HOME » NEWS » State » DATES FOR FIVE STATES ASSEMBLY ELECTIONS AND KARNATAKA BY ELECTIONS TO BE ANNOUNCED TODAY SNVS

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕ ಉಪಚುನಾವಣೆಯ ದಿನಾಂಕ ಇಂದು ಸಂಜೆ ಘೋಷಣೆ

ಅಸ್ಸಾಮ್, ತಮಿಳುನಾಡು, ಕೇರಳ, ಅಸ್ಸಾಮ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ವಿಧಾನಸಭೆಗಳಿಗೆ ಇಂದು ದಿನಾಂಕ ಘೋಷಣೆಯಾಗಲಿದೆ. ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಗಳನ್ನೂ ಪ್ರಕಟಿಸುವ ನಿರೀಕ್ಷೆ ಇದೆ.

news18
Updated:February 26, 2021, 1:14 PM IST
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕ ಉಪಚುನಾವಣೆಯ ದಿನಾಂಕ ಇಂದು ಸಂಜೆ ಘೋಷಣೆ
ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ
  • News18
  • Last Updated: February 26, 2021, 1:14 PM IST
  • Share this:
ನವದೆಹಲಿ(ಫೆ. 26): ಇತ್ತೀಚಿನ ದಿನಗಳಲ್ಲಿ ರಾಜಕೀಯ ಜಿದ್ದಾಜಿದ್ದಿ ಮತ್ತು ಹೈಡ್ರಾಮಾಗಳಿಗೆ ಕಾರಣವಾಗಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳು ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಮ್ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಲಿದೆ. ಇಂದು ಸಂಜೆ 4:30ಕ್ಕೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪಂಚರಾಜ್ಯಗಳ ಚುನಾವಣೆ ಪ್ರಕಟಿಸಲಿದ್ದಾರೆ. ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಗೂ ಇಂದೇ ಮುಹೂರ್ತ ಫಿಕ್ಸ್ ಆಗಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ.

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ರಾಜ್ಯಗಳ ವಿಧಾನಸಭೆ ಅವಧಿ ಏಪ್ರಿಲ್-ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಚುನಾವಣೆ ನಡೆಸುವ ಸಲುವಾಗಿ ಮೊನ್ನೆ (ಫೆ. 24) ಚುನಾವಣಾ ಆಯೋಗ ಸಭೆ ನಡೆಸಿ ದಿನಾಂಕಗಳನ್ನ ಅಂತಿಮಗೊಳಿಸಿದೆ. ಇಂದು ಇದನ್ನ ಅಧಿಕೃತವಾಗಿ ಪ್ರಕಟಿಸಲಿದೆ.

ಕೊರೋನಾ ವೈರಸ್ ಬಿಕ್ಕಟ್ಟು ಉದ್ಭವಿಸಿದ ಬಳಿಕ ನಡೆಯಲಿರುವ ಎರಡನೇ ಪ್ರಮುಖ ಚುನಾವಣಾ ಪ್ರಕ್ರಿಯೆ ಇದಾಗಿದೆ. ಇತ್ತೀಚೆಗಷ್ಟೇ ಬಿಹಾರ ವಿಧಾನಸಭಾ ಚುನಾವಣೆ ಯಶಸ್ವಿಯಾಗಿ ಆಯೋಜನೆಯಾಗಿತ್ತು. ಇದರ ಜೊತೆಗೆ ದೇಶಾದ್ಯಂತ ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳೂ ನಡೆಯುತ್ತಿವೆ.

ಇದನ್ನೂ ಓದಿ: Fire Accident: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಜನ ಸಾವು, 19 ಜನರಿಗೆ ಗಾಯ

ಇದೀಗ 294 ಕ್ಷೇತ್ರಗಳ ಪಶ್ಚಿಮ ಬಂಗಾಳ, 234 ಕ್ಷೇತ್ರಗಳ ತಮಿಳುನಾಡು, 140 ಕ್ಷೇತ್ರಗಳ ಕೇರಳ, 126 ಕ್ಷೇತ್ರಗಳ ಅಸ್ಸಾಮ್ ಮತ್ತು 30 ಕ್ಷೇತ್ರಗಳ ಪುದುಚೇರಿಯಲ್ಲಿನ ವಿಧಾನಸಭಾ ಚುನಾವಣೆ ವಿವಿಧ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಮಧ್ಯೆ ಭೀಕರ ಜಟಾಪಟಿ ನಡೆಯುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವನ್ನ ಹಣಿಯಲು ಬಿಜೆಪಿ ಸಂಪೂರ್ಣ ಕಸರತ್ತು ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಂಗಾಳದ ದೀದಿ ಕೋಟೆಯಲ್ಲಿ ಬಿಜೆಪಿ ಬೇರು ಬಿಡುತ್ತಿದೆ. ಅನೇಕ ಟಿಎಂಸಿ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಲವು ಸೆಲಬ್ರಿಟಿಗೂ ಕಮಲ ಹಿಡಿದುಕೊಂಡಿದ್ಧಾರೆ. ಆದರೆ, ಇಲ್ಲಿ ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂಬುದು ಕೆಲ ಉಪಚುನಾವಣೆಗಳ ಫಲಿತಾಂಶ ದಿಗ್ಸೂಚಿಯಾಗಿವೆ ಎಂಬಂತಹ ವಿಶ್ಲೇಷಣೆಗಳಿವೆ. ಇಲ್ಲಿ ಏಳೆಂಟು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಬಿಜೆಪಿ ಬೆಂಬಲಿತ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ಮಧ್ಯೆ ನೇರ ಪೈಪೋಟಿ ಇರುವುದು ಮೇಲ್ನೋಟಕ್ಕೆ ತೋರುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ಮತ್ತು ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಪಕ್ಷಗಳು ಈ ಚುನಾವಣೆಯಲ್ಲಿ ಅಚ್ಚರಿ ಹುಟ್ಟಿಸುವ ಅಂಶಗಳಿಗೆ ಕಾರಣವಾಗಬಹುದು. ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದಿಂದ ತೆರವಾಗಿರುವ ನಾಯಕತ್ವವನ್ನು ಯಾರು ಆವರಿಸಿಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕೇಂದ್ರದಿಂದ ಲೀಟರ್‌ಗೆ 5 ರೂ. ಇಂಧನ ತೆರಿಗೆ ಕಡಿತ ಸಾಧ್ಯತೆ!; ಇಳಿಯುತ್ತಾ ಪೆಟ್ರೋಲ್, ಡೀಸೆಲ್ ಬೆಲೆ?ಕೇರಳದಲ್ಲಿ ಎಡಪಕ್ಷಗಳ ಎಲ್​ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಮಧ್ಯೆ ಎಂದಿನಂತೆ ಇರುವ ನೇರ ಹಣಾಹಣಿ ಈ ಬಾರಿಯೂ ಮುಂದುವರಿಯಲಿದೆ. ಇಲ್ಲಿ ತನ್ನ ಬೇರನ್ನು ಇನ್ನಷ್ಟು ಆಳಕ್ಕೆ ಬಿಡಲು ಬಿಜೆಪಿ ಅತೀವ ಪ್ರಯತ್ನ ಪಡುತ್ತಿದೆ. ಆದರೆ, ಅಧಿಕಾರದ ಮೇಲೆ ಪ್ರಭಾವ ಬೀರುವಷ್ಟು ಬಲವರ್ದನೆ ಬಿಜೆಪಿಯಿಂದ ಸಾಧ್ಯವಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಈ ದೇವರ ನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಇನ್ನು, ಇತ್ತೀಚೆಗೆ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾದ ಪುದುಚೇರಿಯಲ್ಲಿ ಸದ್ಯ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಐದಾರು ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಪಕ್ಷಾಂತರಗೊಂಡ ಬೆನ್ನಲ್ಲೇ ಸಿಎಂ ವಿ ನಾರಾಯಣ ಸ್ವಾಮಿ ಅವರು ಬಹುಮತ ಕಳೆದುಕೊಂಡು ರಾಜೀನಾಮೆ ನೀಡಿದ್ದರು. ಈಶಾನ್ಯ ಭಾರತದಲ್ಲಿ ಮಾಡಿದ್ದ ಪ್ರಯೋಗವನ್ನು ಬಿಜೆಪಿ ಪುದುಚೇರಿಯಲ್ಲಿ ಮಾಡಿ ಅಧಿಕಾರಕ್ಕೆ ಬರಲು ಯೋಜಿಸುತ್ತಿದೆ. ಇದು ಎಷ್ಟರಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದು ಕಾದುನೋಡಬೇಕು.

ಇನ್ನು, ಕರ್ನಾಟಕದ ಮೂರು ಕ್ಷೇತ್ರಗಳು ಸೇರಿದಂತೆ ದೇಶದ ವಿವಿಧೆಡೆ ಹಲವು ಕ್ಷೇತ್ರಗಳಿಗೆ ಉಪಚುನಾವಣೆಗಳಿಗೂ ದಿನಾಂಕ ಇಂದು ಘೋಷಣೆಯಾಗಲಿದೆ. ಬಿಜೆಪಿ ಸಂಸದ ಸುರೇಶ್ ಅಂಗಡಿ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರವು ಶಾಸಕ ನಾರಾಯಣ ರಾವ್ ಅವರ ನಿಧನದಿಂದ ತೆರವಾಗಿದೆ. ಮಸ್ಕಿ ಕ್ಷೇತ್ರವು ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್​ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಹಿನ್ನೆಲೆಯಲ್ಲಿ ತೆರವಾಗಿದೆ.
Published by: Vijayasarthy SN
First published: February 26, 2021, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories