• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Dasara Holidays 2022: ಈ ಬಾರಿ ಶಾಲಾ ಮಕ್ಕಳಿಗೆ ಎಷ್ಟು ದಿನ ದಸರಾ ರಜೆ; ಇಲ್ಲಿದೆ ಮಾಹಿತಿ

Dasara Holidays 2022: ಈ ಬಾರಿ ಶಾಲಾ ಮಕ್ಕಳಿಗೆ ಎಷ್ಟು ದಿನ ದಸರಾ ರಜೆ; ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿವರ್ಷದಂತೆ ಈ ಬಾರಿಯೂ ಸಹ 14 ದಿನ ರಜೆ ಇರಲಿದೆ. ರಜೆ ಬಳಿಕ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಅಧ್ಯಯನ ದೃಷ್ಟಿಯಿಂದ ಮಕ್ಕಳಿಗೆ ಈ ರಜೆಯನ್ನು ನೀಡಲಾಗುತ್ತದೆ.

  • Share this:

ನಾಡಹಬ್ಬ ದಸರಾಗೆ (Dasara 2022) ಕೆಲವೇ ದಿನಗಳು ಬಾಕಿ ಇವೆ. ಪ್ರತಿವರ್ಷ ದಸರಾ ಹಿನ್ನೆಲೆ ರಾಜ್ಯದ ಎಲ್ಲಾ ಶಾಲೆಗಳಿಗೆ 14 ದಿನ ರಜೆ (Dasara Holiday) ನೀಡಲಾಗುತ್ತದೆ. ಈ ಬಾರಿಯೂ 14 ದಿನ ಸಿಗುತ್ತಾ ಅನ್ನೋದರ ಬಗ್ಗೆ ಗೊಂದಲ ಉಂಟಾಗಿದೆ. ಇಂದು ಈ ಎಲ್ಲಾ ಗೊಂದಲಗಳಿಗೆ ಶಿಕ್ಷಣ ಇಲಾಖೆ (Department Of Education) ತೆರೆ ಎಳೆಯುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಈಗಾಗಲೇ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆ ಮತ್ತು ಪ್ರಮುಖ ದಿನಾಂಕಗಳ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ. ಈ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 3ರಿಂದ ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದೆ. ಈ ಕ್ಯಾಲೆಂಡರ್ ಪ್ರಕಾರ ಮೇ 16, 2022ರಿಂದಲೇ ಶಾಲೆಗಳನ್ನು ಆರಂಭ ಮಾಡಲಾಗಿದೆ. ಕೊರೊನಾ ವೈರಸ್ (Corona Virus) ಹಿನ್ನೆಲೆ ರಾಜ್ಯ ಸರ್ಕಾರ ಮುಂಚಿತವಾಗಿಯೇ ಶಾಲೆಗಳನ್ನು ಆರಂಭಿಸಿತ್ತು.


ಕ್ರಿಯಾ ಯೋಜನೆ ಪ್ರಕಾರ ಅಕ್ಟೋಬರ್ 3ರಿಂದ ಆರಂಭವಾಗುವ ದಸರಾ ರಜೆ ಅಕ್ಟೋಬರ್ 16ಕ್ಕೆ ಕೊನೆಯಾಗಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಸಹ 14 ದಿನ ರಜೆ ಇರಲಿದೆ. ರಜೆ ಬಳಿಕ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಅಧ್ಯಯನ ದೃಷ್ಟಿಯಿಂದ ಮಕ್ಕಳಿಗೆ ಈ ರಜೆಯನ್ನು ನೀಡಲಾಗುತ್ತದೆ.


ಕ್ರಿಯಾಯೋಜನೆ ಕ್ಯಾಲೆಂಡರ್ ಪ್ರಕಾರ 2022-23ರ ಶೈಕ್ಷಣಿಕ ವರ್ಷ ಹೀಗಿದೆ.  


*ಶಾಲೆ ಆರಂಭ: 16-05-2022: ಶೈಕ್ಷಣಿಕ ವರ್ಷದ ಮೊದಲ ಅವಧಿ ಮೇ 16ರಿಂದ ಆರಂಭಗೊಂಡಿದ್ದು, ಅಕ್ಟೋಬರ್ 2ಕ್ಕೆ ಕೊನೆಯಾಗಲಿದೆ.


*ಅಕ್ಟೋಬರ್ 3 ರಿಂದ ಅಕ್ಟೋಬರ್ 16ರವರಗೆ 14 ದಿನ ದಸರಾ ರಜೆ


*ಅಕ್ಟೋಬರ್ 17 ರಿಂದ ನವೆಂಬರ್ 25ರವರೆಗೆ ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಮೌಲ್ಯ ಮಾಪನ


*ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 60 ಸರ್ಕಾರಿ ರಜೆಗಳಿದ್ದು, 270 ಕರ್ತವ್ಯ ದಿನಗಳಿವೆ. ಆದ್ರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ 256 ಕರ್ತವ್ಯ ದಿನಗಳು ಮಾತ್ರ ಲಭ್ಯವಾಗಲಿವೆ.


ದಸರಾ ರಜೆ ಬಗ್ಗೆ ಗೊಂದಲ ಯಾಕೆ?


ಶಿಕ್ಷಣ ಇಲಾಖೆ ಪ್ರತಿ ವರ್ಷ 14 ದಿನಗಳ ಕಾಲ ದಸರಾ ರಜೆ ನೀಡುತ್ತದೆ. ಆದರೆ ಒಂದು ವರ್ಗದ ಪೋಷಕರು ಕೊರೊನಾದಿಂದ ಮಕ್ಕಳಿಗೆ ಸರಿಯಾದ ಪಾಠ ಆಗಿಲ್ಲ. ಆದ್ರಿಂದ ರಜೆ ಕಡಿತಗೊಳಿಸಬೇಕು ಎಂದು ಹೇಳಿದ್ದರು.


 Dasara holidays for schools and colleges in karnataka mrq
ಸಾಂದರ್ಭಿಕ ಚಿತ್ರ


ಮತ್ತೊಂದು ವರ್ಗದ ಪೋಷಕರು ಈ ಬಾರಿ ಒಂದು ವಾರ ಮುಂಚಿತವಾಗಿ ಶಾಲೆ ಆರಂಭಿಸಲಾಗಿದೆ. ಆದ್ದರಿಂದ ದಸರಾ ರಜೆ ಕಡಿತಗೊಳಿಸಬಾರದು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ:  Dowry Harassment: ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಧನದಾಹಿ ಪತಿ, ಗಂಡನನ್ನೇ ತಬ್ಬಿಕೊಂಡ ಹೆಂಡತಿ ಸಾವು!


ಇಂದು ಸಂಜೆಯೊಳಗೆ ಸಿಗಲಿದೆ ಸ್ಪಷ್ಟನೆ


ಈ ಹಿನ್ನೆಲೆ ರಜೆ ನೀಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಇಂದು ಶಿಕ್ಷಣ ಇಲಾಖೆಯಲ್ಲಿ ಚರ್ಚೆಯಾಗಲಿದೆ. ಇಂದು ಸಂಜೆಯೊಳಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ದಸರಾ ರಜೆಯ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ.


ಮಂಗಳೂರಿನಲ್ಲಿ ರಜೆ ಮುಂದುವರಿಸಲು ಆದೇಶ


ಈಗಾಗಲೇ ಮಂಗಳೂರಿನಲ್ಲಿ ರಜೆ ಕಡಿತ ಮಾಡಬಾರದು ಎಂದು ಒತ್ತಾಯ‌ ಕೇಳಿ ಬಂದಿದೆ. ಆದ್ರಿಂದ ಮಂಗಳೂರಿನಲ್ಲಿ ಶಾಲೆಗಳಿಗೆ ಯಥಾವತ್ತಾಗಿ ರಜೆ ಮುಂದುವರೆಸಲು ಆದೇಶ ಪ್ರಕಟಿಸಲಾಗಿದೆ.  ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 10 ರವೆಗೂ ಮಂಗಳೂರಿನಲ್ಲಿ ರಜೆಗೆ ಆದೇಶ ನೀಡಲಾಗಿದೆ. ಮಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ರಜೆಯ ನಿರ್ಧಾರ ಇಂದು ಹೊರ ಬೀಳಲಿದೆ .


 Dasara holidays for schools and colleges in karnataka mrq
ಸಾಂಕೇತಿಕ ಚಿತ್ರ


ಇದನ್ನೂ ಓದಿ:  Hindi Divas 2022: ರಾಜ್ಯದಲ್ಲಿ ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ; ಸದನದೊಳಗೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪ್ಲ್ಯಾನ್


ಕೋವಿಡ್ ಕಾರಣದಿಂದ ಸಿಲಬಸ್ ಕವರ್ ಆಗಿಲ್ಲ. ಹೀಗಾಗಿ ಬೇಸಿಗೆ ರಜೆ (Summer Holiday) ಕಡಿತ ಮಾಡಲು ಚಿಂತನೆ ನಡೆಸಲಾಗಿದೆ. ಹೀಗಾಗಿ ದಸರಾ ಹಬ್ಬಕ್ಕೆ ರಜೆಗಳು ಕಡಿತ ಮಾಡಬೇಕಿದೆ‌ ಎಂದು ಶಿಕ್ಷಣ  ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು