ದತ್ತಜಯಂತಿಗೆ ಚಾಲನೆ: ಸಿ.ಟಿ.ರವಿ ಸೇರಿದಂತೆ ಹಲವರಿಂದ ಮಾಲಾಧಾರಣೆ; ಜಿಲ್ಲೆಯಾದ್ಯಂತ ಕಟ್ಟೆಚ್ಚರ

ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ವಿಶ್ವಹಿಂದೂ ಪರಿಷತ್​ ಹಾಗೂ ಭಜರಂಗದಳದ ವತಿಯಿಂದ ನಡೆಯುವ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ.

ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ವಿಶ್ವಹಿಂದೂ ಪರಿಷತ್​ ಹಾಗೂ ಭಜರಂಗದಳದ ವತಿಯಿಂದ ನಡೆಯುವ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ.

ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ವಿಶ್ವಹಿಂದೂ ಪರಿಷತ್​ ಹಾಗೂ ಭಜರಂಗದಳದ ವತಿಯಿಂದ ನಡೆಯುವ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ.

  • Share this:
ಚಿಕ್ಕಮಗಳೂರು (ಡಿ. 19) :  ಹಿಂದೂ-ಮುಸ್ಲಿಮರ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಪೀಠದಲ್ಲಿ 11 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ. ವಿ.ಎಚ್.ಪಿ ಹಾಗೂ ಬಜರಂಗದಳ ನೇತೃತ್ವದ ದತ್ತಜಯಂತಿಗೆ ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಭಕ್ತರು ಮಾಲೆ ಧರಿಸಿದ್ದಾರೆ. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಬಜರಂಗದಳದ ಮುಖಂಡರು ಹಾಗೂ 70ಕ್ಕೂ ಅಧಿಕ ಭಕ್ತರು ಮಾಲೆ ಧರಿಸಿದರು. ಪ್ರತಿ ವರ್ಷ ಮೂರ್ನಾಲ್ಕು ದಿನ ಮುಂಚೆ ಮಾಲೆ ಹಾಕುತ್ತಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ವರ್ಷ 11 ದಿನದ ಮಾಲಾಧಾರಿಯಾಗಿದ್ದಾರೆ. ಇಂದು ಸಿ.ಟಿ.ರವಿ ಜೊತೆ 70ಕ್ಕೂ ಹೆಚ್ವು ದತ್ತ ಭಕ್ತರು ಮಾಲಾಧಾರಿಗಳಾದರು. ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಭಕ್ತರು ಮಾಲೆ ಧರಿಸಿ, ವ್ರತದಲ್ಲಿದ್ದಾರೆ.  ಡಿಸೆಂಬರ್ 27ರಂದು ನಗರದಲ್ಲಿ ಅನುಸೂಯ ಜಯಂತಿ, 28ರಂದು ಕೋವಿಡ್ ಹಿನ್ನೆಲೆ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠಕ್ಕೆ ತೆರಳಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

ಇದೇ ವೇಳೆ ಮಾತನಾಡಿದ ಸಿ.ಟಿ.ರವಿ, ಕೋವಿಡ್ ಇರುವುದರಿಂದ ಸಂಪ್ರಾದಾಯಿಕ ಆಚರಣೆ ಇರಲಿದೆ. ಸಂಖ್ಯಾತ್ಮಕವಾಗಿ ಹೆಚ್ವು ಒತ್ತು ನೀಡುವುದಿಲ್ಲ ಎಂಬ ನಿರ್ಣಯ ಮಾಡಲಾಗಿದೆ. ಪ್ರಮುಖರು ಬಂದು ದರ್ಶನ ಪಡೆಯಬಹುದು. ಕೋವಿಡ್ ಜಗತ್ತಿನಿಂದ ದೂರ ಹೋಗಬೇಕು. ಜನರಿಗೆ ಆರೋಗ್ಯ ಸಿಕ್ಕಿ ಭಾರತ ಹೆಚ್ವು ಸಾಮರ್ಥ್ಯ ರಾಷ್ಟ್ರವಾಗಬೇಕೆಂದು ಬೇಡಿಕೊಳ್ಳುವುದಾಗಿ ತಿಳಿಸಿದರು.

ಜಿಲ್ಲೆಯಿಂದ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ ನೂರಾರು ಭಕ್ತರು ಮಾಲೆ ಧರಿಸಿದ್ದಾರೆ. ದತ್ತಭಕ್ತರು ಇಂದಿನಿಂದ 11 ದಿನಗಳ ಕಾಲ ವೃತಾಚರಣೆಯಲ್ಲಿರಲಿದ್ದಾರೆ. ದತ್ತಪೀಠವನ್ನು ಹಿಂದೂಗಳ ಪೀಠವೆಂದು ಘೋಷಿಸಬೇಕೆಂಬ ಕೂಗು ಎಂದಿನಂತೆ ಕೇಳಿಬಂತು. ಕೂಡಲೇ ಸರ್ಕಾರ ವಿವಾದಕ್ಕೆ ಮುಕ್ತಿ ಹಾಡಬೇಕು. ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಮಾಡಿ, ಹಿಂದೂ ಅರ್ಚಕರನ್ನ ನೇಮಿಸಬೇಕು ಎಂದ ದತ್ತ ಭಕ್ತರು, ನಾಗಮೋಹನ್ ದಾಸ್ ವರದಿಯನ್ನ ತಿರಸ್ಕರಿಸುವಂತೆ ಆಗ್ರಹಿಸಿದ್ದಾರೆ. ಇತ್ತ ಸರ್ಕಾರ ಹಾಗೂ ಜಿಲ್ಲಾಡಳಿತ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ. 2018ರಲ್ಲಿ ಗಲಾಟೆಯಾಗಿದ್ದರಿಂದ ಈ ವರ್ಷ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ಯಾರು ದತ್ತಾತ್ರೇಯನಿಗೆ ಭಕ್ತರಾಗಿದ್ದಾರೆ ಅವರು ಬಂದು ಪೂಜೆ ಸಲ್ಲಿಸಿ ದರ್ಶನ ಪಡೆಯಬಹುದು. ಯಾರು ಯಾರಿಗೂ ಬಲವಂತ ಮಾಡಬಾರದೆಂದು ಮನವಿ ಮಾಡಿದ್ದಾರೆ. ದತ್ತಪೀಠ ಸೂಕ್ಷ್ಮ ವಿಚಾರವಾಗಿರೋದರಿಂದ ಪೊಲೀಸರು ಜಿಲ್ಲಾಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ.
Published by:Seema R
First published: