• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಅಣ್ಣನ ಮಗಳ ಮೇಲೆ ತಮ್ಮನ ಕೆಟ್ಟ ದೃಷ್ಟಿ: ಚಿಕ್ಕಪ್ಪನ ಅಟ್ಟಹಾಸಕ್ಕೆ ಗರ್ಭಿಣಿಯಾದ ಮುಗ್ಧೆ

Crime News: ಅಣ್ಣನ ಮಗಳ ಮೇಲೆ ತಮ್ಮನ ಕೆಟ್ಟ ದೃಷ್ಟಿ: ಚಿಕ್ಕಪ್ಪನ ಅಟ್ಟಹಾಸಕ್ಕೆ ಗರ್ಭಿಣಿಯಾದ ಮುಗ್ಧೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Crime News:ವಿಚಾರಣೆ ವೇಳೆ ಸಂತ್ರಸ್ತೆ ಫೆಬ್ರವರಿ ತಿಂಗಳ ಒಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆರೋಪಿ ಚಿಕ್ಕಪ್ಪ ಡ್ರಾಯಿಂಗ್ ರೂಮಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ತಿಳಿಸಿದ್ದಾಳೆ. ಆರೋಪಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು. ಯಾರಿಗಾದರೂ ತಿಳಿಸಿದರೆ ಮನೆಯಿಂದ ಹೊರ ಹಾಕುತ್ತಿವುದಾಗಿ ಹೆಸರಿಸಿದ್ದರು ಎಂದಿದ್ದರು ಎನ್ನಲಾಗಿದೆ.

ಮುಂದೆ ಓದಿ ...
  • Share this:

ಮಂಗಳೂರು(:  ತನ್ನ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ (Rape) ಗರ್ಭಿಣಿಯಾಗಿಸಿದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. TOI ವರದಿಯ ಪ್ರಕಾರ, ಸಂತ್ರಸ್ತೆ (Victim) ಒಂಬತ್ತನೇ ತರಗತಿಯ ನಂತರ ಶಾಲೆ ಬಿಟ್ಟು ಮನೆಯಲ್ಲಿದ್ದಳು. ಅಲ್ಲದೇ ಆಕೆ ಕಳೆದ ಮೂರು ವರ್ಷಗಳಿಂದ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಾಳೆ ಎಂದು ಸ್ಥಳೀಯ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆಯೊಬ್ಬರು ಗ್ರಾಮಕ್ಕೆ ಭೇಟಿ ನೀಡಿದಾಗ ಸಂತ್ರಸ್ತೆಯ ಹೊಟ್ಟೆ ಉಬ್ಬಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕುಟುಂಬದೊಳಗಿನ ಲೈಂಗಿಕ ದೌರ್ಜನ್ಯದ ಘಟನೆ ಮುನ್ನೆಲೆಗೆ ಬಂದಿದೆ.


ವಿಚಾರಣೆ ವೇಳೆ ಸಂತ್ರಸ್ತೆ ಫೆಬ್ರವರಿ ತಿಂಗಳ ಒಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆರೋಪಿ ಚಿಕ್ಕಪ್ಪ ಡ್ರಾಯಿಂಗ್ ರೂಮಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ತಿಳಿಸಿದ್ದಾಳೆ. ಆರೋಪಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು. ಯಾರಿಗಾದರೂ ತಿಳಿಸಿದರೆ ಮನೆಯಿಂದ ಹೊರ ಹಾಕುತ್ತಿವುದಾಗಿ ಹೆಸರಿಸಿದ್ದರು ಎಂದಿದ್ದರು ಎನ್ನಲಾಗಿದೆ. ಚಿಕ್ಕಪ್ಪನಿಗೆ ಹೆದರಿ ಸಂತ್ರಸ್ತೆ ಯಾರಿಗೂ ಏನನ್ನೂ ಹೇಳಲಿಲ್ಲ. ಸಂತ್ರಸ್ತೆಯ ಪ್ರಕಾರ, ಆರೋಪಿ ಆಕೆಯ ಮೇಲೆ ಕನಿಷ್ಠ ಐದು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.


ಇದನ್ನು ಓದಿ: ಗಂಡ ಇದ್ರೂ `ಆ’ ನಟನ ಜೊತೆ ನಮಿತಾ ಖುಲ್ಲಂ ಖುಲ್ಲಾ? ಮ್ಯಾಟರ್​ ತಿಳಿದು ರಾಂಗ್​ ಆದ ಪತಿ!


ಸಂತ್ರಸ್ತೆಯ ಹೇಳಿಕೆಯ ನಂತರ, ಆಶಾ ಕಾರ್ಯಕರ್ತೆ ಬಾಲಕಿಯ ಗರ್ಭಧಾರಣೆಯ ಪರೀಕ್ಷೆಯನ್ನು ನಡೆಸಿದಾಗ ಅವಳು ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಆಶಾ ಕಾರ್ಯಕರ್ತೆಯು ಪೊಲೀಸರಿಗೆ ನೀಡಿದ ಮಾಹಿತಿಯ ನಂತರ, ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ನಿಬಂಧನೆಗಳು ಮತ್ತು ಐಪಿಸಿ ಸೆಕ್ಷನ್ 376 (2) (ಎಫ್), 376 (2) (ಎನ್), 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಚಾನ್ಸ್​ ಕೊಡಿಸುವ ಆಸೆ ತೋರಿಸಿ ನಟಿ ಮೇಲೆ ರೇಪ್​, ಸ್ಯಾಂಡಲ್​ವುಡ್​ ನಟ ಕಮ್​ ನಿರ್ಮಾಪಕ ಅಂದರ್​!


ನಟ, ನಿರ್ಮಾಪಕ ಹರ್ಷವರ್ದನ್ ಟಿ ಜಿ ಅಲಿಯಾಸ್ ವಿಜಯಭಾರ್ಗವ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಿನಿಮಾಗಳಲ್ಲಿ ಸಹನಟಿಯಾಗಿ ಪಾತ್ರಗಳನ್ನು ಮಾಡುತ್ತಿದ್ದ ನಟಿ ಈತನ ವಿರುದ್ಧ ದೂರು ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಆಕೆಗೆ ಚಾನ್ಸ್​  ನೀಡುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.  ಜೊತೆಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ನಟಿ ಕಣ್ಣೀರು ಹಾಕಿದ್ದಾರೆ. ನೀನೆ ನನ್ನ ಹೆಂಡತಿ ಎಂದು ಮೋಸ ಮಾಡಿದ್ದಾನೆ ಎಂದು ನಟಿ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.


ಇದನ್ನು ಓದಿ: ದೇವ್ರಿಗೆ ನನ್ನ ಬ್ರಾ ಸೈಜ್​ನದ್ದೇ ಚಿಂತೆ ಎಂದಿದ್ದ ನಟಿಗೆ ಸಂಕಷ್ಟ, ಶ್ವೇತಾ ವಿರುದ್ಧ ದಾಖಲಾಯ್ತು ಎಫ್​ಐಆರ್​!


ತನಿಖೆ ಚುರುಕುಗೊಳಿಸಿದ ಪೊಲೀಸರು!


ನಟಿ ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ ನಟ ಕಮ್​ ನಿರ್ಮಾಪಕ ಹರ್ಷವರ್ದನ್ ಟಿ ಜಿ ಅಲಿಯಾಸ್ ವಿಜಯಭಾರ್ಗವ್​ರನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬಂಧಿಸಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲಾಗಿದೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೂಡು ಮಾಡಿದ್ದಾಳೆ ನಟಿ. ಅಲ್ಲದೆ ಕೊಲೆ ಮಾಡಿಸುವುದಾಗಿ ಹರ್ಷವರ್ಧನ್ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ. ಸುಮಾರು 7 ರಿಂದ 8 ತಿಂಗಳಿನಿಂದ ನಿರಂತರವಾಗಿ ನಟಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

top videos
    First published: