Akrama-Sakrama: ಸರ್ಕಾರದ ಸಕ್ರಮ ಯೋಜನೆಯಲ್ಲಿ ಅಕ್ರಮದ ವಾಸನೆ; ಮಾಜಿ ಶಾಸಕಿ ಜಮೀನು ಪಡೆಯಲು ಅರ್ಜಿ ಸಲ್ಲಿಕೆ!

ಕಳೆದ ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ, ಕೃಷಿ ಮಾಡುತ್ತಿರುವ ಅರ್ಹ ಕುಟುಂಬಗಳಿಗೆ ಆ ಭೂಮಿಯನ್ನು ಸಕ್ರಮವಾಗಿ ಮಾಡುವ ಸರಕಾರದ ಕಾರ್ಯಕ್ರಮಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.

ರೈತಸಂಘ, ಹಸಿರು ಸೇನೆ ಮುಖಂಡ ಸುರೇಶ್ ಭಟ್

ರೈತಸಂಘ, ಹಸಿರು ಸೇನೆ ಮುಖಂಡ ಸುರೇಶ್ ಭಟ್

  • Share this:
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಅಕ್ರಮ-ಸಕ್ರಮ ನಿಯಮದ (Akrama Sakrama Rules) ಜಾರಿ‌ ವೇಳೆ ಸಾಕಷ್ಟು ಅಕ್ರಮಗಳು ನಡೆದಿವೆ ಎನ್ನುವ ಆರೋಪ ಕೇಳಿ‌ ಬರುತ್ತಿದೆ. ಸತ್ಯಸಂದತೆಯಿಂದ ಸರಕಾರಿ ಜಾಗದಲ್ಲಿ ಕೃಷಿ ಮತ್ತು ವಾಸವಾಗಿರುವ ಕುಟುಂಬಗಳು ನ್ಯಾಯಸಮ್ಮತವಾಗಿ ತಮ್ಮ ಹಕ್ಕಿಗಾಗಿ ಸರಕಾರಕ್ಕೆ (Government) ಅರ್ಜಿ ಸಲ್ಲಿಸಿದ ಸಮಯದಲ್ಲಿ ಹಲವು ರೀತಿಯ ತಕರಾರಿನ ಮೂಲಕ ಬಡ ಕೃಷಿಕನನ್ನು ಅಕ್ರಮ-ಸಕ್ರಮದ ಸೌಲಭ್ಯದಿಂದ ವಂಚಿತರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅಡ್ಡ ದಾರಿಯಲ್ಲಿ ಮತ್ತು ರಾಜಕೀಯ ಪ್ರಭಾವ (Political Influence) ಬಳಸಿ ಸರಕಾರಿ ಜಮೀನನ್ನು ಕಬಳಿಸುವವರಿಗೆ (Government Land) ಜಮೀನು ಮಂಜೂರು ಮಾಡುವ ವ್ಯವಸ್ಥೆಗಳು ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿವೆ.

ಕಳೆದ ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ (House Built), ಕೃಷಿ ಮಾಡುತ್ತಿರುವ ಅರ್ಹ ಕುಟುಂಬಗಳಿಗೆ ಆ ಭೂಮಿಯನ್ನು ಸಕ್ರಮವಾಗಿ ಮಾಡುವ ಸರಕಾರದ ಕಾರ್ಯಕ್ರಮಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಶಾಸಕರ ಅಧ್ಯಕ್ಷತೆಯ ಅಕ್ರಮ-ಸಕ್ರಮ ಸಮಿತಿಯ ಮೂಲಕ ಭೂಮಿಯ ಹಕ್ಕನ್ನು ನೀಡುವ ಸರಕಾರದ ವ್ಯವಸ್ಥೆಯಲ್ಲಿ ಹಣ ಮತ್ತು ರಾಜಕೀಯ ಪ್ರಭಾವ ಸದ್ದು ಮಾಡುತ್ತಿವೆ ಎನ್ನುವ ಆರೋಪ ಬಡ ಕೃಷಿಕರಿಂದ ಕೇಳಿ ಬರುತ್ತಿದೆ.

ಕೃಷಿಕರ ಆರೋಪ ಏನು?

ಶಾಸಕರ ಅಕ್ರಮ-ಸಕ್ರಮ ಸಮಿತಿಯ (Akrama  Sakrama Committe) ಮುಂದೆ ಸರಕಾರಿ ಭೂಮಿಯನ್ನು ಕಬಳಿಸಲು ಹಲವು ರೀತಿಯ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎನ್ನುವುದು ಕೃಷಿಕರ (Farmers) ಆರೋಪವಾಗಿದ್ದು, ಬೆಲೆ ಬಾಳುವ ಖಾಲಿ ಸರಕಾರಿ ಭೂಮಿಯಲ್ಲಿ ತೆಂಗಿನ ಹಾಗೂ ಇತರ ದೊಡ್ಡ  ಮರಗಳನ್ನು ಹೊಂಡ ತೋಡಿ ನೆಟ್ಟು, ಬಳಿಕ ಅದನ್ನು ತಾವು ಕೃಷಿ ಮಾಡಿದ ಭೂಮಿ ಎಂದು ತೋರಿಸಿ, ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಹಣ ಕೊಟ್ರೆ ಮಾತ್ರ ಭೂಮಿ ಸಕ್ರಮ?

ಒಂದೊಂದು ಅಕ್ರಮ-ಸಕ್ರಮ ಅರ್ಜಿಗೆ‌ ಸರಕಾರಕ್ಕೆ ಕಟ್ಟುವ ಹಣದ ಜೊತೆಗೆ ಇಂತಿಷ್ಟು ಹಣವನ್ನು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ನೀಡಿದಲ್ಲಿ ಮಾತ್ರ ಅಕ್ರಮ ಭೂಮಿಯನ್ನು ಸರಕಾರದ ನಿಯಮದ ಪ್ರಕಾರ ಸಕ್ರಮ ಮಾಡಿಕೊಳ್ಳಬಹುದು. ಹೆಚ್ಚುವರಿ ಹಣವನ್ನು ನೀಡದೇ ಹೋದಲ್ಲಿ, ಹಲವು ಕಾರಣಗಳನ್ನು ನೀಡಿ ಬಡ ಕೃಷಿಕನಿಗೆ ಅಕ್ರಮ-ಸಕ್ರಮದ ಸವಲತ್ತನ್ನು ನೀಡದೆ ಸತಾಯಿಸುತ್ತಿರುವ ಹಲವಾರು ಉದಾಹರಣೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ ಎನ್ನುತ್ತಾರೆ ರೈತಸಂಘ, ಹಸಿರು ಸೇನೆ ಮುಖಂಡ ಸುರೇಶ್ ಭಟ್ (Hasiru Sene Leader Suresh Bhatt).

ಇದನ್ನೂ ಓದಿ:  Karnataka Assembly Elections: ಮಂಗಳೂರು ವಿಧಾನಸಭಾ ಕ್ಷೇತ್ರ: ಈ ಬಾರಿಯೂ ಖಾದರ್ ವರ್ಸಸ್ ಇತರರು?

ಈ ಸಂಬಂಧ ರೈತ ಸಂಘ ಹಲವಾರು‌ ಬಾರಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದರೂ,ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ರೈತಪರ ಸಂಘಟನೆಗಳ (Farmer Oragnization) ಆರೋಪವಾಗಿದೆ.

ಮಾಜಿ ಶಾಸಕಿಯರ ಜಮೀನು ಕಬಳಿಸಲು ಯತ್ನ

ಹಣ ಕೊಟ್ಟಲ್ಲಿ ಮಾತ್ರ ಭೂಮಿಯನ್ನು ಸಕ್ರಮ ಮಾಡಿ ಕೊಡಲಾಗುತ್ತಿದೆ. ಯಾವ ರೀತಿ ಈ ಅಕ್ರಮ- ಸಕ್ರಮದ ವ್ಯವಸ್ಥೆಗಳು ನಡೆಯುತ್ತಿವೆ ಎಂದರೆ, ಸ್ವತಃ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿಯರೊಬ್ಬರ (Putturu Former MLA) ಜಮೀನಿಗೆ, ಸಂಬಂಧಪಡದ ವ್ಯಕ್ತಿ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳುವ ಪ್ರಯತ್ನಗಳೂ ನಡೆದಿತ್ತು.

ಇದನ್ನೂ ಓದಿ:  Bayalaata Play: ಬಣ್ಣ ಹಚ್ಚಿದ ಇನ್​​ಸ್ಪೆಕ್ಟರ್ ಕಾಲಿಮಿರ್ಚಿ; ಖಡಕ್ ಡ್ಯೂಟಿಗೂ ಸೈ, ಬಯಲಾಟಕ್ಕೂ ಜೈ

ಆದರೆ ಈ ವಿಚಾರ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆ ಅರ್ಜಿಗೆ ಮಾಜಿ ಶಾಸಕಿ ಆಕ್ಷೇಪ ಸಲ್ಲಿಸಿದ ಕಾರಣ, ಭೂಮಿ ಮಾಜಿ ಶಾಸಕಿಗೆ ಮತ್ತೆ ಸೇರುವಂತಾಗಿದೆ.
Published by:Mahmadrafik K
First published: