Dakshina Kannada ಜಿಲ್ಲೆಗೆ ಸುರಂಗ ನೀರಾವರಿ ಪರಿಚಯಿಸಿದ ಕುಟುಂಬ ಯಾವುದು ಗೊತ್ತೆ?  

ಸುರಂಗದ ನೀರಾವರಿಯನ್ನು ಬಳಸಿ ಕೃಷಿ(Agriculture)ಯನ್ನು ತೊಡಗಿಸಿಕೊಂಡ ಅಪರೂಪದ ಕುಟುಂಬಗಳಲ್ಲಿ ಈ ಕುಟುಂಬವೂ ಒಂದಾಗಿದೆ. ಒಂದು ವಿಧದಲ್ಲಿ ಜಿಲ್ಲೆಗೆ ಸುರಂಗದ ಮೂಲಕ  ನೀರಾವರಿ (Irrigation) ಪಡೆಯುವ  ತಂತ್ರಜ್ಞಾನವನ್ನು ತೊರಿಸಿಕೊಟ್ಟ ಕೀರ್ತಿಗೂ ಈ ಕುಟುಂಬ ಪಾತ್ರವಾಗಿದೆ.

ಸುರಂಗ ನೀರಾವರಿ

ಸುರಂಗ ನೀರಾವರಿ

  • Share this:
ಕೃಷಿಗೆ ನೀರಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳುವವರ ಸಾಲಿಗೆ ದಕ್ಷಿಣ ಕನ್ನಡ (Dakshina Kannada) ಬಂಟ್ವಾಳ ತಾಲೂಕಿನ ಮಾಣಿ ಮೂಲೆಯ  ಕುಟುಂಬ ಮಾತ್ರ  ಸೇರಿಕೊಳ್ಳುವುದಿಲ್ಲ. ಸುರಂಗದ ನೀರಾವರಿಯನ್ನು ಬಳಸಿ ಕೃಷಿ(Agriculture)ಯನ್ನು ತೊಡಗಿಸಿಕೊಂಡ ಅಪರೂಪದ ಕುಟುಂಬಗಳಲ್ಲಿ ಈ ಕುಟುಂಬವೂ ಒಂದಾಗಿದೆ. ಒಂದು ವಿಧದಲ್ಲಿ ಜಿಲ್ಲೆಗೆ ಸುರಂಗದ ಮೂಲಕ  ನೀರಾವರಿ (Irrigation) ಪಡೆಯುವ  ತಂತ್ರಜ್ಞಾನವನ್ನು ತೊರಿಸಿಕೊಟ್ಟ ಕೀರ್ತಿಗೂ ಈ ಕುಟುಂಬ ಪಾತ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಅಮೈ ನಿವಾಸಿ ಮಹಾಲಿಂಗ ನಾಯ್ಕ (Amai Mahalinga Naika) ಅವರಿಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (Padmashri Award) ಆಯ್ಕೆಯಾದ ಬಳಿಕ ಸುರಂಗದ ಮೂಲಕ ನೀರು ಪಡೆಯುವ ವಿಚಾರ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಸುರಂಗ ನೀರಾವರಿ ಬಗ್ಗೆ ಮಾಹಿತಿ ಇಲ್ಲದ ಜನ ಮಹಾಲಿಂಗ ನಾಯ್ಕ ಅವರಿಗೆ ಪ್ರಶಸ್ತಿ ಲಭಿಸಿದ ಬಳಿಕ ಸುರಂಗದಿಂದ ನೀರು ಪಡೆಯುವುದು ಹೇಗೆ ಎನ್ನುವ ವಿಚಾರವನ್ನೂ ಮನವರಿಕೆ ಮಾಡಿಕೊಂಡಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಸುರಂಗದ ನೀರಿನ ಮೂಲಕವೇ ಸಮೃದ್ಧ ಕೃಷಿ ಮಾಡುತ್ತಿರುವ ಕುಟುಂಬವೊಂದು‌ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಮೂಲೆ ಎಂಬಲ್ಲಿದೆ.

ಇದನ್ನೂ ಓದಿ:  BS Yediyurappa: ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಪೊಲೀಸರು ಏನಂತಾರೆ?

ವಿಟ್ಲ (vitla) ಸಮೀಪದ ಮಾಣಿ ಮೂಲೆಯ ಗೋವಿಂದ ಭಟ್ ಕೃಷಿ ತೋಟ  ಹಚ್ಚ ಹಸಿರಿನಿಂದ ಕಂಗೊಳಿಸಲು ಇದೇ ಸುರಂಗದ ನೀರೇ ಕಾರಣವಾಗಿದೆ.  ಗುಡ್ಡದ ತಪ್ಪಲಿನ ಬರಡು ಭೂಮಿಯಲ್ಲಿ ಸಮೃದ್ಧ ಕೃಷಿ ಮಾಡುತ್ತಿರುವ ಈ ಕುಟುಂಬದ  ಜಲಮೂಲವನ್ನು ಹುಡುಕಿದಾಗ ಕೃಷಿ ತೋಟದಲ್ಲಿ ಯಾವುದೇ ತೊರೆ, ಬಾವಿಗಳು ಕಂಡು ಬರುವುದಿಲ್ಲ. ಆದರೂ ಇವರಿಗೆ ವರ್ಷಂಪೂರ್ತಿ ಸಾಕಷ್ಟು ಪ್ರಮಾಣದ ನೀರಿನ ಶೇಖರಣೆಯಿದೆ.

ದಕ್ಷಿಣ ಕೇರಳದ ಕೆಲವರಿಂದ ತಂತ್ರಜ್ಞಾನ

ಹೌದು ಇದಕ್ಕೆ ಕಾರಣ ಇವರು ಕಂಡುಕೊಂಡ ಸುರಂಗ ನೀರಾವರಿ ತಂತ್ರಜ್ಞಾನ. ದಕ್ಷಿಣ ಕೇರಳದ ಕೆಲವರಿಂದ ಈ ತಂತ್ರಜ್ಞಾನವನ್ನು ಅರಿತುಕೊಂಡ ಈ ಕುಟುಂಬ ತನ್ನ ಕೃಷಿಗೆ ನೀರಾವರಿ ಒದಗಿಸುವ ನಿಟ್ಟಿನಿಂದ ತೋಟದ ಸುತ್ತಲೂ ಇರುವ ಗುಡ್ಡಕ್ಕೆ ಸುಮಾರು 20 ಕ್ಕೂ ಮಿಕ್ಕಿ ಸುರಂಗಗಳನ್ನು ಕೊರೆಯುವುದರ ಮೂಲಕ ನೀರಿನ ಮೂಲ ಕಂಡುಕೊಂಡು ಆ ಮೂಲಕವೇ ತಮ್ಮ ಎಲ್ಲಾ ನೀರಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಅಂದ ಹಾಗೆ ಇವರು ನೀರನ್ನು ತೋಟಕ್ಕೆ ಹರಿಸಲು ಯಾವತ್ತೂ ವಿದ್ಯುತ್, ಡೀಸೆಲ್ ಸೇರಿದಂತೆ ಇತರೆ ಯಾವುದೇ ಪಂಪ್ ಸೆಟ್ಟನ್ನು ಬಳಸುತ್ತಿಲ್ಲ. ಕೇವಲ ನೀರಿನ ಗುರುತ್ವಾಕರ್ಷಣೆಯ ಬಲದಿಂದಲೇ ನೀರನ್ನು ಹರಿಯಬಿಡುವ ಇವರು ಸೂಕ್ಷ್ಮ ನೀರಾವರಿಯ ಮೂಲಕ ತನ್ನ ಕೃಷಿಯನ್ನು ಹಸಿರಾಗಿಸಿದ್ದಾರೆ.

ಇದನ್ನೂ ಓದಿ:  ಎತ್ತು & ಬಂಡಿಗಳ ಅಪಘಾತ ತಡೆಯಲು Kalaburagi ಸಂಚಾರಿ ಪೊಲೀಸರ ಸೂಪರ್ ಪ್ಲಾನ್

ನೀರು ಸಂಗ್ರಹಿಸುವ ಸುರಂಗ ತಂತ್ರಜ್ಞಾನ

ತನ್ನ ಸುರಂಗದ ಮೂಲಕ ನೀರು ಹರಿಸುವ ತಂತ್ರಜ್ಞಾನವನ್ನು ಕೇವಲ ತನ್ನಲ್ಲಿ ಮಾತ್ರ ಉಳಿಸದೆ ಹಲವರಿಗೆ ಈ ಕುರಿತು ಮಾರ್ಗದರ್ಶನ ನೀಡಿದ ಕೀರ್ತಿಯೂ ಈ ಕುಟಂಬಕ್ಕೆ ಸಲ್ಲುತ್ತದೆ. ಕಡಿಮೆ ಬಂಡವಾಳದ ಮೂಲಕ ನೀರು ಸಂಗ್ರಹಿಸುವ ಸುರಂಗ ತಂತ್ರಜ್ಞಾನ ಜಿಲ್ಲೆಗೆ ಪರಿಚಯಿಸಿದ ಈ ಕುಟುಂಬದ ಶ್ರಮಕ್ಕೆ ಹಲವು ಪ್ರಶಸ್ತಿ, ಸಮ್ಮಾನಗಳೂ ಲಭಿಸಿದೆ.

ಗೋವಿಂದ ಭಟ್ ಸುರಂಗಳ ಅಧ್ಯಯಕ್ಕೆ ವಿದೇಶೀ ಸಂಶೋಧನಾ ವಿಧ್ಯಾರ್ಥಿಗಳೂ ಬಂದು ಮಾಹಿತಿ ಸಂಗ್ರಹಿಸಿದ್ದು, ವಿವಿಧ ಪ್ರಕಾರದ ನೀರಿನ ಮೂಲಗಳನ್ನು ಪತ್ತೆ ಹಚ್ಚಿರುವ ಕುಟುಂಬವೂ ಇದಾಗಿದೆ‌.

ನೀರಿಲ್ಲ ಎಂದು ಕೃಷಿಯನ್ನೇ ತ್ಯಜಿಸಿ ಬಾಳುವವರ ಮಧ್ಯೆ ಅಪರೂಪದ ಇಂಥಹ ಕುಟುಂಬಗಳೂ ಕಂಡು ಬರುತ್ತಿದ್ದು, ಪರಿಶ್ರಮಕ್ಕೆ ಫಲವಿದೆ ಎನ್ನುವುದನ್ನು ಗೋವಿಂದ ಭಟ್ ಕುಟುಂಬ ತೋರಿಸಿ ಕೊಟ್ಟಿದ್ದಾರೆ.
Published by:Mahmadrafik K
First published: