Kolar School Building:  ಸೋರುವ ಕೊಠಡಿಗಳು, ಬೀಳುವ ಹಂತದಲ್ಲಿದೆ ಮೇಲ್ಛಾವಣಿ: ಅಪಾಯದ ಅಂಚಿನಲ್ಲಿ 214 ಶಾಲೆ

ದುರಸ್ತಿಯಾಗಬೇಕಿರುವ ಸರ್ಕಾರಿ ಶಾಲೆಗಳ ಮಾಹಿತಿಯನ್ನ ಶಿಕ್ಷಣ ಇಲಾಖೆ  ಅಧಿಕಾರಿಗಳು ಸರ್ಕಾರಿ ಮಾಹಿತಿ ನೀಡಿದರು ಅನುದಾನವನ್ನ ಸರ್ಕಾರ ಇನ್ನೂ ಬಿಡುಗಡೆ ಮಾಡದೆ, ದಾನಿಗಳನ್ನ ಆಶ್ರಯಿಸುವಂತೆ ಸಲಹೆಯನ್ನು ಅಧಿಕಾರಿಗಳಿಗೆ ನೀಡಿದೆ.

ಸರ್ಕಾರಿ ಶಾಲೆ ಕಟ್ಟಡ

ಸರ್ಕಾರಿ ಶಾಲೆ ಕಟ್ಟಡ

  • Share this:
ಸರ್ಕಾರಿ ಶಾಲೆಗೆ (Government Schools) ಮಕ್ಕಳನ್ನ (Children) ಸೇರಿಸಿ ಎಂದು ಶಿಕ್ಷಣ ಇಲಾಖೆಯವರು ಹೇಳ್ತಾರೆ, ಆದರೆ ಕೋಲಾರದಲ್ಲಿ (Kolar) ಇರೋ ಶಾಲೆಗಳಿಗೆ ಮಕ್ಕಳನ್ನ ಕಳಿಸೋಲ್ಲ ಎಂದು ಪೊಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಶಾಲಾ ಕಟ್ಟಡಗಳು (School Building)  ಸುಸ್ಥಿತಿಯಲ್ಲಿ ಇಲ್ಲದೇ ಇರೋದು, ಕೋಲಾರ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಕಳೆದ ತಿಂಗಳಿಂದ ಪೂರ್ಣ ಪ್ರಮಾಣದಲ್ಲಿ 1 ರಿಂದ 10 ನೇ ತರಗತಿಗಳು (School Restart) ಆರಂಭವಾಗಿದೆ. ಆದರೆ 1 ಸಾವಿರಕ್ಕೂ ಅಧಿಕ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ.

ಕೊರೊನಾ ಹಿನ್ನೆಲೆ ಶಾಲೆಗಳು ಮುಚ್ಚಿದ್ದ ಕಾರಣ, ದುರಸ್ತಿ ಮಾಡಲು ಸರ್ಕಾರದಿಂದ ಅನುದಾನವೇ ಬಂದಿಲ್ಲ, ಇದು ಒಂದೆಡೆಯಾದರೆ, ಕೋಲಾರದಲ್ಲಿ ಕಳೆದ 2 ತಿಂಗಳಿಂದ ಜೋರು ಮಳೆಯಾಗುತ್ತಿದ್ದು ಶಾಲಾ ಕೊಠಡಿಗಳ ಮೇಲ್ಛಾವಣಿ ಬಿರುಕು ಬಿಟ್ಟು ಸಿಮೆಂಟ್ ಪ್ಲಾಸ್ಟಿಂಗ್ ಉದುರಿದೆ. ಜೊತೆಗೆ ಮಳೆಯಾದರೆ ಕೊಠಡಿಗಳು ಸಂಪೂರ್ಣವಾಗಿ ನೀರು ಮಯವಾಗುತ್ತಿದೆ.

Dangerous Condition of Kolar District Government school Building (3)
ಸರ್ಕಾರಿ ಶಾಲೆ ಕಟ್ಟಡ


ಕುಸಿಯುವ ಹಂತದ ಕಟ್ಟಡಗಳಲ್ಲಿಯೇ ಮಕ್ಕಳಿಗೆ ಪಾಠ

ಜಿಲ್ಲೆಯ ಕೋಲಾರ, ಶ್ರೀನಿವಾಸಪುರ ಹಾಗು ಮುಳಬಾಗಿಲು ತಾಲೂಕಿನಲ್ಲಿ  ಭಾರೀ ಮಳೆಯಿಂದಾಗಿ ಶಾಲಾ ಕಟ್ಟಡಗಳು ನೆಂದು, ಬಿರುಕುಬಿಟ್ಟು, ಮೇಲ್ಛಾವಣಿಗಳು ಕುಸಿಯುವ ಹಂತಕ್ಕೆ ತಲುಪಿದೆ. ಇಂತಹ ಕೊಠಡಿಗಳಲ್ಲೇ ಮಕ್ಕಳು ಮಳೆ ಗಾಳಿ ಲೆಕ್ಕಿಸದೇ ಪಾಠ ಪ್ರವಚನ ಕೇಳುತ್ತಿದ್ದಾರೆ. ಮಕ್ಕಳ ಜೀವದ ಜೊತೆಗೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡುತ್ತಿದೆಯಾ  ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ:  ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲೆ ಕಟ್ಟಡ: ಶಾಲೆಯ ಬಯಲಲ್ಲೇ ಮಕ್ಕಳ ಕಲಿಕೆ

ಜಿಲ್ಲೆಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿನ ಕೊಠಡಿಗಳು ಅತಿ ಶೀಘ್ರವಾಗಿ ದುರಸ್ತಿಯಾಗಬೇಕಿದೆ. ಇದರಲ್ಲಿ ಮೇಲ್ವಾವಣೆಗಳು ಬಿರುಕು ಬಿಟ್ಟು ಕುಸಿಯುವ ಭೀತಿಯೂ ಶಾಲಾ ಶಿಕ್ಷಕರು ಹಾಗೂ ಮಕ್ಕಳನ್ನ ಕಾಡುತ್ತಿದೆ.

Dangerous Condition of Kolar District Government school Building (3)
ಸರ್ಕಾರಿ ಶಾಲೆ ಕಟ್ಟಡ


ಶಿಕ್ಷಣ ಇಲಾಖೆ ವಿರುದ್ಧ ಪೋಷಕರ ಆಕ್ರೋಶ

ಈ ಬಗ್ಗೆ ಆಕ್ರೋಶ ಹೊರಹಾಕಿರುವ ಮಕ್ಕಳ ಪೋಷಕರು, ನಮ್ಮ ಮಕ್ಕಳನ್ನ ಬೇರೆ ಶಾಲೆಗೆ ಬೇಕಾದರೂ ಸೇರಿಸುತ್ತೇವೆ ನಮಗೆ ನಮ್ಮ ಮಕ್ಕಳ ಜೀವವೇ ಮುಖ್ಯ ಎಂದು ತಿಳಿಸಿದ್ದಾರೆ. ಇತ್ತ ಶಾಲಾ ಕೊಠಡಿ ದುರಸ್ತಿ ಸಮಸ್ಯೆಯನ್ನ ಶಿಕ್ಷಣ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ.

ಅಪಾಯದ ಅಂಚಿನಲ್ಲಿ 214 ಶಾಲೆಗಳು

ನೆಲಸಮ ಮಾಡಬೇಕಿರುವ ಶಾಲಾ ಕಟ್ಟಡಗಳನ್ನು ಇಲಾಖೆ ಕೂಡಲೆ ಕ್ರಮ ಕೈಗೊಂಡು ನೂತನ ಕಟ್ಟಡ ಕಟ್ಟಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲೆಯಲ್ಲಿ 214 ಶಾಲೆಗಳು ಸಂಫೂರ್ಣವಾಗಿ ನೆಲಸಮ ಮಾಡಬೇಕಿದೆ ಎಂದು ಒಪ್ಪಿಕೊಂಡಿದ್ದು, ಆದರೆ ಮೇಲ್ಛಾವಣಿ ಸಮಸ್ಯೆಯಿರುವ ಶಾಲಾ ಕೊಠಡಿಗಳಲ್ಲಿ ಪಾಠ ಮಾಡದಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  Kodagu Teacher: ವಿದ್ಯಾರ್ಥಿಗಳಿಗಾಗಿ ತಮ್ಮ ಸಂಬಳದ 1 ಲಕ್ಷ ರೂಪಾಯಿ ಮೀಸಲಿರಿಸುವ ಶಿಕ್ಷಕ

ಒಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ವಿದ್ಯಾರ್ಥಿಗಳ ಹಾಜರಾತಿಯೇ ಮುಖ್ಯ ಎನ್ನುವುದರ ಜೊತೆಗೆ, ಶಾಲಾ ಕಟ್ಟಡಗಳನ್ನ ಸುಸರ್ಜಿತವಾಗಿ ಇರಿಸಿಕೊಂಡಲ್ಲಿ, ಮಕ್ಕಳನ್ನ ಶಾಲೆಗೆ ಕಳಿಸಲು ಪೋಷಕರು ಉತ್ಸಾಹ ತೋರುವುದರಲ್ಲಿ ಎರಡು ಮಾತಿಲ್ಲ.

ಶಾಲೆ ರಿಪೇರಿಗೆ ಬೇಕಿದೆ ತುರ್ತು ಅನುದಾನ

ಬೀಳುವ ಹಂತದಲ್ಲಿನ ಕೊಠಡಿಗಳಲ್ಲಿನ  ಮೇಲ್ಛಾವಣಿಗಳನ್ನ ಕೂಡಲೇ ಶಿಕ್ಷಣ ಇಲಾಖೆ ಸರಿಪಡಿಸಬೇಕಿದೆ,. ಸರ್ಕಾರ ದಾನಿಗಳು, ಸಮಾಜ ಸೇವಕರು ಹಾಗು ಜನಪ್ರತಿನಿಧಿಗಳ ಅನುದಾನದಲ್ಲೆ ರಿಪೇರಿ ಮಾಡಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಸಲಹೆ ನೀಡುವ ಬದಲಾಗಿ, ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡಲು ತುರ್ತು ಅನುದಾನ ನೀಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಕೆಲವು ಶಾಲೆಗಳಲ್ಲಿ ಶಿಕ್ಷಕರು ಮುನ್ನೆಚ್ಚರಿಕೆ ಕ್ರಮವಾಗಿ ಆವರಣದಲ್ಲಿರುವ ಮರಗಳ ಕೆಳಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಮಳೆ ಬಂದ್ರೆ ಅನಿವಾರ್ಯವಾಗಿ ಶಾಲೆಯೊಳಗೆ ಹೋಗುವ ಪರಿಸ್ಥಿತಿ ಉಂಟಾಗಿದೆ.
Published by:Mahmadrafik K
First published: