HOME » NEWS » State » DASARA EXECUTIVE COMMITTEE MEETING HELD IN MYSORE TODAY GNR

ದಸರಾ ಅರಮನೆ ಆವರಣಕ್ಕೆ ಮಾತ್ರ ಸೀಮಿತ; ಗಜಪಯಣ ಸಮಾರಂಭ ಇಲ್ಲ; ಸಚಿವ ಎಸ್​​ಟಿ ಸೋಮಶೇಖರ್

Dasara Executive Committee meeting: ಕೇಂದ್ರದ ಸೂಚನೆಯಂತೆ ಲಿಮಿಟೆಡ್‌ ಪಾಸ್ ವಿತರಣೆ ಮಾಡುತ್ತೇವೆ. ಐದು ಆನೆಗಳನ್ನ ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡುತ್ತೇವೆ. ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದಾನೆ. ಇದಕ್ಕಾಗಿ ಅಭಿಮನ್ಯುವಿಗೆ ಈಗಾಗಲೇ ಟ್ರೈನಿಂಗ್ ಕೊಡಲಾಗಿದೆ. ನಂದಿಧ್ವಜ , ಚಾಮುಂಡೇಶ್ವರಿ ಪೂಜೆಗೆ ಲಿಮಿಟೆಡ್ ಗಣ್ಯರು ಭಾಗಿಯಾಗಲಿದ್ದಾರೆ ಎಂದರು ಸಚಿವ ಎಸ್​​ಟಿ ಸೋಮಶೇಖರ್.


Updated:September 12, 2020, 9:43 PM IST
ದಸರಾ ಅರಮನೆ ಆವರಣಕ್ಕೆ ಮಾತ್ರ ಸೀಮಿತ; ಗಜಪಯಣ ಸಮಾರಂಭ ಇಲ್ಲ; ಸಚಿವ ಎಸ್​​ಟಿ ಸೋಮಶೇಖರ್
ದಸರಾ ಕಾರ್ಯಕಾರಿ ಸಮಿತಿ ಸಭೆ
  • Share this:
ಮೈಸೂರು(ಸೆ.12): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020ರ ಪೂರ್ವ ಸಿದ್ದತೆಗೆ ಇಂದು ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಮೈಸೂರು ಅರಮನೆ ಮಂಡಳಿಯ ಕಚೇರಿಯಲ್ಲಿ ಆಯೋಜಿಸಿದ ಸಭೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಪಾಲಿಕೆ ಮೇಯರ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.‌ ಜನಪ್ರತಿನಿಧಿಗಳಾದ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ, ಶಾಸಕರಾದ ಎಸ್‌.‌ ಎ. ರಾಮದಾಸ್, ಎಲ್. ನಾಗೇಂದ್ರ,  ತನ್ವೀರ್ ಸೇಠ್, ಹರ್ಷವರ್ಧನ್, ಕೆ. ಮಹದೇವ್, ಅಶ್ವಿನಿ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ. ಟಿ‌‌. ಶ್ರೀಕಂಠೇಗೌಡ, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸೇರಿದಂತೆ ಇತರರು ಭಾಗಿಯಾಗಿ ಇಂದಿನ ಸಭೆಯಲ್ಲಿ ಮುಂಬರುವ ದಸರಾ ಮಹೋತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ದಸರಾ ಅಕ್ಟೋಬರ್​​​ 2ನೇ ತಾರೀಕಿನಂದು 12 ಗಂಟೆ 18 ನಿಮಿಷಕ್ಕೆ ಗಜಪಯಣ ಕಾರ್ಯಕ್ರಮ ನಡೆಯಲಿದೆ. ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಇರೋಲ್ಲ ಸಾಂಪ್ರದಾಯಿಕವಾಗಿ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಗಜಪಡೆಗೆ ಸ್ವಾಗತ ಮಾಡಲಿದ್ದೆವೆ ಎನ್ನುತ್ತಾರೆ ಮೈಸೂರು ಸಚಿವ ಎಸ್.ಟಿ.ಸೋಮಶೇಖರ್.

ಇನ್ನು ಅಕ್ಟೋಬರ್ 17ರಂದು ಬೆಳಗ್ಗೆ 7:45 ರಿಂದ 8:15 ರೊಳಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಉದ್ಘಾಟನೆಯನ್ನ ಆಯಾ ಇಲಾಖೆಯ ಮುಖ್ಯಸ್ಥರಿಗೆ ಹೊಣೆ ನೀಡಲಾಗಿದೆ. ಕೊರೋನಾ ವಾರಿಯರ್ಸ್‌ಗಳ ಆಯ್ಕೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ನೀಡಿದ್ದು, ಪ್ರತಿ ವರ್ಷದಂತೆ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಇರಲಿದೆ ಚೆಸ್ಕಾಂ ಇದರ ಜವಾಬ್ದಾರಿ ಹೊರುತ್ತದೆ.‌ ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ, 9 ದಿನಗಳ ಕಾಲ ರಾಷ್ಟ್ರ ಅಂತರರಾಷ್ಟ್ರ ಮಟ್ಟದ ಕಲಾವಿದರಿಂದ ಒಂದು ದಿನಕ್ಕೆ ಒಂದು ಕಾರ್ಯಕ್ರಮ ಇರಲಿದೆ.

ಜಂಬೂ ಸವಾರಿ ಅರಮನೆಯಂಗಳದಲ್ಲಿ ಮಾತ್ರ ಸೀಮಿತವಾಗಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜನ ಸೇರಲಿಕ್ಕೆ ಅವಕಾಶ ಇರಲಿದೆ ಸುಮಾರು 2 ಸಾವಿರ ಜನ ದಸರಾ ವೀಕ್ಷಿಸಲು ಮನವಿ ಮಾಡುತ್ತೇವೆ. ಕೇಂದ್ರ ಯಾವ ರೀತಿ ಅನುಮತಿ ಕೊಡುತ್ತಾರೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ 5 ಮಂದಿ ಮಾಡಲಿದ್ದಾರೆ. ಕೋವಿಡ್ ಶವಸಂಸ್ಕಾರ ಮಾಡಿದವರಿಗು ಅವಕಾಶಕ್ಕೆ ನಿರ್ಧಾರ ಮಾಡಿದ್ದು ಈ ಬಗ್ಗೆ ಅಂತಿಮ ನಿರ್ಧಾರ ಆಗಲಿದೆ ಎಂದರು.

ಕೇಂದ್ರದ ಸೂಚನೆಯಂತೆ ಲಿಮಿಟೆಡ್‌ ಪಾಸ್ ವಿತರಣೆ ಮಾಡುತ್ತೇವೆ. ಐದು ಆನೆಗಳನ್ನ ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡುತ್ತೇವೆ. ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದಾನೆ. ಇದಕ್ಕಾಗಿ ಅಭಿಮನ್ಯುವಿಗೆ ಈಗಾಗಲೇ ಟ್ರೈನಿಂಗ್ ಕೊಡಲಾಗಿದೆ. ನಂದಿಧ್ವಜ , ಚಾಮುಂಡೇಶ್ವರಿ ಪೂಜೆಗೆ ಲಿಮಿಟೆಡ್ ಗಣ್ಯರು ಭಾಗಿಯಾಗಲಿದ್ದಾರೆ. ಅಂದು ಸಿಎಂ ಆಗಮಿಸಲಿದ್ದಾರೆ. 9 ದಿನಗಳ ಕಾಲ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಇರಲಿದ್ದು, ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಫೈನಲ್ ಮಾಡ್ತಾರೆ ಎಂದು ತಿಳಿಸಿದರು.
ದಸರಾ ಉದ್ಘಾಟಕರನ್ನ ಡಾ. ರವಿ, ಡಾ. ಮಂಜುನಾಥ್ ಹೆಸರು ಕೇಳಿ ಬಂದಿದೆ ಅದನ್ನ ಸಿಎಂ ಫೈನಲ್ ಮಾಡಲಿದ್ದಾರೆ. 5 ಜನ ಕೊರೋನಾ ವಾರಿಯರ್ಸ್‌ನಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದು, ನೇರ ಪ್ರಸಾರದ ಮೂಲಕ ಜಂಬೂ ಸವಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ ಉಸ್ತುವಾರಿ ಸಚಿವ.

ಇದನ್ನೂ‌ ಓದಿ: ‘ಸಿದ್ದರಾಮಯ್ಯನವರೇ ಡ್ರಗ್ಸ್​ ಕೇಸಲ್ಲಿ ಯಾರನ್ನು ರಕ್ಷಿಸಬೇಡಿ‘ - ಸಚಿವ ಡಾ. ಸುಧಾಕರ್​​ ಮನವಿ

ಸರ್ಕಾರದ ದಸರಾ ಅನುದಾನದಲ್ಲಿ ಲೋಪವಾಗಲು ಬಿಡಲ್ಲ. ನಾನು ದಸರಾ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೊಟ್ಟೆ ಕೊಡ್ತೀನಿ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
Published by: Ganesh Nachikethu
First published: September 12, 2020, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories