ದಸರಾ ರಜೆಗೆ ಕತ್ತರಿ ಹಾಕಿದ ದಕ್ಷಿಣ ಕನ್ನಡ ಜಿಲ್ಲೆಯ ಮಳೆ

news18
Updated:September 4, 2018, 10:34 PM IST
ದಸರಾ ರಜೆಗೆ ಕತ್ತರಿ ಹಾಕಿದ ದಕ್ಷಿಣ ಕನ್ನಡ ಜಿಲ್ಲೆಯ ಮಳೆ
news18
Updated: September 4, 2018, 10:34 PM IST
ನ್ಯೂಸ್​ 18 ಕನ್ನಡ

ಮಂಗಳೂರು (ಸೆ.4): ಈ ವರ್ಷ  ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆ ನಲುಗಿ ಹೋಗಿದ್ದು, ಶಾಲೆಗೆ ಹೋಗಲು ಮಕ್ಕಳು ಸಮಸ್ಯೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿತ್ತು. ಈಗಾಗಲೇ ಬಹಳಷ್ಟು ರಜೆ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದಸರಾ ರಜೆಗೆ ಕತ್ತರಿಯಾಕಿದೆ.

ಜೂನ್​ನಲ್ಲಿ ಆರಂಭವಾದ ಮಳೆಯಿಂದಾಗಿ ಆಗಸ್ಟ್​ವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ​9 ದಿನ ರಜೆ ಘೋಷಣೆ ಮಾಡಲಾಗಿತ್ತು.ಈ ವರ್ಷ ಅಕ್ಟೋಬರ್​ 7ರಿಂದ 21ರವರೆಗೆ ದಸರಾ ರಜೆಯನ್ನು ಈ ಮುಂಚೆ ಘೋಷಣೆ ಮಾಡಲಾಗಿತ್ತು. ಆದರೆ ಈಗ  ಎರಡು ಭಾನುವಾರ ಸೇರಿದಂತೆ ಅ.14ರಿಂದ 21ರವರೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಸರ್ಕಾರ ದಸರಾ ರಜೆಯನ್ನು 10ದಿನಗಳಿಗಿಂದ ಅಧಿಕವಾಗಿ ಅಧಿಕೃತವಾಗಿ ಘೋಷಣೆ ಮಾಡಿದರೂ ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ರಜೆಯನ್ನು ಜಿಲ್ಲಾಡಳಿತ ಕಡಿತಗೊಳಿಸಬಹುದಾಗಿದೆ

ಎಲ್ಲಾ ತಾಲೂಕುಗಳ ಶಾಲೆಗಳಿಗೆ 9 ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಮಳೆಯಿಂದಾಗಿ ನೀಡಲಾಗಿದ್ದ ರಜೆಯನ್ನು ಗಮನಿಸಿ ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಹೆಚ್ಚುವರಿ ರಜೆಯನ್ನು ಘೋಷಣೆ ಮಾಡಬಹುದಾಗಿದೆ.
Loading...

ಶೈಕ್ಷಣಿಕ ವರ್ಷದ 240ದಿನಗಳಲ್ಲಿ ಕಡ್ಡಾಯವಾಗಿ 220 ದಿನಗಳು ಶಾಲೆಗಳನ್ನು ನಡೆಸಬೇಕಾಗಿದ್ದು, ಇದಕ್ಕೆ ಅನುಕೂಲವಾಗುವಂತೆ ಶಾಲಾ ದಿನಗಳನ್ನು ನಡೆಸಬೇಕಾಗಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ