• Home
  • »
  • News
  • »
  • state
  • »
  • ಕ್ಷುಲ್ಲಕ ಕಾರಣಕ್ಕೆ ದಲಿತರಿಂದಲೇ ದಲಿತರ ಸಾಮಾಜಿಕ ಬಹಿಷ್ಕಾರ - ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡುವಂತೆ ಪತ್ರ

ಕ್ಷುಲ್ಲಕ ಕಾರಣಕ್ಕೆ ದಲಿತರಿಂದಲೇ ದಲಿತರ ಸಾಮಾಜಿಕ ಬಹಿಷ್ಕಾರ - ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡುವಂತೆ ಪತ್ರ

 ಬಹಿಷ್ಕಾರಕ್ಕೊಳಗಾದ ಕುಟುಂಬಗಳು

ಬಹಿಷ್ಕಾರಕ್ಕೊಳಗಾದ ಕುಟುಂಬಗಳು

ದೇವರ ಉತ್ಸವಕ್ಕೆ ಚಂದಾ ಕೊಡಲು ವಿಳಂಬ ಮಾಡಿದ್ದಕ್ಕೆ ಮುಖಂಡರು ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ನಿರಾಕರಿಸಿದ್ದಕ್ಕೆ ಶಿವಮಾದು ಎಂಬುವರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ

  • Share this:

ಚಾಮರಾಜನಗರ(ಜ.23) : ಕ್ಷುಲ್ಲಕ ಕಾರಣಕ್ಕೆ ದಲಿತರಿಂದಲೇ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಇದರಿಂದ ಬೇಸತ್ತಿರುವ ಈ ಕುಟುಂಬಗಳು ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ತಮಗಾಗುತ್ತಿರುವ ಕಿರುಕುಳ ತಪ್ಪಿಸಬೇಕು ಇಲ್ಲದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡುವಂತೆ ಪತ್ರ ಬರೆದು ಆಗ್ರಹಿಸಿವೆ.


ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅನಿಷ್ಠ ಪದ್ದತಿಗಳು ಮಾತ್ರ ಇನ್ನೂ ದೂರವಾಗಿಲ್ಲ. ಬಾಲ್ಯವಿವಾಹ, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳಲು ನಡೆಯುತ್ತಲೇ ಇವೆ. ಇದೀಗ ದಲಿತರಿಂದಲೇ ದಲಿತ ಕುಟುಂಬಗಳಿಗೆ ಕ್ಷುಲ್ಲಕ ಕಾರಣಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೊಳ್ಳೇಗಾಲ ತಾಲೂಕು ಉಗನಿಯ ಗ್ರಾಮದಲ್ಲಿ ನಡೆದಿದೆ.


ದೇವರ ಉತ್ಸವಕ್ಕೆ ಚಂದಾ ಕೊಡಲು ವಿಳಂಬ ಮಾಡಿದ್ದಕ್ಕೆ ಮುಖಂಡರು ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ನಿರಾಕರಿಸಿದ್ದಕ್ಕೆ ಶಿವಮಾದು ಎಂಬುವರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಅದೇ ರೀತಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ತಮಗೆ ಸೇರಿದ ಜಾಗ ಬಿಟ್ಟುಕೊಡಲು ಒಪ್ಪದ ಸುಂದ್ರಮ್ಮ ಎಂಬುವರ ಕುಟುಂಬಕ್ಕೂ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ


ಇಷ್ಟೇ ಅಲ್ಲ ಕೆಲಸ ಕೊಡಿಸುವುದಾಗಿ ಕೆಲವು ಮುಖಂಡರು ನಂಜಮ್ಮ ಎಂಬುವರ ಕುಟುಂಬದಿಂದ 60 ಸಾವಿರ ರೂಪಾಯ ಹಣ ಪಡೆದುಕೊಂಡಿದ್ದರಂತೆ ಕೆಲಸ ಕೊಡಿಸದ ಕಾರಣ ಹಣ ವಾಪಸ್ ಕೇಳಿದ್ದಕ್ಕೆ ನಂಜಮ್ಮ ಅವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ತಮ್ಮನ್ನು ಯಾವುದೇ ಶುಭ ಸಮಾರಂಭಗಳಿಗೆ , ದೇವಸ್ಥಾನದಲ್ಲಿ ನಡೆಯುವ ಪೂಜೆ ಪುನಸ್ಕಾರಗಳಿಗೆ ಕರೆಯುತ್ತಿಲ್ಲ, ಯಾರೂ ಮಾತನಾಡಿಸುತ್ತಿಲ್ಲ, ಜಮೀನುಗಳಿಗೆ ಕೂಲಿ ಕೆಲಸಕ್ಕೆ ಯಾರು ಬರುತ್ತಿಲ್ಲ, ಅಲ್ಲದೆ ತಮ್ಮನ್ನು ಸಹ ಯಾರೂ ಕರೆಯುತ್ತಿಲ್ಲ, ಎಂದು ಈ ಕುಟುಂಬಗಳ ಅಲವತ್ತುಕೊತ್ತುಕೊಂಡಿವೆ.


ಇದನ್ನೂ ಓದಿ :  ಸಿಎಂ ಬಣ್ಣದ ಮಾತಿಗೆ ಮರುಳಾಗಿ ನೆರೆ ಸಂತ್ರಸ್ತರಿಂದ ಬಿಜೆಪಿಗೆ ಮತ - ಗೆದ್ದ ಶಾಸಕರ ವರ್ತನೆಯಿಂದ ಸಂತ್ರಸ್ತರು ಅತಂತ್ರ


ಸಾಮಾಜಿಕ ಬಹಿಷ್ಕಾರದ ಬಗ್ಗೆ ಪೊಲೀಸರಿಗೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವ ಇವರು ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಬಹಿಷ್ಕಾರ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲವೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿ ಪತ್ರ ಬರೆದು ಮನವಿ ಮಾಡಿದ್ದಾರೆ. ನಾಗರೀಕತೆ ನಾಗಲೋಟದಲ್ಲಿ ಮುಂದುವರಿಯುತ್ತಿದ್ದರೂ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಇನ್ನೂ ಜೀವಂತವಾಗಿರುವುದು ವಿಪರ್ಯಾಸವಾಗಿದೆ.

Published by:G Hareeshkumar
First published: