ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠದ (Murugha Math) ಡಾ. ಶಿವಮೂರ್ತಿ ಮುರುಘಾ ಶರಣರ (Shivamurthy Murugha Sharanaru) ಬೆಂಬಲಕ್ಕೆ ಮಠದ ಭಕ್ತರು (Devotees), ಚಿತ್ರದುರ್ಗದ (Chitradurga) ದಲಿತ ಸಂಘಟನೆಗಳು (Dalit Organizations) ನಿಂತಿವೆ. ಸ್ವಾಮೀಜಿ (Swamiji) ಮೇಲೆ ಬಂದಿರುವ ಆರೋಪ ಆಧಾರರಹಿತ, ಅಲ್ಲದೇ ಮಠ ಹಾಗೂ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. ಇದೀಗ ಸ್ವಾಮೀಜಿಗಳ ಬೆಂಬಲಕ್ಕೆ ಭಕ್ತರು ಹಾಗೂ ದಲಿತ ಸಂಘಟನೆಗಳು ನಿಂತಿವೆ. ಮತ್ತೊಂದೆಡೆ ಮಠದ ಆಡಳಿತಾಧಿಕಾರಿ (Administrator) ಆಗಿದ್ದ ಬಸವರಾಜನ್ (Basavarajan) ವಿರುದ್ಧ ಷಡ್ಯಂತ್ರದ ಆರೋಪ ಮಾಡಲಾಗಿದೆ. ಅಲ್ಲದೇ ಬಸವರಾಜನ್ ಹಾಗೂ ಅವರ ಪತ್ನಿ (Wife) ವಿರುದ್ಧ ದೂರು (Complaint) ನೀಡಲಾಗಿದೆ.
ಮಠದ ಆಡಳಿತಾಧಿಕಾರಿ ವಿರುದ್ಧ ದೂರು
ಮುರುಘಾ ಮಠದ ಆಡಳಿತಾಧಿಕಾರಿ ಬಸರಾಜನ್ ಅವರ ಮೇಲೂ ದೂರು ನೀಡಲಾಗಿದೆ. ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ದೂರು ಕೊಡಿಸಿ ಮುರುಘ ಶರಣರ ಮೇಲೆ ಬಸವರಾಜನ್ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ವಾರ್ಡನ್ ನೀಡಿರುವ ದೂರಿನ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ವಾಮೀಜಿಗಳ ಬೆಂಬಲಕ್ಕೆ ನಿಂತ ದಲಿತ ಸಂಘಟನೆಗಳು
ಮುರುಘಾ ಮಠಾಧೀಶ ಶಿವಮೂರ್ತಿ ಶರಣರ ಬೆಂಬಲಕ್ಕೆ ಚಿತ್ರದುರ್ಗದ ದಲಿತ ಸಂಘಟನೆಗಳು ನಿಂತಿವೆ. ಅನೇಕ ವರ್ಷಗಳಿಂದ ಮಠವು ವಿವಿಧ ರೀತಿಯ ಸಮಾಜಸೇವೆಯಲ್ಲಿ ತೊಡಗಿದೆ. ಮಠ ಹಾಗೂ ಶ್ರೀಗಳ ಮೇಲೆ ಷಡ್ಯಂತ್ರ ಮಾಡಿ ಇಂತಹ ಆರೋಪ ಹೊರಿಸಲಾಗಿದೆ ಅಂತ ದಲಿತ ಸಂಘಟನೆ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮತ್ತೊಂದೆದೆ ಮಠದ ಭಕ್ತರೂ ಕೂಡ ಆರೋಪ ಅಲ್ಲಗಳೆದಿದ್ದು, ಇದು ಶ್ರೀಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಅಂತ ಹೇಳಿದ್ದಾರೆ.
ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು
“ಸ್ವಾಮೀಜಿಗಳ ವಿರುದ್ಧ ಷಡ್ಯಂತ್ರ” ಎಂದ ವಕೀಲರು
ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮಾಡುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪ ಅಪ್ಪಟ ಸುಳ್ಳು. ಪೀಠಾಧ್ಯಕ್ಷರಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದಲೇ ಈ ಪ್ರಕರಣ ಹೆಣೆಯಲಾಗಿದೆ ಎಂದು ಮುರುಘಾ ಮಠದ ಸಲಹಾ ಸಮಿತಿಯ ಸದಸ್ಯ ಹಾಗೂ ವಕೀಲ ಎನ್.ಬಿ. ವಿಶ್ವನಾಥಯ್ಯ ಹೇಳಿದ್ದಾರೆ.
“ಕಾನೂನು ಹೋರಾಟಕ್ಕೆ ನಿರ್ಧಾರ”
ಸ್ವಾಮೀಜಿಗಳ ಮೇಲೆ ಮಾಡಿರುವ ಆರೋಪಗಳ ಹಿಂದೆ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂದು ತಿಳಿದು ಬಂದಿದೆ ಅಂತ ವಕೀಲ ಎನ್.ಬಿ. ವಿಶ್ವನಾಥಯ್ಯ ಹೇಳಿದ್ದಾರೆ. ಹೆಚ್ಚಿನದಾಗಿ ದೂರಿನ ಅಂಶಗಳು ತಿಳಿದ ಬಳಿಕ ಸ್ವಾಮೀಜಿ ಮಾತನಾಡುತ್ತಾರೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ತಪ್ಪು ದೂರು ನೀಡಿದ್ದರೆ ಮುರುಘೇಶ ಅವರಿಗೆ ಬುದ್ದಿ ನೀಡಲಿ. ತಪ್ಪಿನ ಅರಿವಾಗಿ ಅವರು ಕೇಸ್ ವಾಪಸ್ ಪಡೆಯಲಿ. ಎಲ್ಲಾ ಭಕ್ತ ವೃಂದದ ಪರವಾಗಿ ದೇವರಲ್ಲಿ ಪ್ರಾರ್ಥಿಸುವೆ” ಎಂದು ಅವರು ಹೇಳಿದ್ದಾರೆ.
ಶ್ರೀಗಳ ವಿರುದ್ಧ ಕೇಳಿ ಬಂದಿದ್ದ ಗಂಭೀರ ಆರೋಪ
ಮುರುಘಾಮಠದ ವಿದ್ಯಾರ್ಥಿನಿಯರಿಬ್ಬರು ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಸಹಕಾರದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Idgah Maidana: ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗುತ್ತಾ? ಶಾಸಕ ಜಮೀರ್ಗೆ ಆರ್ ಅಶೋಕ್ ಕೌಂಟರ್
ಮಠಕ್ಕೆ ಅಧಿಕಾರಿಗಳ ಭೇಟಿ
ಇನ್ನು ಮುರುಘಾ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು, ಸಿಡಬ್ಲೂಸಿ ಸಮಿತಿ ಭೇಟಿ ನೀಡಿದೆ. ಮುರುಘಾಮಠದ ಹಾಸ್ಟೆಲ್‌ಗೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಅಲ್ಲಿರುವ ಮಕ್ಕಳ ಜೊತೆ ಸಮಾಲೋಚನೆ ನಡೆಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ