Murugha Mutt: ಮುರುಘಾ ಶ್ರೀಯವರನ್ನು ಬಂಧಿಸದ್ದಕ್ಕೆ ರೊಚ್ಚಿಗೆದ್ದ ದಲಿತ ಸಂಘಟನೆಗಳು, ಡಿಸಿ ಕಾರಿಗೆ ಮುತ್ತಿಗೆ

ಅತ್ಯಾಚಾರ ಆರೋಪ ಎದುರಿಸ್ತಿರುವ ಮುರುಘಾ ಶ್ರೀಯವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ರಾಜ್ಯದ ಹಲವೆಡೆ ಮುರುಘಾ ಶರಣರ ವಿರುದ್ಧ ಪ್ರತಿಭಟನೆ ಹೆಚ್ಚಾಗಿದೆ. ರೊಚ್ಚಿಗೆದ್ದ ದಲಿತ ಸಂಘಟನೆಗಳು ಜಿಲ್ಲಾಧಿಕಾರಿ ಡಿಸಿ ಕಾರಿಗೆ ಘೇರಾವ್ ಹಾಕಿದರು.

ಮುರುಘಾ ಶ್ರೀ

ಮುರುಘಾ ಶ್ರೀ

  • Share this:
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ (Harassment) ಎಸಗಿದ ಆರೋಪಕ್ಕೆ ಗುರಿಯಾಗಿರುವ ಮುರುಘಾ ಮಠದ (Murugha Mutt) ಶಿವಮೂರ್ತಿ ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ (Anticipatory Bail) ವಿಚಾರಣೆ ನಾಳೆ ನಡೆಯಲಿದೆ. ಮುರುಘಾ ಶ್ರೀ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ (Court) ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಇನ್ನು ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ವಿರುದ್ಧ ಪ್ರತಿಭಟನೆ (Protest) ಹೆಚ್ಚಾಗಿದೆ. ಮೈಸೂರು, ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಯಿತು. ಚಿತ್ರದುರ್ಗದಲ್ಲಿ ರೊಚ್ಚಿಗೆದ್ದ ದಲಿತ ಸಂಘಟನೆಗಳು ಜಿಲ್ಲಾಧಿಕಾರಿ (DC) ಕವಿತಾ ಮನ್ನೀಕೇರಿ ಕಾರಿಗೆ ಘೇರಾವ್ ಹಾಕಿದರು.

ಚಿತ್ರದುರ್ಗದಲ್ಲಿ ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿದೆ. ಡಿಸಿ ಕವಿತಾ ಮನ್ನೀಕೇರಿ ಕಾರಿಗೆ ದಲಿತ ಸಂಘಟನೆಗಳು ಘೇರಾವ್ ಹಾಕಿದ್ರು. ಡಿಸಿಯವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನ ಯಾಕೆ ಬಂಧನ ಮಾಡ್ತಿಲ್ಲ. ಯಾಕೆ ಮೀನಾಮೇಷ ಎಣಿಸ್ತಿದ್ದೀರಿ ಅಂತಾ ಕಿಡಿಕಾರಿದ್ರು

ಮೈಸೂರಿನಲ್ಲಿ ಶ್ರೀಗಳ ವಿರುದ್ಧ ಪ್ರತಿಭಟನೆ
ಅಪ್ರಾಪ್ತ ಬಾಲಕಿಯರ ಮೇಲೆ ಮುರುಘಾ ಮಠ ಶ್ರೀಗಳ ಲೈಂಗಿಕ ದೌರ್ಜನ್ಯ ಖಂಡಿಸಿ ಶ್ರೀಗಳ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರಿನ ಟೌನ್ ಹಾಲ್ ಬಳಿಯ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ: 5ನೇ ಮದುವೆಗೆ ಸಜ್ಜಾದ 7 ಮಕ್ಕಳ ತಂದೆ, ಮಂಟಪದಲ್ಲೇ ಅಪ್ಪನ ಥಳಿಸಿದ ಮಕ್ಕಳು!

ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳ ವಿರುದ್ಧ ಪ್ರತಿಭಟನೆ
ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಮೆರವಣಿಗೆ ನಡೆಯಿತು. ಭಾರತೀಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಪೋಕ್ಸೋ ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ನೂರಾರು ಜನ ಸೇರಿ ಕಿಡಿಕಾರಿದ್ರು.

ಪೋಸ್ಕೋ ಕೇಸ್ ದಾಖಲಾಗಿ 6 ದಿನ ಕಳೆದರೂ ಇನ್ನೂ ಕೂಡ ಸ್ವಾಮೀಜಿ ಬಂಧನವಾಗಿಲ್ಲ. ಈ ಕೂಡಲೇ ಮುರುಘಾ ಶರಣರನ್ನ ಬಂಧಿಸಬೇಕು. ಮುರುಘಾ ಮಠದ ಶ್ರೀಗಳನ್ನು ರಾಜ್ಯ ಸರ್ಕಾರ ರಕ್ಷಿಸಲು ಮುಂದಾಗಿದೆ. ಇದು ಕಾನೂನನ್ನೇ ಗಾಳಿಗೆ ತೂರುವ ಕೆಲಸ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂತ್ರಸ್ತ ಬಾಲಕಿಯರ ಪರ ವಕೀಲರು ಹೇಳಿದ್ದೇನು?
ಕೇವಲ ಮುರುಘಾ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನಾಳೆಗೆ ನಾವು ತಕರಾರು ಅರ್ಜಿ ಸಲ್ಲಿಸುತ್ತೇವೆ. ಜಾಮೀನು ಅರ್ಜಿ ವಿಚಾರಣೆ ಮಾಡಿ ಜಾಮೀನು ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಅಂತಾ ಸಂತ್ರಸ್ತರ ಪರ ವಕೀಲ ವಕೀಲರಾದ ಶ್ರೀನಿವಾಸ್ ಹೇಳಿದ್ರು.

ನಮ್ಮ ಪರ ಬಾಲಕಿಯರು ಹೇಳಿದ್ದರಿಂದ ನಾವು ಪ್ರಕರಣ ಮುಂದುವರೆಸುತ್ತೇವೆ. ಪ್ರಕರಣ ವಿಳಂಬ ಆಗಿದೆ. ತನಿಖಾಧಿಕಾರಿ ಸೂಕ್ತ ತನಿಖೆ ಮಾಡಬೇಕು. 164 ಹೇಳಿಕೆ ಮೇಲೆ ಸೂಕ್ತ ತನಿಖೆ ಮಾಡಲಿ. ರಿಟ್ ಅರ್ಜಿ ಹೈಕೋರ್ಟ್ ನಲ್ಲಿ ಮಾತ್ರ ಹಾಕಲು ಅವಕಾಶ ಇದೆ. ಸಮಯ ಬಂದರೆ ನಾವು ಕೂಡಾ ರಿಟ್ ಅರ್ಜಿ ಹಾಕಲು ಯೋಚನೆ ಮಾಡುತ್ತೇವೆ ಅಂತಾ ವಕೀಲರಾದ ಶ್ರೀನಿವಾಸ್ ಹೇಳಿದ್ರು.

ಇದನ್ನೂ ಓದಿ: ಮುರುಘಾ ಮಠದ ಗೇಟ್​​ಗಳೆಲ್ಲಾ ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ; ಏನಾಗುತ್ತೆ ಮುರುಘಾ ಶ್ರೀಗಳ ಭವಿಷ್ಯ?

ತನಿಖೆಯನ್ನ ಸಿಬಿಐಗೆ ಒಪ್ಪಿಸುವಂತೆ ಆಗ್ರಹ
ಮುರುಘಾ ಶರಣರ ಅತ್ಯಾಚಾರ ಕೇಸ್​ನ ತನಿಖೆಯನ್ನ ಸಿಬಿಐಗೆ ಒಪ್ಪಿಸುವಂತೆ ಹಿಂದೂಸ್ತಾನ ಜನತಾ ಪಾರ್ಟಿ ಆಗ್ರಹಿಸಿದೆ. ಮುರುಘಾಮಠ ರಾಜ್ಯದ ಪ್ರತಿಷ್ಠಿತ ಮಠ. ಶ್ರೀಗಳ ಮೇಲೆ ಲೈಂಗಿಕದೌರ್ಜನ್ಯ ಆರೋಪ ಬಂದಿದೆ. ಸೂಕ್ತ ತನಿಖೆ ನಡೆಯುತ್ತಿಲ್ಲವೆಂಬ ಮಾತಿದೆ. ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಹಾಗಾಗಿ ಕೇಸನ್ನ ಸಿಬಿಐಗೆ ವಹಿಸಿ ಅಂತಾ ಒತ್ತಾಯಿಸಿದ್ದಾರೆ.
Published by:Thara Kemmara
First published: