• Home
  • »
  • News
  • »
  • state
  • »
  • ತಮಿಳುನಾಡಿನ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಶಶಿಕಲಾ ಬಿಡುಗಡೆಗೆ ಸಿದ್ದತೆ

ತಮಿಳುನಾಡಿನ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಶಶಿಕಲಾ ಬಿಡುಗಡೆಗೆ ಸಿದ್ದತೆ

ಶಶಿಕಲಾ

ಶಶಿಕಲಾ

1997 ರಲ್ಲಿ ಅಕ್ರಮ ಹಣ ಸಂಪಾದನೆ ಪ್ರಕರಣ ಬೆಳಕಿಗೆ ಬಂದಿದ್ದು,ಈ ಪ್ರಕರಣದಲ್ಲಿ ಶಶಿಕಲಾ ಎರಡು ಬಾರಿ ಅರೆಸ್ಟ್  ಆಗಿದ್ದರು. ಮೊದಲು ಜನವರಿ 31, 1997 ರಲ್ಲಿ ಅರೆಸ್ಟ್ ಆಗಿದ್ದು, ಆದಾದ ನಂತರ ಪುನಃ 2014 ರಲ್ಲಿ ಮತ್ತೆ ಬಂಧಿಸಲಾಗಿತ್ತು.

  • Share this:

ಬೆಂಗಳೂರು(ನ.19): ತಮಿಳುನಾಡಿನಲ್ಲಿ ಬರುವ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಚಿನ್ನಮ್ಮ ರಿಲೀಸ್ ಆಗುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ‌. ಈ ನಡುವೆ ಬೇಕಾದ ಸಿದ್ದತೆಗಳನ್ನ ಸಹ ಶಶಿಕಲಾ ಪರ ವಕೀಲರು ಸಹ ಮಾಡಿಕೊಳ್ತಿದ್ದು, ಇಂದು ದಂಡ  ಕೂಡಾ ಪಾವತಿ ಮಾಡಿದ್ದಾರೆ. ಸಿಟಿ ಸಿವಿಲ್ ಕೋರ್ಟ್​​​ನ ಹಾಲ್ ನಂಬರ್ 36 ನಲ್ಲಿ ಹತ್ತು ಕೋಟಿ ಹತ್ತು ಸಾವಿರ ದಂಡವನ್ನ ಡಿಡಿ ಮೂಲಕ ಪಾವತಿ ಮಾಡಲಾಗಿದೆ. ಡಿಡಿ ಮೂಲಕ ಶಶಿಕಲಾ ಪರ ವಕೀಲರಿಂದ ನ್ಯಾಯಾಲಯಕ್ಕೆ ದಂಡ ಪಾವತಿಯಾಗಿದೆ. ನಾಲ್ವರು ಶಶಿಕಲಾ ಸ್ನೇಹಿತರ ಖಾತೆ ಮೂಲಕ ಡಿಡಿ ಮಾಡಿಸಲಾಗಿದ್ದು, ಹತ್ತು ಕೋಟಿ ಹತ್ತು ಸಾವಿರ ಡೆಪಾಸಿಟ್ ಮಾಡಲಾಗಿದೆ. ಜಯಲಲಿತಾ ಭ್ರಷ್ಟಚಾರ ಆರೋಪ ಪ್ರಕರಣಕ್ಕೆ 21 ವರ್ಷ ಆಗಿದೆ.


1997 ರಲ್ಲಿ ಅಕ್ರಮ ಹಣ ಸಂಪಾದನೆ ಪ್ರಕರಣ ಬೆಳಕಿಗೆ ಬಂದಿದ್ದು,ಈ ಪ್ರಕರಣದಲ್ಲಿ ಶಶಿಕಲಾ ಎರಡು ಬಾರಿ ಅರೆಸ್ಟ್  ಆಗಿದ್ದರು. ಮೊದಲು ಜನವರಿ 31, 1997 ರಲ್ಲಿ ಅರೆಸ್ಟ್ ಆಗಿದ್ದು, ಆದಾದ ನಂತರ ಪುನಃ 2014 ರಲ್ಲಿ ಮತ್ತೆ ಬಂಧಿಸಲಾಗಿತ್ತು. ಕೊನೆಗೆ ಕೇಸ್ ಟ್ರಾಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಆ ಬಳಿಕ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡವನ್ನ ನ್ಯಾಯಾಲಯ ವಿಧಿಸಿತ್ತು.‌


ಪ್ರಾಧಿಕಾರ ರಚನೆ ಕುರಿತಾಗಿ ಪ್ರಶ್ನೆ ಮಾಡುವ ಅರ್ಹತೆ ಸಿದ್ದರಾಮಯ್ಯನವರಿಗೆ ಇಲ್ಲ; ಜಗದೀಶ್ ಶೆಟ್ಟರ್ ವಾಗ್ದಾಳಿ


15ನೇ ತಾರೀಕ್ ಫೆಬ್ರವರಿ 2017 ರಂದು ಶಶಿಕಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಶಶಿಕಲಾ ನಟರಾಜನ್ ಒಟ್ಟು ಹದಿನೇಳು ದಿನ ಪೆರೋಲ್ ಹೋಗಿದ್ದರು. 06/10/2017 ರಿಂದ 12/10/2017 ರವರೆಗೆ 5 ದಿನ ಪೆರೋಲ್ ನಲ್ಲಿದ್ದರು. ಆ ಬಳಿಕ 20/03/2018 ರಿಂದ 31/03/2018 ವರೆಗೆ 12 ದಿನ ಪೆರೋಲ್ ನಲ್ಲಿದ್ದರು. ಒಟ್ಟು ಈ ಕೇಸ್ ನಲ್ಲಿ 17 ದಿನ  ಪೆರೋಲ್ ಮೇಲೆ ಶಶಿಕಲಾ ಹೋಗಿದ್ದು,ಅದರಲ್ಲಿ ಗಂಡನಿಗೆ ಹೆಲ್ತ್ ಸರಿಯಿಲ್ಲ ಅಂತಾ 5 ದಿನ ಪೆರೋಲ್, ಬಳಿಕ ಗಂಡ ನಟರಾಜನ್ ಸಾವನ್ನಪ್ಪಿದ ದಿನ 12 ದಿನ ಪೆರೋಲ್ ಆಗಿತ್ತು.


ಸದ್ಯ ಅತೀ ಶೀಘ್ರದಲ್ಲೇ ಬಿಡುಗಡೆ ಹಿನ್ನಲೆ ಶಶಿಕಲಾ ಜೈಲಿನಲ್ಲಿ ಖುಷಿಯಾಗಿದ್ದಾರಂತೆ. ಈ ನಡುವೆ ಶಶಿಕಲಾ ಆಪ್ತರು ಜೈಲಿನ ಬಳಿ ಭೇಟಿಗೆ ಬಂದಿದ್ದು, ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ.. ಹೀಗೆ 4 ವರ್ಷ ಶಿಕ್ಷೆಯಂತೆ ಶಶಿಕಲಾ 2021ರ ಜನವರಿ 28ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

Published by:Latha CG
First published: