• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ದಲಿತರು ರಾಜ್ಯದ ಸಿಎಂ ಆಗ್ತಾರೆ - ಸಚಿವ ಸ್ಥಾನ ತ್ಯಾಗದ ಬಗ್ಗೆ ಕಾರಜೋಳ, ಮಾಧುಸ್ವಾಮಿ ಹೇಳಿಕೆ ಸಲ್ಲ ; ರಮೇಶ್ ಜಿಗಜಿಣಗಿ‌

ದಲಿತರು ರಾಜ್ಯದ ಸಿಎಂ ಆಗ್ತಾರೆ - ಸಚಿವ ಸ್ಥಾನ ತ್ಯಾಗದ ಬಗ್ಗೆ ಕಾರಜೋಳ, ಮಾಧುಸ್ವಾಮಿ ಹೇಳಿಕೆ ಸಲ್ಲ ; ರಮೇಶ್ ಜಿಗಜಿಣಗಿ‌

 ಸಂಸದ ರಮೇಶ್ ಜಿಗಜಿಣಿಗಿ

ಸಂಸದ ರಮೇಶ್ ಜಿಗಜಿಣಿಗಿ

ವಿಜಯಪುರಕ್ಕೆ ಸಚಿವ ಸ್ಥಾನ ಬೇಡ ಎನ್ನುವಷ್ಟು ಕೆಟ್ಟವರಲ್ಲ. ಸಚಿವ ಶ್ರೀರಾಮುಲು, ಜಾರಕಿಹೊಳಿ ಡಿಸಿಎಂ ಬೇಕು ಎನ್ನುವ ಬೇಡಿಕೆ ಹೊಸ ವಿಚಾರವಲ್ಲ. ಇದನ್ನು ಕೇಂದ್ರ ಮತ್ತು ರಾಜ್ಯ ನಾಯಕರು ಇದನ್ನು ಬಗೆಹರಿಸುತ್ತಾರೆ ಎಂದು ಹೇಳಿದರು

  • Share this:

ವಿಜಯಪುರ (ಜ.30) : ರಾಜ್ಯದಲ್ಲಿ ಬಿಜೆಯಿಂದ ದಲಿತರು ಸಿಎಂ ಆಗಲಿದ್ದಾರೆ.  ಆದರೆ, ಅದು ಯಾವಾಗ ಆಗ್ತಾರೋ ಗೊತ್ತಿಲ್ಲ. ನಾನು ಸತ್ತ ಮೇಲೆ ಆಗುತ್ತಾರೋ, ಅದಕ್ಕೂ ಮೊದಲು ಆಗ್ತಾರೋ ಗೊತ್ತಿಲ್ಲ. ಈಗಲೂ ದಲಿತರು ಸಿಎಂ ಆಗಬೇಕು ಎಂಬುದರ ಬಗ್ಗೆ ನನ್ನ ಧ್ವನಿ ಗಟ್ಟಿಯಾಗಿದೆ ಎಂದು ಸಂಸದ ರಮೇಶ್ ಜಿಗಜಿಣಗಿ‌ ಹೇಳಿದ್ದಾರೆ. 


ರಾಜ್ಯ ರಾಜಕಾರಣಕ್ಕೆ ನನ್ನ ಅವಶ್ಯಕತೆ ಇದೆ ಎಂದಾಗ ಬರುತ್ತೇನೆ. ನಾನು 45 ವರ್ಷ ರಾಜಕೀಯದಲ್ಲಿ ಜಾತಿಯಿಂದ ನಾಯಕನಾಗಿಲ್ಲ. ನೀತಿಯಿಂದ ನಾಯಕನಾಗಿದ್ದೇನೆ. ಜಾತಿಯಿಂದ ದೊಡ್ಡವನಾಗುವುದಿಲ್ಲ. ನನಗೆ ಸಿಎಂ ಆಗಲು ಜಾತಿ ಅಡ್ಡಿಯಾಗಿಲ್ಲ. ಯಾವಾಗ ಆಗುತ್ತೇನೆ ಎಂದು ಗೊತ್ತಿಲ್ಲ. ನಾನಾಗದಿದ್ದರೂ‌ ನಮ್ಮ ಪೀಳಿಗೆಯವರು ಒಂದು ದಿನ ಕರ್ನಾಟಕದ ಸಿಎಂ ಆಗಲಿದ್ದಾರೆ ಎಂದರು.


ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. 6 ವರ್ಷಗಳಲ್ಲಿ‌ ಕಾಂಗ್ರೆಸ್ಸಿಗೆ ಯಾವುದೇ ವಿಷಯ ಸಿಕ್ಕಿರಲಿಲ್ಲ. ಈಗ ಸಿಎಎ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮುಸ್ಲಿಂ ಸ್ನೇಹಿತರು ವೈಯಕ್ತಿಕವಾಗಿ ಸಿಎಎ ಬಗ್ಗೆ ಪ್ರಶಂಸಿಸುತ್ತಿದ್ದಾರೆ. ಮತ ರಾಜಕೀಯಕ್ಕಾಗಿ ಕಾಂಗ್ರೆಸ್ಸಿನ ತಪ್ಪು ದಾರಿಗೆ ಬಲಿಯಾಗಬೇಡಿ. ನಿಮ್ಮ ರಕ್ಷಣೆಗೆ ಬಿಜೆಪಿ ಇದೆ. ಹಿಂದೆ ದಲಿತರನ್ನು ಎತ್ತಿ‌ ಕಟ್ಟುವ ಪ್ರಯತ್ನ ಮಾಡಿದರು ಆದರೆ, ದಲಿತರು ಕಾಂಗ್ರೆಸ್ಸಿನ ಸುಳ್ಳು ಮಾತಿಗೆ ಬಲಿಯಾಗಲಿಲ್ಲ ಎಂದು ತಿಳಿಸಿದರು


ವಿಜಯಪುರಕ್ಕೆ ಸಚಿವ ಸ್ಥಾನ ಬೇಡ ಎನ್ನುವಷ್ಟು ಕೆಟ್ಟವರಲ್ಲ. ಸಚಿವ ಶ್ರೀರಾಮುಲು, ಜಾರಕಿಹೊಳಿ ಡಿಸಿಎಂ ಬೇಕು ಎನ್ನುವ ಬೇಡಿಕೆ ಹೊಸ ವಿಚಾರವಲ್ಲ. ಇದನ್ನು ಕೇಂದ್ರ ಮತ್ತು ರಾಜ್ಯ ನಾಯಕರು ಇದನ್ನು ಬಗೆಹರಿಸುತ್ತಾರೆ ಎಂದು ಹೇಳಿದರು.


ಇದನ್ನೂ ಓದಿ : ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ: ಮಹೇಶ್​ ಕುಮಟಳ್ಳಿ ಅಚ್ಚರಿ ಹೇಳಿಕೆ


ಹಿರಿಯ ನಾಯಕರು ಸಚಿವ ಸ್ಥಾನ ತ್ಯಾಗ ವಿಚಾರಈ ಬಗ್ಗೆ ನಿರ್ಣಯ ಕೈಗೊಳ್ಳಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಡಿಸಿಎಂ ಗೋವಿಂದ್ ಕಾರಜೋಳ ಹಾಗೂ ಸಚಿವ  ಮಾಧುಸ್ವಾಮಿ ಪಕ್ಷದ ನಾಯಕರಲ್ಲ ಪಕ್ಷದ ಹಿರಿಯರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಪ್ರಸಂಗ ಬಂದರೆ ಎಲ್ಲರೂ ತ್ಯಾಗ  ಮಾಡಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

First published: