ಕಾಫಿನಾಡಲ್ಲಿ ದತ್ತ ಜಯಂತಿ ಸಂಭ್ರಮ; ಶೋಭಾ ಯಾತ್ರೆಗೆ ಸಿದ್ಧತೆ

ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯೋ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ. ಚಿಕ್ಕಮಗಳೂರಿನಲ್ಲಿ 200ಕ್ಕೂ ಅಧಿಕ ದತ್ತಭಕ್ತರು ಮಾಲಾಧಾರಣೆ ಮಾಡಿದ್ರು. ಇಂದಿನಿಂದ ವ್ರತದಲ್ಲಿದ್ದು 19ರಂದು ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಲಿದ್ದಾರೆ.

ಮಾಲಾಧಾರಣೆ

ಮಾಲಾಧಾರಣೆ

  • Share this:
ಚಿಕ್ಕಮಗಳೂರು (ಡಿ. 9) : ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ (Dhatatreya Peeta) ನಡೆಯುವ ದತ್ತ ಜಯಂತಿಗೆ (Dutta Jayanti) ಬುಧವಾರದಿಂದ ಅಧಿಕೃತ ಚಾಲನೆ ದೊರೆತಿದೆ. ಚಿಕ್ಕಮಗಳೂರಿನಲ್ಲಿ 200ಕ್ಕೂ ಅಧಿಕ ದತ್ತ ಭಕ್ತರು ಮಾಲಾಧಾರಣೆ ಮಾಡಿದ್ದಾರೆ. ಮಾಲೆ ಧರಿಸಿದ ವ್ರತದಲ್ಲಿದ್ದು 19ರಂದು ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಲಿದ್ದಾರೆ. ಶಾಸಕ ಸಿ. ಟಿ. ರವಿ (C T Ravi) ಕೂಡ ಮಾಲಾಧಾರಣೆ ಕಾರ್ಯಕ್ರಮಕ್ಕೆ ಬಂದಿದ್ದು, ವೈಯಕ್ತಿಕ ಕಾರಣಗಳಿಂದ ಎರಡು ದಿನಗಳ ಬಳಿಕ ಮಾಲೆ ಹಾಕುತ್ತೇನೆ ಎಂದು ತಿಳಿಸಿದ್ದಾರೆ. ದತ್ತಾಜಯಂತಿ ಹಿನ್ನಲೆ  ಮುಂದಿನ 11 ದಿನಗಳ ಕಾಲ ಕಾಫಿನಾಡು ಬೂದಿಮುಚ್ಚಿದ ಕೆಂಡದಂತಿದ್ದು, ಜಿಲ್ಲಾಡಳಿತ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ರೀತಿ ಸಮಸ್ಯೆ ಆಗದಂತೆ ಕಟ್ಟೆಚ್ಚರ ವಹಿಸಿದೆ. 

200ಕ್ಕೂ ಅಧಿಕ ಕಾರ್ಯಕರ್ತರಿಂದ ಮಾಲಾಧಾರಣೆ

ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ಬಜರಂಗದಳ ಮುಖಂಡರು ಹಾಗೂ 200ಕ್ಕೂ ಅಧಿಕ ಕಾರ್ಯಕರ್ತರು ಮಾಲೆ ಧರಿಸಿ, ಹೋಮ-ಹವನ, ಭಜನೆ ನಡೆಸಿದ್ರು. ಡಿಸೆಂಬರ್ 17ಕ್ಕೆ ಅನುಸೂಯ ಜಯಂತಿ, 18ರಂದು ಬೃಹತ್ ಶೋಭಾಯಾತ್ರೆ ಹಾಗೂ 19ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಸರ್ಕಾರ ಕೂಡಲೇ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಬೇಕು. ಈ ದತ್ತಜಯಂತಿಯಲ್ಲಿ ದತ್ತಪೀಠದಲ್ಲಿ ಹಿಂದೂಗಳಿಂದಲೇ ಪೂಜೆ ನಡೆಯಬೇಕು ಅನ್ನೋದು ದತ್ತಭಕ್ತರ ಆಗ್ರಹವಾಗಿದೆ. ನಮ್ಮಗಳ ಆಗ್ರಹ ಈಗಲೇ ಆಗಬೇಕೆಂದು ಇದೆ. ಚುನಾವಣೆ ಬಂದಿದ್ದರಿಂದ ತಡವಾಗಿದೆ. ಇದೇ ದತ್ತಜಯಂತಿಯಂದು ದತ್ತಪೀಠದಲ್ಲಿ ಹಿಂದೂಗಳಿಂದಲೇ ಪೂಜೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಅದ್ಧೂರಿಯಾಗಿ ನಡೆಯಲಿರುವ ಶೋಭಾ ಯಾತ್ರೆ

ರಾಜ್ಯಾದ್ಯಂತ ಸುಮಾರ 5000ಕ್ಕೂ ಅಧಿಕ ಭಕ್ತರು ಮಾಲೆ ಧರಿಸಿದ್ದು, ಡಿಸೆಂಬರ್ 19ರಂದು 15-20 ಸಾವಿರಕ್ಕೂ ಅಧಿಕ ಭಕ್ತರು ಜಿಲ್ಲೆಯ ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಇವರೆಲ್ಲಾ 9 ದಿನಗಳ ಕಾಲ ವೃತಾಚರಣೆಯಲ್ಲಿದ್ದು 10 ಹಾಗೂ 11ನೇ ದಿನ ಬೃಹತ್ ಅನಸೂಯ ಜಯಂತಿ, ಶೋಭಾ ಯಾತ್ರೆ ನಡೆಸಲಿದ್ದಾರೆ.

ಇದನ್ನು ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ; ಇಲ್ಲಿದೆ ಬ್ರಹ್ಮರಥೋತ್ಸವದ ಚಿತ್ರಗಳು

ಪ್ರತಿಬಾರಿ ಮಾಲೆ ಧಾರಣೆ ಮಾಡುವ ಸಿಟಿ ರವಿ

ದತ್ತ ಜಯಂತಿ ಸಂದರ್ಭದಲ್ಲಿ ಪ್ರತಿ ವರ್ಷವೂ ಬಿಜೆಪಿ ನಾಯಕ ಸಿಟಿ ರವಿ ಮಾಲೆ ಹಾಕುತ್ತಾರೆ. ಈ ದಿನ ವೈಯಕ್ತಿಕ ಕಾರಣದಿಂದ ಎರಡು ದಿನಗಳ ಬಳಿಕ ಮಾಲೆ ಹಾಕುವುದಾಗಿ ಶಾಸಕ ಅವರು ಸಿ.ಟಿ. ರವಿ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಅವರು, ದತ್ತಪೀಠದ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಕಾರಾತ್ಮಕ ತೀರ್ಪನ್ನ ನೀಡಿದೆ. ಕ್ಯಾಬಿನೆಟ್ ಉಪಸಮಿತಿ ರಚನೆಯಾಗಿದೆ. ಅದೊಂದು ಅರೆ ನ್ಯಾಯಾಲಯ. ಅರೆ ನ್ಯಾಯಾಲಯದಲ್ಲಿ ಇರುವುದರಿಂದ ಸಾರ್ವಜನಿಕವಾಗಿ ನಾನು ಎನನ್ನೂ ಹೇಳಲು ಬಯಸುವುದಿಲ್ಲ.

ಇದನ್ನು ಓದಿ: ಮೃತ ರೈಲ್ವೆ ನೌಕರನ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿ ಪರಾರಿಯಾದ ಕಳ್ಳರು

ನ್ಯಾಯ, ಸತ್ಯ ದತ್ತಪೀಠದ ಪರವಾಗಿದೆ. ಬಹುವರ್ಷಗಳ ಹೋರಾಟ. ಹಿಂದಿನ ಸರ್ಕಾರ ದತ್ತಭಕ್ತರಿಗೆ ಅನ್ಯಾಯ ಮಾಡುವಂತಹಾ ಕೆಲಸವನ್ನ ನ್ಯಾಯಕ್ಕೆ ವ್ಯತಿರಿಕ್ತವಾಗಿ ಮಾಡಿತ್ತು. ಆದರೆ, ಹೈಕೋರ್ಟ್ ಮತ್ತೆ ನ್ಯಾಯವನ್ನ ಎತ್ತಿಹಿಡಿದಿದೆ. ಸಂಪೂಟ ಉಪಸಮಿತಿ ಪರಿಶೀಲನೆ ಮಾಡಿ ಸಂಪುಟಕ್ಕೆ ಶಿಫಾರಸ್ಸು ಮಾಡುವ ವಿಶ್ವಾಸವಿದೆ. ಶೀಘ್ರವೇ ಅರ್ಚಕರ ನೇಮಕಕ್ಕೆ ಇರುವ ಅಡೆತಡೆಗಳು ನಿವಾರಣೆ ಆಗುವ ವಿಶ್ವಾಸವಿದೆ ಎಂದಿದ್ದಾರೆ.

ದತ್ತ ಜಯಂತಿ ಆಚರಣೆ ಹಿನ್ನಲೆ ತಣ್ಣಗಿನ  ಚಿಕ್ಕಮಗಳೂರು ರಾಜ್ಯದ ಗಮನ ಸೆಳೆಯುವ ಕೇಂದ್ರ ಆಗಿ ಮಾರ್ಪಟ್ಟಿದೆ. ದತ್ತಜಯಂತಿ ಆಚರಣೆಯ ವೇಳೆ ಹಿಂದೆ ಆಗಿರುವ ಘಟನೆಗಳಿಂದ ಪೊಲೀಸರು ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದ್ದು, ಭದ್ರತೆ ಬಿಗಿಗೊಳಿಸಿದ್ದಾರೆ. ಈ ಬಾರಿ ದತ್ತಜಯಂತಿ ಶಾಂತಿಯುತವಾಗಿ ಮುಗಿದರೆ ಸಾಕೆಂದು ಕಾಫಿನಾಡಿಗರು ಹಾಗೂ ಪೊಲೀಸರು ದತ್ತಾತ್ರೇಯನ ಬಳಿಕ ಬೇಡಿಕೊಳುತ್ತಿದ್ದಾರೆ
Published by:Seema R
First published: