ವಾಟ್ಸ್ ಆಪ್ ಗ್ರೂಪ್ ಮೂಲಕ ಒಂದಾಗಿ ನದಿ ಪಾತ್ರದ ಸ್ಥಳವನ್ನು ಸ್ವಚ್ಚಗೊಳಿಸಿ ಇತರರಿಗೆ ಮಾದರಿಯಾದ ದಾವಣಗೆರೆ ನಾಗರೀಕರು

ತುಂಗಭದ್ರಾ ನದಿಯಲ್ಲಿ ಸಾಮಾನ್ಯವಾಗಿ ಪುಣ್ಯಸ್ನಾನ ಹಾಗೂ ಪೂಜೆಗೆಂದು ಬರುವವರು ಉಟ್ಟ ಬಟೆಯನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಅಲ್ಲದೆ, ನದಿಪಾತ್ರದ ಜಾಗ ರಾತ್ರಿ ವೇಳೆಯಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗಿಯೂ ಬದಲಾಗಿದೆ. ಹೀಗಾಗಿ ಇಲ್ಲಿ ಮಧ್ಯದ ಬಾಟಲಿಗಳು, ದೂಮಪಾನದ ಅವಶೇಷಗಳು ತೀರಾ ಸಾಮಾನ್ಯ ಎಂಬಂತಾಗಿತ್ತು. ವಾಯುವಿಹಾರ ನಡೆಸುವರಿಗೆ ತೀವ್ರ ಮುಜುಗರವನ್ನುಂಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ನದಿ ಪಾತ್ರದ ಜಾಗವನ್ನು ಸ್ವಚ್ಚಗೊಳಿಸುತ್ತಿರುವ ಮಕ್ಕಳು.

ನದಿ ಪಾತ್ರದ ಜಾಗವನ್ನು ಸ್ವಚ್ಚಗೊಳಿಸುತ್ತಿರುವ ಮಕ್ಕಳು.

  • Share this:
ದಾವಣಗೆರೆ: ವಾಟ್ಸಾಪ್​ ಗ್ರೂಪ್​ಗಳು ಕೇವಲ ಗುಡ್​ ಮಾರ್ನಿಂಗ್, ಗುಡ್​ ನೈಟ್​ ಹಾಗೂ ಹುಟ್ಟುಹಬ್ಬದ ಶುಭಾಶಯಗಳು ಕೋರಲು ಮಾತ್ರವಲ್ಲ, ಈ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಮಲಿನವಾಗಿರುವ ನದಿ ಹಾಗೂ ನದಿ ಪಾತ್ರದ ಜಾಗವನ್ನು ಸ್ವಚ್ಚಗೊಳಿಸಬಹುದು ಎಂದು ದಾವಣಗೆರೆ ಯುವಕರು ಸಾಬೀತುಪಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತನ್ನ ಊರು ಹಾಗೂ ಸುತ್ತಮುತ್ತಲ ಪರಿಸರವನ್ನು ಸ್ವಚ್ಚಗೊಳಿಸಬೇಕು ಹಾಗೂ ಜನರಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಆರ್. ರಾಘವೇಂದ್ರ ಎಂಬವರು ಕೆಲ ದಿನಗಳ ಹಿಂದೆ ವಾಟ್ಸ್ ಆಪ್​ನಲ್ಲಿ "ನನ್ನ ಊರು ನನ್ನ ಹೊಣೆ" ಎಂಬ ವಾಟ್ಸ್ ಆಪ್ ಗ್ರೂಪ್ ಕ್ರಿಯೆಟ್ ಮಾಡಿದ್ದಾರೆ.

ಹೀಗೆ ಕ್ರಿಯೇಟ್​ ಮಾಡಲಾದ ವಾಟ್ಸಾಪ್​ ಗುಂಪಿನಲ್ಲಿ ತಮ್ಮ ಸ್ನೇಹಿತರು ಹಾಗೂ ಇತರೆ ಪರಿಚಯಸ್ಥರನ್ನು ಸೇರಿಸಿಕೊಂಡ ಆರ್​. ರಾಘವೇಂದ್ರ ಹರಿಹರದಲ್ಲಿರುವ ಪ್ರಸಿದ್ದ ತುಂಗಭದ್ರಾ ನದಿ ಪಾತ್ರದ ಪ್ರದೇಶವನ್ನು ಸ್ವಚ್ಚ ಮಾಡುವ ಕೆಲಸಕ್ಕೆ ಇಳಿದಿದ್ದಾರೆ. ಈ ಕುರಿತು ವಾಟ್ಸಾಪ್​ ಗುಂಪಿನಲ್ಲಿ ಕರೆ ನೀಡುತ್ತಿದ್ದಂತೆ ನೂರಾರು ಜನ ಇವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ತುಂಗಭದ್ರಾ ನದಿಯಲ್ಲಿ ಸಾಮಾನ್ಯವಾಗಿ ಪುಣ್ಯಸ್ನಾನ ಹಾಗೂ ಪೂಜೆಗೆಂದು ಬರುವವರು ಉಟ್ಟ ಬಟೆಯನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಅಲ್ಲದೆ, ನದಿಪಾತ್ರದ ಜಾಗ ರಾತ್ರಿ ವೇಳೆಯಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗಿಯೂ ಬದಲಾಗಿದೆ. ಹೀಗಾಗಿ ಇಲ್ಲಿ ಮಧ್ಯದ ಬಾಟಲಿಗಳು, ದೂಮಪಾನದ ಅವಶೇಷಗಳು ತೀರಾ ಸಾಮಾನ್ಯ ಎಂಬಂತಾಗಿತ್ತು. ವಾಯುವಿಹಾರ ನಡೆಸುವರಿಗೆ ತೀವ್ರ ಮುಜುಗರವನ್ನುಂಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೀಗಾಗಿ ವಾಟ್ಸಾಪ್​ ಗುಂಪಿನ ಮೂಲಕ ಒಂದಾದ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನ ಸಾರ್ವಜನಿಕರು ನದಿ ಪಾತ್ರ ಸ್ವಚ್ಛವಾಗಿರಬೇಕಂಬ ಸಂಕಲ್ಪದೊಂದಿಗೆ ಸ್ವಚ್ಛತೆ ಆಂದೋಲನವನ್ನು ಆರಂಭಿಸಿದ್ದಾರೆ. ಪ್ರತಿ ಭಾನುವಾರ ಬೆಳಗ್ಗೆ ತಪ್ಪದೆ ಒಂದಾಗುತ್ತಿದ್ದ ವಾಟ್ಸಾಪ್ ಗುಂಪಿನ ಸದಸ್ಯರು 5 ವಾರಗಳ ಸತತ ಪರಿಶ್ರಮದಿಂದಾಗಿ ನದಿ ಪಾತ್ರದಲ್ಲಿ ಹರಡಿದ್ದ ಅನಗತ್ಯ ವಸ್ತುಗಳನ್ನ ಹೆಕ್ಕಿ ತೆಗೆದು ಇಡೀ ಜಾಗವನ್ನು ಸ್ವಚ್ಚಗೊಳಿಸಿದ್ದಾರೆ. ಅಲ್ಲದೆ ಟ್ರ್ಯಾಕ್ಟರ್ ಮೂಲಕ ಸಂಗ್ರಹಗೊಂಡ ಕಸವನ್ನು ವಿಲೇ ಮಾಡಿದ್ದಾರೆ.

"ನನ್ನ ಊರು ನನ್ನ ಹೊಣೆ" ವಾಟ್ಸಾಪ್​ ತಂಡದ ಕಾರ್ಯಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಡೀ ಜಿಲ್ಲೆಯ ಜನ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇವರ ಕೆಲಸ ಇತರರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಕಾಮದ ಪಾಠ ಮಾಡಿ ಪೇಚಿಗೆ ಸಿಲುಕಿದ ವಿಜ್ಞಾನದ ಮೇಷ್ಟ್ರು
First published: