನ್​
  • News18
  • Last Updated: March 18, 2019, 5:48 PM IST
  • Share this:
ಅಂಬರೀಷ್ ಚಂದನವನದ ದೊಡ್ಡಣ್ಣನಂತಿದ್ದವರು. ಕನ್ನಡ ಸಿನಿ ರಂಗವನ್ನು ಒಂದು ಒಟ್ಟು ಕುಟುಂಬದಂತೆ ನಡೆಸಿಕೊಂಡು ಬಂದವರು. ಈ ಕುಟುಂಬದಲ್ಲಿ ಏನೇ ಸಮಸ್ಯೆ, ಕಲಹ ಬಂದರೂ ಮುಂದೆ ನಿಂತು ಅವುಗಳಿಗೆ ಹಿರಿಯಣ್ಣನಾಗಿ ಪರಿಹಾರ ನೀಡುತ್ತಿದ್ದರು ಅಂಬಿ. ಇಂತಹ ಹಿರಿಯಣ್ಣನ ಋಣ ತೀರಿಸಲು ಈಗ ಇಡೀ ಚಿತ್ರರಂಗವೇ ಒಂದಾಗಿದೆ.

ಇದನ್ನೂ ಓದಿ: Dear Comrade: ವೈರಲ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಲಿಪ್​ಲಾಕ್​ ವಿಡಿಯೋ..!

ಯಾವುದೇ ವಿಷಯದಲ್ಲಿ ಅಂಬಿ ನಿರ್ಧಾರ ತೆಗೆದುಕೊಂಡರೆ, ಅದನ್ನುಇಡೀ ಚಿತ್ರರಂಗವೇ ಗೌರವಿಸುತ್ತಿತ್ತು. ಅವರ ಮಾತಿಗೆ ಯಾರೂ ಎದುರಾಡುತ್ತಿರಲಿಲ್ಲ. ಅದು ಸಿನಿ ರಂಗದಲ್ಲಿನ ವಿಚಾರ ಇರಬಹುದು ಅಥವಾ  ಕಲಾವಿದರ ನಡುವಿನ ಸಣ್ಣಪುಟ್ಟ ಜಗಳವಿರಬಹುದು.

ಈ ಹಿಂದೆ ದುನಿಯಾ ವಿಜಿ ಹಾಗೂ ಪಾನಿಪುರಿ ಕಿಟ್ಟಿ ವಿಚಾರದಲ್ಲೂ ಅಂಬಿ ಮಧ್ಯಪ್ರವೇಶಿಸಿ, ಸಮಸ್ಯೆ ಬಗೆಹರಿಸಿದ್ದರು. ದರ್ಶನ್​ ಕೌಟುಂಬಿಕ ಕಲಹವನ್ನು ಪರಿಹರಿಸಿದ ವಿಷಯದಲ್ಲೂ ಅಂಬರೀಷ್​ ಪಾತ್ರ ಮಹತ್ವದ್ದು. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂದು ಅಂಬಿ ಬುದ್ದಿ ಹೇಳಿ ಡಿ-ಬಾಸ್​ ದಂಪತಿಯನ್ನು ಒಂದು ಮಾಡಿದ್ದರು.

ಇದಾದ ನಂತರ ಯಶ್​, ದರ್ಶನ್​, ಸುದೀಪ್​ ಸೇರಿದಂತೆ ಸಾಕಷ್ಟು ಮಂದಿಗೆ ಸಿನಿ ರಂಗದಲ್ಲಿ ಬೆಳೆಯಲು ದಾರಿ ದೀಪವಾಗಿದ್ದುರು. ಕನ್ನಡ ಚಿತ್ರರಂಗದ ಕಲಾವಿದರನ್ನು ತಮ್ಮ ಮನೆ ಮಕ್ಕಳಂತೆ ಕಾಣುತ್ತಿದ್ದರು. ಇದಕ್ಕೆ ಉದಾಹರಣೆ ಯಶ್​ ಹೆಂಡತಿ ರಾಧಿಕಾ ಗರ್ಭಿಣಿಯಾಗಿದ್ದಾಗಲೇ ಅವರ ಮಗುವಿಗಾಗಿ ಒಂದು ಲಕ್ಷ ರೂಪಾಯಿ ಮೌಲ್ಯದ ತೊಟ್ಟಿಲನ್ನು ಉಡುಗೊರೆಯಾಗಿ ಕೊಡಲು ನಿರ್ಧರಿಸಿದ್ದರು.

ಅದು ಸಹ ಅವರ ಮಗು ಹುಟ್ಟುವ ಹೊತ್ತಿಗೆ ಅಂಬಿ ಎಲ್ಲರನ್ನೂ ಅಗಲಿದ್ದರು. ಆದರೆ ಮಗು ಹುಟ್ಟಿದ ನಂತರ ಆಶ್ಚರ್ಯಕರ ರೀತಿಯಲ್ಲಿ ಅಂಬಿ ಪ್ರೀತಿಯಿಂದ ಬುಕ್​ ಮಾಡಿದ್ದ ತೊಟ್ಟಿಲು ಯಶ್​ ಮನೆ ಸೇರಿತ್ತು. ಇದು ಅಂಬಿ ಪ್ರೀತಿ ತೋರಿಸುವ ರೀತಿಗೆ ಒಂದು ಪುಟ್ಟ ಉದಾಹರಣೆ.

ಇದನ್ನೂ ಓದಿ: ಚುನಾವಣೆಗಾಗಿ ಸುಮಲತಾ ಹೊಸ ಹೆಜ್ಜೆ; ಮತದಾರರಿಗೆ ಮತ್ತಷ್ಟು ಹತ್ತಿರವಾದ ಮಂಡ್ಯ ಸೊಸೆಹೀಗೆ ಸಿನಿರಂಗ ಸೇರಿದಂತೆ ಮಂಡ್ಯದಲ್ಲಿ ಅಂಬಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ಒತ್ತಾಯದ ಮೇರೆಗೆ ಸುಮಲತಾ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಿಲ್ಲಲ್ಲು ಸಜ್ಜಾಗಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಸರ್ಕಾರ ಇರುವ ಕಾರಣದಿಂದ ಮಂಡ್ಯ ಕ್ಷೇತ್ರದಿಂದ ಸುಮಲತಾರಿಗೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಗಲಿಲ್ಲ. ಇದರಿಂದಾಗಿ ಸುಮಲತಾ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಸುಮಲತಾರ ಈ ನಿರ್ಧಾರವನ್ನು ಚಂದನವನದ ದಿಗ್ಗಜ ನಟರು ಬೆಂಬಲಿಸಿದ್ದಾರೆ. ಚಂದನವನದ ಸ್ಟಾರ್​ ನಟರಾದ  ದರ್ಶನ್​, ಸುದೀಪ್​, ಯಶ್, ಪುನೀತ್​, ದೊಡ್ಡಣ್ಣ, ನಿರ್ಮಾಪಕರಾದ ​ರಾಕ್​ಲೈನ್​ ವೆಂಕಟೇಶ್​, ಜೈ ಜಗದೀಶ್​​, ರಾಜೇಂದ್ರ ಸಿಂಗ್​ ಬಾಬು ಸೇರಿದಂತೆ ಹಲವಾರು ಕಲಾವಿದರು ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ.

ಗಜ-ಕೇಸರಿಯನ್ನು ಒಂದು ಮಾಡಿದ ಅಂಬಿಯ ಪ್ರೀತಿ

ಯಶ್​ ಹಾಗೂ ದರ್ಶನ್​ ನಡುವೆ ಎಲ್ಲವೂ ಸರಿಯಾಗಿಲ್ಲ ಅನ್ನೋದು ಬಹಿರಂಗ ಸತ್ಯ. ಈ ಹಿಂದೆ ಸಿನಿಮಾಗಳಲ್ಲಿ ಡೈಲಾಗ್​ ವಾರ್​ ನಡೆದದ್ದು, ಅದರೊಂದಿಗೆ ಸ್ಯಾಂಡಲ್​ ವುಡ್​ ಬಾಸ್ ಯಾರು ಅನ್ನೋ ವಿಷಯದಲ್ಲೂ ದಚ್ಚು ಹಾಗೂ ಯಶ್​ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ವಾರ್​ ನಡೆದಿತ್ತು. ಹೀಗಿರುವಾಗಲೇ ಯಶ್​ ಹೊಸಕಾರನ್ನು ಖರೀದಿಸಿದ್ದು, ಅದಕ್ಕೆ 'ಬಾಸ್​' ಎಂದು ಕಾಣಿಸುವಂತಹ ಫ್ಯಾನ್ಸಿ ಸಂಖ್ಯೆಯನ್ನು ಪಡೆದರು. ಆಗಲೂ ಅಭಿಮಾನಿಗಳ ನಡುವೆ ಈ ವಿಷಯ ಸಾಕಷ್ಟು ಚರ್ಚೆಯಾಗಿತ್ತು. ಇನ್ನೂ ಇತ್ತೀಚೆಗಷ್ಟೆ ತೆರೆಕಂಡ ದರ್ಶನ್​ ಅಭಿನಯದ 'ಯಜಮಾನ' ಸಿನಿಮಾದಲ್ಲೂ ಯಶ್​ ಹಾಗೂ ಸುದೀಪ್​ಗೆ ಪರೋಕ್ಷವಾಗಿ ವ್ಯಂಗ್ಯವಾಡುವ ಡೈಲಾಗ್​ಗಳಿವೆ. ಇದರಿಂದ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಡೈಲಾಗ್​ ಆರಂಭವಾಗುವ ಸೂಚನೆ ಸಿಕ್ಕಿತ್ತು. ಆದರೆ ಈಗ ಯಶ್​ ಹಾಗೂ ದರ್ಶನ್​ ಸುಮಲತಾರಿಗಾಗಿ ಚುನಾವಣಾ ವಿಚಾರದಲ್ಲಿ ಒಂದಾಗಿದ್ದಾರೆ. ಅದಕ್ಕಾಗಿಯೇ ಇಬ್ಬರೂ  ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.

ಸುಮಲತಾ ಪರ ನಿಂತ ಕಿಚ್ಚ ಸುದೀಪ್​

ಸುದೀಪ್​ ಈ ಬಾರಿ ಸುಮಲತಾರ ಪರವಾಗಿ ಪ್ರಚಾರ ಮಾಡುವುದಿಲ್ಲ ಅನ್ನೋ ಗಾಳಿ ಸುದ್ದಿ ಸಾಕಷ್ಟು ಕಡೆ ಹರಿದಾಡುತ್ತಿತ್ತು. ಆದರೆ ಈಗ ಇದಕ್ಕೂ ಬ್ರೇಕ್​ ಬಿದ್ದಿದೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಕ್​ಲೈನ್​ ವೆಂಕಟೇಶ್​ ಮಾತನಾಡಿ, ಪುನೀತ್ ಹಾಗೂ ಸುದೀಪ್​ ಸಹ ಸುಮಲತಾರ ಪರವಾಗಿದ್ದಾರೆ ಎಂದು ಹೇಳಿದ್ದಾರೆ.  ಅಲ್ಲದೆ ಸುದೀಪ್​ ಕಾರಣಾಂತರಗಳಿಂದ ಇಂದು ಬರಲು ಸಾಧ್ಯವಾಗುತ್ತಿಲ್ಲ. ಅವರಿಗೆ ನನ್ನ ಶುಭ ಹಾರೈಕೆ ತಿಳಿಸಿ, ನಾನು ಅವರ ಪರವಾಗಿದ್ದೇನೆ ಎಂದು ರಾಕ್​ಲೈನ್​ ಅವರಿಗೆ ಕರೆ ಮಾಡಿ ತಿಳಿಸಿದ್ದಾರಂತೆ.

ಸುಮಲತಾರ ಬೆನ್ನಿಗೆ ನಿಂತ ಸಿನಿ ರಂಗ

ಸುಮಲತಾರ ಹಿರಿ ಮಗನಂತೆ ಇರುವ ದರ್ಶನ್​ ತಮ್ಮ ಬೆಂಬಲ ಅಮ್ಮನಿಗೆ ಇದೆ ಎಂದು ನೇರವಾಗಿಯೇ ಹೇಳಿದ್ದರು. ರಾಕ್​ಲೈನ್​ ವೆಂಕಟೇಶ್​, ದೊಡ್ಡಣ್ಣ ಸೇರಿದಂತೆ ಇತರೆ ಕಲಾವಿದರು ಮೊದಲನೇ ದಿನದಿಂದ ಸುಮಲತಾರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಸುಮಲತಾರ ಪರವಾಗಿ ನಿಂತ ಗಜ ಕೇಸರಿ

ಆದರೆ ಯಶ್​ ಎಲ್ಲೂ ಈ ಕುರಿತು ಬಾಯಿ ಬಿಟ್ಟಿರಲಿಲ್ಲ. ಆದರೆ, ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯಶ್​ ವಿರುದ್ಧ ಕೆಲವು ಪೋಸ್ಟ್​ಗಳು ಹರಿದಾಡುತ್ತಿದ್ದವು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿರ್ಮಾಪಕರಾಗಿರುವ ಕಾರಣಕ್ಕೆ ಯಶ್ ಸುಮಲತಾ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು. ಆದರೆ ಅದಕ್ಕೆ ವಿರುದ್ಧವಾಗಿ ಈಗ ಯಶ್​ ಪ್ರತ್ಯಕ್ಷವಾಗಿಯೇ ಸುಮಲತಾರ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದಾಗಿ ಯಶ್​ ಬೆಂಬಲಿಸುವ ಕುರಿತಾಗಿ ಇದ್ದ ಊಹಾಪೋಹಕ್ಕೆ ತೆರೆ ಬಿದ್ದಿದೆ.

ಇಂತಹ ದೊಡ್ಡ ಅಂಬಿಯ ಋಣ ತೀರಿಸಲು ಈಗ ಚಂದನವನ ಒಂದಾಗಿದೆ. ಸುಮಲತಾ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅವರಿಗಾಗಿ ಕಲಾವಿದರು ತಮ್ಮ ನಡುವಿನ ಮನಸ್ತಾಪವನ್ನು ಬದಿಗೊತ್ತಿ ಈಗ ಒಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಅಂಬಿ ಈ ಹಿಂದೆ ತೋರಿದ್ದ ಪ್ರೀತಿ ಎಂದರೆ ತಪ್ಪಾಗಲಾರದು. ಈ ಬೆಳವಣಿಗೆಯನ್ನು ಗಮನಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಸುಮಲತಾ ಅವರ ಗೆಲುವು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

- ಅನಿತಾ ಈ, 

 PHOTOS: ಟ್ರೆಂಡಿ ಲುಕ್​ನಲ್ಲಿ ಪೋಸ್​ ನೀಡಿದ್ದಾರೆ 'ಕೇಸರಿ' ಸಿನಿಮಾದ ನಟಿ ಪರಿಣಿತಿ ಚೋಪ್ರಾ

First published:March 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading