Gadaga: ನಗರಸಭೆಯ ಸಾಮಾನ್ಯ ಸಭೆಗೆ ನುಗ್ಗಿ ಆಟೋ ಡ್ರೈವರ್​ಗಳ ಆಕ್ರೋಶ, ರಸ್ತೆ ದುರಸ್ತಿಗೆ ಪಟ್ಟು

ಸಿಎಂ ಬಂದಾಗ ರಸ್ತೆ ದುರಸ್ತಿ ಮಾಡ್ತೀರಾ? ನಮಗೆ ಅನಾನುಕೂಲವಾದಾಗ ರಸ್ತೆ ದುರಸ್ಥಿ ಮಾಡೋದಿಲ್ಲ, ಹೊಸ ಬಸ್​ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಗೂ ಮಹಾತ್ಮ ಗಾಂಧಿ ಸರ್ಕಲ್​ ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನು ಕೂಡಲೇ ದುರಸ್ಥಿ ಮಾಡ್ಬೇಕು ಎಂದು ಆಟೋ ಚಾಲಕರು ಪಟ್ಟು ಹಿಡಿದಿದ್ರು.

ಬೆಟಗೇರಿ ನಗರಸಭೆ

ಬೆಟಗೇರಿ ನಗರಸಭೆ

  • Share this:
ಗದಗ (ಮೇ 5): ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ (Drinking Water) ಹಾಹಾಕಾರ ಹಿನ್ನೆಲೆ ಕುಡಿಯೋ ನೀರಿನ ಬಗ್ಗೆ ಚರ್ಚಿಸಲು ಅಧ್ಯಕ್ಷೆ ಉಷಾ ದಾಸರ್​ ಇಂದು ಗದಗ ಬೆಟಗೇರಿ (Betageri) ನಗರಸಭೆಯ ತುರ್ತು ಸಾಮಾನ್ಯ ಸಭೆ ಕರೆದಿದ್ದರು. ಈ ವೇಳೆ ಅವಳಿ ನಗರದ ರಸ್ತೆ ಹದಗೆಟ್ಟ ರಸ್ತೆಗಳಿಂದ ರೋಸಿ ಹೋಗಿದ್ದ ಆಟೋ ಚಾಲಕರು (Auto Driver) ನಗರಸಭೆಯ ಸಾಮಾನ್ಯ ಸಭೆಗೆ (Municipal Council) ನುಗ್ಗಿ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಸಮಸ್ಯೆಯಿಂದ ಬೇಸರಗೊಂಡಿದ್ದ ಆಟೋ ಚಾಲಕರು, ಪೌರಯುಕ್ತರು ಹಾಗೂ ಅಧ್ಯಕ್ಷರನ್ನು ಹಿಗ್ಗಾಮುಗ್ಗಾ ತರಾಟೆಗೆ  ತೆಗೆದುಕೊಂಡಿದ್ದಾರೆ. ಕಿತ್ತೋಗಿರೋ ರಸ್ತೆಗಳಲ್ಲಿ ನಿತ್ಯ ನಾವು ನರಕ ನೋಡ್ತಿದ್ದೇವೆ ಎಂದು ಆಟೋ ಚಾಲಕರು ಕೂಗಾಡಿದ್ದಾರೆ.

ರಸ್ತೆಗಾಗಿ ಆಟೋ ಚಾಲಕರ ಪಟ್ಟು

ಸಿಎಂ ಬಂದಾಗ ರಸ್ತೆ ದುರಸ್ತಿ ಮಾಡ್ತೀರಾ? ನಮಗೆ ಅನಾನುಕೂಲವಾದಾಗ ರಸ್ತೆ ದುರಸ್ಥಿ ಮಾಡೋದಿಲ್ಲ, ಹೊಸ ಬಸ್​ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಗೂ ಮಹಾತ್ಮ ಗಾಂಧಿ ಸರ್ಕಲ್​ ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನು ಕೂಡಲೇ ದುರಸ್ಥಿ ಮಾಡ್ಬೇಕು ಎಂದು ಆಟೋ ಚಾಲಕರು ಪಟ್ಟು ಹಿಡಿದಿದ್ರು. ಇದ್ರಿಂದ ಗಲಿಬಿಲಿ ಪೌರಾಯುಕ್ತರು ಹಾಗೂ ಅಧ್ಯಕ್ಷರು, ಆಟೋ ಚಾಲಕರ ಒತ್ತಡಕ್ಕೆ ಮಣಿದು, ಬೇಡಿಕೆ ಈಡೇರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿದ್ರು. ನಾಳೆಯೇ ಖುದ್ದು ಭೇಟಿ ನೀಡಿ, ರಸ್ತೆ ದುರಸ್ತಿ ಮಾಡೋದಾಗಿ ಅಧಿಕಾರಿಗಳು ಸಹ ಭರವಸೆ ನೀಡಿದರು.

ರಸ್ತೆಗಿಳಿಯಲಿವೆ ಕೆಎಸ್​​ಆರ್​​ಟಿಸಿ ಎಲೆಕ್ಟ್ರಿಕ್ ಬಸ್​ಗಳು

ನಿರಂತರ ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಎಲೆಕ್ಟ್ರಿಕ್ ಬಸ್​ಗಳಿಗೆ ಹೆಚ್ಚಿನ ಒಲವು ಒತ್ತು ನೀಡುತ್ತಿರುವ ಕೆಎಸ್​​ಆರ್​​ಟಿಸಿ, ಕೇವಲ ಬೆಂಗಳೂರಿನಲ್ಲಿ ಮಾತ್ರ ಇದ್ದ ಈ ಬಸ್​ಗಳನ್ನು ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ರಸ್ತೆಗಿಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಖಾಸಗಿ ಕಂಪನಿಯೊಂದಿಗೆ 12 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದನ್ನು ಓದಿ: ಸಚಿವ ಅಶ್ವತ್ಥ್ ನಾರಾಯಣ ಪರ ಸಿಎಂ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

ಮೆಜೆಸ್ಟಿಕ್​ನಿಂದ ಮೈಸೂರು ಮಡಿಕೇರಿಗೆ ಬಸ್​

ಮೆಜೆಸ್ಟಿಕ್​ನಿಂದ ಕರ್ನಾಟಕ ಸಾರಿಗೆ ಸಂಸ್ಥೆಯ ಸುಸಜ್ಜಿತ ಇ - ಬಸ್​ಗಳ ಸಂಚಾರವನ್ನು ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು ಹಾಗೂ ದಾವಣಗೆರೆಯಂತಹ ಲಾಂಗ್​ ರೂಟ್​​ಗಳಿಗೂ ವಿಸ್ತರಿಸಲು ನಿಗಮ ಮುಂದಾಗಿದೆ. ಇಂಧನದ ಮೇಲಿನ ಅವಲಂಬನೆ ತಪ್ಪಿಸುವುದು ನಿಗಮದ ಪ್ರಮುಖ ಉದ್ದೇಶವಾಗಿದ್ದು, ಎಲೆಕ್ಟ್ರಿಕ್ ಬಸ್​​ಗಳನ್ನು ಖರೀದಿಸಲಾಗುತ್ತಿದೆ.

250 ರಿಂದ 300 ಕಿಲೋಮೀಟರ್ ಪ್ರಯಾಣ

ಒಂದು ಚಾರ್ಜಿಂಗ್​ನಲ್ಲಿ 250 ರಿಂದ 300 ಕಿಲೋಮೀಟರ್ ದೂರ ಪ್ರಯಾಣಿಸುವ ಇ-ಬಸ್​​ಗಳು ಸಂಸ್ಥೆಯನ್ನು ಸೇರಲಿದ್ದು, ಶೀಘ್ರವೇ ಪ್ರಾಯೋಗಿಕವಾಗಿ ರಸ್ತೆಗಿಳಿಯಲಿವೆ. ನಂತರದ ದಿನಗಳಲ್ಲಿ ಅಧಿಕೃತವಾಗಿ ಪ್ರಯಾಣ ಆರಂಭಿಸಲಿವೆ, ಇನ್ನೆರಡು ತಿಂಗಳುಗಳಲ್ಲಿ ಬಸ್​​ಗಳನ್ನು ಪೂರೈಸಲು ಹೈದರಾಬಾದ್​​ನ ಸಂಸ್ಥೆ ಒಪ್ಪಿಗೆ ನೀಡಿದೆ. ಹಾಗೂ ತೆಲಂಗಾಣ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಇ - ಬಸ್​ಗಳಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.'

ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ 

ಖಾಸಗಿ ಸಹಭಾಗಿತ್ವ: ಎಲೆಕ್ಟ್ರಿಕ್ ಬಸ್​ಗಳ ಖರೀದಿಯು ಭಾರಿ ಆರ್ಥಿಕ ಹೊರೆಗೆ ಕಾರಣವಾಗುವುದರಿಂದ ಖಾಸಗಿ ಸಂಸ್ಥೆಗಳಿಂದ ನಿಗಮವು ಗುತ್ತಿಗೆ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​​ನ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಸಂಸ್ಥೆಯೊಂದಿಗೆ ಕೆಎಸ್ಆರ್​ಟಿಸಿ ನಿಗಮವು ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆ ಎಲೆಕ್ಟ್ರಿಕ್ ಬಸ್​​ಗಳನ್ನು ಕೆಎಸ್​​ಆರ್​ಟಿಸಿಗೆ ಪೂರೈಸಲಿದೆ.

ಇದನ್ನು ಓದಿ: Siddaramaiah ಅವರೇ ಡಿಕೆಶಿ ಇಂದ ದೂರ ಇರಿ; ಮಾಜಿ ಸಿಎಂಗೆ MP Renukacharya ಬುದ್ದಿಮಾತು

12 ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿರುವ ಸಂಸ್ಥೆ ಬಸ್ ಖರೀದಿ ವೆಚ್ಚ, ನಿರ್ವಹಣೆ, ಚಾಲಕನ ವೇತನವನ್ನು ಭರಿಸಲಿದೆ. ಕೆಎಸ್​​ಆರ್​ಟಿಸಿ ಪ್ರತಿ ಕಿಲೋಮೀಟರ್​ಗೆ 52 ರೂಪಾಯಿಗಳನ್ನು ಒಲೆಕ್ಟ್ರಾ ಸಂಸ್ಥೆಗೆ ನೀಡಲಿದ್ದು, ಇದರಲ್ಲಿ ಚಾರ್ಜಿಂಗ್ ವೆಚ್ಚವು ಕೂಡ ಸೇರಲಿದೆ ನಿರ್ವಾಹಕರನ್ನ ಸಾರಿಗೆ ಸಂಸ್ಥೆಯೇ ನಿಯೋಜಿಸಬೇಕಿದೆ. ಚಾರ್ಜಿಂಗ್ ಕೇಂದ್ರ ಸ್ಥಾಪನೆ, ಬಸ್ ಖರೀದಿ ಅವುಗಳ ದುರಸ್ತಿಯ ಹೊರೆಯಿಂದ ಕರ್ನಾಟಕ ಸಾರಿಗೆ ಸಂಸ್ಥೆ ಮುಕ್ತಿ ಪಡೆದಂತಾಗಲಿದೆ. ಸಂಸ್ಥೆಯು ಪ್ರಯಾಣಿಕರಿಂದ ಈಗಿರುವ ಪ್ರಯಾಣ ದರವನ್ನೇ ಪಡೆಯಲಿದೆ.
Published by:Pavana HS
First published: