• Home
  • »
  • News
  • »
  • state
  • »
  • ‘ನಮ್ಮ ಜಮೀನಿನಲ್ಲಿ ಓಡಾಡೋಕೆ ದಾರಿ ಬಿಡಲ್ಲ‘ ಎಂದಿದ್ದಕ್ಕೆ ದಲಿತರ ಮೇಲೆ ದೌರ್ಜನ್ಯ

‘ನಮ್ಮ ಜಮೀನಿನಲ್ಲಿ ಓಡಾಡೋಕೆ ದಾರಿ ಬಿಡಲ್ಲ‘ ಎಂದಿದ್ದಕ್ಕೆ ದಲಿತರ ಮೇಲೆ ದೌರ್ಜನ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರ ಗ್ರಾಮದ ದಲಿತ ಕುಟುಂಬಗಳಿಗೆ ಜಮೀನಿನ ಹಕ್ಕು ಪತ್ರ ನೀಡಿತ್ತು. ಹಕ್ಕು ಪತ್ರ ಪಡೆದಿದ್ದ ಗ್ರಾಮದ ಕರಿಯಪ್ಪ ಎಂಬುವವರ ಕುಟುಂಬ ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಮೆಕ್ಕೆಜೋಳ ಬೆಳೆ ಹಾಕಿದ್ರು. ಆದ್ರೆ ಗ್ರಾಮದ ಮತ್ತೊಂದು ಕೋಮಿನವ್ರು ಜಮೀನಿನಲ್ಲಿ ಬೇರೊಂದು ಜಮೀನಿಗೆ ದಾರಿ ಬಿಡಬೇಕು ಎಂದು ಗಲಾಟೆ ಶುರು ಮಾಡಿದ್ರು.

ಮುಂದೆ ಓದಿ ...
  • Share this:

ಚಿತ್ರದುರ್ಗ(ಆ. 02): ಸರ್ಕಾರ ಮಂಜೂರು ಮಾಡಿಕೊಟ್ಟ ದಲಿತರ ಜಮೀನಿನಲ್ಲಿ ಓಡಾಡೋಕೆ ದಾರಿ ಬೇಕೆಂದು ಸವರ್ಣಿಯರು ಕ್ಯಾತೇ ತೆಗೆಯುತ್ತಿದ್ದರು. ಆದರೆ, ಶನಿವಾರ ಮಾತಿಗೆ ಮಾತು ಬೆಳೆದು ಕೆಲವು ದುಷ್ಕರ್ಮಿಗಳು ದಾರಿಗಾಗಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.


ದಲಿತರ ಜಮೀನಿಗೆ ಕುರಿ ಮಂದೆ ನುಗ್ಗಿಸಿ ಬೆಳೆ ನಾಶ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಣಿವೆ ಜೋಗಿಹಳ್ಳಿ ಗ್ರಾಮದಲ್ಲಿ ಕರಿಯಪ್ಪ ಎಂಬ  ದಲಿತ ಕುಟುಂಬಕ್ಕೆ ಸರ್ಕಾರ ನೀಡಿದ್ದ ಜಮೀನಿನಲ್ಲಿ  ಮೊನ್ನೆಯಷ್ಠೆ ಅಡಿಕೆ ಬೆಳೆ ನಾಟಿ ಮಾಡಿದ್ರು. ಭೂಮಿಯಲ್ಲಿ ಉತ್ತಮ ಫಸಲಿಗಾಗಿ ಇನ್ನಿಲ್ಲದ ಆ  ಕುಟುಂಬದವ್ರು ಶ್ರಮ ವಹಿಸಿದ್ರು. ಆದರೀಗ ಕಿಡಿಗೇಡಿಗಳ ಕೃತ್ಯಕ್ಕೆ ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ನಾಶಗೊಂಡಿದೆ.


ದಾರಿ ಬಿಡದ ದ್ವೇಷಕ್ಕೆ ಇದ್ದ ವಾಸದ ಗುಡಿಸಲು ಸುಟ್ಟು ದುಷ್ಕರ್ಮಿಗಳು ದುಷ್ಕೃತ್ಯ ಮೆರೆದಿದ್ದಾರೆ. ಸರ್ಕಾರ ಗ್ರಾಮದ ದಲಿತ ಕುಟುಂಬಗಳಿಗೆ ಜಮೀನಿನ ಹಕ್ಕು ಪತ್ರ ನೀಡಿತ್ತು. ಹಕ್ಕು ಪತ್ರ ಪಡೆದಿದ್ದ ಗ್ರಾಮದ ಕರಿಯಪ್ಪ ಎಂಬುವವರ ಕುಟುಂಬ ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಮೆಕ್ಕೆಜೋಳ ಬೆಳೆ ಹಾಕಿದ್ರು. ಆದ್ರೆ ಗ್ರಾಮದ ಮತ್ತೊಂದು ಕೋಮಿನವರು ಈ ಜಮೀನಿನಲ್ಲಿ ಬೇರೊಂದು ಜಮೀನಿಗೆ ಹೋಗಲು ದಾರಿ ಬಿಡಬೇಕು ಎಂದು ಗಲಾಟೆ ಶುರು ಮಾಡಿದ್ರು.


ನಾಲ್ಕೈದು ದಿನಗಳಿಂದ ನಡೆಯುತ್ತಿದ್ದ ಜಗಳ ಇಂದು ವಿಕೋಪಕ್ಕೆ ತಿರುಗಿದೆ. ತೋಟದಲ್ಲಿ ವಾಸವಿದ್ದ  ಕರಿಯಪ್ಪ ಕುಟುಂಬದ ಮೇಲೆ ಗ್ರಾಮದ ಹತ್ತಕ್ಕೂ ಹೆಚ್ಚು ಜನರ ಗುಂಪು ಏಕಾಏಕಿ ದೌರ್ಜನ್ಯ ನಡೆಸಿದ್ದು, ಕಲ್ಲು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯರು, ಮಕ್ಕಳ ಮೇಲೂ ಹಲ್ಲೆ ನಡೆಸಿದ್ದು, ನಾಲ್ಲು ಮಂದಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳು‌ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇನ್ನು, ಜಮೀನಿನಲ್ಲಿ ದಾರಿ ಬೇಕು ಎನ್ನುವ  ಕ್ಷುಲ್ಲಕ ಕಾರಣಕ್ಕೆ ದಲಿತ ಕುಟುಂಬದ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ನಾಲ್ಕು ಎಕರೆ ಜಮೀನಿಗೆ ಇದ್ದಕ್ಕಿದ್ದಾಗೇ ನೂರಾರು ಕುರಿಗಳನ್ನ ಕೂಡಿ ಬೆಳೆದಿದ್ದ ಬೆಳೆಗಳನ್ನ ಮೇಯಿಸಿದ್ದಾರೆ. ಇದರಿಂದ  ಅಡಿಕೆ ಹಾಗೂ ಮೆಕ್ಕೆಜೊಳ ಬೆಳೆ ಸಂಪೂರ್ಣ ನಾಶಮಾಡಿರುವ ದುರ್ಷ್ಕರ್ಮಿಗಳು ತಮ್ಮ ಅಟ್ಟಹಾಸ ಮರೆದಿದ್ದಾರೆ.


ಅಲ್ಲದೇ ಕರಿಯಪ್ಪ ಕುಟುಂಬ ಜಮೀನಿನಲ್ಲಿ ವಾಸವಿದ್ದ ಗುಡಿಸಲಿಗೂ ಬೆಂಕಿ ಹಚ್ಚಿದ್ದು, ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ.ಇದರಿಂದಾಗಿ ಗುಡಿಸಲಿನಲ್ಲಿ ಜೀವನೋಪಾಯಕ್ಕಾಗಿ ಇಟ್ಟಿದ್ದ ಹಣ ಮತ್ತು ಒಡವೆ ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಆಗಿದೆ.


ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಒಂದೇ ದಿನ 5503 ಮಂದಿಗೆ ಕೊರೋನಾ​, 1.30 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ


ಉಳ್ಳವರ  ಈ ದೌರ್ಜನ್ಯಕ್ಕೆ ತುತ್ತಾಗಿರುವ ಕರಿಯಪ್ಪ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇನ್ನೂ ಸ್ಥಳಕ್ಕೆ ಚಿತ್ರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಒಟ್ಟಾರೆ ಸರ್ಕಾರ ಬಡ ಕುಟುಂಬಕ್ಕೆ ನೀಡಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳಲು ಕನಸು ಕಂಡಿದ್ದ, ದಲಿತ ಕುಟುಂಬದ ಕನಸಿಗೆ ಅನ್ಯ ಕೋಮಿನ ಗುಂಪು ಕೊಳ್ಳಿ ಇಟ್ಟಿದೆ. ವಿನಾಕಾರಣ ಅಮಾಯಕ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ದೌರ್ಜನ್ಯ ಎಸಗಿದ ಗುಂಪುನ್ನ ಆದಷ್ಟು ಬೇಗ ಬಂಧಿಸಿ ನ್ಯಾಯ ಕೊಡ್ಸಿ ಎಂದು ಕರಿಯಪ್ಪ ಕುಟುಂಬ ಆಗ್ರಹಿಸಿದೆ.

Published by:Ganesh Nachikethu
First published: