• Home
  • »
  • News
  • »
  • state
  • »
  • Karnataka Politics: ಸಿಎಂಗೆ 'ಬ್ರ್ಯಾಂಡೆಡ್ ಟೀ' ಮಾತ್ರ ಕೊಡಿ, ದಲಿತ ಕುಟುಂಬಕ್ಕೆ ಅಧಿಕಾರಿಗಳ ಸೂಚನೆ: ವಿಡಿಯೋ ವೈರಲ್!

Karnataka Politics: ಸಿಎಂಗೆ 'ಬ್ರ್ಯಾಂಡೆಡ್ ಟೀ' ಮಾತ್ರ ಕೊಡಿ, ದಲಿತ ಕುಟುಂಬಕ್ಕೆ ಅಧಿಕಾರಿಗಳ ಸೂಚನೆ: ವಿಡಿಯೋ ವೈರಲ್!

ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಬಿಜೆಪಿ ನಾಯಕರು

ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಬಿಜೆಪಿ ನಾಯಕರು

ಚಿಕ್ಕಮಗಳೂರಿನಲ್ಲಿ ದಲಿತ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಬಂಧನ ಪ್ರಕರಣವನ್ನು ಉಲ್ಲೇಖಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  • News18 Kannada
  • Last Updated :
  • Chikmagalur, India
  • Share this:

ಚಿಕ್ಕಮಗಳೂರು(ಅ.14): ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Karnataka CM Basavaraj Bommai) ಮತ್ತು ಬಿಜೆಪಿ ಮುಖಂಡ ಬಿ. ಎಸ್. ಯಡಿಯೂರಪ್ಪ (BJP Leader BS Yediyurappa) ಅವರು ಹೊಸಪೇಟೆ ಸಮೀಪದ ಹಳ್ಳಿಯೊಂದರಲ್ಲಿ ದಲಿತ ವ್ಯಕ್ತಿಯೊಬ್ಬರ ಮನೆಯಲ್ಲಿ ಬುಧವಾರ ಉಪಹಾರ ಸೇವಿಸಿದರು. ಮಂಗಳವಾರ ಆರಂಭವಾದ ಆಡಳಿತ ಬಿಜೆಪಿಯ ‘ಜನಸಂಕಲ್ಪ ಯಾತ್ರೆ’ (Jana Sankalpa Yatra) ಅಂಗವಾಗಿ ಗ್ರಾಮಕ್ಕೆ ಭೇಟಿ ನೀಡಿದರು. ಆದರೆ, ಇದೀಗ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ವಿಡಿಯೋವನ್ನು ಕಾಂಗ್ರೆಸ್ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಇತರರಿಗೆ ಸಾಮಾನ್ಯ ಚಹಾದ ಬದಲಿಗೆ ಬ್ರ್ಯಾಂಡೆಡ್ ಮತ್ತು ಪ್ಯಾಕ್ ಮಾಡಿದ ಚಹಾ ಮಾತ್ರ ನೀಡುವಂತೆ ದಲಿತ ಕುಟುಂಬಕ್ಕೆ ಅಧಿಕಾರಿಗಳು ಸೂಚಿಸಿರುವುದು ಸ್ಪಷ್ಟವಾಗಿದೆ.


ಸಿಎಂ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಸೇರಿದಂತೆ ಬಿಜೆಪಿ ಮುಖಂಡರೊಂದಿಗೆ ಬುಧವಾರ ವಿಜಯನಗರ ಜಿಲ್ಲೆಯ ಕಮಲಾಪುರದ ಮನೆಯೊಂದರಲ್ಲಿ ಉಪಹಾರ ಸೇವಿಸಿದರು. ನಂತರ, ಮುಖ್ಯಮಂತ್ರಿಗಳ ಕಚೇರಿ ಈ ಉಪಹಾರದ ಚಿತ್ರಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಿತ್ತು.


ಇದನ್ನೂ ಓದಿ:  Haveri: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ; ಸ್ಥಳದಲ್ಲಿ ಬಿಗುವಿನ ವಾತಾವರಣ


ಆದರೀಗ ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಬೊಮ್ಮಾಯಿ ಮತ್ತು ಅವರ ತಂಡವು ಅಲ್ಲಿಗೆ ತಲುಪುವ ಮೊದಲೇ ಅಧಿಕಾರಿಗಳು ಕುಟುಂಬಕ್ಕೆ ಸೂಚನೆಗಳನ್ನು ನೀಡುತ್ತಿರುವ ದೃಶ್ಯಗಳಿವೆ. ವಿಡಿಯೋದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೂಡ ಅಧಿಕಾರಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಅವರು ಮೊದಲು ಸ್ಯಾಂಪಲ್​ ತೆಗೆದುಕೊಳ್ಳಬೇಕು ಎಂದು ಹೇಳುವುದನ್ನೂ ಕೇಳಬಹುದು.


ಮುಖ್ಯಮಂತ್ರಿಗಳ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ.


ಬ್ರಾಂಡೆಡ್ ಚಹಾಗೆ ಸೂಚನೆ


ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ, "ಯಾವುದೇ ಕಂಪನಿಯ 250 ಗ್ರಾಂ (ಚಹಾ ತನ್ನಿ). ಇತರ ಚಹಾಗಳನ್ನು ಪ್ರತ್ಯೇಕವಾಗಿ ಇರಿಸಿ. ಅದನ್ನು ಬಳಸಬೇಡಿ. ಕಂಪನಿಯ (ಬ್ರಾಂಡ್) ವಸ್ತುಗಳನ್ನು ಬಳಸಿ" ಎಂದು ಅಧಿಕಾರಿ ಹೇಳುತ್ತಿದ್ದಾರೆ. ದಲಿತ ಕುಟುಂಬಕ್ಕೆ ಬ್ರಾಂಡೆಡ್ ವಸ್ತುಗಳನ್ನು ಬಳಸುವಂತೆ ಅಧಿಕಾರಿಗಳು ಹೇಳಿದ್ದಾರೆಯೇ ಹೊರತು ಬೇರೆಯವರಿಗೆ ಅಲ್ಲ ಎಂದು ಸ್ಥಳೀಯ ಪತ್ರಿಕೆಯ ವರದಿಯೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಅಲ್ಲದೇ, ಮುಖ್ಯಮಂತ್ರಿ ಮತ್ತು ಇತರರಿಗೆ ಪ್ಯಾಕೇಜ್ಡ್ ನೀರನ್ನು ಮಾತ್ರ ನೀಡಲಾಯಿತು ಎಂದೂ ವಿಡಿಯೋದಲ್ಲಿ ತೋರಿಸಲಾಗಿದೆ.


ಬಿಜೆಪಿ ದಲಿತರಿಗೆ ಏನೂ ಮಾಡಿಲ್ಲ


ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಲಿತರು ಮತ್ತು ಇತರ ಹಿಂದುಳಿದ ಸಮುದಾಯಗಳ ಅಭ್ಯುದಯಕ್ಕಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಏನನ್ನೂ ಮಾಡಿಲ್ಲ. ಏತನ್ಮಧ್ಯೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಚಿಕ್ಕಮಗಳೂರಿನಲ್ಲಿ ದಲಿತ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಬಂಧನವನ್ನು ಉಲ್ಲೇಖಿಸಿ ಬೊಮ್ಮಾಯಿ ಸರ್ಕಾರವನ್ನು ಗುರಿಯಾಗಿಸಿದ್ದರು.


ಇದನ್ನೂ ಓದಿ:  Belagavi Politics: ಬೈಲಹೊಂಗಲ ಕ್ಷೇತ್ರದಲ್ಲಿ BJP-KJP ಕಲಹ; ರಾಜ್ಯ ನಾಯಕರಿಗೆ ತಲೆನೋವು ಆದ ಸ್ಥಳೀಯ ಗುದ್ದಾಟ


ಚುನಾವಣೆ ಬರುತ್ತಿರುವ ಕಾರಣ ದಲಿತರು, ಹಿಂದುಳಿದವರು, ಎಸ್‌ಸಿ-ಎಸ್‌ಟಿಗಳ ನೆನಪು


ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಚುನಾವಣೆ ಬರುತ್ತಿರುವ ಕಾರಣ ದಲಿತರು, ಹಿಂದುಳಿದವರು, ಎಸ್‌ಸಿ-ಎಸ್‌ಟಿಗಳ ನೆನಪಾಗುತ್ತಿದ್ದಾರೆ. ಅವರ ಕಲ್ಯಾಣಕ್ಕೆ ಈ ಸರ್ಕಾರದಿಂದ ಈವರೆಗೆ ಏನೂ ಮಾಡಿಲ್ಲ. ಈಗ ಚುನಾವಣೆ ಮತ್ತು ಮತಕ್ಕಾಗಿ ದಲಿತ ಮತ್ತು ಹಿಂದುಳಿದ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

Published by:Precilla Olivia Dias
First published: