ದಸರಾ ಗಜಪಡೆಗೆ ರಾಜಾತೀಥ್ಯ: ಹೇಗಿದೆ ಗೊತ್ತಾ ಆನೆಗಳು ತಿನ್ನೋ ಆಹಾರದ ಮೇನು!

dasara jambos: ಗಜಪಡೆಯನ್ನು ಅತಿಥಿ ಸತ್ಕರಿಸಿದಂತೆ ಸತ್ಕಾರ ಮಾಡಲಾಗುತ್ತದೆ. ಪ್ರತಿನಿತ್ಯ ಪುಷ್ಕಳ ಆಹಾರ ನೀಡುವ ಜೊತೆ ಅವುಗಳ ಆರೋಗ್ಯ, ತೂಕದ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗುವುದು

ದಸರಾ ಆನೆಗೆ ಆಹಾರ ತಿನ್ನಿಸುತ್ತಿರುವ ಚಿತ್ರಣ

ದಸರಾ ಆನೆಗೆ ಆಹಾರ ತಿನ್ನಿಸುತ್ತಿರುವ ಚಿತ್ರಣ

  • Share this:
ಮೈಸೂರು (ಅ.12): ದಸರಾ ಎಂದಾಕ್ಷಣ ನೆನಪಾಗುವುದು ಅಂಬಾರಿ. ಅಂಬಾರಿ ಹೊರುವ ಈ ಆನೆಗಳ ಜಂಬೂ ಸವಾರಿ ದಸರೆಯ ಪ್ರಮುಖ ಆಕರ್ಷಣೆ. ನಾಡದೇವತೆಯ ಅಂಬಾರಿ ಹೊತ್ತು ನಗರದಲ್ಲಿ ಮೆರವಣಿಗೆ ಸಾಗುವ ಗಜಪಡೆಯನ್ನು ನೋಡುವುದೇ ಸೊಗಸು. ಇದಕ್ಕಾಗಿ ಹಬ್ಬಕ್ಕೆ ಎರಡು ತಿಂಗಳ ಮೊದಲೇ ಅರಮನೆ ಮೈದಾನಕ್ಕೆ ಗಜಪಡೆಗಳು ಬಂದಿಳಿಯುತ್ತವೆ. ಈ ವೇಳೆ ಈ ಆನೆಗಳಿಗೆ ಅರಮನೆಯಲ್ಲಿ ರಾಜಾತೀಥ್ಯ ನೀಡಲಾಗುವುದು. ನಿತ್ಯ ಒಂದಿಲ್ಲೊಂದು ವಿಶೇಷ ಆಹಾರವನ್ನು ನೀಡುತ್ತಾ ಅವುಗಳ ಆರೈಕೆ ಮಾಡಲಾಗುವುದು. ಪ್ರತಿಬಾರಿ ಆನೆಗಳು ಹಾಗೂ ಮಾವುತ, ಕಾವಾಡಿಗರಿಗೆ ಅರಮನೆಯಲ್ಲಿ ಪ್ರತಿದಿನ ಹಬ್ಬದ ವಾತವಾರಣ ಏರ್ಪಡುತ್ತದೆ. ಆದರೆ ಈ ಬಾರಿ ಕೊರೋನಾ ಹಿನ್ನಲೆ ಕೇವಲ ಐದು ಆನೆಗಳು ಮತ್ತು ಅದರ ಮಾವುತರು, ಕಾವಾಡಿಗರು ಮಾತ್ರ ಈ ಆತಿಥ್ಯದಲ್ಲಿ ಭಾಗಿಯಾಗಿದ್ದಾರೆ.

ಅರಮನೆಗೆ ಬಂದಿಳಿಯುವ ಗಜಪಡೆಯನ್ನು ಅತಿಥಿ ಸತ್ಕರಿಸಿದಂತೆ ಸತ್ಕಾರ ಮಾಡಲಾಗುತ್ತದೆ. ಪ್ರತಿನಿತ್ಯ ಪುಷ್ಕಳ ಆಹಾರ ನೀಡುವ ಜೊತೆ ಅವುಗಳ ಆರೋಗ್ಯ, ತೂಕದ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ದಿನ ಕಾಡಿನ ಒಡನಾಟದಲ್ಲಿದ್ದ ಈ ಆನೆಗಳಿಗೆ ನಾಡಿನ ಜೊತೆ ಹೊಂದಾಣಿಕೆ ಮಾಡಿಸುವ ಪ್ರಯತ್ನ ನಡೆಸಲಾಗುವುದು. ಇದಕ್ಕಾಗಿ ಟನ್​ ಗಟ್ಟಲೆ ವಿಶೇಷ ಆಹಾರ ಸಾಮಾಗ್ರಿಗಳನ್ನು ಅರಮನೆ ಆವರಣದಲ್ಲಿ ಕಾಣಬಹುದು.

ಕಾಡಿನಲ್ಲಿ ಬಿದಿರು, ಸೊಪ್ಪು ಸೆದೆ ಮೇಯುತ್ತಾ ಆನೆಗಳಿಗೆ,  ಶಿಬಿರಗಳಲ್ಲಿ ನೀಡುತ್ತಿದ್ದ ರಾಗಿ, ಹುರುಳಿ, ಬತ್ತ, ಬತ್ತದ ಹುಲ್ಲಿನ ರುಚಿ ನೋಡಿರುತ್ತವೆ. ಆದರೆ, ಅರಮನೆಯಲ್ಲಿ ಇದರ ಜೊತೆಗೆ  ಅದ್ಧೂರಿ ಭೋಜನವನ್ನು ನೀಡಲಾಗುವುದು. ಅರಮನೆ ಆವರಣಕ್ಕೆ  ಆನೆಗಳು ಬಂದಿಳಿದ ದಿನದಿಂದ ಅವುಗಳ ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗುವುದು.  ಹಲವು ಬಗೆಯ ಕಾಳುಗಳನ್ನು ಬೇಯಿಸಿ ಬೆಣ್ಣೆ ಹಾಗು ತರಕಾರಿ ಜೊತೆ ಮುದ್ದೆ ಮಾಡಿಕೊಡಲಾಗುತ್ತಿದೆ. ಇದರ ರುಚಿಗೆ ಈ ಆನೆಗಳು ಸಖತ್ ಖುಷಿಯಾಗಿವೆ.

dasara jambos gets special food for gain weight, dasara Elephant, Jambosavari, jambo food, dasara elephant food, dasara elephant weight, mysore, mysore dasara, mysore palace ದಸರಾ ಆನೆ ಆಹಾರ, ದಸರಾ ಆನೆಗೆ ರಾಜಾತೀಥ್ಯ
ದಸರಾ ಆನೆಗೆ ಆಹಾರ ತಿನ್ನಿಸುತ್ತಿರುವ ಚಿತ್ರಣ


ಆನೆಗಳ ಆಹಾರದ ಕ್ರಮ ಹೀಗಿರಲಿದೆ.

ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲಕ್ಕಿಯನ್ನು ಚೆನ್ನಾಗಿ ಬೇಯಿಸಲಾಗುತ್ತದೆ. ಹದವಾಗಿ ಬೆಂದ ಈ ಕಾಳುಗಳ ಜೊತೆಗೆಈರುಳ್ಳಿ ಉಪ್ಪು ಬೆರೆಸಲಾಗುತ್ತದೆ. ಆನಂತರ ಅದಕ್ಕೆ ಬೆಣ್ಣೆ ಬೆರೆಸಲಾಗುತ್ತದೆ. ಹೀಗೆಬೆಣ್ಣೆ ಬೆರೆಸಿದ ಕಾಳಿನ ರಾಶಿಗೆ ಸೌತೇಕಾಯಿ, ಬಿಟ್ರೋಟ್, ಕ್ಯಾರೇಟ್, ಕೋಸು, ಮೂಲಂಗಿ ಮೊದಲಾದ ತರಕಾರಿಗಳನ್ನು ಹಾಕಲಾಗುತ್ತದೆ. ಅನಂತರ ಎಲ್ಲವನ್ನೂ ಹದವಾಗಿ ಕಲಸಿದ ಉಂಡೆಯನ್ನು ಆನೆಗೆ ನೀಡಲಾಗುತ್ತದೆ. ಇದರಿಂದ ಆನೆಗೆ ಹೆಚ್ಚು  ಪೌಷ್ಠಿಕಾಂಶ ಸಿಗಲಿದೆ.

ಇದನ್ನು ಓದಿ: ‘ಹಾಳುಮೂಳು ತಿನ್ನೋರಿಗೆ ಇಡ್ಲಿ ಟೇಸ್ಟ್ ಏನು ಗೊತ್ತು?’ - ಬ್ರಿಟನ್ ಪ್ರೊಪೆಸರ್​ಗೆ ಬಿಡದಿ ಹೋಟೆಲ್ ಮಾಲೀಕ ತಿರುಗೇಟು

ಇದೇ ಆಹಾರ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ನೀಡಲಾಗುತ್ತದೆ. ಬೆಳಗ್ಗೆ 6.30 ರಿಂದ 7 ಗಂಟೆ ಒಳಗೆ ಮತ್ತು ಸಂಜೆ 6.30 ರಿಂದ 7 ಗಂಟೆಯೊಳಗೆ ಈ ಆಹಾರವನ್ನು ಆನೆಗಳಿಗೆ ಕೊಡಲಾಗುತ್ತದೆ. ಇನ್ನು ಇಷ್ಟೆ ಅಲ್ಲದೆ ಮದ್ಯಾಹ್ನ ರಿಲ್ಯಾಕ್ಸ್ ಟೈಮಲ್ಲಿ ಆಲದ ಸೊಪ್ಪು, ಒಣ ಹುಲ್ಲು, ಹಸಿ ಹುಲ್ಲು ನೀಡಲಾಗುತ್ತೆ.

ಹೀಗೆ ದಸರಾ ಜಂಬೂ ಸವಾರಿ‌‌ ಮುಗಿಯುವರೆಗೂ ಇದೇ ರೀತಿಯ ಆಹಾರವನ್ನ ಆನೆಗಳಿಗೆ ನೀಡಿ ಸತ್ಕಾರ ಮಾಡಲಾಗುತ್ತೆ. ರುಚಿಯಾದ ಪೌಷ್ಟಿಕ ಆಹಾರಕ್ಕೆ ಆನೆಗಳು ಖುಷಿಯಾಗಿ ಕಾಲಕಳೆಯುತ್ತಿವೆ.  ದಸರಾ ಮುಗಿಯುವುದರೊಳಗೆ ಇರುವ ಆನೆಗಳ ತೂಕಕ್ಕಿಂತ ಸುಮಾರು 250 ರಿಂದ 300 ಕೆ.ಜಿ.ತೂಕವನ್ನ ಹೆಚ್ವಿಸಿಕೊಂಡು ವಾಪಸ್‌ ಕಾಡಿಗೆ ಮರಳುತ್ತವೆ. ಅದರಲ್ಲಿಯೂ ಅಂಬಾರಿ ಹೊರುವ ಅಭಿಮನ್ಯುಗೆ ವಿಶೇಷ ಸತ್ಕಾರ ಮಾಡಿ, ಹೆಚ್ಚಿನ ಆದ್ಯತೆ ನೀಡಲಾಗುವುದು.

ಈ ಬಾರಿ ಕೋವಿಡ್ ಹಿನ್ನೆಲೆ ಕಡಿಮೆ ಸಂಖ್ಯೆಯಲ್ಲಿ ಆನೆಗಳು ಆಗಮಿಸಿರುವುದರಿಂದ ಈ ಬಾರಿಯ ಬಂದಿರುವ ಎಲ್ಲ ಆನೆಗಳಿಗು ವಿಶೇಷ ಆತಿಥ್ಯ ಸ್ವಲ್ಪ ಹೆಚ್ಚೆ ಆಗಿದೆ. ಭರ್ಜರಿ ಅತಿಥ್ಯ ಸ್ವೀಕಾರಮಾಡಿಸಿಕೊಳ್ಳುತ್ತಿರುವ ಗಜಪಡೆ ದಸರಾ ಮುಗಿದ ಮೇಲೆ ಈ ಬಾರಿ ಎಷ್ಟು ತೂಕ ಹೆಚ್ಚಿಸಿಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Published by:Seema R
First published: