ಗ್ರಾಮದ ದೇವರ ಮೂರ್ತಿ (Goddess Idol) ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ (Dalit Family) 60 ಸಾವಿರ ರೂಪಾಯಿ ದಂಡ ಹಾಕಿದ್ದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಸೇರಿದಂತೆ ಎಂಟು ಜನರ ವಿರುದ್ಧ ಕೋಲಾರ ಜಿಲ್ಲೆಯ ಮಾಲೂರು (Maluru, Kolar) ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ (Masti Police Station) ಪ್ರಕರಣ ದಾಖಲಾಗಿದೆ. ಉಳ್ಳೇರಹಳ್ಳಿ (Ullerahalli) ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಶೋಭಾ ದಂಪತಿಯ 15 ವರ್ಷದ ಮಗ ಮೆರವಣಿಗೆ ವೇಳೆ ದೇವರ ವಿಗ್ರಹ ಮತ್ತು ಪರಿಕರಗಳನ್ನು ಮುಟ್ಟಿದ್ದಾನೆ. ದಲಿತ ಕುಟುಂಬದ ಹುಡುಗ ದೇವರ ವಿಗ್ರಹ ಮುಟ್ಟಿದ್ದರಿಂದ ಅಪವಿತ್ರವಾಗಿದೆ ಎಂದು ದಲಿತ ಕುಟುಂಬಕ್ಕೆ ದಂಡ ವಿಧಿಸಲಾಗಿತ್ತು. ಉಲ್ಲೇರಹಳ್ಳಿ ಗ್ರಾಮದಲ್ಲಿ ಭೂತಮ್ಮನ ದೇವಿಯ ದೇವಾಲಯವಿದೆ. ದೇವಾಲಯ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇಲ್ಲದಿದ್ದರೂ, ಗ್ರಾಮದ ಯಾವ ದಲಿತ ಸಮುದಾಯದ ಜನರು ದೇಗುಲಕ್ಕೆ ಹೋಗಲ್ಲ ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದೆ 15 ವರ್ಷದ ಬಾಲಕ ಭೂತಮ್ಮನ ದೇವಿಯ ಸಾಮಾನುಗಳು ಮತ್ತು ಸಿಡಿರಣ್ಣ ವಿಗ್ರಹ ಸ್ಪರ್ಶ ಮಾಡಿದ್ದಾನೆ. ಇದನ್ನು ಗಮನಿಸಿದ .ಪಂ.ಮಾಜಿ ಸದಸ್ಯ ನಾರಾಯಣಸ್ವಾಮಿ, ಜಿ.ಪಂ.ಉಪಾಧ್ಯಕ್ಷರ ಪತಿ ವೆಂಕಟೇಶಪ್ಪ ಮತ್ತು ಇತರರು ಮರುದಿನ ಬಾಲಕನ ಪೋಷಕರು ಕರೆಸಿದ್ದಾರೆ.
ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ
ನಿಮ್ಮ ಮಗ ವಿಗ್ರಹ ಮತ್ತು ಸಾಮಾನು ಮುಟ್ಟಿದ್ದರಿಂದ ದೇವಸ್ಥಾನಕ್ಕೆ ಸುಣ್ಣ ಬಣ್ಣಗೊಳಿಸಬೇಕು. ಆದ್ದರಿಂದ ಇದಕ್ಕೆ ತಗುಲುವ 60 ಸಾವಿರ ರೂ. ನಿಮ್ಮ ಕುಟುಂಬ ನೀಡಬೇಕೆಂದು ಹೇಳಿದ್ದಾರೆ. ಶೋಭಾ ಮತ್ತು ರಮೇಶ್ ದಿನಗೂಲಿ ನೌಕರರಾಗಿದ್ದು ಅಷ್ಟು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ.
ಇನ್ನು ಈ ವಿಷಯ ತಿಳಿಯುತ್ತಲೇ ಎಚ್ಚೆತ್ತ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಂ.ಸಂದೇಶ್ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ದಂಡ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನು ನಾರಾಯಣಸ್ವಾಮಿ ಮತ್ತು ವೆಂಕಟೇಶಪ್ಪ ತಳ್ಳಿ ಹಾಕಿದ್ದಾರೆ.
ಪ್ರಕರಣ ದಾಖಲು
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ನಾರಾಯಣಸ್ವಾಮಿ, ವೆಂಕಟೇಶಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಸ್ತಿ ಠಾಣೆಯ ಪೊಲೀಸ್ ನಿರೀಕ್ಷಕ ವಸಂತ್ ಹೇಳಿದ್ದಾರೆ.
ಇದನ್ನೂ ಓದಿ: Haveri: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ; ಸ್ಥಳದಲ್ಲಿ ಬಿಗುವಿನ ವಾತಾವರಣ
ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಗೆ ದಲಿತ ಮಗುವಿನ ಹೆಸರು
ಗ್ರಾಮೀಣ ಭಾಗದಲ್ಲಿರುವ (Karnataka Rural Area) ಅಸೃಶ್ಯತೆಯನ್ನು (Untouchability) ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಉದ್ದೇಶಿಸಿರುವ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ (Karnataka Government) ವಿನಯ ಸಾಮರಸ್ಯ (Vinaya Samarasya Yojana) ಎಂದು ಹೆಸರು ಇರಿಸಿದೆ ಕಳೆದ ವರ್ಷ ಅಂದ್ರೆ 2021 ಸೆಪ್ಟೆಂಬರ್ ನಲ್ಲಿ ಕೊಪ್ಪಳ ಜಿಲ್ಲೆಯ ವಿಯಾಪುರ (Miyapur, Koppal) ಗ್ರಾಮದಲ್ಲಿ ಮೂರು ವರ್ಷದ ದಲಿತ ಮಗುವೊಂದು (Dalit Boy) ಆಕಸ್ಮಿಕವಾಗಿ ದೇವಾಲಯ (Temple) ಪ್ರವೇಶ ಮಾಡಿದ್ದಕ್ಕೆ, ಗ್ರಾಮದ ಜನರು ಆ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿದ್ದರು.
ಈ ವಿಷಯ ಪತ್ರಿಕೆಗಳಲ್ಲಿ ವರದಿ ಆಗುತ್ತಿದ್ದಂತೆ ಪ್ರಕರಣ ದಾಖಲಾಗಿತ್ತು. ದಲಿತ ಕುಟುಂಬಕ್ಕೆ ಗ್ರಾಮದ ಮೇಲ್ಜಾತಿಯವರು 25 ಸಾವಿರ ರೂಪಾಯಿ ದಂಡ ಹಾಕಿದ್ದರು. ಅಂದು ದೇವಾಲಯ ಪ್ರವೇಶಿಸಿದ ಮಗುವಿನ ಹೆಸರು ವಿನಯ್. ಹಾಗಾಗಿ ರಾಜ್ಯ ಸರ್ಕಾರ ಅಸ್ಪೃಶ್ಯತೆ ತೊಡೆದು ಹಾಕಲು ಉದ್ದೇಶಿಸಿರುವ ಜಾಗೃತಿಗೆ ಆ ಮಗುವಿನ ಹೆಸರನ್ನು ಇರಿಸಲಾಗಿದೆ.
ಇದನ್ನೂ ಓದಿ: Belagavi Politics: ಬೈಲಹೊಂಗಲ ಕ್ಷೇತ್ರದಲ್ಲಿ BJP-KJP ಕಲಹ; ರಾಜ್ಯ ನಾಯಕರಿಗೆ ತಲೆನೋವು ಆದ ಸ್ಥಳೀಯ ಗುದ್ದಾಟ
ದಲಿತರ ಮನೆ ಬಾಗಿಲಿಗೆ ಹೋಗಿ ಕಟಿಂಗ್, ಶೇವಿಂಗ್ ಮಾಡುವ ಅಣ್ಣ-ತಮ್ಮಂದಿರು
ಮೈಸೂರು ಜಿಲ್ಲೆಯ ಕಪ್ಪಸೋಗೆ ಗ್ರಾಮದ ದಲಿತ ಕುಟುಂಬದ ಇಬ್ಬರು ಸಹೋದರರು ತಮ್ಮ ಸಮುದಾಯದ ಸದಸ್ಯರ ಪಾಲಿಗೆ ಹೀರೋಗಳಾಗಿದ್ದಾರೆ. ಕತ್ತರಿ ಮತ್ತು ರೇಜರ್ ಹಿಡಿಯುವ ಇವರು ಕಪ್ಪಸೋಗೆ ಮತ್ತು ಹತ್ತಿರದ ಹಳ್ಳಿಗಳಾದ ಕುರುಹುಂಡಿ, ಗೌಡರಹುಂಡಿ ಮತ್ತು ಮಾಡನಹಳ್ಳಿಯ ಪುರುಷರಿಗೆ ಹೇರ್‌ಕಟ್ ಮತ್ತು ಎಲ್ಲಾ ರೀತಿಯ ಕ್ಷೌರಿಕ ಸೇವೆಗಳನ್ನು ಒದಗಿಸುತ್ತಿದ್ದು, ಈ ಗ್ರಾಮಗಳು ದಲಿತ ಜನಸಂಖ್ಯೆಯ ದೊಡ್ಡ ಭಾಗವನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ