• Home
  • »
  • News
  • »
  • state
  • »
  • ಆನ್​ಲೈನ್​ ಶಿಕ್ಷಣದಿಂದ ಕಷ್ಟವಾದ ಕಲಿಕೆ; ಪುತ್ತೂರಿನಲ್ಲಿ SSLC ವಿದ್ಯಾರ್ಥಿಗಳಿಗಾಗಿ ಪಾಸಿಂಗ್ ಪ್ಯಾಕೇಜ್..!

ಆನ್​ಲೈನ್​ ಶಿಕ್ಷಣದಿಂದ ಕಷ್ಟವಾದ ಕಲಿಕೆ; ಪುತ್ತೂರಿನಲ್ಲಿ SSLC ವಿದ್ಯಾರ್ಥಿಗಳಿಗಾಗಿ ಪಾಸಿಂಗ್ ಪ್ಯಾಕೇಜ್..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಎಲ್ಲಾ ವಿಷಯ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದ್ದು, ಆಡಳಿತಾತ್ಮಕವಾಗಿಯೂ 3 ದಿನಗಳ ನಾಯಕತ್ವ ತರಬೇತಿ ನೀಡಲಾಗಿದೆ. ಹೋಬಳಿ ಮಟ್ಟದಲ್ಲಿ ಗುರುಸ್ಪಂದನ ನಡೆಸಲಾಗಿದ್ದು, ಬಿಇಒ ಮತ್ತು ಇಲಾಖಾ ಅಧಿಕಾರಿಗಳು ಮನೆ ಮನೆ ಭೇಟಿ ನಡೆಸಿದ್ದಾರೆ. ಬಿಇಒ ಒಬ್ಬರೇ 250 ಮನೆಗಳ ಭೇಟಿ ಮುಗಿಸಿದ್ದಾರೆ.

ಮುಂದೆ ಓದಿ ...
  • Share this:

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಾಖಲೆ ಮಾಡುವ ಉದ್ದೇಶದಿಂದ 5 ವರ್ಷಗಳ ಹಿಂದೆ ಮಿಶನ್ 90 ಪ್ಲಸ್ ಜಾರಿಗೆ ತಂದು ರಾಜ್ಯದಲ್ಲೇ ಹೊಸತನ ಮೂಡಿಸಿದ್ದ ಪುತ್ತೂರು ತಾಲೂಕಿನಲ್ಲಿ ಈ ಬಾರಿ ಮತ್ತೊಂದು ವಿನೂತನ ಅಭಿಯಾನ ನಡೆಯುತ್ತಿದೆ.  ಉತ್ತೀರ್ಣವೇ ಕಷ್ಟ ಎನ್ನುವ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಕೂಡ ಯಾವುದೇ ಭಯವಿಲ್ಲದೆ ಪಾಸ್ ಆಗಬೇಕೆನ್ನುವ ಕಾರಣಕ್ಕೆ ಪಾಸಿಂಗ್ ಪ್ಯಾಕೇಜ್ ರೂಪಿಸಲಾಗಿದ್ದು, ಇದರಡಿಯಲ್ಲಿ ಅನೇಕ ಬಗೆಯ ಆಂದೋಲನ ನಡೆಸಲಾಗುತ್ತಿದೆ.


24 ಸರಕಾರಿ ಪ್ರೌಢಶಾಲೆಗಳು, 22 ಅನುದಾನಿತ ಪ್ರೌಢಶಾಲೆಗಳು ಮತ್ತು 34 ಅನುದಾನ ರಹಿತ ಪ್ರೌಢಶಾಲೆಗಳು ಸೇರಿದಂತೆ 80 ಪ್ರೌಢಶಾಲೆಗಳಿಂದ 5078 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದಾರೆ. ಪರೀಕ್ಷೆಗೆ 60 ದಿನಗಳಿದ್ದು, ಸಿಲೆಬಸ್ ಮುಕ್ತಾಯಗೊಂಡು, ಪುನರಾವರ್ತನೆ ಮಾಡಲಾಗುತ್ತಿದೆ. ನಿರೂಪಣಾತ್ಮಕ ಪರೀಕ್ಷೆ (ಎಫ್‍ಎ-2) ಮುಗಿದು ತಾಲೂಕು ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ, ಮಂಡಳಿ ನಡೆಸುವ ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ಪರೀಕ್ಷಾರ್ಥಿಗಳು ಸಜ್ಜಾಗಿದ್ದಾರೆ.


ಈ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪಾಸಿಂಗ್ ಪ್ಯಾಕೇಜ್ ರೂಪಿಸಲಾಗಿದೆ. 35 ಅಂಕ ಕೂಡ ಪಡೆಯಲು ಕಷ್ಟವೆಂಬ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಿ ಅವರಿಗಾಗಿಯೇ ಪಾಸಿಂಗ್ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಅತ್ಯಂತ ನಿಖರ ಪ್ರಶ್ನೆ ಮತ್ತು ಉತ್ತರಗಳನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಲಾಗಿದೆ. ಈ ಪ್ರಶ್ನಾ ಕೋಟಿಗೆ ಉತ್ತೇಜನ ಎಂಬ ಹೆಸರಿಡಲಾಗಿದೆ.


ಇದು ಅನಿವಾರ್ಯವಾಗಿ ಕೈಗೊಂಡ ಕ್ರಮ. ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಫ್‍ಲೈನ್ ತರಗತಿ ಆಲಿಸಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದ ಕಾರಣ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತಷ್ಟು ಹೊಡೆತ ಬಿದ್ದಿದೆ. ಈ ಪರಿಸ್ಥಿತಿಯಿಂದ ಪಾರಾಗಿ ಅಂಥವರು ಕೂಡ ಉತ್ತೀರ್ಣರಾಗಲೇಬೇಕೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.


ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.15ಕ್ಕೆ ಏರಿಕೆಯಾಗಿದೆ; ಆಕ್ಸಿಜನ್-ಬೆಡ್ ಸಮಸ್ಯೆ ಇಲ್ಲ; ಸಚಿವ ಜಗದೀಶ್​ ಶೆಟ್ಟರ್​


ಎಲ್ಲಾ ವಿಷಯ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದ್ದು, ಆಡಳಿತಾತ್ಮಕವಾಗಿಯೂ 3 ದಿನಗಳ ನಾಯಕತ್ವ ತರಬೇತಿ ನೀಡಲಾಗಿದೆ. ಹೋಬಳಿ ಮಟ್ಟದಲ್ಲಿ ಗುರುಸ್ಪಂದನ ನಡೆಸಲಾಗಿದ್ದು, ಬಿಇಒ ಮತ್ತು ಇಲಾಖಾ ಅಧಿಕಾರಿಗಳು ಮನೆ ಮನೆ ಭೇಟಿ ನಡೆಸಿದ್ದಾರೆ. ಬಿಇಒ ಒಬ್ಬರೇ 250 ಮನೆಗಳ ಭೇಟಿ ಮುಗಿಸಿದ್ದಾರೆ.


ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚನೆಯಂತೆ ನಾನಾ ಇಲಾಖೆಗಳ ಅಧಿಕಾರಿಗಳು ಆಯ್ದ ಶಾಲೆಗಳಿಗೆ ಭೇಟಿ ನೀಡಿ ಉತ್ತೇಜನ ನೀಡಿದ್ದಾರೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗುವ ಉದ್ದೇಶದಿಂದ ಉತ್ತೇಜನ ಮಾಲಿಕೆಯಲ್ಲಿ ಇವರಿಗೂ ಪ್ರಶ್ನಾ ಕೋಟಿ ಮುದ್ರಿಸಿ ನೀಡಲಾಗಿದೆ.


ರೇಡಿಯೋ ಮೂಲಕ ಫೋನ್ ಇನ್ ಕಾರ್ಯಕ್ರಮ, ಪೋಷಕರ ಸಭೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ ನಡೆಸಲಾಗಿದ್ದು, ಪರೀಕ್ಷಾ ಜಾಗೃತಿ ಕುರಿತಾದ ವಿಶೇಷ ಸಂಚಿಕೆ ರೂಪಿಸಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ.


ಪರೀಕ್ಷೆಯ ವಿಚಾರದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಹುಟ್ಟಿಸಬೇಕೆಂಬ ನಿಟ್ಟಿನಲ್ಲಿ ನಾನು ಖುದ್ದಾಗಿ ಎಲ್ಲ 5078 ವಿದ್ಯಾರ್ಥಿಗಳಿಗೂ ವೈಯಕ್ತಿಕ ಪತ್ರ ಬರೆದಿದ್ದೇನೆ. ಇದನ್ನು ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಮುಟ್ಟಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾಹಿತಿ ನೀಡಿದ್ದಾರೆ.

Published by:Latha CG
First published: