Davanagere: 1994ರಿಂದ ನಿಲ್ಲದ ಅಕ್ಷರ ಯಜ್ಞ; 600ಕ್ಕೂ ಅಧಿಕ ರೈತರನ್ನ ಸಾಕ್ಷರರನ್ನಾಗಿಸಿದ ಸಾಧಕ

ಇನ್ನು ಶಿವಕುಮಾರ್ ತಮ್ಮ ಜಮೀನಿನಿಂದ ಬರುವ ಆದಾಯದ ಒಂದು ಭಾಗವನ್ನು ಗ್ರಾಮೀಣ ಭಾಗದ ಜನರ ಶಿಕ್ಷಣಕ್ಕಾಗಿ ಮೀಸಲಿರಿಸಿದ್ದಾರೆ. ಇದರ ಜೊತೆಗೆ ಇಲ್ಲಿ ಶಿಕ್ಷಣ ಪಡೆದ ಜನರು ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಸಹಾಯ ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಾವಣಗೆರೆಯ ರೈತ ಎಂ. ಶಿವಕುಮಾರ್ (Farmer M Shivakumar) ಅವರು ಸಣ್ಣ ಜಮೀನು ಹೊಂದಿದ್ದು, ಆದ್ರೆ ಇಂದುವ ಇವರ ದೂರದೃಷ್ಟಿಯಿಂದಾಗಿ ಗ್ರಾಮೀಣ ಭಾಗದ ಸುಮರು 670 ರೈತರು (Rural Areas Farmers) ಸಾಕ್ಷರರು ಆಗಿದ್ದಾರೆ. ಎಂ.ಶಿವಕುಮಾರ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆ ಸಿರಿಗೆರೆ (Hole sirigere, Harihara) ಗ್ರಾಮದ ನಿವಾಸಿ. 1994ರಿಂದ ಶಿವಕುಮಾರ್ ಅವರಿಂದ ಇಲ್ಲಿಯವರೆಗೆ ಗ್ರಾಮದ ಸುಮಾರು ರೈತರು ಸಾಕ್ಷರರು (Literate) ಆಗಿದ್ದಾರೆ. ಇದೀಗ ಇಲ್ಲಿಯ ರೈತರು ಕೃಷಿ ಕ್ಷೇತ್ರದ ಮಾಹಿತಿಯನ್ನು ತಾವೇ ದಿನಪತ್ರಿಕೆಗಳನ್ನು ಓದಿ ತಿಳಿದಕೊಳ್ಳುತ್ತಾರೆ. ಈ ಶಿಕ್ಷಣ ಕ್ರಾಂತಿಯಿಂದಾಗಿ ಶಿವಕುಮಾರ್ ಅವರನ್ನು ‘ಅಕ್ಷರಗಳ ವಾಣಿ/ ಅಕ್ಷರ ಧ್ವನಿ’ ಎಂದು ಕರೆಯಲಾಗುತ್ತದೆ. ಈ ಹೆಸರಿನಿಂದಲೇ ಶಿವಕುಮಾರ್ ಗುರುತಿಸುವ ಮೂಲಕ ಅವರನ್ನು ಗೌರವಿಸುತ್ತಾರೆ. ಶಿವಕುಮಾರ್ ಅವರ ಸತತ ಪ್ರಯತ್ನಗಳಿಂದಾಗಿ ರೈತರು ಸಾಕ್ಷರರಾಗಿದ್ದು, ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪೇಪರ್ ಓದುವ ಮೂಲಕ ತಿಳಿದುಕೊಳ್ಳುತ್ತಿದ್ದಾರೆ.

2008ರಲ್ಲಿ ರಾಜ್ಯ ಸರ್ಕರ ದಾವಣಗೆರೆಯನ್ನು ಸಾಕ್ಷರ ಜಿಲ್ಲೆಯನ್ನಾಗಿ ಘೋಷಿಸಿ, ಅಕ್ಷರ ವಾಣಿ ಯೋಜನೆಯನ್ನು ಕೊನೆಗೊಳಿಸಿತು. ಆದ್ರೆ ಬೋಧನೆ ಮಾಡುವ ಉತ್ಸಾಹ ಕಳೆದುಕೊಳ್ಳದ ಶಿವಕುಮಾರ್, ಪಾಠ ಮಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

10 ಕಿ.ಮೀ. ವ್ಯಾಪ್ತಿಯಲ್ಲಿ 12 ಕೇಂದ್ರಗಳು

ಗ್ರಾಮೀಣ ಭಾಗದ ರೈತರಿಗೆ ಶಿಕ್ಷಣದ ಮಹತ್ವ ತಿಳಿಸಿ ಓದಲು ಪ್ರೇರಪಿಸುತ್ತಿದ್ದಾರೆ. 12ಕ್ಕೂ ಹೆಚ್ಚು ವಿದ್ಯಾವಂತರು ಸ್ವಯಂ ಪ್ರೇರಿತವಾಗಿ ಶಿವಕುಮಾರ್ ಅವರ ತಂಡ ಸೇರಿಕೊಂಡು ರೈತರಿಗೆ ಪಾಠ ಮಾಡುತ್ತಿದ್ದಾರೆ. ಇಂದು ಹೊಳೆ ಸಿರಿಗೆರೆಯ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 12 ಕೇಂದ್ರಗಳನ್ನು ಆರಂಭಿಸಿದ್ದಾರೆ.

ಇಲ್ಲಿ ರೈತರಿಗೆ ಸೋಮವಾರ ಹೊರತುಪಡಿಸಿ ಉಳಿದ ಎಲ್ಲಾ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆವರೆಗೆ ಪಾಠ ಮಾಡಲಾಗುತ್ತದೆ. ಆಸಕ್ತ ರೈತರು ಬಂದು ಇಲ್ಲಿ ಓದುತ್ತಿದ್ದಾರೆ.

ಶಿವಕುಮಾರ್ ಅವರಿಗೆ ಸ್ಥಳೀಯರ ಸಹಾಯ

ಇನ್ನು ಶಿವಕುಮಾರ್ ತಮ್ಮ ಜಮೀನಿನಿಂದ ಬರುವ ಆದಾಯದ ಒಂದು ಭಾಗವನ್ನು ಗ್ರಾಮೀಣ ಭಾಗದ ಜನರ ಶಿಕ್ಷಣಕ್ಕಾಗಿ ಮೀಸಲಿರಿಸಿದ್ದಾರೆ. ಇದರ ಜೊತೆಗೆ ಇಲ್ಲಿ ಶಿಕ್ಷಣ ಪಡೆದ ಜನರು ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಸಹಾಯ ಮಾಡುತ್ತಾರೆ.

ಇದನ್ನೂ ಓದಿ:  NIA Raid: ಬೆಂಗಳೂರಿನ 12 ಸ್ಥಳ, ಮಂಗಳೂರಿನ 10 ಕಡೆ NIA ರೇಡ್‌; PFI ಕಾರ್ಯಕರ್ತರಿಂದ ಗೋ ಬ್ಯಾಕ್ ಪ್ರತಿಭಟನೆ

ಪುಸ್ತಕ ವಿತರಣೆ, ಸಸಿ ನೆಡುವ ಕಾರ್ಯ

ನಾನು ಕಲಿಸಿದ ಹಲವರಿಗೆ ಕನ್ನಡ ಓದಲು ಮತ್ತು ಬರೆಯಲು ಬರುತ್ತದೆ. ಆರಂಭದಲ್ಲಿ ಹೆಬ್ಬಟ್ಟು ಹಾಕುತ್ತಿದ್ದ ಜನರು ಇಂದು ಸಹಿ ಮಾಡುತ್ತಿದ್ದಾರೆ. ಈ ಸೇವೆ ಜೊತೆಗೆ ಶಿವಕುಮಾರ್ ಸ್ಥಳೀಯ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ, ಶೂ ಮತ್ತು ಬ್ಯಾಗ್​ಗಳನ್ನು ವಿತರಣೆ ಮಾಡುತ್ತಾರೆ.

ಪರಿಸರ ಪ್ರೇಮಿಯೂ ಆಗಿರುವ ಶಿವಕುಮಾರ್, ಗ್ರಾಮದ ಸ್ಮಶಾನದ ಆವರಣದಲ್ಲಿ ಸ್ವಯಂ ಸೇವಕರ ಜೊತೆಗೂಡಿ 5 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ತಾನೇ ಬೆಳೆಸಿದ ಮರಕ್ಕೆ ನೇಣು ಬಿಗಿದುಕೊಂಡ ಪರಿಸರ ಪ್ರೇಮಿ ವೀರಾಚಾರಿ!

ನ್ಯಾಯದ ಪರ ನಿಂತವ್ರಿಗೆ ಉಳಿಗಾಲ ಇಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಬಡವರ ಅನ್ನದ ಪರವಾಗಿ ಹೋರಾಟಕ್ಕಿಳಿದ ಪರಿಸರ ಪ್ರೇಮಿ ವೀರಾಚಾರಿ (Environmentalist Veerachari), ಈ ಭ್ರಷ್ಟ ವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ:  Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಮಗಳ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

ದಾವಣಗೆರೆ (Davangere) ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಪರಿಸರವಾದಿ ಸಾಲು ಮರದ ವೀರಾಚಾರಿ ತಾನೇ ಬೆಳೆಸಿದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಹರಿಹರ (Harihara) ತಾಲೂಕಿನಲ್ಲಿ ವೀರಾಚಾರಿ ಅವರು ಕಳೆದ 30 ವರ್ಷಗಳಿಂದ ರಸ್ತೆ ಬದಿಯಲ್ಲಿ ಸುಮಾರು 3 ಸಾವಿರ ಗಿಡಗಳನ್ನು ನೆಟ್ಟಿದ್ದರು.

ವಿಪರ್ಯಾಸವೆಂದ್ರೆ ಇದೆ ನೋಡಿ, ಮಂಗಳವಾರ (ಸೆಪ್ಟೆಂಬರ್​ 26) ತಾವೇ ನೆಟ್ಟು ಬೆಳೆಸಿದ್ದ ಮರಕ್ಕೆ ನೇಣು ಬಿಗಿದುಕೊಂಡು ವೀರಾಚಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Published by:Mahmadrafik K
First published: