ಯುಗಾದಿ ಹಬ್ಬದ ನಿಮಿತ್ತ ಇಂದು ಪ್ರಚಾರಕ್ಕೆ ಬ್ರೇಕ್​ ಹಾಕಿದ ದರ್ಶನ್-ಯಶ್​; ದಳಪತಿಗಳಿಗೂ ದಿನದ ಮಟ್ಟಿಗೆ ವಿಶ್ರಾಂತಿ

ಲೋಕಸಮರದ ಪ್ರಚಾರದಲ್ಲಿ ಮುಳುಗಿದ್ದ ದಳಪತಿಗಳು ಯುಗಾದಿ ನಿಮಿತ್ತ ಇಂದು ವಿಶ್ರಾಂತಿ ಪಡೆಯಲಿದ್ದಾರೆ. ನಾಳೆಯಿಂದ ಮತ್ತೆ ಪ್ರಚಾರಕ್ಕೆ ಇಳಿಯಲಿದ್ದಾರೆ ಜೆಡಿಎಸ್ ನಾಯಕರು.

HR Ramesh | news18
Updated:April 6, 2019, 8:59 AM IST
ಯುಗಾದಿ ಹಬ್ಬದ ನಿಮಿತ್ತ ಇಂದು ಪ್ರಚಾರಕ್ಕೆ ಬ್ರೇಕ್​ ಹಾಕಿದ ದರ್ಶನ್-ಯಶ್​; ದಳಪತಿಗಳಿಗೂ ದಿನದ ಮಟ್ಟಿಗೆ ವಿಶ್ರಾಂತಿ
ಯಶ್​- ದರ್ಶನ್​
  • News18
  • Last Updated: April 6, 2019, 8:59 AM IST
  • Share this:
ಬೆಂಗಳೂರು: ಬೇಸಿಗೆಯ ಬಿರು ಬಿಸಿಲಿನಲ್ಲಿ ನಿಂತು ಚುನಾವಣಾ ಪ್ರಚಾರ ನಡೆಸುತ್ತಿದ್ದ ಅಭ್ಯರ್ಥಿಗಳು ಇಂದು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಒಂದು ದಿನ ವಿಶ್ರಾಂತಿ ಪಡೆಯಲಿದ್ದಾರೆ.

ಭಾರೀ ಕದನ ಪೈಪೋಟಿ ಕಣವಾಗಿರುವ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿ ಕಳೆದ ಮೂರು ದಿನಗಳಿಂದ ಭರ್ಜರಿ ಪ್ರಚಾರ ನಡೆಸುತ್ತಿರುವ ದರ್ಶನ್ ಮತ್ತು ಯಶ್​ ಕೂಡ ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬದೊಂದಿಗೆ ಹಬ್ಬವನ್ನು ಆಚರಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರಚಾರ ಕಾರ್ಯಕ್ಕೆ ಬ್ರೇಕ್​ ಕೊಟ್ಟಿದ್ದಾರೆ. ಅಭ್ಯರ್ಥಿ ಸುಮಲತಾ ಅವರ ಬೆಳಗ್ಗೆವರೆಗೂ ಹಬ್ಬ ಆಚರಿಸಿ, ಮಧ್ಯಾಹ್ನದ ನಂತರ ಮಂಡ್ಯ ತಾಲೂಕಿನ 18 ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ರಾತ್ರಿ 8.30ಕ್ಕೆ ಹನುಗನಹಳ್ಳಿಯಲ್ಲಿ ದಿನದ ಪ್ರಚಾರ ಅಂತ್ಯಗೊಳಿಸಲಿದ್ದಾರೆ.

ಇದನ್ನು ಓದಿ: ಮಂಡ್ಯದಲ್ಲಿ ಮುಸ್ಲಿಂ ಸಮುದಾಯದವರ ಓಲೈಕೆಗೆ ನಿಖಿಲ್ ಕುಮಾರಸ್ವಾಮಿ ಕಸರತ್ತು

ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಕೂಡ ಹಬ್ಬ ಆಚರಣೆಗಾಗಿ ಬೆಂಗಳೂರಿನ ಮನೆಗೆ ತೆರಳಿದ್ದಾರೆ. ಲೋಕಸಮರದ ಪ್ರಚಾರದಲ್ಲಿ ಮುಳುಗಿದ್ದ ದಳಪತಿಗಳು ಯುಗಾದಿ ನಿಮಿತ್ತ ಇಂದು ವಿಶ್ರಾಂತಿ ಪಡೆಯಲಿದ್ದಾರೆ. ನಾಳೆಯಿಂದ ಮತ್ತೆ ಪ್ರಚಾರಕ್ಕೆ ಇಳಿಯಲಿದ್ದಾರೆ ಜೆಡಿಎಸ್ ನಾಯಕರು.

First published:April 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ