Restrictions Removed: ದಕ್ಷಿಣ ಕನ್ನಡದಲ್ಲಿ ವ್ಯಾಪಾರ ನಿರ್ಬಂಧ ತೆರವು, 144 ಸೆಕ್ಷನ್‌ ಮುಂದುವರಿಕೆ; ಮತ್ತಿಬ್ಬರು ಆರೋಪಿಗಳ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಇದೇ 8 ರಿಂದ ಜಾರಿಯಾಗುವಂತೆ ಹಿಂಪಡೆಯಲಾಗಿದೆ. ಹಾಗಾಗಿ ಮದ್ಯ ಮಾರಾಟ ಮಳಿಗೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಂಗಡಿಗಳು ಮೊದಲಿನಂತೆಯೇ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಹಜ ಸ್ಥಿತಿಯತ್ತ ದಕ್ಷಿಣ ಕನ್ನಡ

ಸಹಜ ಸ್ಥಿತಿಯತ್ತ ದಕ್ಷಿಣ ಕನ್ನಡ

  • Share this:
ಮಂಗಳೂರು (ಆ.07): 2 ಕೊಲೆಗಳಿಂದ ಬೆಚ್ಚಿಬಿದ್ದಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ವ್ಯಾಪಾರ ವಹಿವಾಟು ಹಾಗೂ ಜನರ ಓಡಾಟಕ್ಕೆ ಸಂಬಂಧಿಸಿದಂತ ಜಿಲ್ಲಾಡಳಿತ (District Administration) ಕೆಲವು ನಿರ್ಬಂಧ ಜಾರಿಗೊಳಿಸಿತ್ತು. ಈ ನಿರ್ಬಂಧಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೆ  ಜಿಲ್ಲೆಯಾದ್ಯಂತ ಸೆಕ್ಷನ್‌ 144 (Section 144 ) ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ಆಗಸ್ಟ್​ 14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ (Rajendra K.V) ತಿಳಿಸಿದ್ದಾರೆ.

ಎಂದಿನಂತೆ ವ್ಯಾಪಾರ ವಹಿವಾಟಿಗೆ ಅನುಮತಿ

ಈ ಬಗ್ಗೆ ಮಾತಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲೆಯಲ್ಲಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ತಿಳಿಯಾಗಿದ್ದು, ಶಾಂತಿ ಸುವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಗಳಾಗಿವೆ. ವ್ಯಾಪಾರ ವಹಿವಾಟುಗಳಿಗೆ, ಜನರ ಓಡಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಇದೇ 8 ರಿಂದ ಜಾರಿಯಾಗುವಂತೆ ಹಿಂಪಡೆಯಲಾಗಿದೆ. ಹಾಗಾಗಿ ಮದ್ಯ ಮಾರಾಟ ಮಳಿಗೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಂಗಡಿಗಳು ಇನ್ನು ಮೊದಲಿನಂತೆಯೇ ವ್ಯಾಪಾರ ವಹಿವಾಟು ನಡೆಸಬಹುದು ಎಂದು ತಿಳಿಸಿದ್ದಾರೆ

vishwa hindu Parishad And bhajarangadal workers protest after murder of Praveen nettaru murder rsk mrq
ಪ್ರತಿಭಟನೆ


ಇದನ್ನೂ ಓದಿ: Praveen Nettar Murder: ಹಂತಕರಿಗೆ ಟಾರ್ಗೆಟ್ ಆಗಿದ್ದೇಕೆ ಪ್ರವೀಣ್ ನೆಟ್ಟಾರ್? ಬಿಜೆಪಿ ಕಾರ್ಯಕರ್ತನ ಹತ್ಯೆ ಹೇಗಾಯ್ತು?

ಆ.14ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ

ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿ ಜಾರಿಗೊಳಿಸಿರುವ ನಿಷೇಧಾಜ್ಞೆ ಆ.14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದಕ್ಕೆ ಅವಕಾಶ ಇಲ್ಲ. ಶಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಅನವಶ್ಯಕವಾಗಿ ರಾತ್ರಿ ಸಂಚಾರ ಬೇಡ

ಸಾರ್ವಜನಿಕರ ಓಡಾಟಕ್ಕೆ ಸಂಬಂಧಿಸಿದಂತೆ ವಿಧಿಸಲಾದ ನಿರ್ಬಂಧಗಳು ತೆರವು ಮಾಡಲಾಗಿವೆ. ಆದರೂ ಜನರು ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ. ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಮುಂದುವರಿಸಿ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ.

ಪ್ರವೀಣ್​ ಹತ್ಯೆ ಪ್ರಕರಣ; ಮತ್ತಿಬ್ಬರು ಅರೆಸ್ಟ್​

ಬಿಜೆಪಿಯ ಯುವ ಮೋರ್ಚಾದ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯ ತಾಲ್ಲೂಕಿನ ನಾವೂರು ನಿವಾಸಿ ಅಬೀದ್‌ (22) ಹಾಗೂ ಬೆಳ್ಳಾರೆ ಸಮೀಪದ ಗೌರಿಹೊಳೆ ನಿವಾಸಿ ನೌಫಾಲ್‌ (22) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 6 ಮಂದಿಯ ಬಂಧನವಾದಂತಾಗಿದೆ.

ಕೊಲೆ ಸಂಚು ರೂಪಿಸಿದ್ದ ಆರೋಪಿಗಳು

ಆರೋಪಿಗಳು ಪ್ರವೀಣ್‌ ನೆಟ್ಟಾರು ಕೊಲೆ ಸಂಚು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠ ಹೃಷಿಕೇಶ್‌ ಸೋನಾವಣೆ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮಹತ್ತರ ಸುಳಿವುಗಳು ಸಿಕ್ಕಿವೆ. ಹತ್ಯೆ ಮಾಡಿದವರು ಯಾರು ಎಂಬುದು ಗೊತ್ತಾಗಿದೆ. ಅವರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Murder Case: ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್​ ಸಹೋದರನ ಸ್ಫೋಟಕ ಹೇಳಿಕೆ

ಈವರೆಗೆ ಒಟ್ಟು 6 ಮಂದಿಯ ಬಂಧನ

ಪ್ರವೀಣ್‌ ನೆಟ್ಟಾರು ಅವರನ್ನು ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ಹತ್ಯೆ ಮಾಡಲಾಗಿತ್ತು. ಆರೋಪಿಗಳಾದ ಜಾಕೀರ್‌ ಹಾಗೂ ಶಫೀಕ್‌ ಅವರನ್ನು ಜುಲೈ 28ರಂದು ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ಆರೋಪಿಗಳಾದ ಬೆಳ್ಳಾರೆ ಪಳ್ಳಿಮಜಲುವಿನ ಸದ್ದಾಂ ಹಾಗೂ ಹ್ಯಾರಿಸ್‌ನನ್ನು ಆ.2ರಂದು ಬಂಧಿಸಿದ್ದರು. ಆರೋಪಿಗಳ ವಿರುದ್ಧ 1967ರ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಹಾಗೂ ಸೆಕ್ಷನ್‌ 18ರ ಅಡಿ ಎಫ್‌ಐಆರ್‌ ದಾಖಲಿಸಿದ್ದರು.
Published by:Pavana HS
First published: