• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್‌!

GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್‌!

ಸಂಸದ ಜಿಎಂ ಸಿದ್ದೇಶ್ವರ್‌

ಸಂಸದ ಜಿಎಂ ಸಿದ್ದೇಶ್ವರ್‌

ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಅವರು ತಮ್ಮ ಪತ್ನಿ ಮತ ಹಾಕೋವಾಗ ಇವಿಎಂನತ್ತ ಇಣುಕಿ ನೋಡಿದ್ದಾರೆ. ಈ ದೃಶ್ಯ ಪತ್ರಕರ್ತರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • News18 Kannada
  • 3-MIN READ
  • Last Updated :
  • Davanagere, India
  • Share this:

ದಾವಣಗೆರೆ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ (Karnataka Polls) ಬಿರುಸಿನಿಂದ ಸಾಗಿದೆ. ಎಲ್ಲಾ ಕಡೆ ಒಂದಲ್ಲೊಂದು ಸ್ವಾರಸ್ಯಕರ ಘಟನೆಯೂ ನಡೆಯುತ್ತಿದೆ. ಈ ಮಧ್ಯೆ ದಾವಣಗೆರೆಯಲ್ಲಿ ಕೂಡ ಇಂತಹುದೇ ಸನ್ನಿವೇಶ ನಡೆದಿದ್ದು, ಪತ್ನಿ ಮತ ಹಾಕೋವಾಗ ಗಂಡ ಇಣುಕಿ ನೋಡಿದ ಪ್ರಸಂಗ ವರದಿಯಾಗಿದೆ.


ಅಂದ ಹಾಗೆ ಪತ್ನಿ ಮತ ಹಾಕೋವಾಗ ಗಂಡ ಇಣುಕಿ ನೋಡಿರೋದು ಬೇರ್ಯಾರೂ ಅಲ್ಲ. ಅದು ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ (GM Siddeshwar) ಅವರು. ಹೌದು, ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಅವರು ತಮ್ಮ ಪತ್ನಿ ಮತ ಹಾಕೋವಾಗ ಈಕೆ ಯಾರಿಗೆ ಹಾಕಬಹುದು ಎಂದು ಇಣುಕಿ ನೋಡಿದ್ದಾರೆ. ಆ ಮೂಲಕ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದಾರೆ.


ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ- ಆಯೋಗದ ಯಡವಟ್ಟು, ಚಿಕ್ಕಪೇಟೆಯಲ್ಲಿ ಮರುಮತದಾನ?


ದಾವಣಗೆರೆಯ ವಿದ್ಯಾನಗರ ಬಡಾವಣೆಯ ಮಾಗನೂರು ಬಸಪ್ಪ ಸ್ಕೂಲ್‌ನಲ್ಲಿ ಮತದಾನ ಮಾಡುವ ವೇಳೆ ಈ ಘಟನೆ ನಡೆದಿದ್ದು, ಸಂಸದ ಸಿದ್ದೇಶ್ವರ ಅವರು ಪತ್ನಿ ಗಾಯತ್ರಿ ಜೊತೆಗೆ ಮತದಾನ ಮಾಡಲು ಆಗಮಿಸಿದ್ದರು. ಈ ವೇಳೆ ಮೊದಲು ಮತದಾನ ಮಾಡಿದ ಸಂಸದ ಜಿಎಂ ಸಿದ್ದೇಶ್ವರ್‌ ಇವಿಎಂ ಪಕ್ಕವೇ ನಿಂತಿದ್ದರು. ನಂತರ ಪತ್ನಿ ಮತ ಹಾಕೋವಾಗ ಇಣುಕಿ ನೋಡಿದ್ದಾರೆ. ಆ ಮೂಲಕ ಚುನಾವಣಾ ನಿಯಮ ಉಲ್ಲಂಘಿಸಿದ್ದಾರೆ ಎಂದು ತಿಳಿದು ಬಂದಿದೆ.


ಪಕ್ಕದಲ್ಲೇ ನಿಂತಿದ್ದ ಪತ್ನಿಯನ್ನು ದೂರ ಹೋಗಲು ಹೇಳಿದ ಖರ್ಗೆ


ಅತ್ತ ಸಂಸದ ಜಿಎಂ ಸಿದ್ದೇಶ್ವರ ಅವರು ತನ್ನ ಪತ್ನಿ ಮತ ಚಲಾಯಿಸುವುದನ್ನು ಇಣುಕಿ ನೋಡಿದರೆ, ಇತ್ತ ಎಐಸಿಸಿ ಅಧ್ಯಕ್ಷ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಾವು ಮತ ಚಲಾಯಿಸುವಾಗ ಪಕ್ಕದಲ್ಲೇ ನಿಂತಿದ್ದ ಪತ್ನಿಯನ್ನು ದೂರ ಹೋಗಲು ಹೇಳಿದ್ದಾರೆ.


ಇದನ್ನೂ ಓದಿ: Transgenders: ಜವಾಬ್ದಾರಿ ಮರೆಯದ ಮಂಗಳಮುಖಿಯರು; ರಾಜ್ಯದೆಲ್ಲೆಡೆ ಟ್ರಾನ್ಸ್‌ಜೆಂಡರ್‌ಗಳಿಂದ ಮತದಾನ


ಕಲಬುರಗಿ ನಗರದ ಬಸವನಗರದ ಮತಗಟ್ಟೆ ಸಂಖ್ಯೆ 120 ರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪತ್ನಿ ರಾಧಾಬಾಯಿ ಅವರು ಮತ ಚಲಾಯಿಸಲು ಜತೆಯಾಗಿ ಬಂದಿದ್ದರು. ಮತಗಟ್ಟೆಗೆ ಕೂಡ ಇಬ್ಬರೂ ಜತೆಯಾಗಿ ಹೋಗಿದ್ದು, ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಮತ ಹಾಕುವಾಗ ಪತ್ನಿ ಪಕ್ಕದಲ್ಲೇ ನಿಂತಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆ ಅವರು ಕೈ ಸನ್ನೆ ಮೂಲಕ ರಾಧಾಬಾಯಿ ಅವರನ್ನು ಯಾರೇ ಆಗಲಿ ಮತದಾನ ಮಾಡುವುದನ್ನು ವಿಕ್ಷಿಸಬಾರದೆಂದು ದೂರ ಸರಿಯಲು ಸೂಚಿಸಿದರು.




ಖರ್ಗೆ ಸೂಚಿಸುತ್ತಿದ್ದಂತೆ ದೂರ ನಿಂತ ರಾಧಾಬಾಯಿ ಅವರು ಗಂಡ ಮತ ಚಲಾಯಿಸಿದ ಬಳಿಕ ತಾವೂ ವೋಟ್ ಹಾಕಿದರು.

First published: