ಕ್ಯಾಪ್ಟನ್​ ಅರ್ಜುನನ ನೇತೃತ್ವದಲ್ಲಿ ತಾಲೀಮು ನಡೆಸಿದ ಗಜಪಡೆ

news18
Updated:September 7, 2018, 1:27 PM IST
ಕ್ಯಾಪ್ಟನ್​ ಅರ್ಜುನನ ನೇತೃತ್ವದಲ್ಲಿ ತಾಲೀಮು ನಡೆಸಿದ ಗಜಪಡೆ
news18
Updated: September 7, 2018, 1:27 PM IST
-ನ್ಯೂಸ್​ 18 ಕನ್ನಡ

ಮೈಸೂರು,(ಸೆ.07): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಗಜಪಡೆಯ ಮೊದಲ ದಿನದ ತಾಲೀಮು ಆರಂಭವಾಗಿದೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಿದವು. ಅರ್ಜುನ ಆನೆಗೆ ಚೈತ್ರ, ವರಲಕ್ಷ್ಮಿ, ವಿಕ್ರಮ, ಧನಂಜಯ, ಗೋಪಿ ಆನೆಗಳು ಸಾಥ್ ನೀಡಿದವು.

ಗಜಪಡೆಯು ಕೆ.ಆರ್.ವೃತ್ತ, ಆಯುರ್ವೇದ ವೃತ್ತ, ಸಯ್ಯಾಜಿರಾವ್ ರಸ್ತೆ, ಬಂಬುಬಜಾರ್, ಹೈವೇ ವೃತ್ತದ ಮೂಲಕ ಸಾಗಿ ಬನ್ನಿ ಮಂಟಪ ತಲುಪಿತು. ಅರಣ್ಯ ಇಲಾಖಾ ಅಧಿಕಾರಿಗಳ ನೇತೃತ್ವದಲ್ಲಿ ಸಾಗಿದ ಗಜಪಡೆಯನ್ನು ಕಂಡು ಸಾರ್ವಜನಿಕರು ಪುಳಕಿತರಾದರು. ಎರಡು ದಿನಗಳ ಹಿಂದೆ ಅರಮನೆಗೆ ಆಗಮಿಸಿದ ಗಜಪಡೆ ಇಂದು ಜಂಬೂ ಸವಾರಿ ಸಾಗುವ ದಾರಿಯಲ್ಲೇ ತಾಲೀಮು ನಡೆಸಿದವು.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ