• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Oldest MLA: 92ನೇ ವಯಸ್ಸಿನಲ್ಲಿ ಗೆದ್ದು ಬೀಗಿ ದಾಖಲೆ ನಿರ್ಮಿಸಿದ ಕೈ ಶಾಸಕ ಶಾಮನೂರು ಶಿವಶಂಕರಪ್ಪ!

Karnataka Oldest MLA: 92ನೇ ವಯಸ್ಸಿನಲ್ಲಿ ಗೆದ್ದು ಬೀಗಿ ದಾಖಲೆ ನಿರ್ಮಿಸಿದ ಕೈ ಶಾಸಕ ಶಾಮನೂರು ಶಿವಶಂಕರಪ್ಪ!

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕಪ್ಪ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕಪ್ಪ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಶಿವಶಂಕರಪ್ಪ ಅವರು ಸತತವಾಗಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್ (Congress) ಪಕ್ಷಕ್ಕೆ ಗೆಲುವು ಅನಿವಾರ್ಯವಾಗಿದ್ದ ಸಾಮೂಹಿಕ ನಾಯಕತ್ವದಲ್ಲಿ ಎಲೆಕ್ಷನ್​ ಎದುರಿಸಿದ್ದ ನಾಯಕರ (Leaders) ಹೋರಾಟಕ್ಕೆ ಫಲ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಣಾಳಿಕೆ, ಪ್ರಚಾರ ಇತ್ಯಾದಿಗಳನ್ನು ಯೋಜನಾ ಬದ್ಧವಾಗಿ ಕೈಗೊಂಡಿದ್ದ ಕಾಂಗ್ರೆಸ್​ ಭರ್ಜರಿ ಬಹುಮತ (Majority) ಪಡೆದುಕೊಂಡಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಕೊಂಡಿದ್ದ ಹಲವು ಘಟಾನುಘಟಿ ನಾಯಕರು ಸೋಲುಂಡಿದ್ದು, ಸೋಲುತ್ತಾರೆ ಎಂದುಕೊಂಡಿದ್ದ ಅಭ್ಯರ್ಥಿಗಳು ಗೆಲುವು ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ 92 ವರ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಮತ್ತೊಮ್ಮೆ ಗೆದ್ದು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಆ ಮೂಲಕ ಕರ್ನಾಟಕದ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ.


92ರ ವಯಸ್ಸಿನಲ್ಲೂ ಗೆಲುವಿನ ಸಿಹಿ


ಟಿಕೆಟ್ ಹಂಚಿಕೆ ಸಮಯದಲ್ಲಿ 92 ವರ್ಷದ ವ್ಯಕ್ತಿಗೆ ಟಿಕೆಟ್ ನೀಡುತ್ತಾರಾ? ಈ ವಯಸ್ಸಿನಲ್ಲಿ ಗೆಲುವು ಸಾಧ್ಯನಾ? ಎಂದು ಅವರದ್ದೇ ಪಕ್ಷದ ಕೆಲ ನಾಯಕರು ಅಸಮಾಧಾನ ಹೊರ ಹಾಕಿದ್ದರು. ಆದರೆ ಇಂದು ನಡೆದ ಮತ ಎಣಿಕೆಯಲ್ಲಿ ಎಲ್ಲ ಪ್ರಶ್ನೆಗೂ ಶಾಮನೂರು ಶಿವಶಂಕರಪ್ಪ ಅವರು ಉತ್ತರ ನೀಡಿದ್ದು, ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.




ಈ ಕುರಿತಂತೆ ಫಲಿತಾಂಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನವರು ತಮ್ಮ ತೀರ್ಪನ್ನು ಕೊಟ್ಟು, ಕಾಂಗ್ರೆಸ್​ಗೆ ಬೆಂಬಲ ನೀಡಿದ್ದಾರೆ ಬಹಳ ಖುಷಿ ಆಗಿದೆ. ನನ್ನ ವಿರುದ್ದ ಡಮ್ಮಿ‌ ಕ್ಯಾಂಡಿಡೇಟ್ ಇದ್ದ. ಮೇಯರ್ ಆದಾಗ ಕೆಲಸ ಮಾಡಿಲ್ಲ. ಈಗ ಜನರೇ ನನಗೆ ಬಹಳ ಅಂತರದಲ್ಲಿ ಗೆಲ್ಲಿಸಿದ್ದಾರೆ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್


ದಾಖಲೆ ನಿರ್ಮಿಸಿದ ಶಾಮನೂರು

top videos


    ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಶಿವಶಂಕರಪ್ಪ ಅವರು ಸತತವಾಗಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬರೋಬ್ಬರಿ 28 ಸಾವಿರ ಮತಗಳೊಂದಿಗೆ ಗೆಲುವು ಪಡೆದು ತಮ್ಮ ಮೇಲೆ ಕೇಳಿ ಬಂದ ವಿಮರ್ಶೆಗಳಿಗೆ ತಿರುಗೇಟು ನೀಡಿದ್ದಾರೆ.


    ಇನ್ನು ಶಿವಶಂಕರಪ್ಪ ಅವರು 84,298 ಮತಗಳನ್ನು ಪಡೆದುಕೊಂಡಿದ್ದರೆ, ಎದುರಾಗಳಿ ಬಿಜೆಪಿ ಅಭ್ಯರ್ಥಿ ಅಜಯ್​ ಕುಮಾರ್ 56,410 ಮತಗಳನ್ನು ಪಡೆದುಕೊಂಡಿದ್ದರು. ಇದರೊಂದಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದ ಹಿರಿಯ ನಾಯಕರ, ದೇಶದ ಹಿರಿಯ ಶಾಸಕ ಎಂಬ ದಾಖಲೆಯನ್ನು ಶಿವಶಂಕರಪ್ಪ ಅವರು ಪಡೆದುಕೊಂಡಿದ್ದಾರೆ.

    First published: