ದಕ್ಷಿಣ ಕನ್ನಡ: ಕೃಷಿ ಚಟುವಟಿಕೆಗೆ ಸಿದ್ಧವಾಯ್ತು ಮಿನಿ ಟಿಪ್ಪರ್; ಹಳ್ಳಿ ಯುವಕನ ಸಾಧನೆಗೆ ಮೆಚ್ಚುಗೆ

ಗಿಡ ಹಾಗೂ ಇತರ ಬೆಳೆಗಳಿರುವ ತೋಟದ ಮಧ್ಯೆ ಲಾರಿಗಳು ಸಂಚರಿಸುವುದು ಸಾಧ್ಯವಿಲ್ಲದ. ಹೀಗಾಗಿ ಈ ಟಿಪ್ಪರ್ ಲಾರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿದೆ ಎನ್ನುವುದು ಮಿನಿ ಟಿಪ್ಪರ್ ಸಿದ್ಧಗೊಳಿಸಿದ ಪುರುಷೋತ್ತಮ್ ಅಭಿಪ್ರಾಯ.

news18-kannada
Updated:September 19, 2020, 1:22 PM IST
ದಕ್ಷಿಣ ಕನ್ನಡ: ಕೃಷಿ ಚಟುವಟಿಕೆಗೆ ಸಿದ್ಧವಾಯ್ತು ಮಿನಿ ಟಿಪ್ಪರ್; ಹಳ್ಳಿ ಯುವಕನ ಸಾಧನೆಗೆ ಮೆಚ್ಚುಗೆ
ಸಣ್ಣ ಟಿಪ್ಪರ್
  • Share this:
ಸುಳ್ಯ (ಸೆಪ್ಟೆಂಬರ್ 19): ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವಂತಹ ಸಣ್ಣ ಟಿಪ್ಪರ್ ಒಂದನ್ನು ದಕ್ಷಿಣಕನ್ನಡದ ಹಳ್ಳಿಯ ಯುವಕನೋರ್ವ ತಯಾರಿಸಿ ಗಮನ ಸೆಳೆದಿದ್ದಾನೆ. ಕಡಬ ತಾಲೂಕಿನ ಸವಣೂರಿನ ಬಂಬಿಲ ನಿವಾಸಿ ಪುರುಷೋತ್ತಮ್ ಈ ಸಣ್ಣ ಟಿಪ್ಪರ್ ನ ಆವಿಷ್ಕಾರ ಮಾಡಿದ್ದು, ಸ್ಕೂಟರ್ ಒಂದನ್ನು ಮಾರ್ಪಾಡು ಮಾಡಿ ಈ ಟಿಪ್ಪರ್ ಸಿದ್ಧ ಮಾಡಲಾಗಿದೆ. ತೋಟದ ಮಧ್ಯೆ ಕಿತ್ತ ಕಳೆಗಳನ್ನು ಸ್ಥಳಾಂತರಿಸಲು, ತೋಟಕ್ಕೆ ಮಣ್ಣು ಹಾಕಲು, ಅಡಿಕೆ ಲೋಡ್ ಮಾಡಲು ಹೀಗೆ ವಿವಿಧ ಕೆಲಸಗಳಿಗೆ ಈ ಟಿಪ್ಪರ್ ಅನ್ನು ಬಳಸಬಹುದಾಗಿದೆ.

ಗಿಡ ಹಾಗೂ ಇತರ ಬೆಳೆಗಳಿರುವ ತೋಟದ ಮಧ್ಯೆ ಲಾರಿಗಳು ಸಂಚರಿಸುವುದು ಸಾಧ್ಯವಿಲ್ಲದ. ಹೀಗಾಗಿ ಈ ಟಿಪ್ಪರ್ ಲಾರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿದೆ ಎನ್ನುವುದು ಮಿನಿ ಟಿಪ್ಪರ್ ಸಿದ್ಧಗೊಳಿಸಿದ ಪುರುಷೋತ್ತಮ್ ಅಭಿಪ್ರಾಯ. 130 ಸಿಸಿ ಇಂಜಿನ್ ಹೊಂದಿರುವ ಸ್ಕೂಟರ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡಿರುವ ಇವರು ಸ್ಕೂಟರ್​​ಗೆ ಹಲವು ಎಕ್ಸ್ಟ್ರಾ ಫಿಟ್ಟಿಂಗ್ ಕೂಡಾ ಮಾಡಿಕೊಂಡಿದ್ದಾರೆ. ಟಿಪ್ಪರ್ ಹಿಂದೆ ಮುಂದೆ ಸಲೀಸಾಗಿ ಸಾಗುವಂತೆ ಮಾಡಲು ಗೇರ್ ಬಾಕ್ಸ್ ಅಳವಡಿಸಲಾಗಿದೆ. ಅಲ್ಲದೆ ಇದಕ್ಕೆ ರಿವರ್ಸ್ ಗೇರ್ ಅನ್ನೂ ಫಿಟ್ ಮಾಡಲಾಗಿದ್ದ, 3 ಫೀಟ್ ಅಗಲದ ಬಾಡಿಯನ್ನೂ ನಿರ್ಮಿಸಲಾಗಿದ್ದು , ಎರಡು ಕ್ವಿಂಟಾಲ್ ತೂಕ ಹೊರುವ ಸಾಮರ್ಥ್ಯವನ್ನೂ ಹೊಂದಿದೆ.ಕಡಬ ತಾಲೂಕಿನ ಸವಣೂರಿನ ಬಂಬಿಲ ನಿವಾಸಿಗಳಾದ ಬಾಲು ಶೆಟ್ಟಿ ಹಾಗೂ ಯಮುನಾ ಪುರುಷೋತ್ತಮ್ ನ ಈ ಪ್ರಯತ್ನಕ್ಕೆ ನಿರಂತರ ಪ್ರೋತ್ಸಾಹವನ್ನೂ ನೀಡಿದ್ದಾರೆ. ನಿಂತಿಕಲ್ಲು ಐಟಿಐ ನಲ್ಲಿ ಕಲಿತಿರುವ ಪುರುಷೋತ್ತಮ್ ಇದೀಗ ಸದ್ಯಕ್ಕೆ ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಿಕೊಂಡಿದ್ದಾರೆ. 50 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಟಿಪ್ಪರ್ ಸಿದ್ಧಗೊಂಡಿದ್ದು, ಸಣ್ಣ ಕೃಷಿಕರೂ ಕೂಡಾ ಇದನ್ನು ತಮ್ಮ ಕೃಷಿ ತೋಟದಲ್ಲಿ ಬಳಸಿಕೊಳ್ಳಬಹುದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ಕಿಲ್ ಇಂಡಿಯಾ ಹಾಗೂ ಆತ್ಮನಿರ್ಭರ್ ಕರೆಗೆ ಹಳ್ಳಿಗಳಲ್ಲೂ ಇದೀಗ ಸ್ಪಂದನೆ ದೊರೆಯಲಾರಂಭಿಸಿದೆ.

ಯುವಕರು ಈ ರೀತಿಯ ಪ್ರಯೋಗಗಳನ್ನು ಮಾಡುವ ಮೂಲಕ ದೇಶದಲ್ಲಿ ಹೊಸ ಬದಲಾವಣೆಗಳನ್ನು ತರುವತ್ತ ಪ್ರಯತ್ನಿಸಬೇಕು ಎಂದು ಯುವಕನ ಈ ಸಾಧನೆಯ ಬಗ್ಗೆ ಸುಳ್ಯ ಶಾಸಕ ಅಂಗಾರ ಪ್ರತಿಕ್ರಿಯಿಸಿದ್ದಾರೆ.
Published by: Rajesh Duggumane
First published: September 19, 2020, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading