ಪರಿಚಯಸ್ಥನೆಂದು ನಂಬಿ ಬೈಕ್ ಏರಿದಳು; ಬಿಗಿಹಿಡಿತಕ್ಕೆ ಉಸಿರುಗಟ್ಟಿ ಸತ್ತವಳನ್ನೂ ರೇಪ್ ಮಾಡಿದ

ದಾವಣಗೆರೆಯ ಕಕ್ಕರಗೊಳ್ಳ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ ಆರೋಪಿಯು ರಂಜಿತಾಳನ್ನು ಹಿಂಡಿ ಹಿಪ್ಪೆ ಮಾಡಿದ್ದ. ಹುಡುಗಿ ಕೂಗಿಕೊಳ್ಳಬಾರದೆಂದು ಹಿಡಿದುಕೊಂಡಿದ್ದರಿಂದ ಅವಳ ಉಸಿರು ನಿಂತಿತು. ಸತ್ತವಳ ಮೇಲೆ ಅತ್ಯಾಚಾರವೆಸಗಿದ ಕೀಚಕ ಅಲ್ಲಿಂದ ಪರಾರಿಯಾಗಿದ್ದ.

Vijayasarthy SN | news18
Updated:December 12, 2018, 8:46 PM IST
ಪರಿಚಯಸ್ಥನೆಂದು ನಂಬಿ ಬೈಕ್ ಏರಿದಳು; ಬಿಗಿಹಿಡಿತಕ್ಕೆ ಉಸಿರುಗಟ್ಟಿ ಸತ್ತವಳನ್ನೂ ರೇಪ್ ಮಾಡಿದ
ದಾವಣಗೆರೆ ಎಸ್​ಪಿ ಚೇತನ್
Vijayasarthy SN | news18
Updated: December 12, 2018, 8:46 PM IST
- ಹೆಚ್.ಎಂ.ಪಿ. ಕುಮಾರ್, 

ದಾವಣಗೆರೆ(ಡಿ. 12): ಎರಡು ತಿಂಗಳ ಹಿಂದೆ ದಾವಣಗೆರೆಯ ಎರಡು ಟೀಮ್ ಪೊಲೀಸರ ನಿದ್ರೆಗಡೆಸಿದ್ದ ರೇಪ್ ಅಂಡ್ ಮರ್ಡರ್ ಪ್ರಕರಣದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದಾವಣಗೆರೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟ ರಂಜಿತಾ ಎಂಬ ಯುವತಿಯನ್ನು ಕಕ್ಕರಗೊಳ್ಳ ಸಮೀಪ ಕೊಲೆಗೈಯ್ದು ಬಳಿಕ ಅತ್ಯಾಚಾರ ಮಾಡಿದ್ದ. ಈ ಬಗ್ಗೆ ಎರಡು ತಿಂಗಳಿನಿಂದ ತನಿಖೆ ನಡೆಸಿದ ದಾವಣಗೆರೆ ಪೊಲೀಸರು ಕಕ್ಕರಗೊಳ್ಳ ಗ್ರಾಮದ 24 ವರ್ಷದ ರಂಗಸ್ವಾಮಿ ಎಂಬುವನನ್ನು ಬಂಧಿಸಿದ್ದಾರೆ. ಭತ್ತ ಕೊಯ್ಲು ಮಾಡುವ ಈತನನ್ನ ಕುಂಟರಂಗನೆಂದೇ ಗ್ರಾಮಸ್ಥರು ಕರೆಯುತ್ತಾರೆ. ಈತನಿಗೆ ಮದುವೆಯಾಗಿ ಏಳೂವರೆ ತಿಂಗಳ ಮಗು ಇದೆ. ಸತ್ತ ಹುಡುಗಿಯ ಮೇಲೂ ಈತ ಅತ್ಯಾಚಾರ ಎಸಗಿದ್ದು ಭಯಾನಕ ಎನಿಸಿದೆ.

ಬಚಾವಾದ ಲವರ್:

57 ದಿನಗಳ ಕಾಲ 2 ಟೀಮ್ ಗಳಲ್ಲಿ ಕೊಲೆ ಆರೋಪಿಯನ್ನು ಹುಡುಕಲು ಹೊರಟ ಪೊಲೀಸರಿಗೆ ಮೊದಲಿಗೆ ಸಿಕ್ಕಿದ್ದು ಅವಳ ಲವರ್. ಕಕ್ಕರಗೊಳ್ಳದ ಗ್ರಾಮದವನಾದ ಆ ವ್ಯಕ್ತಿಯು ರಂಜಿತಾಳೊಡನೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ವಾಟ್ಸಪ್​ನಲ್ಲಿ ಸಾಕಷ್ಟು ಬಾರಿ ಚಾಟ್ ಮಾಡಿದ್ದ. ಅವನನ್ನು ಪೊಲೀಸರು ಕಳೆದ ಒಂದೂವರೆ ತಿಂಗಳಿಂದ ವಿಚಾರಣೆ ನಡೆಸಿದ್ದಾರೆ. ಇನ್ನೇನು ಇವನೇ ಈ ಕೊಲೆ ಮಾಡಿರಬೇಕು ಎಂದು ಕೋರ್ಟ್ ಮುಂದೆ  ಹಾಜರುಪಡಿಸುವ ಧಾವಂತದಲ್ಲಿಯೂ ಪೊಲೀಸರ ಇದ್ದರು. ಆದರೆ ಪೊಲೀಸರ ಸಂಯಮದ ತನಿಖೆ ನಿಜವಾದ ಕೊಲೆ ಆರೋಪಿಯನ್ನು ಬಂಧಿಸುವಂತೆ ಮಾಡಿತು.

ರೇಪ್-ಮರ್ಡರ್ ಆಗಿದ್ದು ಹೇಗೆ?
ಅಕ್ಟೋಬರ್ 10ರಂದು ರಂಗಸ್ವಾಮಿ ಭತ್ತದ ಕೊಯ್ಲಿನ ಟ್ರಾಕ್ಟರ್ ಅನ್ನು ಹಡಗಲಿಗೆ ರಿಪೇರಿಗೆ ಬಿಟ್ಟು ದಾವಣಗೆರೆಯಿಂದ ತಮ್ಮ ಊರು ಕಕ್ಕರಗೊಳ್ಳಕ್ಕೆ  ಹೋಗುತ್ತಿರುತ್ತಾನೆ. ಹೊಂಡದ ಸರ್ಕಲ್ ಬಳಿ ಗ್ರಾಮಕ್ಕೆ ತೆರಳಲು ನಿಂತಿದ್ದ ರಂಜಿತಾಳನ್ನು ನೋಡಿ ಡ್ರಾಪ್ ಕೊಡುವುದಾಗಿ ಕರೆಯುತ್ತಾನೆ. ರಾತ್ರಿ ಎಂಟು ಆಗಿದ್ದರಿಂದ ಸ್ವಲ್ಪ ದೂರ ಕೊಂಡಜ್ಜಿ ರಸ್ತೆಯಲ್ಲಿ ಸಾಗುವಾಗ ಮಾರ್ಗ ಬದಲಿಸುತ್ತಾನೆ. ಏಕೆ ಮಾರ್ಗ ಬದಲಾವಣೆ ಎಂದು ಪ್ರಶ್ನಿಸಿದ್ದಕ್ಕೆ  ಮುಂದೆ ಪೊಲೀಸರಿದ್ದಾರೆ, ಡಿಎಲ್, ಹೆಲ್ಮೆಟ್ ಎಂದೆಲ್ಲಾ ನೆವ ಹೇಳಿ ಇನ್ನೊಂದು ರಸ್ತೆಗೆ ಹೋಗುತ್ತಾನೆ. ನಿರ್ಜನ ಜಾಗದಲ್ಲಿ ಬೈಕ್ ನಿಲ್ಲಿಸಿ ಪೆಟ್ರೋಲ್ ಖಾಲಿ ಆಯ್ತು ಅಂದಾಗ ಇವನ ಭಾವನೆ ಅರ್ಥಮಾಡಿಕೊಂಡ ರಂಜಿತಾ ಪ್ರತಿರೋಧ ತೋರುತ್ತಾಳೆ.

ಕೊನೆಗೆ ಮನಸ್ಸಿನಲ್ಲಿ ಬಂದ ಭಾವನೆಯನ್ನು ಈಡೇರಿಸಿಕೊಳ್ಳಬೇಕೆಂದು ಅವಳನ್ನು ಜೋಳದ ಹೊಲಕ್ಕೆ ಹೊತ್ತೊಯ್ಯುತ್ತಾನೆ. ಬಿಗಿಯಾಗಿ ಹಿಂಬದಿಯಿಂದ ಕುತ್ತಿಗೆ ಹಿಡಿದುಕೊಂಡಿದ್ದರಿಂದ  ಅವಳು ಪ್ರಜ್ಞಾಹೀನಳಾಗಿ ಹಾಗೆಯೇ ಉಸಿರು ನಿಂತುಹೋಗುತ್ತದೆ. ಆದರೆ ಇದ್ಯಾವುದನ್ನು ಗಮನಿಸಿದ  ಕುಂಟರಂಗ ಅವಳ ಮೇಲೆ ಅತ್ಯಾಚಾರವೆಸಗುತ್ತಾನೆ. ನಂತರ ಅಲ್ಲಿಂದ ಪರಾರಿಯಾಗಿ ಭತ್ತ ಕೊಯ್ಲು ಮಾಡುವ ಟ್ರಾಕ್ಟರ್ ಕೆಲಸದಲ್ಲಿ ಮಗ್ನನಾಗುತ್ತಾನೆ. ಕಕ್ಕರಗೊಳ್ಳದಲ್ಲಿ ಹೆಂಡತಿ ಮಗುವನ್ನು ಬಿಟ್ಟ ಅಸಾಮಿಯು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೆಲಸದಲ್ಲಿ ನಿರತನಾಗುತ್ತಾನೆ. ಕೊನೆಗೆ ಪೊಲೀಸರ ಚಾಣಾಕ್ಷ ತನಿಖೆಯಿಂದ ರಂಗಸ್ವಾಮಿ ಅಂದರ್ ಆಗಿ ಮಾಡಿದ ತಪ್ಪಿಗೆ ಕಂಬಿ ಎಣಿಸುತ್ತಿದ್ದಾನೆ.
Loading...

ಭತ್ತ ಕೊಯ್ಲು ಮಾಡುವ ಮೆಷಿನ್​ನ ಡ್ರೈವರ್ ಆಗಿದ್ದ ರಂಗಸ್ವಾಮಿಯು ತನ್ನ ಗ್ರಾಮದಲ್ಲಿ ಕುಂಟ ರಂಗ ಎಂದೇ ಖ್ಯಾತ. ಈತನ ದಾಹಕ್ಕೆ ಬಲಿಯಾದ ರಂಜಿತಾಗೆ ಈತನ ಹೆಂಡತಿಯ ಪರಿಚಯವಿತ್ತು. ತನ್ನ ಪರಿಯಸ್ಥರ ಪತಿ ಎಂಬ ಒಂದೇ ಕಾರಣಕ್ಕೆ ರಂಜಿತಾ ಈತನ ಬೈಕ್ ಹತ್ತಿರುತ್ತಾಳೆ. ಆದ್ರೆ ಡ್ರಾಪ್ ಕೊಡುತ್ತೇನೆಂದ ಕುಂಟರಂಗನ ಒಳ ಮನಸ್ಸು ರಂಜಿತಾಗೆ ಗೊತ್ತಾಗಲೇ ಇಲ್ಲ. ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಆತನ ಕಾಮಪಿಪಾಸುತನವನ್ನು ತಡೆಯಲು ಸಾಧ್ಯವಾಗಲಿಲ್ಲ.

ಕೊಲೆ ಮಾಡಿದ ರಂಗಸ್ವಾಮಿ  ಪ್ರಾಯಶ್ಚಿತವಾಗಿ ಹಲವಾರು ಪೂಜೆ ಪುನಸ್ಕಾರಗಳನ್ನು ಮಾಡಿಸಿದ್ದನಂತೆ. ಆದ್ರೆ ಅದ್ಯಾವುದು ಇವನ ಕೊಲೆ ಆರೋಪದಿಂದ ಮುಕ್ತಮಾಡಲಿಲ್ಲ. ಪೊಲೀಸರು ಸಂಯಮದ ತನಿಖೆಯಿಂದ ನಿಜವಾದ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದ್ದು ನಿರಪರಾಧಿ ಲವರ್  ನಿಟ್ಟುಸಿರುಬಿಟ್ಟಿದ್ದಾನೆ.
First published:December 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...