HOME » NEWS » State » DAVANAGERE CRIME NEWS WIFE PLANS TO KILL HIS HUSBAND REVEAL FROM POLICE INVESTIGATION HMPK LG

ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ವ್ಯಕ್ತಿಯ ಬರ್ಬರ ಹತ್ಯೆ; ತನಿಖೆಯಿಂದ ಹೊರಬಿತ್ತು ಹೆಂಡತಿಯ ಮಾಸ್ಟರ್ ಪ್ಲಾನ್

ಕೊಲೆ ನಡೆದು 24 ಗಂಟೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾರ್ಗದರ್ಶನದಲ್ಲಿ ಗ್ರಾಮೀಣ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದ ಪೊಲೀಸರ ತಂಡ ಪ್ರಕರಣ ಬೇಧಿಸಿದೆ.  ಕೊಲೆಗೆ ಸಂಚು ರೂಪಿಸಿದ ಭಾಗ್ಯಮ್ಮ ಸೇರಿದಂತೆ ಆರೋಪಿಗಳಾದ ಅಂಜನಿ, ಮಾರುತಿಯನ್ನು ಸಾಕ್ಷಿ ಸಮೇತ ಪೊಲೀಸರು ಹೆಡಮುರಿ ಕಟ್ಟಿದ್ದಾರೆ.

news18-kannada
Updated:October 16, 2020, 8:45 AM IST
ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ವ್ಯಕ್ತಿಯ ಬರ್ಬರ ಹತ್ಯೆ; ತನಿಖೆಯಿಂದ ಹೊರಬಿತ್ತು ಹೆಂಡತಿಯ ಮಾಸ್ಟರ್ ಪ್ಲಾನ್
ಸಾಂದರ್ಭಿಕ ಚಿತ್ರ
  • Share this:
ದಾವಣಗೆರೆ(ಅ.16): ಹಣದ ಆಮಿಷ ನೀಡಿ ಸುಪಾರಿ ಕಿಲ್ಲಿಂಗ್‌ ಮಾಡಿಸುವುದು ಮಹಾನಗರಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ಸಂಗತಿ. ಆದ್ರೆ, ಈ ಪ್ರವೃತ್ತಿ ಸಣ್ಣಪುಟ್ಟ ಪಟ್ಟಣಗಳನ್ನು ಮುಟ್ಟಿದೆ ಆಂದ್ರೆ ನಂಬಲು ಸಾಧ್ಯವಿಲ್ಲ. ಹೆಂಡತಿಯೊಬ್ಬಳು ತನ್ನ ಗಂಡನ ಹತ್ಯೆಗೆ ಸುಪಾರಿ ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು, ಮೂವರಿಗೆ ಹಣದ ಆಮಿಷ ಒಡ್ಡಿ ತನ್ನ ಗಂಡನ ಹತ್ಯೆ ಮಾಡಿಸಿದ್ದಾಳೆ. ದುಷ್ಕರ್ಮಿಗಳು ಆತನ ಕುತ್ತಿಗೆ ಕತ್ತರಿಸಿ ಬರ್ಬರ ಹತ್ಯೆ ಮಾಡಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದಾರೆ. ಪೊಲೀಸರ ತಂಡ ಶವದ ಗುರುತು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿ ಮಕ್ಕಳು, ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆ ಜಗಳೂರಿನ ಬಿದರಕೆರೆ ರಸ್ತೆಯ ಅಶ್ವತರೆಡ್ಡಿ ನಗರದ ಮುಖ್ಯ ರಸ್ತೆ ಬದಿಯಲ್ಲಿ.  ತಡರಾತ್ರಿ ಗಂಡ ಮನೆಯಿಂದ ಹೊರಗೆ ಹೋಗಿದ್ದ. ಅಷ್ಟೇ ನನಗೆ ಗೊತ್ತಿರೋದು ಬೆಳಗ್ಗೆ ನನ್ನ ಸಹೋದರ ಬಂದು ಹೇಳಿದಾಗಲೇ ಗೊತ್ತಾಗಿದ್ದು, ಅವರ ಕೊಲೆಯಾಗಿದೆ ಎಂದು ಆರೋಪಿತ ಮಹಿಳೆ ಅಂದರೆ ಕೊಲೆಯಾದ ಗಂಡನ ಹೆಂಡತಿ ಹೇಳುತ್ತಿದ್ದಾಳೆ. ಆದರೆ ಗಂಡ ಕೊಲೆಯಾಗಿದ್ದಾನೆ ಎಂಬ ಯಾವ ಭಾವನೆಯೂ ಅವಳ ಮುಖದಲ್ಲಾಗಲಿ ಹೇಳಿಕೆಯಲ್ಲಾಗಲಿ ಕಾಣುತ್ತಿರಲಿಲ್ಲ.  ಯಾಕೆ ಗೊತ್ತಾ? ಅವಳೇ ತನ್ನ ಗಂಡನ ಕೊಲೆಗೆ 1 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದಳೂ ಎಂಬ ಭಯಾನಕ ಸತ್ಯ ಪೊಲೀಸರ ತನಿಖೆಯಿಂದ ಹೊರ ಬಿದ್ದಿದೆ.

ದಾವಣಗೆರೆ ಜಿಲ್ಲೆ ಜಗಳೂರಿನ ಬಿದರಕೆರೆ ರಸ್ತೆಯ ಅಶ್ವತರೆಡ್ಡಿ ನಗರದ ಮುಖ್ಯ ರಸ್ತೆ ಬದಿಯಲ್ಲಿ ಬೆಳ್ಳಬೆಳಗ್ಗೆ ರುಂಡ ಕತ್ತರಿಸಿದ ರೀತಿಯಲ್ಲಿ  ಶವವೊಂದು ಪತ್ತೆಯಾಗಿತ್ತು. ಬೆಳಗಿನ ವಾಕಿಂಗ್‌ಗೆಂದು ಹೋದವರು ಭೀಕರವಾಗಿ ಕೊಲೆಯಾಗಿ ಬಿದ್ದ ಶವ ನೋಡಿ ಬೆಚ್ಚಿ ಬಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯ ಗುರುತಿನ ಶೋಧ ಕಾರ್ಯ ಆರಂಭಿಸಿದ್ದರು. ಶವ ಪಕ್ಕದಲ್ಲಿ ಬಿದ್ದಿದ್ದ ಚಾಲಕರು ಧರಿಸುವ ಖಾಕಿ ಬಣ್ಣದ ಮೇಲಂಗಿ (ಏಪ್ರಾನ್‌) ಪೊಲೀಸರ ಗಮನ ಸೆಳೆದಿತ್ತು. ಆರಂಭದಲ್ಲಿ ಯಾವುದೋ ಆಟೋ ಚಾಲಕನ ಶವ ಇರಬೇಕು ಎಂಬ ಅನುಮಾನ ಮೂಡಿತ್ತು.  ತನಿಖೆ ಸಂದರ್ಭದಲ್ಲಿ ಕೊಲೆಯಾದ ವ್ಯಕ್ತಿ ಆಶ್ವಥರೆಡ್ಡಿ ನಗರದ ನಿವಾಸಿ 45 ವರ್ಷದ ಬಸವರಾಜ್‌ ಎಂಬ ವಿಚಾರ ಸ್ಪಷ್ಟವಾಗಿತ್ತು.

ಕೊಲೆಯಾದ ಬಸವರಾಜ್​​ ಜಗಳೂರಿನಲ್ಲಿ ಎಗ್‌ರೈಸ್‌ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ . ಪೊಲೀಸರು ಅವನ ಕುಟುಂಬದವರಿಗೆ ಮಾಹಿತಿ ನೀಡಿ, ಶವ ಪತ್ತೆಗೆ ಬರುವಂತೆ ತಿಳಿಸಿದ್ದರು. ಕೊಲೆಯಾದ ಬಸವರಾಜ್‌ ಅವರ ಪತ್ನಿ ಭಾಗ್ಯಮ್ಮ ಘಟನಾ ಸ್ಥಳಕ್ಕೆ ಬಂದು ಶವ ಗುರುತು ನಿಖರಪಡಿಸಿದ್ರು. ಅಂದ ಹಾಗೆ ಬಸವರಾಜ್‌, ಜಗಳೂರಿನಲ್ಲಿ ಎಗ್‌ರೈಸ್‌ ಅಂಗಡಿ ಇಟ್ಟುಕೊಂಡಿದ್ದ. ಸಮೀಪದ ಗ್ರಾಮದ ಮಹಿಳೆಯೊದಿಗೆ ಸಂಬಂಧವೂ ಇತ್ತು. ಆದ್ರೆ, ಅವನನ್ನು ಕೊಲೆ ಮಾಡಿಸುವಂಥ ಶತ್ರುಗಳು ಯಾರೂ ಇರಲಿಲ್ಲ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಎರಡ್ಮೂರು ದಿನಕ್ಕೆ ಒಮ್ಮೆ ಮನೆಗೆ ಬರುತ್ತಿದ್ದ ಎನ್ನುವುದು ಪತ್ನಿ ಭಾಗ್ಯಮ್ಮಳ ಆಕ್ಷೇಪಣೆಯಾಗಿತ್ತು.  ಇದೇ ಆಕ್ಷೇಪಣೆ ಅವಳನ್ನು ಕೊಲೆ ಮಾಡಿಸಲು ಪ್ರೇರಣೆ ನೀಡಿತ್ತು ಅನ್ನೋದು ಪೊಲೀಸರಿಗೆ ತನಿಖೆಯಿಂದ ತಿಳಿದು ಬಂದಿತ್ತು ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ವಿವರಣೆ ನೀಡಿದರು.

ತನ್ನೊಂದಿಗೆ ಬಾಳ್ವೆ ನಡೆಸದೇ ಮತ್ತೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತಿಯಿಂದ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಭಾಗ್ಯಮ್ಮ ಪ್ಲಾನ್‌ ಮಾಡಿದ್ದರು. ತಮ್ಮದೇ ಎಗ್‌ರೈಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಜನಿಯನ್ನು ಈ ಕೆಲಸಕ್ಕೆ ಬಳಸಿಕೊಂಡಿದ್ದರು. ಬಸವರಾಜನನ್ನು ಮುಗಿಸಿದ್ರೆ, ಒಂದು ಲಕ್ಷ ರೂಪಾಯಿ ನೀಡುವ ಆಮಿಷ ತೋರಿಸಿದ್ರು.

ಅಂಜನಿ, ಜಗಳೂರು ತಾಲೂಕಿನ ಗುಡ್ಡದನಿಂಗನಹಳ್ಳಿ ನಿವಾಸಿ. ಹಣದ ಆಸೆಗೆ ಕೊಲೆ ಮಾಡಲು ಒಪ್ಪಿಕೊಂಡಿದ್ದ. ಗುಡ್ಡದನಿಂಗನಹಳ್ಳಿ ನಿವಾಸಿಗಳಾದ ಆಟೋ ಚಾಲಕ ಮಾರುತಿ ಹಾಗೂ ಕುರಿಗಾಹಿ ಚೌಡಪ್ಪ ಈ ಕೃತ್ಯದಲ್ಲಿ ಅಂಜನಿಗೆ ಸಾಥ್‌ ನೀಡಿದ್ರು.  ಪೂರ್ವ ನಿಯೋಜಿತ ಪ್ಲಾನ್‌ನಂತೆ, ಮೆಡಿಕಲ್‌ ಶಾಪ್‌ನಿಂದ ನಿದ್ರೆ ಮಾತ್ರೆ ಖರೀದಿ ಮಾಡಿದ್ರು. ಮಂಗಳವಾರ ರಾತ್ರಿ ಬಸವರಾಜನಿಗೆ ಗೊತ್ತಿಲ್ಲದಂತೆ ರಾಗಿ ಮುದ್ದೆಯಲ್ಲಿ ಬೆರೆಸಿ ಅವನ ದೇಹ ಸೇರುವಂತೆ ಮಾಡಿದ್ರು. ನಿದ್ರೆಯ ಮಂಪರಿನಲ್ಲಿದ್ದ ಬಸವರಾಜನ್ನು ತಡರಾತ್ರಿ ಆಟೋದಲ್ಲಿ ಬಿದರಹಳ್ಳಿಗೆ ಸಾಗಿಸಿದ್ರು.  ನಿದ್ರೆಯಲ್ಲಿದ್ದ ಬಸವರಾಜನ್ನು ರಸ್ತೆ ಬದಿಯಲ್ಲೇ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ರು. ಮುದ್ದೆ ತಿಂದ ಬಸವರಾಜ ನಿದ್ದೆಯಲ್ಲೇ ಶವವಾಗಿದ್ದ. ಶವವನ್ನು ಅಲ್ಲೇ ಬಿಟ್ಟು ಎಲ್ಲರೂ ತಮ್ಮತಮ್ಮ ಗೂಡು ಸೇರಿಕೊಂಡ್ರು.

ಬೆಂಗಳೂರಿನಲ್ಲಿ ಶೂಟೌಟ್; ಬನ್ನಂಜೆ ರಾಜ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆ

ಬೆಳ್ಳಂಬೆಳಗ್ಗೆ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ತಲೆಕೆಡಿಸಿಕೊಂಡಿದ್ರೆ, ಕೊಲೆಗೆ ಸಂಚು ರೂಪಿಸಿದವರು ಹಾಗೂ ಕೊಲೆಗಾರರು ನೆಮ್ಮದಿಯಾಗಿ ಮನೆಯಲ್ಲಿ ಮಲಗಿದ್ರು. ಗಂಡನ ಕೊಲೆಯಾದ ಶವವನ್ನು ನೋಡಿದಾಗಲೂ ಪೊಲೀಸರಿಗೆ ಅನುಮಾನ ಬಾರದಂತೆ ಭಾಗ್ಯಮ್ಮ ನಟನೆ ಮಾಡಿದ್ದರು. ಆದ್ರೆ, ಈ ನಟನೆ ಹೆಚ್ಚು ಕಾಲ ನಡೆಯಲಿಲ್ಲ. ಶವ ಪತ್ತೆಯಾದ ಸ್ಥಳದಲ್ಲಿ ದೊರೆತ ನಿದ್ರೆ ಮಾತ್ರೆಯ ಚೀಟಿ ಹಾಗೂ ಚಾಲಕರು ಧರಿಸುವ ಮೇಲಂಗಿ ಪ್ರಮುಖ ಸಾಕ್ಷಿ ಹೇಳಿತ್ತು.ಕೊಲೆ ನಡೆದು 24 ಗಂಟೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾರ್ಗದರ್ಶನದಲ್ಲಿ ಗ್ರಾಮೀಣ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದ ಪೊಲೀಸರ ತಂಡ ಪ್ರಕರಣ ಬೇಧಿಸಿದೆ.  ಕೊಲೆಗೆ ಸಂಚು ರೂಪಿಸಿದ ಭಾಗ್ಯಮ್ಮ ಸೇರಿದಂತೆ ಆರೋಪಿಗಳಾದ ಅಂಜನಿ, ಮಾರುತಿಯನ್ನು ಸಾಕ್ಷಿ ಸಮೇತ ಪೊಲೀಸರು ಹೆಡಮುರಿ ಕಟ್ಟಿದ್ದಾರೆ. ಮತ್ತೊಬ್ಬ ಆರೋಪಿ ಚೌಡಪ್ಪ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ತಂಡಕ್ಕೆ ಎಸ್ಪಿ ಹನುಮಂತರಾಯ ಬಹುಮಾನ ಘೋಷಿಸಿದ್ದಾರೆ.

ಅಕ್ರಮ ಸಂಬಂಧ ಹೊಂದಿದ್ದ  ಪತಿ ಬಸವರಾಜನಿಂದ ಮುಕ್ತಿ ಪಡೆಯಲು ಪತ್ನಿ ಭಾಗ್ಯಮ್ಮ ಸುಪಾರಿ ಕಿಲ್ಲಿಂಗ್‌ ಮೊರೆ ಹೋಗಿದ್ದಳು. ತಾನೊಂದು ಬಯಸಿದ್ರೆ, ವಿಧಿಯೊಂದು ಬಯಸಿತ್ತು ಅಂತಾರಲ್ಲಾ ಹಾಗೇ ಆಗಿದೆ ಈ ಕುಟುಂಬದಲ್ಲಿ. ಒಂದೆಡೆ ಪತಿ ಕೊಲೆಯಾದ. ಪತ್ನಿ ಜೈಲುಪಾಲಾದ್ರು. ಪತಿ ಪತ್ನಿ ಜಗಳದ ಮಧ್ಯೆ ಕೂಸು ಬಡವಾಯ್ತು ಎಂಬಂತೆ ಅವರ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಜಗಳೂರು ಪಿ ಎಸ್ ಐ, ಸಿಪಿಐ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿದ್ದಾರೆ.
Published by: Latha CG
First published: October 16, 2020, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading