• Home
  • »
  • News
  • »
  • state
  • »
  • Operation Bhaira: ಭೈರನ ಕಣ್ಣಾಮುಚ್ಚಾಲೆ ಆಟ, ಅಭಿಮನ್ಯು ಆ್ಯಂಡ್ ಟೀಂಗೆ ಅನಾರೋಗ್ಯದ ಸಂಕಟ! ಠುಸ್ ಆಯ್ತು ಆನೆ ಆಪರೇಷನ್!

Operation Bhaira: ಭೈರನ ಕಣ್ಣಾಮುಚ್ಚಾಲೆ ಆಟ, ಅಭಿಮನ್ಯು ಆ್ಯಂಡ್ ಟೀಂಗೆ ಅನಾರೋಗ್ಯದ ಸಂಕಟ! ಠುಸ್ ಆಯ್ತು ಆನೆ ಆಪರೇಷನ್!

ಫೇಲ್ ಆಯ್ತು ಆನೆ ಸೆರೆ ಕಾರ್ಯ

ಫೇಲ್ ಆಯ್ತು ಆನೆ ಸೆರೆ ಕಾರ್ಯ

ಎರಡ್ಮೂರು ದಿನ ಭೈರ (Bhaira) ಎಂಬ ಕಾಡಾನೆಗೆ ಹುಡುಕಾಟ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಕೊನೆಗೂ ಆತನ ಸುಳಿವೇ ಸಿಗಲಿಲ್ಲ!

  • News18 Kannada
  • Last Updated :
  • Karnataka, India
  • Share this:

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಕಳೆದ ಕೆಲ ವರ್ಷಗಳಿಂದ ಭಾರೀ ಕ್ವಾಟ್ಲೆ ಕೊಡ್ತಿದ್ದ ಕಾಡಾನೆಯನ್ನ (Wild Elephant) ಹಿಡಿಯಲು ದಸರಾ ಆನೆಗಳ (Dasara Elephant Team) ಗ್ಯಾಂಗ್ ಬಂದಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಊರುಬಗೆ ಗ್ರಾಮಕ್ಕೆ ಅಭಿಮನ್ಯು (Abhimanyu) ಆ್ಯಂಡ್ ಟೀಂ ಧಾವಿಸಿತ್ತು. ಕಳೆದ ಭಾನುವಾರ ಬಂದಿದ್ದ ಈ ದಸರಾ ಆನೆಗಳು, ನೂರು ಮಂದಿ ಅರಣ್ಯ ಸಿಬ್ಬಂದಿಗಳ ಜೊತೆ ಸೋಮವಾರದಿಂದ ಕಾರ್ಯಾಚರಣೆಗೆ ಇಳಿದಿತ್ತು. ಆದರೆ ಎರಡ್ಮೂರು ದಿನ ಭೈರ (Bhaira) ಎಂಬ ಕಾಡಾನೆಗೆ ಹುಡುಕಾಟ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕೊನೆಗೂ ಆತನ ಸುಳಿವೇ ಸಿಗಲಿಲ್ಲ.


ಅಭಿಮನ್ಯುಗೆ ಅನಾರೋಗ್ಯ


ಅಯ್ಯೋ, ಹೀಗಾಗಿ ಬಿಡ್ತಲ್ಲ ಅಂತಾ ಚಿಂತೆಯಲ್ಲಿರುವಾಗಲೇ ಆಪರೇಷನ್ ಭೈರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಭಿಮನ್ಯುಗೆ ಆರೋಗ್ಯ ಹದೆಗೆಟ್ಟಿದೆ. ಏಕಾಏಕಿ ಭೇದಿ ಶುರುವಾಗಿದೆ. ಏನಪ್ಪಾ ತಂಡದ ಕ್ಯಾಪ್ಟನ್‌ಗೆ ಈ ತರ ಆಯ್ತಲ್ಲ ಅಂತಾ ಟೆನ್ಷನ್ ಸ್ಟಾರ್ಟ್ ಆದಾಗ ಗೋಪಾಲಸ್ವಾಮಿ ಮದವೇರಿ ಹೆಂಗ್ಯಾಗೋ ಆಡೋದಕ್ಕೆ ಶುರುಮಾಡಿದ್ದಾನೆ. ಆತನನ್ನ ಕಂಟ್ರೋಲ್ ಮಾಡೋದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು.


ಭೈರನ ಕಣ್ಣಾಮುಚ್ಚಾಲೆ


144 ಸೆಕ್ಷನ್ ಜಾರಿ ಮಾಡಿದ ಜಿಲ್ಲಾಧಿಕಾರಿ


ಅದ್ ಯಾವ ಲೆವೆಲ್‌ಗೆ ಅಂದ್ರೆ ಕೊನೆಗೆ ಜಿಲ್ಲಾಧಿಕಾರಿಗಳೇ 144 ಸೆಕ್ಷನ್ ಜಾರಿ ಮಾಡಿ, ಜನರು ಯಾರು ಆನೆ ಕಾರ್ಯಾಚರಣೆಯ ಸುತ್ತ ಓಡಾಡದಂತೆ ಆದೇಶ ಹೊರಡಿಸೋವರೆಗೂ ಬಂತು. ಕೊನೆಗೆ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಆದ್ಮೇಲೆ ಇಂದು ಇದ್ದಕ್ಕಿದ್ದಂತೆ ಅಭಿಮನ್ಯು ನೇತೃತ್ಚದ ಆರು ದಸರಾ ಆನೆಗಳ ತಂಡ ನಾಗರಹೊಳೆ ಹಾಗೂ ದುಬಾರೆ ಕ್ಯಾಂಪ್ ಗಳಿಗೆ ವಾಪಸ್ ಆಗಿವೆ.


ಭೈರನ ಹಾವಳಿ


ಇದನ್ನೂ ಓದಿ: Elephant: ಹೆಣ್ಣಾನೆ ಬಳಸಿ ಕಾಡಾನೆಗೆ ಖೆಡ್ಡಾ! ಭಾನುಮತಿ ನಿನ್ನ ನಂಬಿದ್ರೆ ಫಜೀತಿ ಅಂತ ಒಂಟಿ ಸಲಗ ಎಸ್ಕೇಪ್!


 ಭೈರನ ಕಾಟ ಸಹಿಸದೇ ಜನರ ಪ್ರತಿಭಟನೆ


ಅಂದಹಾಗೇ ಈ ಭೈರನನ್ನ ಹಿಡಿಯುವ ಕಾರ್ಯಾಚರಣೆಗೆ ಅಷ್ಟು ಸುಲಭವಾಗಿ ಸರ್ಕಾರ ಮನಸ್ಸು ಮಾಡಿರಲಿಲ್ಲ. ಕಳೆದ ಎರಡು ತಿಂಗಳಲ್ಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ರು. ಹೀಗಾಗಿ ಕಾಡಾನೆಯನ್ನ ಹಿಡಿಯಬೇಕು ಅಂತಾ ಮೃತದೇಹವನ್ನ ಹಿಡಿದುಕೊಂಡು ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ಲಾಠಿಚಾರ್ಜ್ ಆಗಿ ಇನ್ನೂ ಕೆಲವರಿಗೆ ಬಾಸುಂಡೆಯೇ ಹೋಗಿಲ್ಲ.


ಆನೆ ಸೆರೆಗೆ ಬಂದ ದಸರಾ ಆನೆ


ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ


ಇಷ್ಟೆಲ್ಲಾ ಡ್ರಾಮಾ ನಡೆದ್ಮೇಲೆ ಹೇಗೋ ಸರ್ಕಾರ ಒಂದು ಕಾಡಾನೆಯನ್ನ ಹಿಡಿಯಲು ಅನುಮತಿ ನೀಡಿತ್ತು. ಅಷ್ಟರಲ್ಲಿಯೇ ಕಾರ್ಯಾಚರಣೆಗೆ ಬಂದಿದ್ದ ದಸರಾ ಆನೆಗಳ ಟೀಂ ವಾಪಸ್ ಹೊರಟಿವೆ. ಇಷ್ಟಕ್ಕೆಲ್ಲಾ ಅರಣ್ಯ ಅಧಿಕಾರಿಗಳ ಬೇಜಬ್ದಾರಿತನವೇ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ..


ಆನೆ ಸೆರೆ ಕಾರ್ಯಾಚರಣೆ


ಸ್ಥಳೀಯರತ್ತ ಅರಣ್ಯಾಧಿಕಾರಿಗಳ ಬೊಟ್ಟು!


ಕಾರ್ಯಾಚರಣೆಗೆ ಬಂದಿದ್ದ ಆನೆಗಳಿಗೆ ಸ್ಥಳೀಯರು ಬೆಲ್ಲ, ಗಿಲ್ಲ ಅಂತಾ ಎಲ್ಲವನ್ನೂ ಕೊಟ್ಟು ಆನೆಗಳ ಆರೋಗ್ಯ ಹಾಳು ಮಾಡಿದ್ದಾರೆ ಅಂತಾ ಅರಣ್ಯ ಇಲಾಖೆಯವರು ಆರೋಪಿಸ್ತಾ ಇದ್ದಾರೆ. ಅಯ್ಯೋ, ಆನೆಗಳ ಹತ್ತಿರ ಹೋಗೋದಕ್ಕೂ ಮಾವುತನ ಅನುಮತಿ ಪಡೆಯಬೇಕಿತ್ತು, ಇನ್ನೆಲ್ಲಿ ನಾವು ಆಹಾರವನ್ನ ಆನೆಗಳಿಗೆ ನೀಡೋದು ಅಂತಿದ್ದಾರೆ.


ಬಿಲ್ ಪಾಸುಮಾಡಿಸಲು ನಾಟಕ ಅಂತಾರೆ ಸ್ಥಳೀಯರು!
ತಂಪಾಗಿದ್ದ ದಸರಾ ಆನೆಗಳನ್ನ ಬಿಸಿಲಲ್ಲಿ ನಿಲ್ಲಿಸಿ, ಸರಿಯಾದ ವ್ಯವಸ್ಥೆ ಮಾಡದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳೇ ಬೇಜವಾಬ್ದಾರಿ ತೋರಿ, ಬಿಲ್ ಮಾಡಿಕೊಳ್ಳಲು ಜಸ್ಟ್ ಈ ರೀತಿ ಕಾರ್ಯಾಚರಣೆಯ ನಾಟಕವಾಡಿದ್ದಾರೆ ಅನ್ನೋದು ಸ್ಥಳೀಯರ ಆಕ್ರೋಶದ ನುಡಿ.


ಇದನ್ನೂ ಓದಿ: Elephant: ಆನೆಗೆ ಚಡ್ಡಿ ಅಲ್ಲ ಕಣ್ರೀ, ಚಪ್ಪಲಿ ಹಾಕಿಸಿದ್ದಾರೆ! 12 ಸಾವಿರ ರೂಪಾಯಿ ಪಾದರಕ್ಷೆ ಧರಿಸಿ ಗಜ ನಡಿಗೆ


ಒಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಜಟಾಪಟಿಯಲ್ಲಿ ಆರೋಗ್ಯ ಹದೆಗೆಡಿಸಿಕೊಂಡು ದಸರಾ ಆನೆಗಳು, ಕ್ಯಾಂಪ್ ಕಡೆ ಮುಖ ಮಾಡಿದ್ರೆ, ಹೆಂಗೇ ನಾನು ನಿಮಗೆಲ್ಲಾ ಚಳ್ಳೆಹಣ್ಣು ತಿನ್ಸಿದ್ದು ಅಂತಾ ಕಿವಿ ಕೊಡುವುತ್ತಲೇ ಕಾಡಿನ ಕಡೆ ಮುಖ ಮಾಡಿದ್ದಾನೆ ಭೈರ!

Published by:Annappa Achari
First published: