ಕಾಡಿನತ್ತ ಮುಖಮಾಡಿದ ದಸರಾ ಗಜಪಡೆಯ ರೆಬೆಲ್ ಈಶ್ವರ

ಇದೇ ಮೊದಲ ಬಾರಿ ದಸರಾ ಸಂಭ್ರಮದಲ್ಲಿ ಭಾಗಿಯಾಗುತ್ತಿರುವ ಈಶ್ವರ. ಮೊದಲ ದಿನದಿಂದಲೂ ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿಲ್ಲ. ಅಲ್ಲದೇ, ಪ್ರತಿದಿನದ ತಾಲೀಮಿನ ವೇಳೆ ವಿಚಲಿತನಾಗುತ್ತಿದ್ದ. ಜಂಬೂ ಸವಾರಿ ದಿನದಂದು ಹೀಗೆ ಆದರೆ ತೊಂದರೆಯಾಗಲಿದೆ.  ಭದ್ರತಾ ದೃಷ್ಠಿಯಿಂದ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದ್ದು, ಈಶ್ವರನ ಬದಲು ಬೇರೆ ಆನೆ ಕರೆತರಲು ನಿರ್ಧರಿಸಲಾಗಿದೆ.

Seema.R
Updated:September 23, 2019, 12:08 PM IST
ಕಾಡಿನತ್ತ ಮುಖಮಾಡಿದ ದಸರಾ ಗಜಪಡೆಯ ರೆಬೆಲ್ ಈಶ್ವರ
ಈಶ್ವರ ಆನೆ
  • Share this:
ಮೈಸೂರು (ಸೆ.10): ಸಾಂಸ್ಕೃತಿಕ ನಗರಿಗೆ ಬಂದು 10 ದಿನಕಳೆದರೂ ತಾಲೀಮಿನ ವೇಳೆ ಗಾಬರಿಗೊಳ್ಳುತ್ತಿರುವ ದಸರಾ ಗಜಪಡೆಯ ಈಶ್ವರ ಆನೆಯನ್ನು ಮರಳಿ ಕಾಡಿಗೆ ಕಳುಹಿಸಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.

ಆಗಸ್ಟ್​​ 29ರಂದು ಅರಮನೆಗೆ ಬಂದಿಳಿದ ಮೊದಲ ತಂಡದ ಗಜಪಡೆ ದುಬಾರೆಯ ಈಶ್ವರ ಕಾಡಿಗೆ ಹೊರಡಲು ಸಜ್ಜಾಗಿರುವ ಆನೆ.

Eshwara Elephant
ಈಶ್ವರ ಆನೆ

ಇದೇ ಮೊದಲ ಬಾರಿ ದಸರಾ ಸಂಭ್ರಮದಲ್ಲಿ ಭಾಗಿಯಾಗುತ್ತಿರುವ ಈಶ್ವರ. ಮೊದಲ ದಿನದಿಂದಲೂ ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿಲ್ಲ. ಅಲ್ಲದೇ, ಪ್ರತಿದಿನದ ತಾಲೀಮಿನ ವೇಳೆ ವಿಚಲಿತನಾಗುತ್ತಿದ್ದ. ಜಂಬೂ ಸವಾರಿ ದಿನದಂದು ಹೀಗೆ ಆದರೆ ತೊಂದರೆಯಾಗಲಿದೆ.  ಭದ್ರತಾ ದೃಷ್ಠಿಯಿಂದ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದ್ದು, ಈಶ್ವರನ ಬದಲು ಬೇರೆ ಆನೆ ಕರೆತರಲು ನಿರ್ಧರಿಸಲಾಗಿದೆ.

Eshwara Elephant
ಆನೆಗಳ ತಾಲೀಮು

ಇನ್ನು ತಾಲೀಮಿನ ವೇಳೆ ಈಶ್ವರ ತೋರುತ್ತಿದ್ದ ಪುಂಡಾಟದಿಂದ ಜನರು ಕೂಡ ತೊಂದರೆ ಅನುಭವಿಸಿದ್ದು, ಈ ಕುರಿತು ಈಗಾಗಲೇ ದೂರು ದಾಖಲಿಸಿದ್ದಾರೆ. ಈ ದೂರಿನ ಬಗ್ಗೆ ಕೂಡ ಇಂದಿನ ಸಭೆಯಲ್ಲಿ ಉಸ್ತುವಾರಿ ಸಚಿವ ವಿ ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಅರಣ್ಯಾಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದಾರೆ.ಇದನ್ನು ಓದಿ: ಮೈಸೂರು ದಸರಾ 2019: ನಾಳೆ ಅರಮನೆ ನಗರಿಗೆ ಎರಡನೇ ಹಂತದ ಗಜಪಡೆ ಆಗಮನ

ದುಬಾರೆ ಅರಣ್ಯದಲ್ಲಿರುವ 49 ವರ್ಷದ ಈಶ್ವರ ಇದೇ ಮೊದಲ ಬಾರಿ ದಸರೆಗೆ ಆಗಮಿಸಿದ್ದ. ಬೇರೆ ಆನೆಗಳ ಸಹಾಯದಿಂದ ನಗರದ ವಾತವಾರಣಕ್ಕೆ ಆತ ಹೊಂದಿಕೊಳ್ಳಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈಶ್ವರ ಹೊಂದಿಕೊಳ್ಳುತ್ತಲೆ ಇಲ್ಲ. ಇನ್ನು ಕಾದು ನೋಡಲು ಸಮಯವಿಲ್ಲ. ಈ ಹಿನ್ನೆಲೆ ಈ ತೀರ್ಮಾನಕ್ಕೆ ಬರಲಾಗಿದೆ. ಮುಂದಿನ ಪೀಳಿಗೆಯ ಆನೆಗಳು ಇದೆ ರೀತಿ ಅಸಹಕಾರ ತೋರಿದರೆ ದಸರೆಗೆ ಆನೆ ತರುವುದೇ ಕಷ್ಟವಾಗಲಿದೆ ಎಂದು ಡಿಸಿಎಫ್​ ಅಲೆಕ್ಸಾಂಡರ್​ ಬೇಸರ ವ್ಯಕ್ತಪಡಿಸಿದ್ದಾರೆ.
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ