• Home
  • »
  • News
  • »
  • state
  • »
  • Prices Hike: ಆಯುಧ ಪೂಜೆ ಹಿನ್ನೆಲೆ ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್

Prices Hike: ಆಯುಧ ಪೂಜೆ ಹಿನ್ನೆಲೆ ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್

ಮಾರುಕಟ್ಟೆಯಲ್ಲಿ ಹೂವು ದರ ಏರಿಕೆ

ಮಾರುಕಟ್ಟೆಯಲ್ಲಿ ಹೂವು ದರ ಏರಿಕೆ

ಆಯುಧಪೂಜೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇರೋದು. ಸಾಮಾನ್ಯವಾಗಿ ಆಯುಧಪೂಜೆ ಸಂಧರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆ ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ.

  • Share this:

ಬೆಂಗಳೂರು: ಹಬ್ಬ ಬಂತಂದ್ರೆ ಸಾಕು ಹೂ, ಹಣ್ಣು, ತರಕಾರಿ ರೇಟು (Price) ಗಗನಕ್ಕೇರುತ್ತೆ. ಈ ವರುಷ ದಸರಾ ಹಬ್ಬಕ್ಕೆ (Dasara Festival) ಹೂವಿನ ದರ ತುಂಬಾ ಏರಿಕೆಯಾಗಿದೆ. ಕುಂಬಳಕಾಯಿ (Pumpkin) ದರ ಡಬಲ್‌ ಆಗಿದೆ. ಸಮಾಧಾನ ಸಂಗತಿ ಎಂದ್ರೆ ತರಕಾರಿ, ಹಣ್ಣಿನ ದರ (Vegetables And Fruits) ತುಂಬ ಏರಿಕೆಯಾಗಿಲ್ಲ. ಆಯುಧ ಪೂಜೆ, ವಿಜಯದಶಮಿ ಹಬ್ಬ (Vijayadashami Festival) ಆಚರಿಸಲು ರೆಡಿಯಾಗಿದ್ದೀರಾ? ಹಾಗಾದ್ರೆ ಯಾವ್ಯಾವು ಎಷ್ಟೆಷ್ಟು ದರ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಿ.


ಕೆಲ ಅಗತ್ಯ ವಸ್ತುಗಳ ದರ ಏರಿಕೆ


ಸಾಮಾನ್ಯವಾಗಿ ಹಬ್ಬದ ದಿನಗಳು ಹತ್ತಿರ ಬಂದ್ರೆ ಸಾಕು ಜನಸಾಮಾನ್ಯನ ಜೇಬಿಗೆ ಹೊರೆ ಬೀಳೋದು ಕಾಮನ್. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗೇ ಇರುತ್ತೆ. ಅದರಂತೆ ಈ ಬಾರಿಯ ಆಯುಧಪೂಜೆ ದಸರಾಗೂ ದರ ಏರಿಕೆಯಾಗಿದ್ದು, ಹಬ್ಬಕ್ಕೆ ಒಂದು ದಿನ ಮುನ್ನವೆ ಖರೀದಿ ಕೂಡ ಜೋರಾಗಿದೆ.


ಹಬ್ಬದ ದಿನಗಳಲ್ಲಿ ಗಗನಕ್ಕೇರಿದೆ ಹೂವಿನ ಬೆಲೆ


ಈ ಬಾರಿ ಆಯುಧಪೂಜೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇರೋದು. ಸಾಮಾನ್ಯವಾಗಿ ಆಯುಧಪೂಜೆ ಸಂಧರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆ ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ.


ಹೂವಿನ ದರ ಡಬಲ್ ಏರಿಕೆ, ಹಣ್ಣಿನ ಬೆಲೆ ಏರಿಕೆಯಾಗಿಲ್ಲ


ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೂವಿನ ದರ ಡಬಲ್ ಏರಿಕೆಯಾಗಿದೆ. ಆದರೆ ವಿಶೇಷ ಅಂದರೆ ಹಣ್ಣು ಮತ್ತು ತರಕಾರಿ ದರ ತಟಸ್ಥವಾಗಿದ್ದು, ಹೂವಿನ ದರ ಕೈಸುಡುತ್ತಿದೆ ಎಂದು ಹೂವಿನ ವ್ಯಾಪಾರಿ ಸೋಮು ಗೌಡ ಅಭಿಪ್ರಾಯ ಪಡುತ್ತಾರೆ.


ಇದನ್ನೂ ಓದಿ: Rain Update: ಮತ್ತೆ ಹಲವೆಡೆ ವರುಣನ ಆರ್ಭಟ; ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ


ಯಾವ ಹೂವಿನ ಬೆಲೆ ಎಷ್ಟಿದೆ?


ಮಲ್ಲಿಗೆ ಹೂ 1000 ಸಾವಿರ. ಕೆಜಿ.


ಸೇವಂತಿಗೆ 300-500  ಕೆಜಿ.


ಚೆಂಡು ಹೂ 150 ರೂ ಕೆಜಿ.


ಕನಕಾಂಬರ 3 ಸಾವಿರ. ಕೆಜಿ.


ಸುಗಂಧರಾಜ 400 ಕೆಜಿ.


ಕಾಕಡ 700-800 ರೂ. ಕೆಜಿ.


ಬಾಳೆದಿಂಡುಗಳು ಸಹ ದುಬಾರಿ


ಇನ್ನೂ ಕೇವಲ ಹೂ ಮಾತ್ರ ಅಲ್ಲ. ಬಾಳೆ‌ದಿಂಡು ಸಹ ದರ ಹೆಚ್ಚಳವಾಗಿದೆ. ಮಳೆಯಾಗಿರುವ ಕಾರಣಕ್ಕೆ ಸಮರ್ಪಕವಾಗಿ ಬಾಳೆ, ಬಾಳೆದಿಂಡು, ಬಾಳೆಕಂಬ ಮಾರುಕಟ್ಟೆಗೆ ಬರುತ್ತಿಲ್ಲ


ಕುಂಬಳಕಾಯಿ ದರ ಏರಿಕೆ


ಇನ್ನು ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದ್ರೆ ಕುಂಬಳಕಾಯಿ. ಇದರ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂಗೆ ಏರಿಕೆ ಆಗಿದೆ. ಕಳೆದ ವಾರ 15 ರೂ ಇದ್ದ ಕುಂಬಳಕಾಯಿ ದರ ಈ ವಾರ ಎರಡು ಪಟ್ಟು ಏರಿಕೆಯಾಗಿದೆ.


ಇದನ್ನೂ ಓದಿ:Belagavi Politics: ಬೆಳಗಾವಿಯಲ್ಲಿ ನವರಾತ್ರಿ ಸಂಭ್ರಮ; ದಾಂಡಿಯಾ ಹೆಸರಿನಲ್ಲಿ ಇಬ್ಬರು ನಾಯಕರ ಪಾಲಿಟಿಕ್ಸ್!


ಲೋಡ್ ಬಾರದ ಹಿನ್ನೆಲೆ ಕುಂಬಳಕಾಯಿ ಬೆಲೆ ಏರಿಕೆ


ಹಲವೆಡೆ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆ ಈ ಬಾರಿ ಬೇರೆ ಕಡೆಯಿಂದ ಲೋಡ್ ಬಾರದ ಹಿನ್ನೆಲೆ ಸದ್ಯ ಬೆಲೆ ಏರಿಕೆ ಅಂತಾರೆ ಕುಂಬಳಕಾಯಿ ಮಾರುವ ವ್ಯಾಪಾರಿ ಮಾಳಮ್ಮ. ಒಟ್ಟಾರೆ ನಾಡಹಬ್ಬ ದಸರಾ ಹಬ್ಬಕ್ಕೆ ,ಇಂದು ಹಾಗೂ ನಾಳೆ ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯ ಬಿಸಿಯಲ್ಲಿ ಈ ಬಾರಿ ದಸರಾ ಹಬ್ಬ ಮಾಡಲು ಮುಂದಾಗಿದ್ದಾರೆ.

Published by:ಪಾವನ ಎಚ್ ಎಸ್
First published: