• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Savitha Bai Malleshanaik: ಕಾಂಗ್ರೆಸ್​ ಟಿಕೆಟ್​​ ಆಕಾಂಕ್ಷಿಯ ಖಾಸಗಿ ಫೋಟೋ ವೈರಲ್​​; ದ್ವೇಷ ರಾಜಕಾರಣ ಅಂತ ಸವಿತಾ ಬಾಯಿ ತಿರುಗೇಟು

Savitha Bai Malleshanaik: ಕಾಂಗ್ರೆಸ್​ ಟಿಕೆಟ್​​ ಆಕಾಂಕ್ಷಿಯ ಖಾಸಗಿ ಫೋಟೋ ವೈರಲ್​​; ದ್ವೇಷ ರಾಜಕಾರಣ ಅಂತ ಸವಿತಾ ಬಾಯಿ ತಿರುಗೇಟು

ಸವಿತಾ ಬಾಯಿ ಮಲ್ಲೇಶ್​ ನಾಯ್ಕ್

ಸವಿತಾ ಬಾಯಿ ಮಲ್ಲೇಶ್​ ನಾಯ್ಕ್

ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಅವರು ನಟಿಯಾಗಿ ಹಾಗೂ ಮಾಡೆಲ್​ ಆಗಿ ಕೆಲಸ ಮಾಡಿದ್ದರು. ದೇಶದಲ್ಲಿ ಮಾತ್ರವಲ್ಲದೆ ಅಮೆರಿಕಾ ಸೇರಿದಂತೆ ಯುರೋಪ್​​ನಲ್ಲಿ ವಿವಿಧ ಉತ್ಪನ್ನಗಳಿಗೆ ಮಾಡೆಲ್​ ಆಗಿಯೂ ಕೆಲಸ ಮಾಡಿದ್ದರು.

  • News18 Kannada
  • 2-MIN READ
  • Last Updated :
  • Davanagere (Davangere), India
  • Share this:

ದಾವಣಗೆರೆ: ಜಿಲ್ಲೆಯ ಮಾಯಕೊಂಡ (Mayakonda) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಪಕ್ಷದ ಟಿಕೆಟ್​ ಆಕಾಂಕ್ಷಿ ಸವಿತಾ ಬಾಯಿ ಮಲ್ಲೇಶ್​ ನಾಯ್ಕ್ (Savitha Bai Malleshanaik)​ ಅವರದ್ದು ಎನ್ನಲಾದ ಖಾಸಗಿ ಫೋಟೋಗಳು (Private Photos) ಎಲ್ಲೆಡೆ ವೈರಲ್​ ಆಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ (Karnataka Assembly Election) ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​​ ಮೇಲೆ ಕಣ್ಣಿಟ್ಟಿದ್ದ ಸವಿತಾ ಬಾಯಿ ಅವರು, ಕೆಪಿಸಿಸಿಗೆ (KPCC) ಟಿಕೆಟ್​​ಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಆದರೆ ಈ ನಡುವೆ ಅವರದ್ದು ಎನ್ನಲಾದ ಫೋಟೋಗಳು ಎಲ್ಲರ ಮೊಬೈಲ್​ನಲ್ಲಿ (Mobile) ಓಡಾಡುತ್ತಿದ್ದು, ಇದರಿಂದ ಟಿಕೆಟ್​ ಆಕಾಂಕ್ಷಿಗೆ ಮುಜುಗರವನ್ನು ಉಂಟು ಮಾಡಿದೆ ಎಂಬ ಮಾತು ಕೇಳಿ ಬಂದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸವಿತಾ ಬಾಯಿ ಅವರು ರಾಜಕೀಯ (Politics) ಕಾರಣಕ್ಕಾಗಿ ಕೆಲವು ಫೋಟೋಗಳನ್ನು ಎಡಿಟ್​ ಮಾಡಿ ವೈರಲ್​ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.


ಖಾಸಗಿ ಫೋಟೋ ವೈರಲ್​​!


ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಅವರು ನಟಿಯಾಗಿ ಹಾಗೂ ಮಾಡೆಲ್​ ಆಗಿ ಕೆಲಸ ಮಾಡಿದ್ದರು. ದೇಶದಲ್ಲಿ ಮಾತ್ರವಲ್ಲದೆ ಅಮೆರಿಕಾ ಸೇರಿದಂತೆ ಯುರೋಪ್​​ನಲ್ಲಿ ವಿವಿಧ ಉತ್ಪನ್ನಗಳಿಗೆ ಮಾಡೆಲ್​ ಆಗಿಯೂ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಎಡಿಟ್​ ಮಾಡಿ ವೈರಲ್​ ಮಾಡಲಾಗಿದೆ ಎನ್ನಲಾಗಿದೆ. ಸವಿತಾ ಬಾಯಿ ಮಲ್ಲೇಶ್​ ನಾಯ್ಕ್ ಅವರ ಅಭಿಮಾನಿಗಳು ಫೋಟೋ ವೈರಲ್​ ಕುರಿತಂತೆ ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಮಹಿಳೆಯರ ತೇಜೋವಧೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.


ಸವಿತಾ ಬಾಯಿ ಮಲ್ಲೇಶ್​ ನಾಯ್ಕ್


ಇದೇ ವೇಳೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ಅವರೇ ಫೋಟೋ ಎಡಿಟ್​ ಮಾಡಿ ವೈರಲ್ ಮಾಡ್ತಿದ್ದಾರೆ. ಕ್ಷೇತ್ರದಲ್ಲಿ ತನಗೆ ಟಿಕೆಟ್ ಸಿಗುತ್ತೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನನ್ನ ಕೆಲಸವನ್ನು ಗುರುತಿಸಿ ಪಕ್ಷದ ಟಿಕೆಟ್ ಸಿಕ್ಕಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಅಂತ ದ್ವೇಷ ರಾಜಕಾರಣ ಮಾಡ್ತಿದ್ದಾರೆ ಅಂತ ಸವಿತಾ ಬಾಯಿ ಆರೋಪಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.


ಇದನ್ನೂ ಓದಿ: BS Yediyurappa: ಇದು ನನ್ನ ಕೊನೆ ಅಧಿವೇಶನ ಮತ್ತೆ ಚುನಾವಣೆಗೆ ನಿಲ್ಲಲ್ಲ, ಆದ್ರೆ ರಾಜಕೀಯ ನಿವೃತ್ತಿ ಇಲ್ಲ; ಬಿಎಸ್​ವೈ ವಿದಾಯ ಭಾಷಣ


ಸವಿತಾ ಬಾಯಿ ಮಲ್ಲೇಶ್ ಯಾರು? ಇವರ ಹಿನ್ನೆಲೆ ಏನು?


ಕಾಂಗ್ರೆಸ್​ ಟಿಕೆಟ್​​ಗೆ ಅರ್ಜಿ ಹಾಕಿದ ಬಳಿಕ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ್ದ ಸವಿತಾ ಬಾಯಿ ಮಲ್ಲೇಶ್​ ಅವರು, ತಾವು ನಟಿಯಾಗಿ, ರೂಪದರ್ಶಿಯಾಗಿ ಕೆಲಸ ಮಾಡಿದ್ದಾಗಿ ಹೇಳಿದ್ದರು. ಅಲ್ಲದೆ ತಮ್ಮದೇ ಆದ ಒಂದು ಸೇವಾ ಸಂಸ್ಥೆಯನ್ನು ಕಟ್ಟಿ ಜನರ ಸೇವೆ ಮಾಡುತ್ತಿದ್ದೇನೆ. ರೈತ ಕುಟುಂಬದಲ್ಲಿ ಜನಿಸಿದ್ದ ನಾನು, ಎಂಕಾಂ ಪದವಿ ಪಡೆದಿದ್ದೇನೆ. ಆ ಬಳಿಕ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ತಮಿಳಿನಲ್ಲಿ ಇದುವರೆಗೂ ಸುಮಾರು 35 ಸಿನಿಮಾಗಳನ್ನು ಮಾಡಿದ್ದೇನೆ. ಜೊತೆಗೆ ರೇ ಫೌಂಡೇಶನ್ ಮೂಲಕ ಸಾಕಷ್ಟು ಜನವರಿಗೆ ಅಗತ್ಯ ನೆರವು ನೀಡುವ ಕೆಲಸ ಮಾಡಿಕೊಂಡು ಬಂದಿದ್ದೀನಿ ಎಂದು ತಿಳಿಸಿದ್ದರು.


ಅಲ್ಲದೆ, ಕಾಂಗ್ರೆಸ್​ ಪಕ್ಷ ಸ್ವಾತಂತ್ರ್ಯ ಪೂರ್ವದಿಂದ ದೇಶಕ್ಕಾಗಿ ಕೆಲಸ ಮಾಡಿಕೊಂಡು ಬಂದಿದೆ. ದೇಶದ ಎಲ್ಲ ಜನರಿಗೂ ಸಮಬಾಳು ಕೊಡುವ ಕೆಲಸ ಮಾಡಿದೆ. ಇಂದಿರಾ ಗಾಂಧಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಆದ್ದರಿಂದಲೇ ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಮೀಸಲು ಕ್ಷೇತ್ರವಾದ ಮಾಯಕೊಂಡ ಕ್ಷೇತ್ರದಲ್ಲಿ ಟಿಕೆಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಟಿಕೆಟ್​ ಸಿಕ್ಕರೂ ಇಲ್ಲ ಎಂದರೂ ಇಲ್ಲೇ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಿಂದ ದೂರ ಹೋಗೋದಿಲ್ಲ ಎಂದರು.




ಇದನ್ನೂ ಓದಿ: Pratap Simha: 'ನನ್ನ ದೇವರು ಪ್ರಧಾನಿ ಮೋದಿ, ನಾನು ಸೇವಕ' -ಸಂಸದ ಪ್ರತಾಪ್​ ಸಿಂಹ


ಶಾಮನೂರು ಶಿವಶಂಕರಪ್ಪಜೀ ನನ್ನ ರಾಜಕೀಯ ಗುರು!


ನಾನು ಮಾಯಕೊಂಡ ಕ್ಷೇತ್ರ ಪ್ರಜೆ, ಸ್ಥಳೀಯರು ನನ್ನನ್ನು ರಾಜಕೀಯಕ್ಕೆ ಕೈ ಹಿಡಿದು ಕರೆದುಕೊಂಡು ಬಂದಿದ್ದಾರೆ. ನನಗೆ ಏನು ಅಧಿಕಾರ ಇಲ್ಲ ಎಂದರೂ ಎನ್​ಜಿಒ ಮೂಲಕ ಕೆಲಸ ಮಾಡಿದ್ದೇನೆ. ನಾನು ರಾಜಕೀಯ ಗುರು ಎಂದು ಇಂದಿರಾ ಗಾಂಧಿ, ಶಾಮನೂರು ಶಿವಶಂಕರಪ್ಪಜೀ, ಎಸ್​ಎಸ್ ಮಲ್ಲಣ್ಣ ಅವರು ಅಂತ ಹೇಳುತ್ತೇನೆ. ಶಾಮನೂರು ಶಿವಶಂಕರಪ್ಪ ಅವರೇ ನನಗೆ ತಂದೆಯಂತೆ ಮಾರ್ಗದರ್ಶನ ಮಾಡಿದ್ದಾರೆ. ನನ್ನದೇ ಗ್ರಾಮದ ಮಾಜಿ ಸಿಎಂ ಜೆ ಹೆಚ್​ ಪಟೇಲ್​ ಅವರ ಧೈರ್ಯ, ಕಾರ್ಯಗಳು ನನಗೆ ಮತ್ತಷ್ಟು ಸ್ಪೂರ್ತಿ ನೀಡಿದೆ ಎಂದು ಹೇಳಿದ್ದರು.

Published by:Sumanth SN
First published: