ಸುಮಲತಾ ಅಂಬರೀಷ್​ ಸಾರಥ್ಯಕ್ಕೆ ಜೋಡಿ ಎತ್ತುಗಳಾದ ದರ್ಶನ್​-ಯಶ್​..!

ಸುಮಲತಾ ಇಂದು ಬೆಂಗಳೂರಿನಲ್ಲಿ ಮಾಡಿದ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ  ಡಿ-ಬಾಸ್​ ಹಾಗೂ ರಾಕಿ ಭಾಯ್​. ಸುಮಾ ಅಮ್ಮನ ಬೆಂಬಲಕ್ಕೆ ನಾವಿದ್ದೇವೆ ಎಂದು  ಸುದ್ದಿಗೋಷ್ಠಿಗೆ ಅವರ ಹಿಂದೆ ಬರುವ ಮೂಲಕವೇ ದಚ್ಚು ಹಾಗೂ ಯಶ್ ಸಂದೇಶ ರವಾನಿಸಿದರು.

Anitha E | news18
Updated:March 18, 2019, 5:48 PM IST
ಸುಮಲತಾ ಅಂಬರೀಷ್​ ಸಾರಥ್ಯಕ್ಕೆ ಜೋಡಿ ಎತ್ತುಗಳಾದ ದರ್ಶನ್​-ಯಶ್​..!
ಜೋಡಿ ಎತ್ತುಗಳಾದ ದರ್ಶನ್-ಯಶ್​ ಸ್ನೇಹಕ್ಕೆ ಕಾರಣರಾದರಾ ಸುಮಲತಾ
  • News18
  • Last Updated: March 18, 2019, 5:48 PM IST
  • Share this:
ಮಂಡ್ಯ ಲೋಕಸಭಾ ರಣಕಣದಲ್ಲಿನ ಯುದ್ಧಕ್ಕೆ ಒಂದು ಖದರ್ ಬಂದಿದೆ. ರೆಬೆಲ್ ಹೆಂಡತಿ ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಯುದ್ಧ ಸಾರಿದ್ದಾರೆ. ಕಲಿಯುಗ ಕರ್ಣನ ಹೆಂಡತಿಗೆ ಬೆಂಬಲವಾಗಿ ಕನ್ನಡ ಚಿತ್ರರಂಗವೇ ನಿಂತಿದೆ. ದೊಡ್ಡ ಮಗನಾಗಿ ದರ್ಶನ್​ ನಿಂತರೆ ಮನೆಮಗನಾಗಿ ಯಶ್​ ಜೊತೆಯಾಗಿದ್ದಾರೆ.

ಇದನ್ನೂ ಓದಿ: ಸುಮಲತಾರಿಗಾಗಿ ಒಂದಾದ 'ಗಜ ಕೇಸರಿ': ಎಲ್ಲ ಮರೆತು ವೇದಿಕೆ ಹಂಚಿಕೊಂಡ ದರ್ಶನ್​-ಯಶ್​..!

ಇದೇ ಮೊದಲ ಬಾರಿಗೆ ಒಬ್ಬರಿಗಾಗಿ ಪಕ್ಷಬೇಧ ಮರೆತು ಕನ್ನಡ ಚಿತ್ರರಂಗದ ಕಲಾವಿದರು ಒಂದಾಗಿದ್ದಾರೆ. ಗಟ್ಟಿಗಿತ್ತಿ ರೆಬೆಲ್​ ಸ್ಟಾರ್​ ಹೆಂಡತಿ ಸುಮಲತಾರಿಗೆ ಬೆಂಬಲವಾಗಿ ಇಡೀ ಚಂದನವನೇ ನಿಂತಿದೆ. ಲೋಕಸಭಾ ಚುನಾವಣೆಗಾಗಿ ಸುಮಲತಾ ಸಾರಥ್ಯದಲ್ಲಿ ಮಂಡ್ಯದಿಂದ ಹೊರಡಲಿರುವ ಬಂಡಿಗೆ ಡಿ-ಬಾಸ್​ ದರ್ಶನ್​ ಹಾಗೂ ರಾಕಿಂಗ್​ ಸ್ಟಾರ್​ ಹೆಗಲು ಕೊಟ್ಟಿದ್ದಾರೆ.

ಯಾವ ಚಿತ್ರರಂಗದಲ್ಲಿ ಸಮಸ್ಯೆಗಳು, ಮಸ್ತಾಪ, ಸಣ್ಣಪುಟ್ಟ ಜಗಳ ಇರುವುದಿಲ್ಲ ಹೇಳಿ. ಇಡೀ ಚಂದನವನವೇ ಒಂದು ಕುಟುಂಬ ಇದ್ದಂತೆ. ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಕಲಹ ಸಾಮಾನ್ಯ. ಹಾಗೆಂದು ಕುಟುಂಬ ಸದಸ್ಯನಿಗೆ ಅಗತ್ಯ ಬಿದ್ದಾಗ ಯಾವ ಸದಸ್ಯನೂ ಹಿಂಜರಿಯೋದಿಲ್ಲ. ಇದನ್ನು ಇಂದು ಕನ್ನಡ ಚಿತ್ರರಂಗದ ಕಲಾವಿದರು ಸಾಬೀತು ಮಾಡಿದ್ದಾರೆ.

ಅಂಬಿ ನಿಧನದ ನಂತರ ಸುಮಲತಾ ಅವರು ಮಂಡ್ಯದ ಜನರ ಒತ್ತಾಯದ ಮೇರೆಗೆ ಚುನಾವಣ ಕಣಕ್ಕೆ ದುಮುಕಲಿದ್ದಾರೆ ಅಂದಾಗಲೇ ಪ್ರಶ್ನೆಯೊಂದು ಎದ್ದಿತ್ತು. ಸುಮಲತಾ ಅಂಬರೀಷ್ ಅವರ ಪರ ಚಿತ್ರರಂಗದ ಯಾರೆಲ್ಲಾ ಕಲಾವಿದರು ನಿಲ್ಲುತ್ತಾರೆ ಹಾಗೂ ಅವರ ಪರವಾಗಿ ಮಂಡ್ಯದಲ್ಲಿ ಯಾವ ಯಾವ ತಾರೆಯರು ಮತಬೇಟೆ ಮಾಡುತ್ತಾರೆ ಅನ್ನೋ ಕುತೂಹಲ ಇತ್ತು. ಈಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

ಸುಮಲತಾ ಇಂದು ಬೆಂಗಳೂರಿನಲ್ಲಿ ಮಾಡಿದ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ  ಡಿ-ಬಾಸ್​ ಹಾಗೂ ರಾಕಿ ಭಾಯ್​. ಸುಮಾ ಅಮ್ಮನ ಬೆಂಬಲಕ್ಕೆ ನಾವಿದ್ದೇವೆ ಎಂದು  ಸುದ್ದಿಗೋಷ್ಠಿಗೆ ಅವರ ಹಿಂದೆ ಬರುವ ಮೂಲಕವೇ ದಚ್ಚು ಹಾಗೂ ಯಶ್ ಸಂದೇಶ ರವಾನಿಸಿದರು.

'ನಾವು ಕಲಾವಿದರಾಗಿ ಅಥವಾ ಸ್ಟಾರ್​ಗಳಾಗಿ ಇಲ್ಲಿಗೆ ಬಂದಿಲ್ಲ. ಅಮ್ಮನಿಗಾಗಿ, ಅವರ ಮಕ್ಕಳಂತೆ ಬಂದಿದ್ದೀವಿ. ಅಂಬರೀಚ್​ ಅವರು ನಮ್ಮನ್ನ ಮಕ್ಕಳಂತೆ ಅಪ್ಪಿಕೊಂಡಿದ್ದರು. ಈ ವಿಷಯದಲ್ಲಿ ಯೋಚನೆ ಮಾಡುವ ಅಕಾಶವೇ ಇಲ್ಲ. ಸುಮಕ್ಕ ಎಲ್ಲಿ ಹೆಜ್ಜೆ ಇಡುತ್ತಾರೋ ನಾವು ಅತ್ತಲೇ ಸಾಗುತ್ತೇವೆ. ಇಲ್ಲಿ ನಾವು ಒಂದು ಕುಟುಂಬದ ಮಕ್ಕಳಾಗಿ ಬಂದಿದ್ದೇವೆ' ಎಂದು ದರ್ಶನ್​ ಹಾಗೂ ನಾವು ಇಬ್ಬರೂ ಒಂದೇ ಕುಟುಂಬದ ಕುಡಿಗಳು ಎಂಬಂತೆ ಮಾತನಾಡಿದರು.ಇನ್ನೂ ನಂತರ ಮಾತನಾಡಿದ ನಟ ದರ್ಶನ್​ 'ನಾವು ಇಲ್ಲಿ ಯಾರೂ ಸ್ಟಾರ್​ಗಳಲ್ಲ. ನಾವು ಮನೆಯ ಮಕ್ಕಳು. ನಾನು ಅಪ್ಪನ ಕುಟುಂಬದೊಂದಿಗೆ ನಾಲ್ಕು ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಅಮ್ಮನ ಜತೆ ನಾನು ಮಾತ್ರ ಇಲ್ಲ. ನಮ್ಮ ಹೀರೋ ಸಹ ಇದ್ದಾರೆ. ನಾವು ಜೋಡಿ ಎತ್ತುಗಳಂತೆ ಅಮ್ಮನೊಂದಿಗೆ ಇದ್ದೇವೆ' ಎಂದು ದರ್ಶನ್​ ಸುದೀಪ್​ ಅವರ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: Dear Comrade: ವೈರಲ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಲಿಪ್​ಲಾಕ್​ ವಿಡಿಯೋ..!

ಒಟ್ಟಾರೆ ಇಡೀ ಚಂದನವನೇ ಒಂದು ಕುಟುಂಬ ಅದರಲ್ಲಿ ಯಾರಿಗಾದರೂ ಒಬ್ಬರಿಗೆ  ಅಗತ್ಯ ಬಿದ್ದಾಗ ಇಡೀ ಸಿನಿ ರಂಗವೇ ಅವರೊಂದಿಗೆ ನಿಲ್ಲುತ್ತದೆ ಅನ್ನೋದು ಇವತ್ತಿನ ಸುದ್ದಿಗೋಷ್ಠಿಯಿಂದ ಸಾಬೀತಾಗಿದೆ ಎನ್ನಬಹುದು.

- ಅನಿತಾ ಈ, 

 PHOTOS: ಟ್ರೆಂಡಿ ಲುಕ್​ನಲ್ಲಿ ಪೋಸ್​ ನೀಡಿದ್ದಾರೆ 'ಕೇಸರಿ' ಸಿನಿಮಾದ ನಟಿ ಪರಿಣಿತಿ ಚೋಪ್ರಾ

First published:March 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading