• Home
  • »
  • News
  • »
  • state
  • »
  • Solar System: ಸೋಲಾರ್ ಶಕ್ತಿಯ ಮೂಲಕ ವಿದ್ಯುತ್​ನಲ್ಲಿ ಸ್ವಾವಲಂಬಿಯಾದ ಪುತ್ತೂರಿನ ಗ್ರಾಮ ಪಂಚಾಯತ್

Solar System: ಸೋಲಾರ್ ಶಕ್ತಿಯ ಮೂಲಕ ವಿದ್ಯುತ್​ನಲ್ಲಿ ಸ್ವಾವಲಂಬಿಯಾದ ಪುತ್ತೂರಿನ ಗ್ರಾಮ ಪಂಚಾಯತ್

ಸೋಲಾರ್ ವ್ಯವಸ್ಥೆ

ಸೋಲಾರ್ ವ್ಯವಸ್ಥೆ

ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಾಮ ಪಂಚಾಯತ್​ಗಳು ತಿಂಗಳಿಗೆ ಕೋಟಿಗಟ್ಟಲೆ ಹಣವನ್ನು ಕೇವಲ ವಿದ್ಯುತ್ ಬಿಲ್ ಪಾವತಿಗೆಂದೇ ಮೀಸಲಿಡುತ್ತಿದ್ದು, ಎಲ್ಲಾ ಪಂಚಾತ್​​ಗಳೂ ಆರ್ಯಾಪು ಪಂಚಾಯತ್ ನ ಈ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವಿದ್ಯುತ್ ಸ್ವಾವಲಂಬಿತನದ ಜೊತೆಗೆ ಹಣ ಉಳಿತಾಯವನ್ನೂ ಮಾಡಬೇಕಿದೆ.

ಮುಂದೆ ಓದಿ ...
  • Share this:

ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬಿಲ್ (Electricity Bill) ವರ್ಷದಿಂದ ವರ್ಷಕ್ಕೆ ಏರಿಕೆಯಾಗುವುದು ಬಿಟ್ಟರೆ ಇಳಿಕೆಯಾಗುವ ಲಕ್ಷಣವೇ ಗೋಚರಿಸುತ್ತಿಲ್ಲ. ಇದರಿಂದಾಗಿ ಇತರ ಖರ್ಚುಗಳ ಜೊತೆಗೆ ವಿದ್ಯುತ್​ಗಾಗಿಯೂ ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾದ ಅನಿವಾರ್ಯ ಸ್ಥಿತಿಯೂ ನಿರ್ಮಾಣವಾಗಿದೆ. ಈ ನಡುವೆ ವಿದ್ಯುಚ್ಛಕ್ತಿಗೆ ಪರ್ಯಾಯವಾಗಿ ಸೋಲಾರ್ (Solar System) ಸೇರಿದಂತೆ ಇತರ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಈ ಮಧ್ಯೆ ಗ್ರಾಮದ ಜನತೆಗೆ ಪ್ರತಿದಿನ ನೀರು ಸರಬರಾಜು (Water Supply) ಮಾಡಲೆಂದೇ ತಿಂಗಳಿಗೆ ಸಾವಿರಾರು ರೂಪಾಯಿ ಹಣವನ್ನು ವಿದ್ಯುತ್ ಗಾಗಿ ಖರ್ಚು (Electricity Expenses) ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿ (Gram Panchayat) ಇಂದು ಯಾವುದೇ ಖರ್ಚಿಲ್ಲದೆ ಗ್ರಾಮದ ಮನೆಗಳಿಗೆ ನೀರುಣಿಸುತ್ತಿದೆ.


ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿಯ ವಿದ್ಯುತ್ ಸ್ವಾವಲಂಬಿತನದ ಕಥೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಹಾಗೂ ರಾಜ್ಯದಲ್ಲೂ ಅಪರೂಪದ ಪ್ರಯತ್ನವನ್ನು ಈ ಪಂಚಾಯತ್ ಮಾಡುವ ಮೂಲಕ ಗುರುತಿಸಿಕೊಂಡಿದೆ.


5 HP ಸಾಮರ್ಥ್ಯದ ನೀರಿನ ಪಂಪ್


ಪಂಚಾಯತ್ ಮೂರನೇ ವಾರ್ಡ್​ನ ಪ್ರತೀ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೊಲ್ಯ ಎನ್ನುವಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ 5 HP ಸಾಮರ್ಥ್ಯದ ನೀರಿನ ಪಂಪ್ ಅನ್ನು ಸೋಲಾರ್​ನಲ್ಲೇ ಚಾಲನೆಗೊಳ್ಳುವಂತೆ ಮಾಡಲಾಗಿದೆ.


What are the 7 solar systems, What are 5 facts about the solar system, What are the 12 planets in order, Solar System pannel, Kannada News, Karnataka News, ಸೋಲಾರ್ ಅಳವಡಿಕೆ, ವಿದ್ಯುತ್ ಉಳಿತಾಯ ಸಲಹೆಗಳು
ಸೋಲಾರ್ ವ್ಯವಸ್ಥೆ


88 ಮನೆಗಳಿಗೆ ನೀರಿನ ವ್ಯವಸ್ಥೆ


ಈ ವಾರ್ಡ್​ನಲ್ಲಿರುವ ಒಟ್ಟು 88 ಮನೆಗಳಿಗೆ ನೀರಿನ ಬೇರೆ ವ್ಯವಸ್ಥೆಯೇ ಇಲ್ಲದ ಕಾರಣ ಪ್ರತಿದಿನವು ಈ ಮನೆಗಳಿಗೆ ನೀರನ ವ್ಯವಸ್ಥೆ ಮಾಡುವುದು ಪಂಚಾಯತ್‌ನ ಮುಖ್ಯ ಜವಾಬ್ದಾರಿಯೂ ಆಗಿತ್ತು. ಪ್ರತಿದಿನವೂ ವಿದ್ಯುಚ್ಛಕ್ತಿ ಬಳಸಿಕೊಂಡು ಪಂಚಾಯತ್ ಎಲ್ಲಾ ಮನೆಗಳಿಗೆ ನೀರಿನ ಪೂರೈಕೆ ಮಾಡುತ್ತಿತ್ತು.


ಈ ವ್ಯವಸ್ಥೆಗಾಗಿ ಪಂಚಾಯತ್ ಕೇವಲ ಒಂದು ವಾರ್ಡ್ ಗೆ ಪ್ರತೀ ತಿಂಗಳೂ ಸುಮಾರು 23 ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ವಿದ್ಯುತ್​ಗೆ ಪರ್ಯಾಯವಾಗಿ ಸೋಲಾರ್ ಶಕ್ತಿಯನ್ನು ಬಳಸುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕಳೆದ ಎರಡು ವರ್ಷದ ಹಿಂದೆ ಕೊಲ್ಯ ವಾರ್ಡ್​​ನ ನೀರಿನ ಪಂಪ್ ಅನ್ನು ಸೋಲಾರ್ ಶಕ್ತಿ ಮೂಲಕ ಅಪರೇಟ್ ಮಾಡಲು ನಿರ್ಧರಿಸಲಾಗಿತ್ತು.


3.90 ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ


ಈ ಸಂಬಂಧ ಕಾರ್ಯಪ್ರವೃತ್ತವಾದ ಪಂಚಾಯತ್ ಸುಮಾರು 3.90 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನಲ್​​ಗಳನ್ನು ಅಳವಡಿಸಿ, ಈ ಮೂಲಕ ನೀರಿನ ಸರಬರಾಜು ಮಾಡಲು ಆರಂಭಿಸಿದೆ. ಬೇಸಿಗೆ ಸೇರಿದಂತೆ ಮಳೆಗಾಲದಲ್ಲಿ ಎರಡು ಗಂಟೆ ಬಿಸಿಲು ಬಿದ್ದರೂ ಪಂಪ್ ರನ್ ಮಾಡಿ ನೀರನ್ನು ಇಲ್ಲಿ ಸರಬರಾಜು ಮಾಡಲಾಗುತ್ತಿದೆ.


ಇದರಿಂದಾಗಿ ತಿಂಗಳಿಗೆ 23 ಸಾವಿರಕ್ಕೂ ಮಿಕ್ಕಿ ಬರುತ್ತಿದ್ದ ವಿದ್ಯುತ್ ಬಿಲ್ ಇದೀಗ ಸಂಪೂರ್ಣ ಶೂನ್ಯವಾಗಿದೆ. ಸೋಲಾರ್ ಜೊತೆಗೆ ವಿದ್ಯುತ್ ಸಂಪರ್ಕವನ್ನೂ ಪಂಪ್ ಗೆ ಕಲ್ಪಿಸಲಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವಿದ್ಯುತ್ತನ್ನು ಇಲ್ಲಿ ಬಳಸಲಾಗುತ್ತಿದೆ.


What are the 7 solar systems, What are 5 facts about the solar system, What are the 12 planets in order, Solar System pannel, Kannada News, Karnataka News, ಸೋಲಾರ್ ಅಳವಡಿಕೆ, ವಿದ್ಯುತ್ ಉಳಿತಾಯ ಸಲಹೆಗಳು
ಸೋಲಾರ್ ವ್ಯವಸ್ಥೆ


35 ಪಂಪ್​​ಗಳಿಗೂ ಸೋಲಾರ್ ಅಳವಡಿಸುವ ತೀರ್ಮಾನ


ಆರ್ಯಾಪು ಗ್ರಾಮ ಪಂಚಾಯತ್ ಒಂದರಲ್ಲೇ ಸುಮಾರು 35 ಕಡೆಗಳಲ್ಲಿ ಬೋರ್ ವೆಲ್​​ಗಳ ಮೂಲಕ ನೀರನ್ನು ಮೇಲೆಕ್ಕೆತ್ತಿ ಸಾವಿರಾರು ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ವಿದ್ಯುತ್​​ಗಾಗಿಯೇ ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 35 ಪಂಪ್​​ಗಳಿಗೂ ಸೋಲಾರ್ ಶಕ್ತಿಯನ್ನು ಅಳವಡಿಸುವ ತೀರ್ಮಾನಕ್ಕೂ ಪಂಚಾಯತ್ ಬಂದಿದೆ.


ಇದೇ ರೀತಿಯ ವ್ಯವಸ್ಥೆ ಎಲ್ಲಾ ಪಂಚಾಯತ್​ನಲ್ಲೂ ಆರಂಭಗೊಂಡಲ್ಲಿ ವಿದ್ಯುತ್ ಮೇಲೆ ಅವಲಂಬನೆ ಕಡಿಮೆಯಾಗಿ, ಎಲ್ಲಾ ಪಂಚಾಯತ್​ಗಳು ವಿದ್ಯುತ್​​ನಲ್ಲಿ ಸ್ವಾವಲಂಬಿಯಾಗಲಿದೆ ಎನ್ನುತ್ತಾರೆ ಸೋಲಾರ್ ಶಕ್ತಿ ಬಳಕೆಯಾಗುತ್ತಿರುವ ವಾರ್ಡ್  ಸದಸ್ಯ ಪವಿತ್ರ ರೈ.


ಇದನ್ನೂ ಓದಿ: Dakshina Kannada: ಮರೆತ ಜನರಿಗೆ ತನ್ನ ಇರುವಿಕೆ ತಿಳಿಸಿದ ದೈವ, ಕಾಂತಾರ ಸಿನಿಮಾ ಜೊತೆಗೆ ನೆನಪಾದ ದೈವದ ಕಥೆ


ವಿದ್ಯುತ್ ಕಣ್ಣಾಮುಚ್ಚಾಲೆ


ಕೊಲ್ಯ ವಾರ್ಡ್ ಎಲ್ಲಾ 88 ಮನೆಗಳಿಗೆ ಪ್ರತಿದಿನವೂ ನೀರು ಸರಬರಾಜು ಮಾಡುವ ಅಗತ್ಯವಿದ್ದು, ಯಾವ ಮನೆಯಲ್ಲೂ ಪರ್ಯಾಯ ನೀರಿನ ವ್ಯವಸ್ಥೆಗಳಿಲ್ಲ. ಈ ಹಿಂದೆ ನೀರಿನ ಪಂಪ್​ಗೆ ವಿದ್ಯುತ್ ಬಳಸುತ್ತಿದ್ದ ಸಂದರ್ಭದಲ್ಲಿ  ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಸರಿಯಾಗಿ ನೀರು ಪೂರೈಕೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಪಂಪ್ ರನ್ ಮಾಡಲು ವಿದ್ಯುತ್​​ಗಾಗಿ ಕಾಯುವ ಸ್ಥಿತಿಯಿತ್ತು.


ಪ್ರತಿದಿನ 60 ಸಾವಿರ ಲೀಟರ್ ನೀರು ಪಂಪ್


ಸೋಲಾರ್ ಶಕ್ತಿ ಅಳವಡಿಸಿದ ಬಳಿಕ ಈ ಸಮಸ್ಯೆ ಸಂಪೂರ್ಣ ಬಗೆಹರಿದಿದೆ. ವಾರ್ಡ್​​ನ ಮನೆಗಳಿಗೆ ನೀರಿನ ಸಂಪರ್ಕಕ್ಕಾಗಿ ಎರಡು ಟ್ಯಾಂಕ್​​ಗಳನ್ನೂ ಮಾಡಲಾಗಿದ್ದು, ಒಟ್ಟು 60 ಸಾವಿರ ಲೀಟರ್ ನೀರನ್ನು ಪ್ರತಿದಿನ ಸೋಲಾರ್ ಶಕ್ತಿಯ ಮೂಲಕವೇ ಎತ್ತಲಾಗುತ್ತಿದೆ. ಸೋಲಾರ್ ಶಕ್ತಿಯನ್ನು ಅಳವಡಿಸಿ ಎರಡು ವರ್ಷಗಳು ಕಳೆದಿದ್ದು, ಯಾವುದೇ ರೀತಿಯ ನಿರ್ವಹಣೆಯ ಕೆಲಸವೂ ಈವರೆಗೂ ಬಂದಿಲ್ಲ ಎನ್ನುತ್ತಾರೆ ನೀರಿನ ಅಪರೇಟರ್ ಸೀನಪ್ಪ ರೈ.


ಇದನ್ನೂ ಓದಿ:  Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!


ವಿದ್ಯುತ್ ಸ್ವಾವಲಂಬಿತನದ ಜೊತೆಗೆ ಹಣ ಉಳಿತಾಯ


ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಾಮ ಪಂಚಾಯತ್​ಗಳು ತಿಂಗಳಿಗೆ ಕೋಟಿಗಟ್ಟಲೆ ಹಣವನ್ನು ಕೇವಲ ವಿದ್ಯುತ್ ಬಿಲ್ ಪಾವತಿಗೆಂದೇ ಮೀಸಲಿಡುತ್ತಿದ್ದು, ಎಲ್ಲಾ ಪಂಚಾತ್​​ಗಳೂ ಆರ್ಯಾಪು ಪಂಚಾಯತ್ ನ ಈ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವಿದ್ಯುತ್ ಸ್ವಾವಲಂಬಿತನದ ಜೊತೆಗೆ ಹಣ ಉಳಿತಾಯವನ್ನೂ ಮಾಡಬೇಕಿದೆ.

Published by:Mahmadrafik K
First published: